ಕುಂಭ ಮೇಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣುವಿನ ಕೂರ್ಮ ಅವತಾರ ಮೇರು ಮತ್ತು ಆರಾ ಪರ್ವತದ ಕೆಳಗೆ ಇದ್ದಾನೆ, ವಾಸುಕಿ ಸಮುದ್ರ ಮಂಥನ್ ಸಮಯದಲ್ಲಿ ಹಗ್ಗವಾಗಿ, ಅದರ ಸುತ್ತಲೂ ಸುತ್ತುವ ಮೂಲಕ ಇದೆ, ಹಾಲಿನ ಕಡಲನ್ನು ಅಮೃತಕ್ಕಾಗಿ ಕಡೆಯುವುದು. ಸಿ 1870 ವರ್ಣಚಿತ್ರ. ca 1870 painting.
ಕುಂಭ ಮೇಳ, ಹರಿದ್ವಾರ, 1850s
ಅಖಡಗಳ ಮೆರವಣಿಗೆ, ಕುಂಭ ಮೇಳ at ಅಲಹಾಬಾದ್, 2001
ತ್ರಿವೇಣಿ ಸಂಗಮ, ಗಂಗಾ ಯಮುನಾ ಹಾಗು ಸರಸ್ವತಿಯ ಸಂಗಮ ಸ್ಥಳ, ಭಕ್ತಾದಿಗಳು ಪೂಜೆ ಸಲ್ಲಿಸುವ ಜಾಗ

ಕುಂಭ ಮೇಳ (ದೇವನಾಗರಿ: कुम्भ मेला) ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ [೧], ಪೂರ್ಣ ಕುಂಭ ಹನ್ನೆರಡು ವರ್ಷಗಳಿಗೊಮ್ಮೆ ,[೨] ನಾಲ್ಕು (ಪ್ರಯಾಗ (ಅಲ್ಲಹಾಬಾದ್), ಹರಿದ್ವಾರ, ಉಜ್ಜೈನಿ, ಹಾಗು ನಾಸಿಕ) ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಮಹಾ ಕುಂಭ ಮೇಳ ೧೨ 'ಪೂರ್ಣ ಕುಂಭ ಮೇಳಗಳ' ನಂತರ, ಅಂದರೆ ೧೪೪ ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ.[೨][೩][೪]

ಈ ಹಿಂದಿನ ಅರ್ಧ ಕುಂಭಮೇಳ ಜನವರಿ೨೦೦೭ ರಲ್ಲಿ ೪೫ ದಿನಗಳಕಾಲ ನಡೆಯಿತು. ಇದರಲ್ಲಿ ೧೭ ದಶಲಕ್ಷಹಿಂದೂ ಯಾತ್ರಿಕರು ಪಾಲ್ಗೊಂಡರು, ಈ ಅರ್ಧ ಕುಂಭ ಮೇಳ ಪ್ರಯಾಗದಲ್ಲಿ ನಡಯಿತು, ಹಾಗು ಜನವರಿ ೧೫ ಮಕರ ಸಂಕ್ರಾಂತಿಯಾ, ಅತಿ ಮಂಗಳಕರ ದಿನದಂದು, ೫ ದಶಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡರು.[೫]

ಆ ಹಿಂದಿನ ಮಹಾ ಕುಂಭ ಮೇಳ , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ ಜನ ಸಮೂಹವನ್ನಾಗಿಸಿದರು.[೬][೭][೮][೯]

ಕುಂಭಮೇಳದ ಹಿನ್ನಲೆ - ಕಥೆ[ಬದಲಾಯಿಸಿ]

