ವಿಷಯಕ್ಕೆ ಹೋಗು

ಮೈಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox ಜಿಲ್ಲೆ

ಕೆ.ಆರ್.ಎಸ್ ಅಣೆಕಟ್ಟು

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ. ಮೈಸೂರನ್ನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಮೈಸೂರು ನಮ್ಮ ರಾಜ್ಯ ಮಾತ್ರವಲ್ಲ ಇಡೀ ದೇಶದ ವಾರ್ಡನ್ ನಗರಗಳಲ್ಲಿ ಒಂದು. ಅದ್ಭುತವಾದ ಮೈ ನವಿರೇಳಿಸುವ ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಹೆಸರಾದ ಮೈಸೂರು ನಗರದಲ್ಲಿ ಮೊದಲ ಪಿರಂಗಿ ಗುಂಡು ಹಾಗೂ ರಾಕೇಟ್ಗಳ ದಾಳಿ ನಡೆದದ್ದು. ಮೈಸೂರನ್ನು ಚಂದದ ನಗರಿ ಎಂದು ಕರೆಯಲಾಗುತ್ತದೆ.

A photo of a building in the Infosys campus at Mysore
Multiplex in the Infosys campus at Mysore

ಮೈಸೂರಿನ ಅಧಿದೇವತೆ

ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ. ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ. ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯ ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿರುವ ಒಂದು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಆಗಿದೆ. ಇದು ಮೈಸೂರು ನಗರದಿಂದ 38 ಕಿಲೋಮೀಟರ್ (೨೪ ಮೈಲಿ) ದೂರದಲ್ಲಿದೆ ಮತ್ತು ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯಕ್ಕೆ ( ಕೇಶವ ಅಥವಾ ಕೇಶವ ದೇವಾಲಯ ಎಂದೂ ಕರೆಯುತ್ತಾರೆ) ಪ್ರಸಿದ್ಧವಾಗಿದೆ.

ಮೈಸೂರು ನಗರದ ಇತಿಹಾಸ

[ಬದಲಾಯಿಸಿ]
A photo depicting the Mysore style of painting
Mysore painting depicting the goddess ಸರಸ್ವತಿ
  • ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ನೆಯ ಶತಮಾನದ ಕೊನೆಯ ಹೊತ್ತಿಗೆ ಒಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು "ಯದುರಾಯ". ಹಾಗಾಗಿ ವಂಶದ ಹೆಸರು 'ಯದುವಂಶ' ಎಂದಾಯಿತು. ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. ೧೮ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್‌ರ ಆಡಳಿತ ನಡೆಯಿತು.
  • ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು. ಮೈಸೂರು ಸಂಸ್ಥಾನ ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತ್ತು. ೧೭೯೯ರಲ್ಲಿ ಟೀಪು ಸುಲ್ತಾನನ ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು.
  • ೧೮೮೧ರಲ್ಲಿ ಮೈಸೂರಿನಲ್ಲಿ ೧೪೪ ಸದಸ್ಯರೊಂದಿಗೆ, ಪ್ರಜಾ ಪ್ರತಿನಿಧಿ ಸಭೆ ಸ್ಥಾಪನೆಯಾಯಿತು. ೧೮೮೧ರಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆ ಮೈಸೂರಿನಲ್ಲಿ ಆರಂಭವಾಯಿತು. ೧೮೮೨ರಲ್ಲಿ ಬೆಂಗಳೂರು ಮೈಸೂರು ರೈಲ್ವೆ ಮಾರ್ಗ ಹಾಸಿದರು. ಕೋಲಾರದ ಚಿನ್ನದ ಗಣಿ ಆರಂಭವಾಯಿತು. ೧೯೦೫ರಲ್ಲಿ ಶಿವನ ಸಮುದ್ರ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಹಾಗು ಕೋಲಾರದ ಚಿನ್ನದ ಗಣಿ, ಮತ್ತು ಬೆಂಗಳೂರಿಗೆ ವಿದ್ಯುತ್ ಸರಬರಾಜು. ಪ್ರಥಮಬಾರಿಗೆ ಭಾರತದಲ್ಲಿ ವಿದ್ಯುತ್ ದೀಪ ಬೆಳಗಿತು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಮೈಸೂರು ಸಂಸ್ಥಾನದಲ್ಲಿ ಶಾಲೆಗಳ ಸಂಖ್ಯೆ ೪೫೬೮ ರಿಂದ ೧೧೨೯೪ ಕ್ಕೆ ಹೆಚ್ಚಿದವು. ಇದು ಕರ್ನಾಟಕದಲ್ಲಿ ಮೊದಲ ಕಲಿಕಾ ಕೇಂದ್ರವಾಯಿತು. ೧೯೧೧ರಲ್ಲಿ, ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ, ಕಾವೇರಿ ನದಿಗೆ ಕನ್ನಂಬಾಡಿ [ಕೃಷ್ಣರಾಜ ಸಾಗರ] ಆಣೆಕಟ್ಟು ಕಟ್ಟಿದರು. ಹಾಗೂ ೧೯೧೬- ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಕೈಗಾರಿಕೆ ನಿರ್ಮಾಣ,  ಎಚ್. ಎ. ಎಲ್. ಕಾರ್ಖಾನೆ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ, ಮತ್ತು ಶಿವನ ಸಮುದ್ರದಲ್ಲಿ ೪೦೦೦ ಅಶ್ವಶಕ್ತಿಯ ವಿದ್ಯುತ್ ಉತ್ಪಾದನೆ ಆರಂಭಗೊಂಡವು. ದಿವಾನ್ ಸಾರ್ ಎಮ್. ವಿಶ್ವೇಶ್ವರಯ್ಯ ಇವರ ಕಾಲದಲ್ಲಿ ೩೭೨ ಮೈಲಿ ಉದ್ದದ ರೈಲ್ವೆ ಮಾರ್ಗವನ್ನು ಹಾಸಲಾಹಿತು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಯಿತು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು.
  • ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ ನಂತರ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ ೧೯೭೩ರಲ್ಲಿ "ಕರ್ನಾಟಕ ರಾಜ್ಯ " ಎಂಬ ಹೆಸರು ಸ್ಥಿರವಾಯಿತು. ಮೈಸೂರು ನಗರ ಸಮುದ್ರ ಮಟ್ಟದಿಂದ ೭೭೦ ಮೀ ಎತ್ತರದಲ್ಲಿದೆ, ಹಾಗೂ ಬೆಂಗಳೂರು ನಗರದಿಂದ ೧೪೦ ಕಿ.ಮೀ. ದೂರದಲ್ಲಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಹತ್ತು ದಿನ-ಒಂಬತ್ತು ರಾತ್ರಿಗಳವರೆಗೆ ದಸರಾ ಅಥವಾ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವುದು.

ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು 'ಮಹಿಷಪುರಿ', 'ಮಹಿಷೂರು'. ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. 'ಮಹಿಷ' ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಈತ ಮಾನವ ಮತ್ತು ಕೋಣ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ, ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿ‍‌ಷೂರು>ಮಹಿಸೂರು>ಮಸೂರು ಆಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ ೨೦೦೫ ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಆಂಗ್ಲ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು. ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ. ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ.

ಚಾಮುಂಡಿ ದೇವಾಲಯದ ಇತಿಹಾಸ

[ಬದಲಾಯಿಸಿ]
ಚಾಮುಂಡಿ ಬೆಟ್ಟದ ದೇವಸ್ಥಾನಗಳಿಗೂ ಸಹ ಮೈಸೂರು ಪ್ರಸಿದ್ಧ
  • ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆಯನ್ನು ೯೫೦ರ ಹಿಂದಿನ ಶಾಸನದಲ್ಲಿ ಇದರ ಉಲ್ಲೇಖವಿದೆ. ಈಗಲೂ ಚಾಮುಂಡಿ ಬೆಟ್ಟದ ಮೇಲೆ ಇದನ್ನು ಕಾಣಬಹುದು. ನಗರದ ಚೋಳರು, ಚಾಲುಕ್ಯರು, ಹೊಯ್ಸಳರು , ವಿಜಯನಗರ ಸಾಮ್ರಾಜ್ಯ ಮತ್ತು ರಾಜವಂಶದ ನಂತರ ಗಂಗಾ ಸಾಮ್ರಾಜ್ಯವು ಮೊದಲು ಆಳ್ವಿಕೆ ನಡೆಸಿತು. ಹೊಯ್ಸಳರ ಕಟ್ಟಡ ಅಥವಾ ಚಾಮುಂಡಿ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡಿ ದೇವಸ್ಥಾನ ಸೇರಿದಂತೆ ನಗರದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳು ಅತ್ಯಂತ ವಿಸ್ತೃತವಾಗಿವೆ.
  • ನಂತರ ಬೆಟ್ಟದ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುವ ಪ್ರಸಿದ್ಧ ರಾಜ ತಮ್ಮ ಆಳ್ವಿಕೆಯಲ್ಲಿ ಕೋಟೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ನಂತರ ಮಹಿಷೂರು, ಅಂತಿಮವಾಗಿ ಮೈಸೂರಾಗಿ ಬದಲಾಯಿತು. ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಹೀಗೆ ರಾಜ ಒಡೆಯರ್ ಆಳ್ವಿಕೆಯಲ್ಲಿ, ಮೈಸೂರು ತನ್ನ ವೈಭವವನ್ನು ಮರಳಿ ಪಡೆಯಿತು.
  • ಶ್ರೀರಂಗಪಟ್ಟಣ ಕೋಟೆಯ ಪ್ರಾಂಗಣ ಕೃಷ್ಣರಾಜ ಒಡೆಯರ್ III ರ ಆಳ್ವಿಕೆಯಲ್ಲಿ ವಿಸ್ತರಿಸಿತು. ಇದು ನಗರದ ಅನೇಕ ಆಡಳಿತಗಾರರ ಕೊಡುಗೆಗಳನ್ನು ಹೊಂದಿದೆ. ಮೈಸೂರಿನ ಮಹಾನ್ ಎಂಜಿನಿಯರ್ ಗಳು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ, ವಿಶಿಷ್ಟ ಆಳ್ವಿಕೆಗೆ ನೆರವಾಗಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ- ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯ ಇವರುಗಳು. ಇವರ ಕಾಲದಲ್ಲಿ ವಿಶಾಲ ರಸ್ತೆಗಳು, ಕಾಲುವೆಗಳು ಮತ್ತು ಅತ್ಯಂತ ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಗಾರ್ಡನ್ ಸಿದ್ಧಗೊಂಡವು. ಅವರು ಪ್ರಗತಿಯ ಮುಂಚೂಣಿಗೆ ನಗರವನ್ನು ತರುವ ಸಲುವಾಗಿ ಉದ್ಯಮ, ಕಲೆ, ಕೃಷಿ ಮತ್ತು ಶಿಕ್ಷಣ ಬಡ್ತಿಯನ್ನು ನೀಡುತ್ತಿದ್ದರು. ಅವರ ಕಾಲವನ್ನು "ಮೈಸೂರಿನ ಸುವರ್ಣ ಯುಗ" ಎಂದು ಕರೆಯುತ್ತಾರೆ.
  • ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಶಕ್ತಿ ಕೇಂದ್ರ ಎಂದು ಪ್ರಸಿದ್ಧವಾಗಿದ್ದು, ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ದೇವಾಲಯದ ಎರಡೂ ರಸ್ತೆ ೧೦೦೮ ಕ್ರಮಗಳನ್ನು ನಿಲುಕಿಸಿ ಕೊಳ್ಳಬಹುದು. ಬೆಟ್ಟದ ಮೇಲೆ ೭೦೦ ಹಂತಗಳನ್ನು ಏರಿಕೆಗೆ ಮತ್ತು ಮಹಿಷಾಸುರನ ಪ್ರತಿಮೆ ಹಾಗೂ ದೇವತೆ ಚಾಮುಂಡೇಶ್ವರಿಯ ಬಳಿ {BULL} ನಂದಿಯ ಒಂದು ಬೃಹತ್ ಪ್ರತಿಮೆ ಇದೆ. ಬೆಟ್ಟದ ಮೇಲಿಂದ ಇಡೀ ಮೈಸೂರು ನಗರದ ಪರಿದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಅರಕೇಶ್ವರ ಸ್ವಾಮಿ ದೇವಾಲಯ

