ಆತಕೂರು ಶಾಸನ

ವಿಕಿಪೀಡಿಯ ಇಂದ
Jump to navigation Jump to search

ಆತಕೂರು ಶಾಸನ ಕಾಲ ಕ್ರಿ.ಶ.೮೭೩. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಆತಕೂರಿನ ಚಲ್ಲೇಶ್ವರ ದೇಗುಲದ ಮುಂದಿದ್ದ ಈ ಶಾಸನ ಪ್ರಸ್ತುತ ಬೆಂಗಳೂರಿನ ವಸ್ತುಸಂಗ್ರಹಾಲಯದಲ್ಲಿದೆ.

ಇತಿವೃತ್ತ[ಬದಲಾಯಿಸಿ]

ರಾಷ್ಟ್ರಕೂಟರ ಮೂರನೇ ಕೃಷ್ಣ ,ಗಂಗರ ಬೂತುಗ ಮತ್ತು ಅವನ ಸೇವಕ ಮನಾಲರು ಚೋಳ ರಾಜಾದಿತ್ಯನ ಮೇಲೆ ಯುದ್ದ ಮಾಡಿದ ಮತ್ತು ಚೋಳ ರಾಜಾದಿತ್ಯನನ್ನು ಕೊಂದ ವಿಷಯವಿದೆ. ರಾಜಾದಿತ್ಯನನ್ನು ಕೊಂದವ ಭೂತುಗ ಎಂಬುದನ್ನು ಇದು ತಿಳಿಸುತ್ತದೆ. ಈ ಶಾಸನದಲ್ಲಿ ನಾಯಿ-ಹಂದಿ ಹೋರಾಡುತ್ತಿರುವ ಚಿತ್ರವಿದೆ. ವೀರ ಮನಾಲರಿಗೆ ಸಾಕುನಾಯಿಯ ಮೇಲಿದ್ದ ಪ್ರೀತಿ ಗೋಚರವಾಗುತ್ತದೆ. ಇವನ ಪ್ರತಾಪವನ್ನು ಮೆಚ್ಚಿದ ಕನ್ನರದೇವ ನಿನಗೇನು ಬೇಕು ಬೇಡಿಕೊ ಎಂದಾಗ ಮನಾಲರ 'ಕಾಳಿ'ಎಂಬ ನಾಯಿಯನ್ನು ಬೇಡಿ ಪಡೆಯುತ್ತಾನೆ. ಮುಂದೊಂದು ದಿನ ಆ ನಾಯಿ ತನ್ನ ಒಡೆಯನನ್ನು ಹಂದಿಯೊಂದರಿಂದ ರಕ್ಷಿಸಲು ಹೋಗಿ ತಾನು ಅಸು ನೀಗುತ್ತದೆ. ಆಗ ಮನಾಲ ಆ ನಾಯಿಯ ನೆನಪಿಗಾಗಿ ವೀರಗಲ್ಲನ್ನು ನೆಟ್ಟು, ಅದರ ಪೂಜೆಗಾಗಿ ಹೊಲವೊಂದನ್ನು ಬಿಟ್ಟುಕೊಡುತ್ತಾನೆ.[೧] ನಾಯಿಗಾಗಿ ವೀರ ಸ್ಮಾರಕವನ್ನು ಹಾಕಿರುವ ಏಕೈಕ ಶಾಸನ ಇದಾಗಿದೆ.

ಉಲ್ಲೇಖ[ಬದಲಾಯಿಸಿ]

  1. http://www.prajavani.net/article/ಕಾಳಿಯೊಡನೆ-ಕಳೆದ-ನೆನಪು