  • "ಕುಂಭ" ರಾಶಿ - ಮಾಸ(ಆಕ್ವೇರಿಯಸ್) ಜ್ಯೋತಿಷ್ಯ ಚಿಹ್ನೆಯ ಪ್ರಕಾರ ನಡೆದ ಉತ್ಸವ ಮತ್ತು ಕುರುಹ ಮೇಳ ಎಂಬ ಹೆಸರಿನಿಂದಲೂ ಈ ಹೆಸರು ಬಂದಿದೆ, ಮತ್ತು ದೇವತೆಗಳು ಮತ್ತು ರಾಕ್ಷಸರು ಮಡಕೆ ಅಥವಾ "ಕುಂಭ" ವನ್ನು ಪಡೆಯಲು ಹೋರಾಡಿದ ಸನ್ನಿವೇಶ ನೆನಪಿನ ಸಂಕೇತವಿರಬಹುದು. ಕುಂಭವನ್ನು ಪಡೆದು ಸೇವಿಸಿದವರಿಗೆ ಅವರಿಗೆ ಅಮರತ್ವ ಸಿಗುವುದು. ಈ ಮೇಳದ ಸಂಕೇತ- ಕುಂಭವನ್ನು ತೆಗೆದುಕೊಂಡ ನಂತರ ಅದರಿಂದ ನಾಲ್ಕು ಸ್ಥಾನಗಳಲ್ಲಿ ಅಮೃತದ ಹನಿಗಳನ್ನು ಚೆಲ್ಲಿದ ಮೇರೆಗೆ ಕುಂಭ ಮೇಳವನ್ನು ನೆಡೆಸಲಾಗಿದೆ ಎಂಬುದು ಕರ್ಣಾಕರ್ಣಿಕೆಯಾಗಿಬಂದ ಐತಿಹ್ಯ. ಆದರೆ ಅದು ಪುರಾತನ ಪುರಾಣಕಥೆಯ ಉಲ್ಲೇಖಗಳಲ್ಲಿ ಕಂಡುಬಂದಿಲ್ಲ. ನಾಲ್ಕು ಸ್ಥಾನಗಳಲ್ಲಿ ಅಮೃತದ ಹನಿಗಳನ್ನು ಚೆಲ್ಲಿದೆ, ಎಂದು ಹೇಳುವ ದಂತಕಥೆಯು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸಮುದ್ರ ಮಂಥನ (ಸಮುದ್ರದ ಮಂಥನ - ಕಡೆಯುವುದು) ಹಲವಾರು ಪುರಾತನ ಹಿಂದೂ ಗ್ರಂಥಗಳಲ್ಲಿ ಒಟ್ಟಾರೆಯಾಗಿ ಪುರಾಣಗಳಲ್ಲಿ ಇದೆ. ಅದರ ಕಾಲ (ಮೂಲ 3 ನೇ ಶತಮಾನ CE ನಿಂದ 10 ನೇ ಶತಮಾನ CE ವರೆಗೆ) ಎಂದು ಊಹಿಸಲಾಗಿದೆ.
  • ಸಮುದ್ರ ಮಥನದ ದಂತಕಥೆ, ದೇವತೆಗಳ(ಪರೋಪಕಾರಿ ದೇವತೆಗಳು) ಪಾನೀಯವಾದ ಅಮೃತದ ಉತ್ಪತ್ತಿ ಮತ್ತು ಅಸುರರ (ದುಷ್ಕೃತ್ಯ ದೇವತೆಗಳು) ನಡುವಿನ ಯುದ್ಧವನ್ನು ಹೇಳುತ್ತದೆ. ಸಮುದ್ರ ಮಂಥನ ಸಮಯದಲ್ಲಿ ಅಮೃತವನ್ನು ಕುಂಭದಲ್ಲಿ(ಮಡಕೆಯಲ್ಲಿ)ಮಥನದ ನಂತರ ತಯಾರಾಗಿ ಬಂದಿತು. ಆ ಅಮೃತವನ್ನು ಸ್ವಾಧೀನಪಡಿಸಿಕೊಳ್ಳದಂತೆ ಅಸುರರನ್ನು ತಡೆಯಲು, ಒಂದು ದೈವಿಕ ಶಕ್ತಿ ಮಡಕೆಯೊಡನೆ ಹಾರಿಹೋಯಿತು. ಇದು ನಂತರದಲ್ಲಿ ಮೂಲ ಕಥೆಗೆ ಸೇರಿಸಿದ ಭಾಗ. ಅತ್ಯಂತ ಜನಪ್ರಿಯ ಆವೃತ್ತಿಗಳಲ್ಲಿ, ಕುಂಭದ ವಾಹಕವು ದೇವವೈದ್ಯ ಧನ್‍ವಂತರಿಯು ಆ ಕುಂಭವನ್ನು ತೆಗೆದುಕೊಂಡು ಹೋಗುತ್ತಾನೆ. ಕುಂಭಮೇಳವನ್ನು ಆಚರಿಸಲಾಗುವ ನಾಲ್ಕು ಸ್ಥಳಗಳಲ್ಲಿ ನಿಲ್ಲುತ್ತಾನೆ. ಈ ದಂತಕಥೆಯು ನಂತರದ ಇತರ ಭಾಗಗಳಲ್ಲಿ ಬೇರೆರೀತಿ ಹೇಳಿದೆ, ವಾಹಕವು ಗರುಡ, ಇಂದ್ರ ಅಥವಾ ಮೋಹಿನಿ ಎಂದಿದೆ. ಅವರು ಅಮೃತವನ್ನು ನಾಲ್ಕು ಸ್ಥಳಗಳಲ್ಲಿ ಚೆಲ್ಲುತ್ತಾರೆ.
  • ಹಲವಾರು ಪುರಾಣಗಳು ಸೇರಿದಂತೆ ಹಲವಾರು ಪುರಾತನ ಗ್ರಂಥಗಳು, ಸಮುದ್ರ ಮಂಥನ ದಂತಕಥೆಯನ್ನು ಉಲ್ಲೇಖಿಸುತ್ತವೆ, ಅವುಗಳಲ್ಲಿ ಯಾವುದೂ ಅಮೃತವನ್ನು ನಾಲ್ಕು ಸ್ಥಳಗಳಲ್ಲಿ ಚೆಲ್ಲಿದ ಸಂಗತಿ ಹೇಳುವುದಿಲ್ಲ. ಈ ಗ್ರಂಥಗಳು ಕುಂಭಮೇಳದ ವಿಷಯವನ್ನು ಉಲ್ಲೇಖಿಸುವುದಿಲ್ಲ. ಆದ್ದರಿಂದ, ಆರ್. ಬಿ. ಭಟ್ಟಾಚಾರ್ಯ, ಡಿ. ಪಿ. ದುಬೆ ಮತ್ತು ಕಾಮಾ ಮ್ಯಾಕ್ಲೀನ್ ಸೇರಿದಂತೆ ಅನೇಕ ವಿದ್ವಾಂಸರು, ಅದರ ಬಗ್ಗೆ ಗ್ರಂಥಾತ್ಮಕ ಅಧಿಕಾರವನ್ನುಅಥವಾ ಆಧಾರವನ್ನು ತೋರಿಸಲು, ಇತ್ತೀಚೆಗೆ ಕುಂಭ ಮೇಳಕ್ಕೆ ಸಮುದ್ರ ಮಂಥನದ ದಂತಕಥೆಯನ್ನು ಅನ್ವಯಿಸಲಾಗಿದೆ ಎಂದು ನಂಬುತ್ತಾರೆ.[೧೦][೧೧][೧೨]