[ಬದಲಾಯಿಸಿ]

ಕೃಷ್ಣರಾಜ ನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರವಾಗಿದ್ದು, ಕಾವೇರಿ ನದಿಯ ದಡದಲ್ಲಿದೆ ಈ ನಗರವು ಇಂದೆ ಎಡ ತೊರೆ ಎಂದು ಕರೆಯಲಾಗುತ್ತಿತು ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನ ಇದೆ.

ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ ವಾಗಿದ್ದು. ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಯಡತೊರೆ ಎಂದು ಕರೆಯಲ್ಪಟ್ಟಿತು. ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನವಿದೆ.

ಇದು ಜಗತ್ತಿನಲ್ಲೇ ಕಂಡು ಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ ಮರುದಿನ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತದೆ.


ಮಸಣಿಕಮ್ಮ ದೇವಸ್ಥಾನ

ಮಸಣಿಕಮ್ಮ ದೇವಸ್ಥಾನಕರ್ನಾಟಕದ ಪಿರಿಯಾಪಟ್ಟಣದಲ್ಲಿ ತಾಯಿ ಶಕ್ತಿ ದೇವತೆಗೆ ಸಮರ್ಪಿಸಲಾಗಿದೆ. ಆಕೆಯನ್ನು ಇಲ್ಲಿ ಮಸಣಿಕಮ್ಮ ದೇವಿಯೆಂದು ಪೂಜಿಸಲಾಗುತ್ತದೆ. ಈ ದೇವಾಲಯವು ಕರ್ನಾಟಕದ ಎಲ್ಲಾ ಪ್ರದೇಶಗಳಿಂದ ಮತ್ತು ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ದುಷ್ಟರಿಂದ ಮುಕ್ತಿ ಪಡೆಯಲು ಆಕೆಯನ್ನು ಭಕ್ತರು ಪೂಜಿಸುತ್ತಾರೆ. ಅವಳು ಫಲವತ್ತತೆಯ ದೇವತೆಯೂ ಹೌದು. ದಂತಕಥೆಯ ಪ್ರಕಾರ ಮಾತೃದೇವತೆಯ ನಿರ್ದಿಷ್ಟ ರೂಪವನ್ನು ಪೂಜಿಸಿದ ಹುಡುಗಿಗೆ ಅವಳ ಕುಟುಂಬದಿಂದ ಕಿರುಕುಳ ನೀಡಲಾಯಿತು. ಮನೆಯವರ ಅದರಲ್ಲೂ ತಂದೆಯ ವರ್ತನೆಯನ್ನು ಸಹಿಸಲಾರದೆ ಕುದಿಯುತ್ತಿದ್ದ ಸುಣ್ಣದ ಕಲ್ಲಿಗೆ ಹಾರಿ ಕರಗಿ ಹೋದಳು. ಘಟನೆಯನ್ನು ಕಂಡ ಮೀನುಗಾರರು ಆಕೆಗೆ ಪೂಜೆ ಸಲ್ಲಿಸಿದರು. ಅವಳು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂದು ಅವಳನ್ನು ಪೂಜಿಸುವಂತೆ ಸ್ವರ್ಗದಲ್ಲಿ ಒಂದು ಧ್ವನಿ ಕೇಳಿತು. ಕೆಲವು ದಿನಗಳ ನಂತರ ಸುಣ್ಣದ ಕಲ್ಲಿನಿಂದ ಒಂದು ಮೂರ್ತಿ (ವಿಗ್ರಹ) ಕಾಣಿಸಿಕೊಂಡಿತು ಮತ್ತು ಅವಳನ್ನು ಉರಿಮಸಾನಿ ಎಂದು ಕರೆಯಲಾಯಿತು. ನಂತರ ಮಸಣಿಕಮ್ಮ ಆದರು.

ಚೆನ್ನಕೇಶವ ದೇವಾಲಯ

[ಬದಲಾಯಿಸಿ]

ಚನ್ನ ಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ 38 ಕಿಲೋ ಮೀಟರ್ ದೂರದಲ್ಲಿದೆ.. ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.

  • ಚೆನ್ನಕೇಶವ ದೇವಾಲಯ:ಚನ್ನಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ ೩೮ ಕಿಲೋ ಮೀಟರ್ ದೂರದಲ್ಲಿದೆ..

ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.

