ಶಾಸನಗಳು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಹಲ್ಮಿಡಿ ಶಾಸನದ ಪಠ್ಯ
ಲಕ್ಕುಂಡಿಯ ಜೈನ ದೇವಾಲಯದ ಹಳೆಗನ್ನಡ ಶಾಸನ

ಶಾಸನಗಳು [೧][೨][೩]ಎಂದರೆ ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದುವುಗಳ ಮೇಲಿನ ಬರಹ. ಶಾಸನ ಎಂಬ ಸಂಸ್ಕೃತ ಪದಕ್ಕೆ ಆಜ್ಞೆ (ರಾಜಾಜ್ಞೆ) ಎಂದುದು ಮೂಲಾರ್ಥ. ಶಾಸ್ ಧಾತುವಿನಿಂದ ಬಂದದ್ದು ಶಾಸನ. ಶಾಸ್ ಎಂದರೆ- ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ. ಮೂಲತಃ ಶಾಸನ[೪] ಎಂಬುದು ದಾನ ಸಂಬಂಧವಾದ ರಾಜಾಜ್ಞೆ. ಒಟ್ಟಿನಲ್ಲಿ ಶಾಸನವೆಂದರೆ ಗಟ್ಟಿಯಾದ ಅಥವಾ ಶಾಶ್ವತವಾದ ಯಾವುದೇ ಬಗೆಯ ದಾಖಲೆಗಳು.ಶಾಸನಗಳೇ ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು. ಚಿಕ್ಕಮಗಳೂರು ಜಿಲ್ಲೆಯಲ್ಲಿ 950 ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ 350 ಹೊಯ್ಸಳ ಅರಸರ ಕಾಲದವು ಎನ್ನಲಾಗಿದೆ [೫].ಭಾರತದಲ್ಲಿ ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕರ್ನಾಟಕದಲ್ಲಿ ದೊರೆಯುತ್ತವೆ.

ಇತಿವೃತ್ತ[ಬದಲಾಯಿಸಿ]