೨೦೧೯ ರ ಅರ್ಧ ಕುಂಭಮೇಳ[ಬದಲಾಯಿಸಿ]

  • ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವು ಪ್ಯಾಗದಲ್ಲಿ/ ಅಲಹಾಬಾದಿನಲ್ಲಿ ಜರುಗುತ್ತದೆ. ಕಳೆದ 2001ನೇ ಸಾಲಿನಲ್ಲಿ ಈ ಮೇಳ ನಡೆದಿತ್ತು. ಸುಮಾರು 40 ಮಿಲಿಯನ್ ಗೂ ಹೆಚ್ಚು ಜನ ವಿಶ್ವದಾದ್ಯಂತ ಆಗಮಿಸಿದ್ದರಿಂದ ದಾಖಲೆ ಸ್ಥಾಪಿಸಿತ್ತು. ಇದರ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳಲ್ಲಿ ಮಾಘ ಮೇಳವು ಸಂಗಮದ ಪ್ರದೇಶದಲ್ಲಿ ಜರುಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಮುಳುಗೆದ್ದು ತಮ್ಮ ಪಾಪಗಳನ್ನು ಭಕ್ತಾದಿಗಳು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಅಲಹಾಬಾದ್ ಪ್ರವಾಸೋದ್ಯಮ ಇಲಾಖೆ ಉತ್ತುಂಗಕ್ಕೆ ಏರಿದೆ. ಸುಮಾರು ಕಾಲದಿಂದಲೂ ಅಲಹಾಬಾದ್ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ವಿಷಯಗಳಿಗೆ ಸಂಬಂಧ ಪಟ್ಟ ಹಾಗೆ ಅನೇಕ ಘಟ್ಟಗಳಲ್ಲಿ ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸಿದೆ.
  • ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ ದಿ.೧೫-೧-೨೦೧೯ ರಂದು ಆರಂಭವಾಯಿತು. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನುತ್ತಾರೆ. ಕುಂಭಮೇಳದ ಮಕರ ಸಂಕ್ರಾತಿಯ ದಿನ ಲಕ್ಷಾಂತರ ಜನರು ಬೆಳಿಗ್ಗೆ 4 ರಿಂದ ಸಂಜೆ 5 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಇದರ ವಿಶೇಷ.
  • ವಿಶ್ವದ ಅತಿ ದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭ ಮೇಳ - ಈ ಬಾರಿ 20 ಕಿ.ಮೀ ತ್ರಿಜ್ಯದಿಂದ 45 ಕಿಮೀ ವ್ಯಾಪ್ತಿಯಲ್ಲಿ ಹರಡಿದೆ. ಅಥವಾ ವಿಸ್ತಾರ: ಕುಂಭ ಮೇಳ ನಡೆಯುವ ಪ್ರದೇಶವನ್ನು ಭಾರಿ ವಿಸ್ತರಿಸಲಾಗಿದೆ.ಹಿಂದೆ 1,600 ಹೆಕ್ಟೇರ್‌ ಪ್ರದೇಶದಲ್ಲಿ ಮೇಳ ನಡೆದಿತ್ತು. 2019 ರಲ್ಲಿ ಅದನ್ನು 3,200 ಹೆಕ್ಟೇರ್‌ಗೆ ಹೆಚ್ಚಿಸಲಾಯಿತು. ಪವಿತ್ರ ನಗರಕ್ಕೆ ಭೇಟಿ ನೀಡಿದ ಭಕ್ತಾದಿಗಳು ಅಕ್ಷಯ ವಟದ ನೋಟ, ಹಿಂದೂಗಳ ಪವಿತ್ರವಾದ ಮರ ಮತ್ತು ಪವಿತ್ರವಾದ ಸರಸ್ವತಿ ನದಿ. ಸೂರ್ಯಸ್ವಾತಿ ನದಿಯ ಮೂಲ ನೋಡಬಹುದು, ಎಂದು ನಂಬಲಾಗಿದೆ.[೧೩][೧೪]
  • ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ಮುಕ್ತಾಯದ ತೆರೆ ಬೀಳುತ್ತದೆ.[೧೫][೧೬]

Events Calendar

ವ್ಯವಸ್ಥೆ[ಬದಲಾಯಿಸಿ]

