ವಿಷಯಕ್ಕೆ ಹೋಗು

ಸಾಗುವಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ತೇಗ ಇಂದ ಪುನರ್ನಿರ್ದೇಶಿತ)
ಸಾಗುವಾನಿ (ತೇಗ)
ಸಾಗುವಾನಿಯ ಎಲೆ ಮತ್ತು ಕಾಯಿ
Scientific classification
ಸಾಮ್ರಾಜ್ಯ:
plantae
Division:
ಹೂಬಿಡುವ ಸಸ್ಯ
ವರ್ಗ:
ಮ್ಯಾಗ್ನೊಲಿಯೊಪ್ಸಿಡ
ಗಣ:
ಲಾಮಿಯೇಲ್ಸ್
ಕುಟುಂಬ:
ವೆರ್ಬೆನಾಸಿಯೆ
ಕುಲ:
ಟೆಕ್ಟೋನಾ
Species

ಟೆಕ್ಟೋನಾ ಗ್ರಾಂಡಿಸ್
ಟೆಕ್ಟೋನಾ ಹಾಮಿಲ್ಟೊನಿಯಾನ
ಟೆಕ್ಟೋನಾ ಫಿಲಿಪಿನೆನ್ಸಿಸ್

ಸಾಗುವಾನಿ ಅಥವಾ ತೇಗ ವರ್ಬೆನಾಸಿಯೆ ಕುಟುಂಬದ ಒಂದು ಪರ್ಣಪಾತಿ (deciduous) ವೃಕ್ಷ. ಇದು ಮುಖ್ಯವಾಗಿ ಮಾನ್ಸೂನ್ ಕಾಡುಗಳಲ್ಲಿ, ಅಂದರೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಬೆಳೆಯುತ್ತದೆ. ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಕರ್ನಾಟಕದ ದಾಂಡೇಲಿ, ಯಲ್ಲಾಪುರ, ಕಾಕನಕೋಟೆ, ಹುಣಸೂರು ಮುಂತಾದ ಪ್ರದೇಶಗಳು ಸಾಗುವಾನಿ ತೋಪುಗಳಿಗೆ ಪ್ರಖ್ಯಾತ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಸಾಗುವಾನಿಯಲ್ಲಿ ಮೂರು ಮುಖ್ಯ ಪ್ರಭೇದಗಳಿವೆ.

  1. ಟೆಕ್ಟೋನ ಗ್ರಾಂಡಿಸ್ (Tectona grandis)
  2. ಟೆಕ್ಟೋನ ಹ್ಯಾಮಿಲ್ಟೋನಿಯಾನ (Tectona hamiltoniana)
  3. ಟೆಕ್ಟೋನ ಫಿಲಿಫಿನೆಂಸಿಸ್ (Tectona philippinensis)

ವೈಶಿಷ್ಟ್ಯಗಳು[ಬದಲಾಯಿಸಿ]

ಸಾಗುವಾನಿ ಮರಗಳ ರಾಜ. ಉಳಿದ ಮರಗಳನ್ನು ಸಾಗುವಾನಿಯ ಗುಣಗಳಿಗೆ ಹೋಲಿಸುವುದು ವಾಡಿಕೆಯಾಗಿದೆ. ಇದಕ್ಕೆ ಗೆದ್ದಲು ಹಿಡಿಯುವುದಿಲ್ಲ, ಅಲಂಕಾರಿಕವಾಗಿದ್ದು ಹೊಳಪು ಬರುತ್ತದೆ.ಕೆತ್ತನೆಗೆ ಸುಲಭವಾಗಿದೆ. ಸಾಧಾರಣ ಗಡಸು.ಸುರುಟುವುದಿಲ್ಲ.

ಉಪಯೋಗಗಳು[ಬದಲಾಯಿಸಿ]

ಇದರ ದಾರು (wood)ನ ಉಪಯೋಗ ಹಲವಾರು.ಮುಖ್ಯವಾಗಿ ಗೃಹ ನಿರ್ಮಾಣಕ್ಕೆ,ಪೀಠೋಪಕರಣಗಳಿಗೆ,ಹಡಗು ಕಟ್ಟಲು,ಒಳಾಂಗಣ ಅಲಂಕಾರಕ್ಕೆ,ರೈಲ್ವೇ ಕೋಚುಗಳ ನಿರ್ಮಾಣಕ್ಕೆ ಬಹುವಾಗಿ ಉಪಯೋಗವಾಗುತ್ತಿದೆ.ಇದರ ಪದರ ಹಲಗೆ (veneer)ಅತ್ಯುತ್ತಮ ಅಲಂಕಾರಿಕವಾಗಿದ್ದು ಪ್ರಪಂಚದಾದ್ಯಂತ ಬಹು ಬೇಡಿಕೆ ಇದೆ.ಇದರ ದಾರುವಿನ ಎಣ್ಣೆ,ಬೀಜದ ಎಣ್ಣೆ ಚರ್ಮರೋಗದ ಚಿಕಿತ್ಸೆಯಲ್ಲಿ ಉಪಯೋಗದಲ್ಲಿದೆ.ಇದರ ಎಲೆಯನ್ನು ಕರಾವಳಿ ಪ್ರದೇಶದಲ್ಲಿ ಹಲಸಿನ ಕಡಬು ಮಾಡಲು ಉಪಯೋಗಿಸುತ್ತಾರೆ.

ಆಧಾರ[ಬದಲಾಯಿಸಿ]

  1. "ವನಸಿರಿ" -ಅಜ್ಜಂಪುರ ಕೃಷ್ಣಸ್ವಾಮಿ