ಹಿಂದಿನ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ವಿಸ್ತಾರವಾದ ಪರಿಚಯ ಶಾಸನಗಳಿಂದ ದೊರಕುತ್ತದೆ. ಅಗ್ರಹಾರ, ಮಠ, ದೇವಾಲಯಗಳಲ್ಲಿ ನಡೆಯುತ್ತಿದ್ದ ವಿದ್ಯಾಭ್ಯಾಸಕ್ಕೆ ಶ್ರೀಮಂತರು ಉದಾರವಾಗಿ ದತ್ತಿಗಳನ್ನು ನೀಡಿರುವುದು ಶಾಸನೋಕ್ತವಾಗಿದೆ. ಹಲವು ಶಾಸನಗಳನ್ನು ರನ್ನನಂತಹ ಶ್ರೇಷ್ಟ ಕವಿಗಳು ಬರೆದಿದ್ದರಲ್ಲದೆ, ಅವುಗಳನ್ನು ರಚಿಸಿದ ಹಲವರು ಶ್ರೇಷ್ಠ ಕವಿಗಳಾಗಿದ್ದು, ಅವರು ಕೇವಲ ಶಾಸನ ಪಾಠಗಳಲ್ಲಿ ಮಾತ್ರ ಉಳಿದಿದ್ದಾರೆ. ಉದಾಹರಣೆಗೆ, ಪಂಪನ ತಮ್ಮ ಜಿನವಲ್ಲಭ ರಚಿಸಿದ ಶಾಸವು ಆಂಧ್ರದ ಕರೀಂನಗರ ಜಿಲ್ಲೆಯ ಕುರಿಕ್ಸಾಲದಲ್ಲಿದ್ದು, ಅವನು ತನ್ನ ಅಣ್ಣನ ಹೆಸರಿನಲ್ಲಿ ನಿರ್ಮಿಸಿದ ಕವಿತಾಗುಣಾರ್ಣವ ತಟಾಕ ಎಂಬ ಕೆರೆ ಇಂದಿಗೂ ಅಲ್ಲಿದೆ. ಪಂಪನ ಕಿರಿಯ ಸಮಕಾಲೀನ ರನ್ನನ ಸ್ವ ಹಸ್ತಾಕ್ಷರಗಳು ಶ್ರವಣಬೆಳಗೊಳ [೬]ದ ಚಿಕ್ಕ ಬೆಟ್ಟದ ಮೇಲೆ ಇಂದಿಗೂ ಉಳಿದು ಬಂದಿವೆ. ಗಂಗರ ಕಾಲದ ಶಾಸನಗಳಲ್ಲಿ ತಾಮ್ರಪತ್ರಗಳು, ಶಿಲಾಶಾಸನಗಳು ಮತ್ತು ಸ್ಮಾರಕಶಿಲೆ[೭]ಗಳೆಂಬ ಮೂರೂ ಪ್ರಕಾರಗಳನ್ನು ನೋಡಬಹುದು. ಸಾಮಾನ್ಯವಾಗಿ, ತಾಮ್ರಶಾಸನಗಳು ಸಂಸ್ಕೃತದಲ್ಲಿದ್ದು ಶಿಲಾಶಾಸನಗಳು ಕನ್ನಡದಲ್ಲಿವೆ. ಈ ಶಾಸನಗಳು ಸುದೀರ್ಘವಾದ ಕಾಲಾವಧಿಯಲ್ಲಿ ರಚಿತವಾಗಿರುವುದರಿಂದ, ಅವುಗಳನ್ನು ಬಳಸಿಕೊಂಡು ಕನ್ನಡ ಲಿಪಿಯ ಬೆಳವಣಿಗೆಯನ್ನು ಗುರುತಿಸಲು ಸಾಧ್ಯ. ಸ್ಮಾರಕಶಿಲೆಗಳು, ವೈವಿಧ್ಯಮಯವಾಗಿದ್ದು ಅನೇಕ ವಸ್ತುಗಳನ್ನು ಕುರಿತಂತೆ ಇವೆ. ಉದಾಹರಣೆಗೆ ಆತಕೂರು ಶಾಸನವು ಕಾಳಿ ಎಂಬ ನಾಯಿಯ ನಿಷ್ಠೆಯನ್ನು ಪ್ರಶಂಸಿಸುತ್ತದೆ. ಶಿಲಾಶಾಸನಗಳು, ವೀರಗಲ್ಲುಗಳು, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿವೆ. ಜೇಮ್ಸ್ ಪ್ರಿನ್ಸೆಫ್ ಪ್ರಾಚೀನ ಶಿಲಾಲೇಖಗಳ ಪರಿಶೋಧನಾ ವಿದ್ಯೆಯಲ್ಲಿ ಬಹುತಜ್ಞನೆನಿಸಿದ್ದ. ನೂರಾರು ಶಿಲಾಶಾಸನ, ತಾಮ್ರಶಾಸನಗಳನ್ನು ಆಧುನಿಕ ಭಾಷಾ ಲಿಪಿಗೊಳಿಸಿದವರಲ್ಲಿ ಈತ ಮೊದಲಿಗ. ಕ್ರಿ.ಶ.೧೭೯೯ ರಿಂದ ೧೮೪೦ರ ವರೆಗೆ 'ರಾಯಲ್ ಏಷ್ಯಾಟಿಕ್ ಸೊಸೈಟಿ'ಯ ಕಾರ್ಯದರ್ಶಿಯಾಗಿ ಅದರ ಸ್ಥಾಪನೆಗೂ ಕಾರಣನಾಗಿದ್ದಾನೆ. ಈತ ಕಲ್ಕತ್ತಾ ಕಂಠಶಾಲೆಯ ಅಧಿಕಾರಿಗಳಲ್ಲಿ ಒಬ್ಬನಾಗಿದ್ದು ಉತ್ತರ ಭಾರತದಲ್ಲಿ ಸಿಕ್ಕ ಕೆಲವು ಗ್ರೀಕ್ ನಾಣ್ಯಗಳನ್ನು ಗುರುತಿಸಿದನು.[೮]