<gallery> images.jpg| <gallery>

ಮೈಸೂರು ನಗರವನ್ನು "ಅರಮನೆಗಳ ನಗರ " ಎಂದು ಕರೆಯಲಾಗುತ್ತದೆ. ಆದ್ದರಿಂದ ಅರಮನೆಗಳು ಪ್ರವಾಸಿ ಆಕರ್ಷಣೆಯಾಗಿದೆ. ಇದಲ್ಲದೆ ಸಹ ಅಂಬಾವಿಲಾಸ ಅರಮನೆ ಎಂಬ ಪ್ರಸಿದ್ಧ ಮೈಸೂರು ಅರಮನೆ. ಇದಲ್ಲದೆ ಜಗನ್ ಮೋಹನ ಅರಮನೆ, ಜಯಲಕ್ಮೀ ವಿಲಾಸ ಮತ್ತು ಲಲಿತಮಹಲ್ ಗಳನ್ನು ಹೊಂದಿದೆ. ಜೊತೆಗೆ ಇಂದು ವಿವಿಧ ಉದ್ದೇಶಗಳನ್ನು ಮೂರು ಪ್ರಸಿದ್ಧ ಮಹಲುಗಳನ್ನು ಕಾರಂಜಿ ಮ್ಯಾನ್ಷನ್ ,ಜಯಲಕ್ಷ್ಮೀ ಮ್ಯಾನ್ಷನ್ ಮತ್ತು ಚೆಲುವಾಂಬ ಮ್ಯಾನ್ಷನ್ ಇವೆ. ಎಲ್ಲಾ ಮಹಲುಗಳು, ಮೈಸೂರು ಅರಮನೆ ಕಾರಂಜಿಗಳನ್ನು ಸುಂದರ ವಿಸ್ತಾರವಾದ ತೋಟಗಳು ಸುತ್ತುವರಿದಿದೆ. ಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ ಅರಮನೆಗಳ ನಗರ ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು: ಮುಖ್ಯ ಮೈಸೂರು ಅರಮನೆ: ಮುಖ್ಯ ಮೈಸೂರು ಅರಮನೆ ಅಥವಾ "ಅಂಬಾ ವಿಲಾಸ", ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ ೩೬೦° ನೋಟ Archived 2009-01-30 ವೇಬ್ಯಾಕ್ ಮೆಷಿನ್ ನಲ್ಲಿ. ನೀಡುವ ಅರಮನೆ.

ರಾಜೇಂದ್ರ ವಿಲಾಸ ಅರಮನೆ

[ಬದಲಾಯಿಸಿ]

ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ.

ಜಗನ್ಮೋಹನ ಅರಮನೆ

[ಬದಲಾಯಿಸಿ]

ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. ರಾಜಾ ರವಿ ವರ್ಮ ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಚಿತ್ರಕೃತಿಗಳನ್ನು ಇಲ್ಲಿ ಕಾಣಬಹುದು.

ಜಯಲಕ್ಷ್ಮಿ ವಿಲಾಸ ಅರಮನೆ

[ಬದಲಾಯಿಸಿ]

ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ.

ಲಲಿತ ಮಹಲ್ ಅರಮನೆ

[ಬದಲಾಯಿಸಿ]

ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.

  • ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ, ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.[]
  • ಚಾಮುಂಡಿ ಬೆಟ್ಟ : ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಕೇಂದ್ರ ಎಂದು ಆದರೆ ಪ್ರವಾಸಿ ಆಕರ್ಷಣೆಯ ಪ್ರಸಿದ್ಧವಾಗಿದೆ. ಚಾಮುಂಡಿ ಬೆಟ್ಟದ ನಂದಿ, ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಇನ್ನೊಂದು ಚಾಮುಂಡಿ ಬೆಟ್ಟ. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ, ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ. ಮೂಲ: ವಿಕಿಮೀಡಿಯ ಕಣಜದಲ್ಲಿ
  • ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ : ಮೈಸೂರು ಮೃಗಾಲಯ ಪ್ರಾಣಿ ಅದರ ವಿವಿಧ ಭೇಟಿ ಸೆಳೆಯುತ್ತದೆ. ಇದು ಭಾರತದಲ್ಲಿರುವ ಪ್ರಾಚೀನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮೃಗಾಲಯದ ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿದೆ ಮತ್ತು ಇದು ತುಂಬಾ ಉತ್ತಮ ಅಕ್ವೇರಿಯಂ ಹೊಂದಿದೆ. ಮೈಸೂರಿನ ಚಾಮರಾಜೇಂದ್ರ ವನ್ಯ ಮೃಗಾಲಯ ಅಥವಾ "ಮೈಸೂರು ಝೂ", ಭಾರತದ ದೊಡ್ಡ ಮೃಗಾಲಯಗಳಲ್ಲಿ ಒಂದು. ಇತ್ತೀಚೆಗೆ ಕೆಲವು ಪ್ರಾಣಿಗಳು ನಿಗೂಢವಾಗಿ ಸಾವಿಗೀಡಾಗಿದ್ದು ಈ ಮೃಗಾಲಯ ಸ್ವಲ್ಪ ವಿವಾದಕ್ಕೆ ಸಿಲುಕಿತ್ತು.
  • ಝಿಯಾನ್ ಗಾರ್ಡನ್ಸ್ : ಝಿಯಾನ್ ಗಾರ್ಡನ್ಸ್ ವಿಶ್ವದ ತಾರಸಿ ಗಾರ್ಡನ್ಸ್ ಅತ್ಯುತ್ತಮ ಪರಿಗಣಿಸಲಾಗುತ್ತದೆ . ಕೆಆರ್ಎಸ್ ಅಣೆಕಟ್ಟಿನ ಸೈಟ್ ಇಟ್ಟ , ಗಾರ್ಡನ್ ಕೆಲವೇ ಹೆಸರಿಸಲು , ನೀರಿನ ವಾಹಕಗಳು ಕ್ಯಾಸ್ಕೇಡಿಂಗ್ ಅದರ ಸಮ್ಮಿತೀಯ ಯೋಜನೆ , ಸಂಗೀತ ಕಾರಂಜಿಗಳು ಹೆಸರುವಾಸಿಯಾಗಿವೆ. ಸೂರ್ಯನ ಕೆಳಗೆ ಹೋಗುತ್ತದೆ ಎಂದು , ಕಾರಂಜಿಗಳು ಪ್ರಕಾಶಿಸುವಂತೆ ಮತ್ತು ಅವರು ಅದ್ಭುತ ದೃಷ್ಟಿ ಇದು ರಾಗ ನೃತ್ಯ ಮಾಡಲಾಗುತ್ತದೆ . ಒಂದು ಪ್ರವಾಸಿ ತೋಟದಲ್ಲಿ ಉತ್ತಮ ದೋಣಿ ಸವಾರಿ ಆನಂದಿಸಬಹುದು .

