ಟಿ. ನರಸೀಪುರ

ವಿಕಿಪೀಡಿಯ ಇಂದ
Jump to navigation Jump to search


ಜಿಲ್ಲಾ ಕೇಂದ್ರ ಮೈಸೂರಿಗೆ ೩೨ ಕಿಲೋಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಜಿಲ್ಲೆಯ ಪ್ರಮುಖ ಗ್ರಾಮ ಹಾಗೂ ಪ್ರವಾಸಿ ತಾಣ.

ಇಲ್ಲಿ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾಗುತ್ತದೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮಕೂಡಲು ಎಂಬ ಹೆಸರಿದೆ. ಸಂಗಮದ ಸಮೀಪದಲ್ಲಿ ಅಗಸ್ತ್ಯೇಶ್ವರನ ದೇಗುಲವಿದೆ. ಈ ದೇಗುಲ ವಿಶಾಲವಾದ ಪ್ರಾಕಾರ ಹೊಂದಿದ್ದು ಗುಡಿಯ ಮುಂದೆ ಹಲ್ಲಿಯ ಕಂಬವಿದೆ. ಕಪಿಲೆ ಮತ್ತು ಕಾವೇರಿ ನದಿಗಳ ಸಂಗಮದ ಆಚೆಯ ದಡದಲ್ಲಿ ನರಸಿಂಹನ ಸ್ವಾಮಿ ದೇವಸ್ಥಾನವಿದೆ. ನರಸಿಂಹ ದೇವರ ಮೂರ್ತಿಯ ಕೈಯಲ್ಲಿ ಗುಲಗಂಜಿಯ ಕೆತ್ತನೆ ಇರುವುದರಿಂದ 'ಗುಂಜ ನರಸಿಂಹ' ಎಂಬ ಹೆಸರೂ ಬಂದಿದೆ.

ಚಿತ್ರಗಳು[ಬದಲಾಯಿಸಿ]

ಸರ್ಕಾರಿ ಪಿಯು ಕಾಲೇಜು, ನರಸೀಪುರ