ಶಾಸನಗಳ ಅಧ್ಯಯನ[ಬದಲಾಯಿಸಿ]

 1. ಕನ್ನಿಂಗ್‍ಹ್ಯಾಮ್ - ಕ್ರಿ.ಶ.೧೮೭೧-೧೮೮೫ರ ಅವಧಿಯಲ್ಲಿ ಅಶೋಕನ ಶಾಸನಗಳ ಸಂಪುಟಗಳನ್ನು ಹೊರತಂದ ಮೊದಲ ಶಾಸನಶಾಸ್ತ್ರಕಾರ
 2. ಕರ್ನಲ್‍ಮೆಕೆಂಜೆ - ಕ್ರಿ.ಶ.೧೮೦೭ರಲ್ಲಿ ಏಷ್ಯಾಟಿಕ್ ರೀಸರ್ಚಸ್ ಪತ್ರಿಕೆಯ ೯ನೇ ಸಂಪುಟದಲ್ಲಿ ಶ್ರವಣಬೆಳಗೊಳಕ್ಕೆ ಸಂಬಂಧಿಸಿದ ಬುಕ್ಕರಾಯನ ಧರ್ಮ ಶಾಸನವನ್ನು ಪ್ರಕಟಿಸಿದ್ದಾನೆ.
 3. ಬಿ.ಎಲ್.ರೈಸ್ - ೧೬ವರ್ಷಗಳ ಕಾಲ ಪ್ರತಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿ, ಶಾಸನಗಳನ್ನು ಸಂಗ್ರಹಿಸಿ ೧೨ ಸಂಪುಟಗಳಲ್ಲಿ ಅವುಗಳನ್ನು ಪ್ರಕಟಿಸಿದರು. ಇವರು ಪ್ರಕಟಿಸಿದ ಒಟ್ಟು ಶಾಸನಗಳ ಸಂಖ್ಯೆ-೮,೮೬೯.ರೈಸ್ ಮತ್ತು ಫ್ಲೀಟ್ ರನ್ನು ಶಾಸನ ಅಧ್ಯಯನ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಕರೆಯುತ್ತಾರೆ.
 4. ಫ್ಲೀಟ್ - ಕ್ರಿ.ಶ.೧೮೭೮ರಲ್ಲಿ 'ಪ್ರಾಚೀನ ಗುಪ್ತ ರಾಜರು ಮತ್ತು ಅವರ ಉತ್ತರಾಧಿಕಾರಿಗಳ ಶಾಸನಗಳು' ಎಂಬ ಮಹತ್ವ್ತದ ಕೃತಿಯನ್ನು ಪ್ರಕಟಿಸಿದ್ದಾರೆ. ಇವರು ಭಾರತೀಯ ಶಾಸನಶಾಸ್ತ್ರದ ಪಿತಾಮಹ ಎನಿಸಿದ್ದಾರೆ.
 5. ಆರ್.ನರಸಿಂಹಾಚಾರ್- ಪ್ರಾಚೀನ ಶಿಲ್ಪಗಳ ಬಗ್ಗೆ ಸಂಶೋಧನಾತ್ಮಕ ಟಿಪ್ಪಣಿ ಬರೆದಿದ್ದಾರೆ. ವಾಸ್ತು ಶಿಲ್ಪ, ಶಾಸನ ಮತ್ತು ನಾಣ್ಯಗಳನ್ನು ಕುರಿತು ಅನೇಕ ಸಂಶೋಧನೆ ನಡೆಸಿದ್ದರೆ.
 6. ಎಂ.ಎಚ್.ಕೃಷ್ಣ - ಪ್ರಸಿದ್ಧ ಪುರಾತತ್ವ್ತ ತಜ್ಞರು. ಇವರ ನಿರ್ದೇಶಕತ್ವದಲ್ಲಿ ನೂರಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದವು.'ಹಿಂದೂ ದೇಶದ ಚರಿತ್ರೆ', 'ಕನ್ನಡ ನಾಡಿನ ಚರಿತ್ರೆ' ಹಾಗೂ 'ಅಜಂತಾ ಮತ್ತು ಎಲ್ಲೋರ'ಇವರ ಪ್ರಮುಖ ಕೃತಿಗಳು.
 7. ಕುಂದಣಗಾರರು ೧೯೩೯ರಲ್ಲಿ `Inseriptions in Northern Karnataka and Kolhapur state’ ಪುಸ್ತಕ ಪ್ರಕಟಿಸಿದರು.[೯]
 8. ಚಿದಾನಂದ ಮೂರ್ತಿಯವರು ೧೯೬೬ರಲ್ಲಿ 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನ ಕೃತಿಯನ್ನು ಬರೆದರು.[೧೦]