ಕೃಷ್ಣ ರಾಜ ಸಾಗರ ಅಣೆಕಟ್ಟು : ಮೂರು ನದಿಗಳು ಕಾವೇರಿ , ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಒಂದೆಡೆ ಹತ್ತಿರ ನಿರ್ಮಿಸಲಾಗಿದೆ ಎಸ್ ಅಣೆಕಟ್ಟೆಯಿಂದ , ಭಾರತದ ದಕ್ಷಿಣ ಭಾಗದಲ್ಲಿ ಪ್ರಮುಖ ಜಲಾಶಯ. ಇದು ಮಹಾನ್ ಇಂಜಿನಿಯರ್ ಸರ್ ಎಂ ವಿಶ್ವೆಸ್ವರಯ್ಯ ಮತ್ತು ಅದರ ಅದ್ಭುತ ಕಾಲುವೆಗಳ ಮೂಲಕ ೧೯೩೨ರಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಂತ ನೀರು ಒದಗಿಸುವ ಅಣೆಕಟ್ಟು ನಿರ್ಮಿಸಲಾಗಿತ್ತು ನೀರಿನ ಹೊರಬಂದರು ಮಾಡಿದಾಗ ನೋಡು ಒಂದು ಸುಂದರ ದೃಶ್ಯ. ಸೇಂಟ್ ಫಿಲೋಮಿನಾ ಚರ್ಚ್ : ನವ್ಯ-ಗೋಥಿಕ್ ಶೈಲಿಯಲ್ಲಿ ಬೃಹತ್ ಚರ್ಚ್ ಭಾರತದ ಅತಿ ಭವ್ಯ ಚರ್ಚುಗಳು ಒಂದಾಗಿದೆ . ಚರ್ಚ್ ಅದ್ಭುತ ನೆಲಮಹಡಿಯು ಕ್ರಾಸ್ ಹೋಲುತ್ತದೆ . ಚರ್ಚ್ ೧೭೫ ಅಡಿ ಎತ್ತರದ ಅವಳಿ ಗೋಪುರಗಳು ಹಲವಾರು ಮೈಲಿಗಳ ದೂರದಿಂದ ಗೋಚರಿಸುತ್ತವೆ . ಈ ಚರ್ಚ್ ಗಾಜಿನ ಚಿತ್ರಿಸಿದ ಕಿಟಕಿಗಳಿವೆ ಅವರ ಹುಟ್ಟು, ಲಾಸ್ಟ್ ಸಪ್ಪರ್ , ಶಿಲುಬೆಗೇರಿಸಿದ ಮತ್ತು ಪುನರುತ್ಥಾನದ ರೀತಿಯ ಯೇಸುಕ್ರಿಸ್ತನ ಜೀವನದಲ್ಲಿ ಘಟನೆಗಳ ದೃಶ್ಯಗಳನ್ನು ಚಿತ್ರಿಸಲು . ರೈಲು ಮ್ಯೂಸಿಯಂ : ಈ ಇತರ ದೆಹಲಿಯಲ್ಲಿ ಜೊತೆಗೆ ಭಾರತದಲ್ಲಿ ಸ್ಥಾಪನೆ ಎರಡು ರೈಲು ವಸ್ತು ಒಂದಾಗಿದೆ . ಇದು ಛಾಯಾಚಿತ್ರಗಳು , ಪುಸ್ತಕ ಮತ್ತು ಇಂಜಿನ್ ಎಂಜಿನ್ ಮತ್ತು ರೈಲು ಗಾಡಿಗಳು ಪ್ರದರ್ಶನ ಮೂಲಕ ಭಾರತೀಯ ರೈಲ್ವೆ ಹಿಂದೆ ಮೂಲಕ ಹೊಂದಿದೆ ಪ್ರಗತಿಯ ಪ್ರಯಾಣ ದಾಖಲಿಸಿದೆ.

ಆಕರ್ಷಣೆಗಳು

[ಬದಲಾಯಿಸಿ]

ತಿಂಡಿ ತಿನಿಸುಗಳ ವಿಷಯದಲ್ಲಿ ಮೈಸೂರಿನ - ಮೈಲಾರಿ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದ ಎಲೆ, ಮೈಸೂರು ರೇಷ್ಮೆ ಮತ್ತು ಗಂಧದ ಎಣ್ಣೆ, ಸೋಪು ಪ್ರಸಿದ್ಧಿ.

ಮೈಸೂರು ನಗರ ಪ್ರದೇಶಗಳು

[ಬದಲಾಯಿಸಿ]

