ಖೆಡ್ಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖೆಡ್ಡಾ ವ್ಯವಸ್ಥೆಯು ಆನೆಗಳ ಪೂರ್ಣ ಹಿಂಡನ್ನು ಸೆರೆಹಿಡಿಯಲು ಭಾರತದಲ್ಲಿ ಬಳಸಲಾದ ದಸಿಗೋಡೆ ಆವರಣವಾಗಿತ್ತು; ಒಂಟಿ ಆನೆಗಳನ್ನು ಸೆರೆಹಿಡಿಯಲು ಇತರ ವಿಧಾನಗಳನ್ನು ಕೂಡ ಬಳಸಲಾಗುತ್ತಿತ್ತು. ಪಳಗಿಸಿದ ಆನೆಗಳ ಮೇಲೆ ಹತ್ತಿರುವ ಕುಶಲ ಮಾವುತರು ಆನೆಗಳನ್ನು ದಸಿಗೋಡೆ ಆವರಣದಲ್ಲಿ ಅಟ್ಟುತ್ತಿದ್ದರು. ಈ ವಿಧಾನವನ್ನು ವ್ಯಾಪಕವಾಗಿ ಈಶಾನ್ಯ ಭಾರತ, ವಿಶೇಷವಾಗಿ ಅಸ್ಸಾಂ ರಾಜ್ಯದಲ್ಲಿ, ಬಹುತೇಕವಾಗಿ ದಕ್ಷಿಣ ಭಾರತದಲ್ಲಿ[೧], ಮತ್ತು ವಿಶೇಷವಾಗಿ ಹಿಂದಿನ ಮೈಸೂರು ರಾಜ್ಯದಲ್ಲಿ ಆಚರಣೆಯಲ್ಲಿ ತರಲಾಗಿತ್ತು.

ಆನೆಗಳನ್ನು ಸೆರೆಹಿಡಿಯಲು ಖೆಡ್ಡಾ ಅಭ್ಯಾಸ ಮತ್ತು ಇತರ ವಿಧಾನಗಳನ್ನು, ಭಾರತೀಯ ಆನೆಯನ್ನು ಅತಿ ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಘೋಷಿಸಿದ ಕಾನೂನು ಜಾರಿಗೆ ಬಂದ ನಂತರ ೧೯೭೩ರಿಂದ ನಿಲ್ಲಿಸಲಾಗಿದೆ. ಮಾನವ ಆವಾಸಸ್ಥಾನಗಳಲ್ಲಿ ಅತಿಕ್ರಮಿಸಿ ಬೆಳೆಗಳ ವ್ಯಾಪಕ ಹಾನಿ ಉಂಟುಮಾಡುವ ಆನೆಗಳ ವಿಷಯದಲ್ಲಿ, ಅರಣ್ಯ ಇಲಾಖೆಗೆ ಅವುಗಳನ್ನು ಸೆರೆಹಿಡಿಯುವ ಅಧಿಕಾರವಿದೆ.

ಉಲ್ಲೇಖಗಳು[ಬದಲಾಯಿಸಿ]

  1. Kamat, Vikas. "The Khedda System of Catching Wild Elephants". Kamat's Potpourri. Retrieved 4 January 2016.
"https://kn.wikipedia.org/w/index.php?title=ಖೆಡ್ಡಾ&oldid=893397" ಇಂದ ಪಡೆಯಲ್ಪಟ್ಟಿದೆ