  • ಕುಂಭಮೇಳದ ಸಮುದಲ್ಲಿ ಪ್ರಯಾಗ ರಾಜ್‌ನಲ್ಲಿ ನಡೆಯುವ ಐತಿಹಾಸಿಕ ಕುಂಭಮೇಳದಲ್ಲಿ ‘ಅಖಾಡ’ಗಳು ಪ್ರಮುಖವಾಗಿವೆ.ವಿವಿಧ ಅಖಾಡಗಳಿಗೆ ಸೇರಿದ ಸಾವಿರಾರು ಭೈರಾಗಿಗಳು ಪ್ರಯಾಗರಾಜ್‌ನಲ್ಲಿ ಮೇಳೈಸಿ, ಗಂಗಾ ನದಿ ದಡದಲ್ಲಿ ಬಿಡಾರ ಹೂಡುತ್ತಾರೆ.
ಆಡಳಿತ:
  • ಐವರು ಸದಸ್ಯರ ಸಮಿತಿಯು ಅಖಾಡಗಳ ದೈನಂದಿನ ಆಡಳಿತ ನಿರ್ವಹಣೆಯ ಉಸ್ತುವಾರಿ ಹೊತ್ತಿದೆ
  • ಅಖಾಡಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ಅಖಿಲ ಭಾರತೀಯ ಅಖಾಡ ಪರಿಷತ್‌ ಬಗೆಹರಿಸುತ್ತದೆ
  • ಜುನಾ ಅಖಾಡ ಅತ್ಯಂತ ದೊಡ್ಡ ಹಾಗೂ ಹಳೆಯ ಅಖಾಡ
  • ನಿರಂಜನಿ ಮತ್ತು ಮಹಾನಿರ್ವಾಣಿ ಅಖಾಡ ಕ್ರಮವಾಗಿ ನಂತರದ ಸ್ಥಾನದಲ್ಲಿವೆ

ಅಖಾಡಗಳು[ಬದಲಾಯಿಸಿ]

  • ಕುಂಭಮೇಳದ ಅವಿಭಾಜ್ಯ ಅಂಗಗಳಾಗಿದ್ದು, ಸನಾತನ ಧರ್ಮದ ರಕ್ಷಣೆಗಾಗಿ ಎಂಟನೇ ಶತಮಾನದಲ್ಲಿಆದಿ ಶಂಕರಾಚಾರ್ಯರು ಈ ಅಖಾಡಗಳನ್ನು ಸ್ಥಾಪಿಸಿದ್ದು, ಅವರು ಎಲ್ಲ ಸಾಧು–ಸಂತರನ್ನು ಒಗ್ಗೂಡಿಸಿ ಅಖಾಡಗಳನ್ನು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅಖಾಡಗಳು ಹಿಂದೂ ಧರ್ಮದ ಭಾಗವಾಗಿದೆ. ಅದರಲ್ಲಿ ಪ್ರತಿ ಅಖಾಡಕ್ಕೂ ಅದರದ್ದೇ ಆದ ಪ್ರತ್ಯೇಕ ತತ್ವ, ಸಿದ್ಧಾಂತಗಳಿವೆ. ನೋಡಲು ಎಲ್ಲ ಸಾಧು–ಸಂತರು ಒಂದೇ ಬಗೆಯಾಗಿ ಕಂಡರೂ ಆಚರಣೆ ಮತ್ತು ಸಂಪ್ರದಾಯ ಬೇರೆ ಬೇರೆ ಆಗಿವೆ. ಅಖಾಡದ ಸಾಧು–ಸಂತರು ಆರಾಧಿಸುವ ದೇವರು ಮತ್ತು ಅನುಸರಿಸುವ ಸಂಪ್ರದಾಯ ಮತ್ತು ಪಂಥಗಳಿಗೆ ಅನುಗುಣವಾಗಿ ಶೈವ, ವೈಷ್ಣವ ಮತ್ತು ಉದಾಸೀನ ಎಂದು ಮೂರು ಬಗೆಯ ಅಖಾಡಗಳನ್ನು- ಪಂಗಡಗಳಲ್ಲಿ ಗುರುತಿಸಲಾಗಿದೆ. ಭಾರತದಲ್ಲಿ 13 ಬಗೆಯ ಅಖಾಡಗಳಿವೆ. ದೇಶದಲ್ಲಿರವ ಒಟ್ಟು 13 ಅಖಾಡಗಳಲ್ಲಿ, ಏಳು ಶೈವ ಮತ್ತು ಮೂರು ವೈಷ್ಣವ, ಹಾಗೂ ಮೂರು ಉದಾಸೀನ ಅಖಾಡಗಳಿವೆ ಎಂಬುದು ಅಖಿಲ ಭಾರತೀಯ ಅಖಾಡ ಪರಿಷತ್‌ (ಎಬಿಎಪಿ) ಅಧ್ಯಕ್ಷ ನರೇಂದ್ರ ಗಿರಿಯವರ ಹೇಳಿಕೆ (೨೦೧೯).‘ಅಖಂಡ’ ಪದದಿಂದ ಅಖಾಡ ಬಳಕೆಗೆ ಬಂದಿದೆ ಎಂದು ಅಭಿಪ್ರಾಯ. ಅದು (ಅಖಂಡ)ಪ್ರತ್ಯೇಕಿಸಲು ಅಥವಾ ಒಡೆಯಲು ಸಾಧ್ಯವಿಲ್ಲದ್ದು ಎಂಬ ಅರ್ಥ ಕೊಡುವುದು. ಇವರು ಶಿವನನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ. ಅದರ ಆಧಾರದ ಮೇಲೆ ಏಳು ಶೈವ ಅಖಾಡಗಳನ್ನು ವಿಂಗಡಿಸಲಾಗಿದೆ.

