ರಾಷ್ಟ್ರಕೂಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಷ್ಟ್ರಕೂಟ ಸಾಮ್ರಾಜ್ಯ
Rashtrakuta-empire-map.svg

ಧ್ರುವ ಧಾರಾವರ್ಷನ ಸಮಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ವಿಸ್ತಾರ (ಕ್ರಿ.ಶ. ೭೮೦)
ಅಧಿಕೃತ ಭಾಷೆಗಳು ಕನ್ನಡ
ಸಂಸ್ಕೃತ
ರಾಜಧಾನಿಗಳು ಮಯೂರಖಂಡ (ಬೀದರ್ ಜಿಲ್ಲೆ), ಮಾನ್ಯಖೇತ
ಸರಕಾರ ಚಕ್ರಾಧಿಪತ್ಯ
ಮುಂಚಿನ ಆಡಳಿತ ಬಾದಾಮಿ ಚಾಲುಕ್ಯರು
ನಂತರದ ಆಡಳಿತ ಪಶ್ಚಿಮ ಚಾಲುಕ್ಯರು

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

ಇತಿಹಾಸ[ಬದಲಾಯಿಸಿ]

ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 - 756)
ಮೊದಲನೇ ಕೃಷ್ಣ (756 - 774)
ಇಮ್ಮಡಿ ಗೋವಿಂದ (774 - 780)
ಧ್ರುವ ಧಾರಾವರ್ಷ (780 - 793)
ಮುಮ್ಮಡಿ ಗೋವಿಂದ (793 - 814)
ಮೊದಲನೇ ಅಮೋಘವರ್ಷ (814 - 878)
ಇಮ್ಮಡಿ ಕೃಷ್ಣ (878 - 914)
ಮುಮ್ಮಡಿ ಇಂದ್ರ (914 -929)
ಇಮ್ಮಡಿ ಅಮೋಘವರ್ಷ (929 - 930)
ನಾಲ್ವಡಿ ಗೋವಿಂದ (930 – 936)
ಮುಮ್ಮಡಿ ಅಮೋಘವರ್ಷ (936 – 939)
ಮುಮ್ಮಡಿ ಕೃಷ್ಣ (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಇಮ್ಮಡಿ ಕರ್ಕ (972 – 973)
ನಾಲ್ವಡಿ ಇಂದ್ರ (973 – 982)
ಇಮ್ಮಡಿ ತೈಲಪ
(ಪಶ್ಚಿಮ ಚಾಲುಕ್ಯರು)
(973-997)

ಸಾಹಿತ್ಯ ಮತ್ತು ಸಂಸ್ಕೃತಿ[ಬದಲಾಯಿಸಿ]

ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು. [[ವರ್ಗ:ಕರ್ನಾಟಕದ ಇತಿಹಾಸ]

ರಾಷ್ಟ್ರಕೂಟರ ಕೊಡುಗೆಗಳು:

೧) ಆಡಳಿತ ವ್ಯವಸ್ಥೆ: ರಾಷ್ಟ್ರಕೂಟರರಾಜತ್ವವು ವಂಶಪಾರಂಪರ್ಯವಾಗಿತ್ತು.ಅರಸರಿಗೆ ಸಹಾಯ ಮಾಡಲು ಮಂತ್ರಿಮಂಡಲವಿರುತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂದಿ ವಿಗ್ರಹಿಯೆಂಬ ಗಣ್ಯನು ಇದ್ದನು.ಆಡಳೀತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ),ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ.ಗ್ರಾಮ ಲೆಕ್ಕಿಗ ಈತನ ಸಹಾಯಕ.ನಾಡುಗಳಲ್ಲಿ ನಾಡಗಾವುಂಡ,ವಿಷಯ ಮತ್ತು ರಾಷ್ಟ್ರಗಳಲ್ಲಿ ವಿಷಯಪತಿ ಮತ್ತು ರಾಷ್ಟ್ರಪತಿ ಎಂಬ ಅದಿಕಾರಿಗಳು ಇದ್ದರು.

೨) ಆದಾಯ:ಭೂಕಂದಾಯ,ಸರಕು,ಮನೆ,ಅಂಗಡಿಗಳ ಮೇಲಿನ ಸುಂಕು,ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೋದಲಾದವು ರಾಜ್ಯದ ಆದಾಯಗಳಾಗಿದ್ದವು.