ಶಾಸನ ಸಾಮಗ್ರಿಗಳು[ಬದಲಾಯಿಸಿ]

 1. ಲೋಹ
 2. ಶಿಲೆ
 3. ಮಣ್ಣು

ಲಿಪಿಶಾಸ್ತ್ರ[ಬದಲಾಯಿಸಿ]

 1. ಸಿಂಧೂಲಿಪಿ
 2. ಬ್ರಾಹ್ಮಿ ಲಿಪಿ
 3. ಖರೋಷ್ಠಿ ಲಿಪಿ
 4. ದೇವನಾಗರಿ ಲಿಪಿ

ಶಾಸನ ಪ್ರಕಾರಗಳು[ಬದಲಾಯಿಸಿ]

 1. ದಾನ ಶಾಸನ
 2. ಪ್ರಶಸ್ತಿ ಶಾಸನ
 3. ವೀರಗಲ್ಲು
 4. ಮಾಸ್ತಿಕಲ್ಲು
 5. ನಿಷಿಧಿಗಲ್ಲು
 6. ಯೂಪ ಶಾಸನ
 7. ಕೂಟ ಶಾಸನಗಳು

ಪ್ರಸಿದ್ದ ಶಾಸನಗಳು[ಬದಲಾಯಿಸಿ]

 1. ಹಲ್ಮಿಡಿ ಶಾಸನ[೧೧][೧೨][೧೩]
 2. ಐಹೊಳೆ ಶಾಸನ
 3. ಕಪ್ಪೆ ಅರಭಟ್ಟನ ಶಾಸನ[೧೪][೧೫]
 4. ತಮ್ಮಟ ಕಲ್ಲು ಶಾಸನ
 5. ಕುಲಮುದ್ದನ ಮಾವಳಿ ಶಾಸನ
 6. ಅತ್ತಿಮಬ್ಬೆಯ ಲಕ್ಕುಂಡಿ ಶಾಸನ
 7. ಶ್ರವಣಬೆಳಗೊಳದ ಪ್ರಾಚೀನ ಶಾಸನಗಳು[೧೬][೧೭][೧೮]
 8. ಜೂರಾ ಶಾಸನ
 9. ಆತಕೂರು ಶಾಸನ
 10. ಕವಿಚಕ್ರವರ್ತಿ ಜನ್ನನ ಅಮೃತಾಪುರ ಶಾಸನ
 11. ಅಶೋಕನ ಬಂಡೆ ಶಾಸನಗಳು[೧೯][೨೦]
 12. ಬಾದಾಮಿ ಶಾಸನ[೨೧][೨೨][೨೩]
 13. ಗಂಗಾಧರಂ ಶಾಸನ
 14. ಬೇಲೂರು ಶಾಸನ
 15. ಕುವರ ಲಕ್ಷ್ಮಣನ ಶಾಸನ
 16. ಬೆಳತೂರಿನ ದೇಕಬ್ಬೆ ಶಾಸನ

ಶಾಸನಗಳ ಪ್ರಾಮುಖ್ಯತೆ[ಬದಲಾಯಿಸಿ]