ಮೈಸೂರು ನಗರದ ಕೆಲವು ಪ್ರಮುಖ ಪ್ರದೇಶಗಳು- ಸಂತೇಪೇಟೆ, ಕೃಷ್ಣರಾಜ ಮೋಹಲ್ಲ, ನಜರ್ ಬಾದ್, ಕ್ಯಾತಮಾರನಹಳ್ಳಿ (ಕಂಠೀರವ ನರಸಿಂಹರಾಜಪುರ), ಕನ್ನೇಗೌಡನ ಕೊಪ್ಪಲು, ಇಟ್ಟಿಗೆಗೂಡು, ಚಾಮರಾಜ ಪುರಂ,ಕೃಷ್ಣಮೂರ್ತಿ ಪುರಂ, ಅಶೋಕಪುರಂ, ಶ್ರೀರಾಮಪುರ, ಜಯನಗರ, ಕುವೆಂಪುನಗರ, ಸರಸ್ವತಿ ಪುರಂ, ವಿದ್ಯಾರಣ್ಯಪುರಂ, ಸಿದ್ದಾರ್ಥನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಶಾರದದೇವಿನಗರ, ತೊಣಚಿಕೊಪ್ಪಲು, ಮಾನಸಗಂಗೋತ್ರಿ, ಜಯಲಕ್ಷ್ಮಿಪುರಂ, ಒಂಟಿಕೊಪ್ಪಲು (ವಾಣಿ ವಿಲಾಸ ಮೊಹಲ್ಲ), ಗೋಕುಲಂ, ಯಾದವಗಿರಿ, ಬೃಂದಾವನ ಬಡಾವಣೆ,ಕುಂಬಾರ ಕೊಪ್ಪಲು, ಮೇಟಗಳ್ಳಿ, ಬಿ ಎಂ ಶ್ರೀ ನಗರ, ಮಂಚೇಗೌಡನಕೊಪ್ಪಲು, ಲಕ್ಷ್ಮಿಕಾಂತಾನಗರ,ಹೆಬ್ಬಾಳು ಬಡಾವಣೆ, ವಿಜಯನಗರ, ಜೆ.ಪಿ.ನಗರ, ಶಿವರಾಮಪೇಟೆ, ವೀರನಗೆರೆ (ಗಾಂಧಿನಗರ), ಕನಕದಾಸನಗರ, ರೂಪನಗರ, ದೀಪನಗರ, ದಟ್ಟಗಳ್ಳಿ ಮುಂತಾದವುಗಳು.

ಸಮೀಪದ ಪ್ರವಾಸಿ ಸ್ಥಳಗಳು

[ಬದಲಾಯಿಸಿ]
ಚಾಮುಂಡಿ ಬೆಟ್ಟದ ಮಹಿಷಾಸುರ
A photo of Crawford Hall, the headquarters of the University of Mysore
Crawford Hall, the administrative headquarters of the University of Mysore

ತಿ.ನರಸೀಪುರವುಕಾವೇರಿ-ಕಪಿಲಾ-ಸ್ಫಟಿಕ ಸರೋವರಗಳು ತ್ರಿವೇಣಿ ಸಂಗಮದ ತನ್ನೊಡಲಲ್ಲಿ ಹಲವು ದೇಗುಲಗಳನ್ನು ಒಳಗೊಂಡಿದ್ದು ಅಗಸ್ತ್ಯೇಶ್ವರ,ಹನುಮಂತೇಶ್ವರ,ಕಾಮಾಕ್ಷಿ,ಪುರಾಣ ಪ್ರಸಿದ್ಧ ಅಶ್ವತ್ಥ ವೃಕ್ಷ, ಶಂಕರಾಚಾರ್ಯ ಪೀಠ,ಗ್ರಾಮದೇವತೆ ನಡುಹೊಳೆ ಚೌಡೇಶ್ವರಿ,ಇವು ತಿರುಮಕೂಡಲಿನಲ್ಲಿದ್ದು ಭಿಕ್ಷೇಶ್ವರ -ಆನಂದೇಶ್ವರ ನದಿಯ ಮತ್ತೊಂದು ತೀರದಲ್ಲಿ ಹಾಗೂ ಇವುಗಳ ಎದುರಿಗೆ ಶ್ರೀ ಗುಂಜಾನರಸಿಂಹ, ಬಳ್ಳೇಶ್ವರ,ಮೂಲಸ್ಥಾನೇಶ್ವರ, ತೋಟಗೇರಿ ಮಾರಮ್ಮ, ಚಿಕ್ಕಮ್ಮ-ದೊಡ್ಡಮ್ಮ ದೇಗುಲ,ಛಾಯಾದೇವಿ ಗುಡಿ,ಬಣ್ಣಾರಿಯಮ್ಮ ದೇವಾಲಯಗಳು ನೆಲೆ ನಿಂತಿವೆ. ಇಲ್ಲಿನ ಇತಿಹಾಸವು ಚಾಲುಕ್ಯ,ಚೋಳ,ಪಲ್ಲವ,ವಿಜಯನಗರ,ಗಂಗ,ಪುನ್ನಾಟ, ಮೂಗೂರು ಪಾಳೇಗಾರರು ಆಳಿದ್ದು ಐತಿಹಾಸಿಕವಾಗಿ ಶಿಲಾಯುಗದ ಸಂಸ್ಕೃತಿ ಹಲವೆಡೆ ಕಂಡು ಬಂದಿದೆ.

ಮೈಸೂರು ಜಿಲ್ಲೆ

[ಬದಲಾಯಿಸಿ]

ಮೈಸೂರು ಜಿಲ್ಲೆಯ ಉತ್ತರ ಪೂರ್ವಕ್ಕೆ ಜಿಲ್ಲೆ, ದಕ್ಷಿಣ ಪೂರ್ವಕ್ಕೆ ಚಾಮರಾಜನಗರ ಜಿಲ್ಲೆ, ದಕ್ಷಿಣಕ್ಕೆ ತಮಿಳುನಾಡು ರಾಜ್ಯ, ದಕ್ಷಿಣ ಪಶ್ಚಿಮಕ್ಕೆ ಕೇರಳ ರಾಜ್ಯ, ಪಶ್ಚಿಮಕ್ಕೆ ಕೊಡಗು ಜಿಲ್ಲೆ ಮತ್ತು ಉತ್ತರಕ್ಕೆ ಹಾಸನ ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯ ವಿಸ್ತೀರ್ಣ ೬,೨೬೮ ಚದರ ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೨೬,೨೪,೯೧೧ - ೧೯೯೧ ರಿಂದ ಶೇಕಡ ೧೫.೦೪ ರ ಹೆಚ್ಚಳ. ಮೈಸೂರು ಜಿಲ್ಲೆ ದಖ್ಖನ ಪ್ರಸ್ತಭೂಮಿಯ ಮೇಲಿದೆ.

