ಕಾಕನಕೋಟೆ
ಕಾಕನಕೋಟೆ ಭಾರತದ ಕರ್ನಾಟಕ ರಾಜ್ಯದ ಮೈಸೂರಿನಿಂದ 73 ಕಿ.ಮೀ ದೂರದಲ್ಲಿದೆ [೧] . ಇದರ ಅಕ್ಷಾಂಶ 11° 53' 32.99" ಉತ್ತರ ಮತ್ತು ರೇಖಾಂಶ 76° 12' 6.00" ಪೂರ್ವ. ಇದು ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯವಾಗಿದ್ದು, ಹೆಚ್ಚಿನ ಸಂಖ್ಯೆಯ ಕಾಡು ಆನೆಗಳು ಕಂಡುಬರುವ ಪ್ರಸಿದ್ಧ ಸ್ಥಳವಾಗಿದೆ[೨] . ಈಗ ಇದು ನಾಗರಹೊಳೆ ಉದ್ಯಾನದ ವ್ಯಾಪ್ತಿಯಲ್ಲಿ , ವನ್ಯಜೀವಿ ರಾಷ್ಟ್ರೀಯ ಉದ್ಯಾನವನವಾಗಿದ್ದು, ರಾಜ್ಯವು ಮೇಲ್ವಿಚಾರಣೆ ಮತ್ತು ನಿಯಂತ್ರಿಸುತ್ತದೆ.[೩]
ಹೆಸರಿನ ಮೂಲ
[ಬದಲಾಯಿಸಿ]ಇದು ಸ್ಥಳೀಯ ಅರಣ್ಯವಾಸಿ ಕುರುಬ ಜನರ ನಾಯಕನಾಗಿದ್ದ ಐತಿಹಾಸಿಕ ಕಾಕ ನಾಯಕನ ಹೆಸರಿನ ಪ್ರಸಿದ್ಧ ಅರಣ್ಯ ಶ್ರೇಣಿಯಾಗಿದೆ . ಕಾಕ ನಾಯಕನ ಧೈರ್ಯದಿಂದ ಪ್ರಭಾವಿತನಾಗಿ ಆಗಿನ ಮೈಸೂರಿನ ಮಹಾರಾಜರು ಈ ಕಾಡಿಗೆ ಅವರ ಹೆಸರಿಟ್ಟರು.[೪]
ಸೌಲಭ್ಯಗಳು
[ಬದಲಾಯಿಸಿ]ಖೆಡ್ಡಾ ವಿಧಾನದ ಮೂಲಕ ಈ ಸ್ಥಳದಲ್ಲಿ ಆನೆಗಳ ಹಿಂಡುಗಳನ್ನು ನಿಯತಕಾಲಿಕವಾಗಿ ಸೆರೆಹಿಡಿಯಲಾಗುತ್ತಿತ್ತು . ಈ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ವೀಕ್ಷಣೆಗೆ ಸೌಲಭ್ಯಗಳು ಲಭ್ಯವಿದೆ. ಈಗ ಇದು ಕಬಿನಿ ಬಳಿ ಕಪ್ಪು ಚಿರತೆ ವೀಕ್ಷಣೆಗೆ ಹೆಸರುವಾಸಿಯಾಗಿದೆ. [೫]
ಸಾಹಿತ್ಯ
[ಬದಲಾಯಿಸಿ]ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಕಾಕನಕೋಟೆ ಹೆಸರಿನ ನಾಟಕದ ಮೂಲಕ ಇದು ಪ್ರಸಿದ್ಧವಾಗಿದೆ . ನಾಟಕವನ್ನು ಆಧರಿಸಿದ, ಸಿ.ಆರ್. ಸಿಂಹ ನಿರ್ದೇಶನದ ಕನ್ನಡ ಕಥಾ ಚಲನಚಿತ್ರ ಕಾಕನ ಕೋಟೆ 1977 ರಲ್ಲಿ ಬಿಡುಗಡೆಯಾಯಿತು. 2012 ರಲ್ಲಿ, ಕೆ.ವಿ. ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಕೆ ಕಾಕನಕೋಟೆಯ ಬುಡಕಟ್ಟು ಜನಾಂಗದವರ ಜೀವನದ ಬಗ್ಗೆ ಕಥಾವಸ್ತು ಹೊಂದಿರುವ ಕಾಕನ ಕೋಟೆ ಚಿತ್ರ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.[೪]
ದಟ್ಟವಾದ ಕಾಡಿನಿಂದ ಕೂಡಿದ ಈ ಪ್ರದೇಶದಲ್ಲಿ ತೇಗ, ಹೊನ್ನೆ,ನಂದಿ, ಬೀಟೆ ಮುಂತಾದ ಮರಗಳು ಹುಲುಸಾಗಿ ಬೆಳೆದಿವೆ. ಇಲ್ಲಿ ತೇಗದ ಮರಗಳನ್ನು ಬೆಳೆಯುವ ಸರ್ಕಾರಿ ಪ್ಲಾಂಟೇಷನ್ನುಗಳಿವೆ.
ಕಾಕನಕೋಟೆಯ ಕಾಡು ಆನೆಗಳ ಬೀಡು. ಆನೆಗಳಿಂದ ಬೆಳೆಗಳಿಗೂ ಜನಜೀವನಕ್ಕೂ ಆಗಾಗ ತೊಂದರೆ ಆಗುವುದು ಸಾಮಾನ್ಯ. 1873-1971ರ ವರೆಗೆ ನಡೆಸಿದ 36 ಖೆಡ್ಡಾಗಳಲ್ಲಿ 24ನ್ನು ಕಾಕನಕೋಟೆ ಪ್ರದೇಶದಲ್ಲೇ ನಡೆಸಲಾಯಿತು. 1968ರಲ್ಲಿ ಹಿಡಿಯಲಾದ ಆನೆಗಳ ಸಂಖ್ಯೆ 88; 1971ರಲ್ಲಿ 41. ಕಪಿಲಾ ಯೋಜನೆ ಪೂರ್ಣಗೊಂಡಾಗ ಈ ಪ್ರದೇಶ ನೀರಿನಲ್ಲಿ ಮುಳುಗಿಹೋಗುವುದೆಂದು ನಿರೀಕ್ಷಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ i Nature (2023-06-02). Revealed: Epic Bike Ride in the Mysterious Kakanakote Forest!. Retrieved 2026-03-04 – via YouTube.
- ↑ "Loading..." www.avathi.com. Retrieved 2026-03-04.
- ↑ Reading Eagle (in ಇಂಗ್ಲಿಷ್). Reading Eagle.
- 1 2 archive, From our online (2011-07-21). "Kakana Kote: A film on the plight of tribals". The New Indian Express (in ಇಂಗ್ಲಿಷ್). Retrieved 2026-03-04.
- ↑ "Karnataka: Safari resumes at Nagarahole Tiger Reserve, only 25 tourists per trip". The Times of India. 2020-10-13. ISSN 0971-8257. Retrieved 2026-03-04.