 1. ಚಾರಿತ್ರಿಕ ದೃಷ್ಟಿಕೋನದಿಂದಜೊತೆ
 2. ಧಾರ್ಮಿಕ ದೃಷ್ಟಿಯಿಂದ
 3. ಸಾಮಾಜಿಕ ದೃಷ್ಟಿಯಿಂದ
 4. ಸಾಹಿತ್ಯಿಕ ದೃಷ್ಟಿಯಿಂದ

ಶಾಸನಗಳ ಸಿದ್ದತೆ ಮತ್ತು ಸಂರಕ್ಷಣೆ[ಬದಲಾಯಿಸಿ]

 1. ಶಾಸನದ ಕವಿಗಳು
 2. ಲಿಪಿಕಾರ
 3. ರೂವಾರಿಗಳು

ಉಲ್ಲೇಖಗಳು[ಬದಲಾಯಿಸಿ]

 1. https://kanaja.in/archives/102722
 2. https://kanaja.in/archives/10231
 3. http://kannadamma.net/ನ್ನಡದ-ಶಾಸನಗಳು-ವ್ಯಕ್ತಿಚಿ//
 4. http://www.prajavani.net/article/%E0%B2%97%E0%B2%AE%E0%B2%A8-%E0%B2%B8%E0%B3%86%E0%B2%B3%E0%B3%86%E0%B2%B5-%E0%B2%B5%E0%B2%BF%E0%B2%B6%E0%B2%BF%E0%B2%B7%E0%B3%8D%E0%B2%9F-%E0%B2%B6%E0%B2%BE%E0%B2%B8%E0%B2%A8%E0%B2%97%E0%B2%B3%E0%B3%81
 5. . kannadaprabha. com/districts/chikkamagalur/ಜಿಲ್ಲೆಯಲ್ಲಿ-950-ಶಾಸನಗಳು-ಪತ್ತೆ/141253.html
 6. http://kannada.nativeplanet.com/sravanabelagola/attractions/gommatesvara-statue/
 7. http://www.prajavani.net/article/%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95-%E0%B2%B6%E0%B2%BF%E0%B2%B2%E0%B3%86-%E0%B2%B8%E0%B3%8D%E0%B2%A5%E0%B2%B3%E0%B2%BE%E0%B2%82%E0%B2%A4%E0%B2%B0%E0%B2%95%E0%B3%8D%E0%B2%95%E0%B3%86-%E0%B2%AE%E0%B3%80%E0%B2%A8%E0%B2%AE%E0%B3%87%E0%B2%B7
 8. https://kanaja.in/archives/31949
 9. https://kanaja.in/archives/31949
 10. https://books.google.co.in/books?id=W1mYAwAAQBAJ&pg=PT301&lpg=PT301&dq=ಚಿದಾನಂದ+ಮೂರ್ತಿಯವರ+ಶಾಸನಗಳ+ಸಾಂಸ್ಕೃತಿಕ+ಅಧ್ಯಯನ+ಕೃತಿ
 11. http://kannada.oneindia.com/column/enguru/2008/0528-how-to-go-to-halmidi.html
 12. https://ellakavi.wordpress.com/2007/11/10/kannada-inscriptions-language/
 13. http://kannadaisiri.blogspot.in/p/blog-page_7.html
 14. http://pages.rediff.com/kappe-arabhatta/977809
 15. http://jaideepprabhu.org/tag/kappe-arabhatta/
 16. http://www.ourtemples.in/sravanabelagola.html
 17. http://shravanabelagola.net/history
 18. .indianscriptures.com/sacred-places/jain-places-of-pilgrimage/shravanabelagola-karnataka
 19. http://karnatakavaibhava.blogspot.in/2013/07/blog-post_1.html
 20. n.geoview.info/ashoka_sila_shasana,51094982p
 21. http://www.kannadaratna.com/tour/badami.html
 22. http://asi.nic.in/asi_monu_tktd_karnataka_rockbadami.asp
 23. http://kannadaisiri.blogspot.in/p/blog-page_7.html
"https://kn.wikipedia.org/w/index.php?title=ಶಾಸನಗಳು&oldid=1026690" ಇಂದ ಪಡೆಯಲ್ಪಟ್ಟಿದೆ