  • ಅದರ ಉತ್ತರಪಶ್ಚಿಮ ಮತ್ತು ಪೂರ್ವ ಭಾಗಗಳ ಮೂಲಕ ಹರಿಯುವ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಇದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಅಣೆಕಟ್ಟು ಜಿಲ್ಲೆಯ ಉತ್ತರದಲ್ಲಿ ಇದೆ. ಬಂಡೀಪುರ ಅಭಯಾರಣ್ಯ ಮೈಸೂರು ಜಿಲ್ಲೆಯಲ್ಲಿ ಇದ್ದರೆ ನಾಗರಹೊಳೆ ಅಭಯಾರಣ್ಯ ಭಾಗಶಃ ಮೈಸೂರು ಜಿಲ್ಲೆಯಲ್ಲಿ ಮತ್ತು ಭಾಗಶಃ ಪಕ್ಕದ ಕೊಡಗು ಜಿಲ್ಲೆಯಲ್ಲಿ ಇದೆ. ಜಿಲ್ಲೆಯ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈರ್ವರು ಕನ್ನಡ ಕಾದಂಬರಿಕಾರ್ತಿಯರ ಹೆಸರುಗಳನ್ನು ಇಲ್ಲಿ ನಾವು ಉಲ್ಲೇಖಿಸಬಹುದಾಗಿದೆ. *ಓರ್ವರು, ಕಾದಂಬರಿಕಾರ್ತಿಯಷ್ಟೇ ಅಲ್ಲದೆ ರಾಜ್ಯಮಟ್ಟದ ನೋಂದಾಯಿಸಲ್ಪಟ್ಟ ಮಹಿಳಾ ಸಂಘಟನೆಯಾದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ತ್ ನ ಸ್ಥಾಪಕರೂ ಹಾಗೂ ಪ್ರಧಾನ ಅಧ್ಯಕ್ಷರೂ ಆದ ಶ್ರೀಮತಿ ಎಸ್. ಮಂಗಳಾ ಸತ್ಯನ್. ಇವರು ಈವರೆಗೆ ನಲವತ್ತಕ್ಕೂ ಹೆಚ್ಚು ಕಾದಂಬರಿ ಗಳನ್ನು, ನೂರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, ನೂರಾರು ಲೇಖನಗಳು, ನಾಟಕಗಳನ್ನೂ ರಚಿಸಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿದ್ದಾರೆ. ಅಲ್ಲದೆ, ಶ್ರೀಮತಿ ಮಂಗಳಾ ಸತ್ಯನ್ ೨೦೦೨ ರ ಮೇ ೨೫ ಮತ್ತು ೨೬ ರಂದು ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ನಡೆದ ೬ ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
  • ಶ್ರೀಮತಿ ಮಂಗಳಾ ಸತ್ಯನ್ ರವರ "ಭಾಗ್ಯ ಜ್ಯೋತಿ", "ಮುಗ್ಧ ಮಾನವ", "ಬಿಸಿಲು ಬೆಳದಿಂಗಳು" (ಕಾದಂಬರಿಯ ಹೆಸರು "ಆ ಮುಖ"), ಮತ್ತು "ಮುರಳಿ ಗಾನ ಅಮ್ರತಪಾನ" ಕಾದಂಬರಿಗಳು ಚಲನಚಿತ್ರಗಳಾಗಿವೆ. ಅಲ್ಲದೆ, ಇವರು "ಹೂವೊಂದು ಬೇಕು ಬಳ್ಳಿಗೆ" ಮತ್ತು "ಸ್ವಾತಿ" ಚಲನಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಅಷ್ಟೇ ಜನಪ್ರಿಯರಾಗಿರುವ ಮತ್ತೋರ್ವ ಕಾದಂಬರಿಕಾರ್ತಿ ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರು. ಆರ್ಯಾಂಬ ಅವರ ಕೆಲವು ಕಾದಂಬರಿಗಳೂ ಕನ್ನಡ ಚಲನಚಿತ್ರಗಳಾಗಿ ರೂಪುಗೊಂಡಿವೆ.

ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು

[ಬದಲಾಯಿಸಿ]
ಮೈಸೂರಿನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಪಟ್ಟಿ
ವಿಶ್ವವಿದ್ಯಾಲಯಗಳು ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಡಾ. ಗಂಗೂಭಾಯಿ ಹಾನಗಲ್ ಕರ್ನಾಟಕ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿಶ್ವವಿದ್ಯಾಲಯ ಸಂಶೋಧನಾ ಸಂಸ್ಥೆಗಳು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಶನಾ ಸಂಸ್ಥೆ (ಸಿ ಎಫ್ ಟಿ ಆರ್ ಐ), ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿ ಐ ಐ ಎಲ್), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿ ಎಫ ಆರ್ ಎಲ್)
ಇಂಜಿನಿಯರಿಂಗ್ ಕಾಲೇಜುಗಳು ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ (NIE), ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಅಫ್ ಇಂಜಿನಿಯರಿಂಗ್ (SJCE), ವಿದ್ಯಾವರ್ಧಕ ಕಾಲೇಜ್ ಆಫ್ ಇ೦ಜಿನಿಯರಿ೦ಗ್ (VVCE), ವಿದ್ಯಾವಿಕಾಸ ಇನ್ಸ್ಟಿಟ್ಯೂಟ್ ಅ೦ಡ್ ಎಜ್ಯುಕೇಶನಲ್ ಟೆಕ್ನೊಲಜಿ (VVIET), ಗೀತ ಶಿಶು ಶಿಕ್ಷಣ ಸಂಘ ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (ಹುಡುಗಿಯರು ಮಾತ್ರ)(GSSIET),ಮಹಾರಾಜ ಇನ್ಸ್ಟಿಟ್ಯೂಟ್ ಅಫ್ ಟೆಕ್ನೊಲಜಿ(MIT), ಎನ್.ಐ.ಇ. ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (NIEIT), ಅಕಡೆಮಿ ಫ಼ಾರ್ ಟೆಕ್ನಿಕಲ್ ಅಂಡ್ ಮ್ಯಾನೇಜ್ಮೆಂಟ್ ಎ‍ಕ್ಸೆಲ್ಲೆನ್ಸ್ (ATME)
ವೈದ್ಯಕೀಯ ಕಾಲೇಜುಗಳು ಮೈಸೂರು ಮೆಡಿಕಲ್ ಕಾಲೇಜು (MMC), ಜೆ ಎಸ್ ಎಸ್ ಮೆಡಿಕಲ್ ಕಾಲೇಜು(JSS)
ದಂತ ವೈದ್ಯಕೀಯ ಕಾಲೇಜುಗಳು ಜೆ ಎಸ್ ಎಸ್ ಡೆಂಟಲ್ ಕಾಲೇಜು, ಫಾರೂಕಿಯಾ ಡೆಂಟಲ್ ಕಾಲೇಜು
ಕಾನೂನು ಜೆ ಎಸ್ ಎಸ್ ಲಾ ಕಾಲೇಜು, ವಿದ್ಯಾವರ್ಧಕ ಲಾ ಕಾಲೇಜು, ಶಾರದಾ ವಿಲಾಸ
ಕಲೆ, ವಾಣಿಜ್ಯ, ಮತ್ತು ವಿಜ್ಞಾನ ಕಾಲೇಜುಗಳು ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಮಹಾಜನ ಕಾಲೇಜು, ಜೆ.ಎಸ್.ಎಸ್ ಕಾಲೇಜು, ಬನುಮಯ್ಯ ಕಾಲೇಜು, ಟೆರೆಷಿಯನ್ ಕಾಲೇಜು,ಟಿ.ಟಿ.ಎಲ್. ಕಾಲೇಜು, ಮರಿಮಲ್ಲಪ್ಪ ಕಾಲೇಜು, ಎಮ್ ಎಮ್ ಕೆ ಅಂಡ್ ಎಸ್ ಡಿ ಎಮ್ ಕಾಲೇಜು

ಸಂಸ್ಕೃತ ಕಾಲೇಜು- ಮಹಾರಾಜ ಸಂಸ್ಕೃತ ಪಾಠಶಾಲೆ, ಬನುಮಯ್ಯ ಕಾಲೇಜು

ಸಾರಿಗೆ ವ್ಯವಸ್ಥೆ

[ಬದಲಾಯಿಸಿ]
Chennai-Mysore Shatabdi at the Mysore Junction

ಮೈಸೂರು ನಗರ ಸುತ್ತಲ ಸ್ಥಳಗಳಿಗೆ ರೈಲ್ವೆ ಜಂಕ್ಷನ್. ರೈಲ್ವೇ ಮಾರ್ಗಗಳು ಮೈಸೂರನ್ನು ಮಂಡ್ಯದ ಮೂಲಕ ಬೆಂಗಳೂರಿಗೆ (ಈಶಾನ್ಯ ದಿಕ್ಕಿನಲ್ಲಿ), ವಾಯುವ್ಯ ದಿಕ್ಕಿನಲ್ಲಿ ಹಾಸನಕ್ಕೆ ಮತ್ತು ಆಗ್ನೇಯ ದಿಕ್ಕಿನಲ್ಲಿ ಚಾಮರಾಜನಗರಕ್ಕೆ ಸಂಪರ್ಕಿಸುತ್ತವೆ. ರಸ್ತೆ ಸಂಪರ್ಕ ಮೈಸೂರಿನಿಂದ ಕರ್ನಾಟಕದ ಹಾಗೂ ನೆರೆಯ ರಾಜ್ಯಗಳ ವಿವಿಧೆಡೆಗಳಿಗೆ ಇದೆ. ಕೆಲವು ವರ್ಷಗಳ ಹಿಂದೆ ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಇತ್ತು. ಈಗ ಈ ವಿಮಾನ ನಿಲ್ದಾಣವನ್ನು ಉಪಯೋಗಿಸಲಾಗುತ್ತಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ (ಡಿಸೆಂಬರ್ ೨೦೦೫)ಕಾರ್ಯಾರಂಭ ಮಾಡಿವೆ. ಈಗ ಮ೦ಡಕಳ್ಳಿ ವಿಮಾನ ನಿಲ್ದಾಣವು ಶುರುವಾಗಿದ್ದು, ಬೆ೦ಗಳೂರಿಗೆ ಕಿ೦ಗ್ಫಫಿಶರ್ ನಿ೦ದ ವಿಮಾನ ವ್ಯವಸ್ಥೆ ಇಲ್ಲ.ಕೆವಲ ದಸರಾ ಸಮಯಕ್ಕೆ ಮಾತ್ರ.

ದರಿಯಾ ದೌಲತ್ - ಶ್ರೀರಂಗಪಟ್ಟಣದ ಟೀಪುವಿನ ಬೇಸಿಗೆ ಅರಮನೆ

ಪ್ರಮುಖ ವ್ಯಕ್ತಿಗಳು

[ಬದಲಾಯಿಸಿ]

ಇದನ್ನೂ ನೋಡಿ

[ಬದಲಾಯಿಸಿ]

ಬಾಹ್ಯ ಅಂತರಜಾಲ ತಾಣಗಳು

[ಬದಲಾಯಿಸಿ]

ಆಧಾರ/ಆಕರಗಳು

[ಬದಲಾಯಿಸಿ]
  1. http://www.mysorepalace.in/act.doc Archived 2011-09-07 ವೇಬ್ಯಾಕ್ ಮೆಷಿನ್ ನಲ್ಲಿ. ಮೈಸೂರು ಅರಮನೆ ಕಾಯ್ದೆ




"https://kn.wikipedia.org/w/index.php?title=ಮೈಸೂರು&oldid=1261803" ಇಂದ ಪಡೆಯಲ್ಪಟ್ಟಿದೆ