ಆಖಾಡಗಳು:[ಬದಲಾಯಿಸಿ]

ಶೈವ
  • ಶ್ರೀ ಪಂಚಾಯಿತಿ ಅಖಾಡ ಮಹಾನಿರ್ವಾಣಿ (ಅಲಹಾಬಾದ್),
  • ಶ್ರೀ ಪಂಚ ಅಟಲ್‌ ಅಖಾಡ (ವಾರಾಣಸಿ),
  • ಶ್ರೀ ಪಂಚಾಯಿತಿ ಅಖಾಡ ನಿರಂಜನಿ (ಅಲಹಾಬಾದ್),
  • ತಪೋನಿಧಿ ಶ್ರೀ ಆನಂದ ಅಖಾಡ ಪಂಚಾಯಿತಿ (ನಾಸಿಕ್‌),
  • ಶ್ರೀ ಪಂಚದಶನಾಮ ಜುನಾ ಅಖಾಡ (ವಾರಾಣಸಿ),

ಶ್ರೀ ಪಂಚದಶನಾಮ ಪಂಚಗಣಿ ಅಖಾಡ (ಜುನಾಗಡ, ಗುಜರಾತ್‌).

ವಿಷ್ಣುವನ್ನು ಆರಾಧಿಸುವ ವೈಷ್ಣವ ಅಖಾಡಗಳು
  • ದಿಗಂಬರ ಅಣಿ,
  • ಶ್ರೀ ನಿರ್ವಾಣಿ ಅಣಿ ಮತ್ತು
  • ಶ್ರೀ ನಿರ್ಮೋಹಿ ಅಣಿ
ಸಿಖ್‌ ಧರ್ಮದ ಮೊದಲ ಧರ್ಮಗುರುವಿನ ಪುತ್ರ ಚಂದ್ರದೇವ ಅವರು ಮೂರನೆಯ ‘ಉದಾಸೀನ ಅಖಾಡ’ ಹುಟ್ಟು ಹಾಕಿದರು. ಈ ಅಖಾಡದವರು ‘ಓಂ’ಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
  • ಶ್ರೀ ಪಂಚಾಯಿತಿ ಬಡಾ ಉದಾಸೀನ ಅಖಾಡ,
  • ಶ್ರೀ ಪಂಚಾಯಿತಿ ಅಖಾಡ ನಯಾ ಉದಾಸೀನ ಮತ್ತು
  • ಶ್ರೀ ನಿರ್ಮಲ ಪಂಚಾಯಿತಿ ಅಖಾಡ ಎಂದು ವಿಂಗಡಿಸಲಾಗಿದೆ.
  • ಲೈಂಗಿಕ ಅಲ್ಪಸಂಖ್ಯಾತರ ಕಿನ್ನರ ಅಖಾಡ (೨೦೧೮ರಲ್ಲಿ ಸೇರಿಕೊಂಡಿದೆ.)[೧೭]
  • ವ್ಯವಸ್ಥೆ Archived 2019-03-08 ವೇಬ್ಯಾಕ್ ಮೆಷಿನ್ ನಲ್ಲಿ.

ಮುಂದಿನ ಓದಿಗಾಗಿ[ಬದಲಾಯಿಸಿ]

  • Kumbha Mela: History and Religion, Astronomy and Cosmobiology, by Subas Rai. Published by Ganga Kaveri Pub. House, ೧೯೯೩. ISBN ೮೧-೮೫೬೯೪-೦೧-X.
  • The Kumbh Mela, by Mark Tully (Author), Richard Lannoy (Photographer), Ashok Mahendra (Photographer). Indica Books. ೨೦೦೨. ISBN ೧-೮೫೧೫೮-೮೩೩-೭.
  • Kumbha Mela, by Jack Hebner. , by Jack Hebner. Published by Transition Vendor, ೨೦೦೩. ISBN ೧-೮೮೬೦೬೯-೯೦-೫೨
  • # Pilgrimage and Power: The Kumbh Mela in Allahabad, ೧೭೬೫-೧೯೫೪, by Kama Maclean. Oxford University Press, USA. ೨೦೦೮. ISBN ೦-೧೯-೫೩೩೮೯೪-೪.
  • ‘ಕುಂಭ ಮೇಳ’ ಆಯೋಜನೆ;೭-೧೨-೧೮
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಇವನ್ನೂ ಗಮನಿಸಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. The Urn Festival Archived 2010-10-08 ವೇಬ್ಯಾಕ್ ಮೆಷಿನ್ ನಲ್ಲಿ. TIME , Feb ೦೮, ೧೯೬೦.
  2. ೨.೦ ೨.೧ ಕುಂಭ ಮೇಳ The Basis of Civilization--water Science?: Water Science? , by J. C. Rodda, Lucio Ubertini, International Association of Hydrological Sciences, IAHS International Commission on Water Resources Systems, Consiglio nazionale delle ricerche (Italy). Published by International Association of Hydrological Science, ೨೦೦೪. ISBN ೧-೯೦೧೫೦೨-೫೭-೦ Page ೧೬೫ .
  3. The Maha ಕುಂಭ ಮೇಳ 2001 indianembassy.org .
  4. ಕುಂಭ ಮೇಳ dates kumbhamela.net .
  5. ದಶಲಕ್ಷs of ಹಿಂದೂs Wash Away Their Sins Washington Post , January ೧೫, ೨೦೦೭.
  6. Millions bathe at Hindu festival BBC News, January ೩, ೨೦೦೭.
  7. ಕುಂಭ ಮೇಳ pictured from space - probably the largest human gathering in history BBC News , January ೨೬, ೨೦೦೧.
  8. ಕುಂಭ ಮೇಳ: the largest ಯಾತ್ರಿಕage - Pictures: ಕುಂಭ ಮೇಳ by Karoki Lewis The Times , March ೨೨, ೨೦೦೮.
  9. ಕುಂಭ ಮೇಳ - 25 January 2001 - New Scientist
  10. Maclean 2008, pp. 88-89.
  11. Collins, Charles Dillard (1988). The Iconography and Ritual of Śiva at Elephanta. SUNY Press. p. 36.
  12. Kama MacLean (August 2003). "Making the Colonial State Work for You: The Modern Beginnings of the Ancient Kumbh Mela in Allahabad". The Journal of Asian Studies. 62 (3):
  13. Kumbh Mela 2019 to be spread over larger area
  14. ಕುಂಭ ಮೇಳ ನಡೆಯುವ ಪ್ರದೇಶವನ್ನು ಈ ಬಾರಿ ವಿಸ್ತರಿಸಲಾಗಿದೆ.
  15. timesofindia.indiatimes Videos
  16. https://kumbh.gov.in/en Archived 2019-02-11 ವೇಬ್ಯಾಕ್ ಮೆಷಿನ್ ನಲ್ಲಿ. Prayagraj Kumbh
  17. ಕುಂಭಮೇಳದಲ್ಲಿ ‘ಅಖಾಡ’ಗಳ ಸಂಭ್ರಮ, ಪ್ರಯಾಗರಾಜ್‌ನಲ್ಲಿ ಇಂದಿನಿಂದ ಕುಂಭಮೇಳ;ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ;;15 ಜನವರಿ 2019,

ಬಾಹ್ಯ ಕೊಂಡಿಗಳು[ಬದಲಾಯಿಸಿ]