ದಸರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದಸರಾ ಇಂದ ಪುನರ್ನಿರ್ದೇಶಿತ)
Jump to navigation Jump to search
ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ
Leaves of the Apta tree that are exchanged during Dasara
Saffron Marigold (Tagetes patula) flowers also known in Marathi as Jhendu (झेंडू) assume special significance

ಮೈಸೂರು ದಸರಾ

 • ಶ್ರೀರಂಗಪಟ್ಟಣ ಬಳಿಯ ಬೆಳಗೊಳದ ರೈತ ಬೋನಾಸಿ ರಾಮೇಗೌಡರಿಗೆ ದಸರಾ ಅಂದಾಕ್ಷಣ ‘ಪಟ್ಟದಾನೆ ಮೇಲೆ ಮಹಾರಾಜರು ಕುಳಿತುಕೊಂಡು ಬರೋದು ನೆನಪಾಗುತ್ತದೆ. ಜಂಬೂ ಸವಾರಿಯಲ್ಲಿನ ಕುಣಿತ, ಮೆರೆತ ಎಲ್ಲ 40 ವರ್ಷದ ಹಿಂದೆ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ರಮ್ಮನಹಳ್ಳಿ ಜನರು ತಲೆ ಮೇಲೆ ಲೈಟ್ ಹೊತ್ಕಂಡು ಹೋಗೋದು, ಅರಮನೆ ಒಳಗೆ ರಾಜರ ಎದುರಿಗೆ ನಡೆಯುತ್ತಿದ್ದ ಕುಸ್ತಿ, ರಾತ್ರಿ ಸವಾರಿ, ಬ್ಯಾಂಡ್ ಎಲ್ಲ ಮಜವಾಗಿತ್ತು.
 • ಒಂದು ರೂಪಾಯಿ ಬಾಡಿಗೆ ಕೊಟ್ಟು ಮಹಾರಾಜರ ರೀತಿ ನಾವೂ ಸೂಟು, ಬೂಟು, ಪೇಟ, ಕನ್ನಡಕ, ಒಂದೆಳೆ ಹೂವಿನ ಹಾರ ಹಾಕಿಕೊಂಡು ಕುಣಿಯುತ್ತಿದ್ದೆವು. ಆ ದಿನದ ದಸರಾದಲ್ಲಿ ಈ ಹೊತ್ತು ಒಂದಾಣಿ ಭಾಗವೂ ಕಾಣಿಸುತ್ತಿಲ್ಲ. ಬೆಳಗೊಳದಿಂದ (15 ಕಿ.ಮೀ.) ನಡೆದುಕೊಂಡೇ ಹೋಗುತ್ತಿದ್ದೆವು. ಪಟ್ಟದ ಆನೆ, ಪಟ್ಟದ ಹಸು, ಸಂಗೀತ, ಸಿಂಹಾಸನಕ್ಕೆ ಅವುಲು ಎರಚಿ ಮಹಾರಾಜರು ಕುಳಿತುಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ದೊಡ್ಡಪೇಟೆ ಮಾರ್ಗದಲ್ಲಿ ಬರುತ್ತಿದ್ದ ರಾತ್ರಿ ಸವಾರಿ ವ್ಹಾ!’*‘ನಮಗೆ ದಸರಾ ದೊಡ್ಡ ಹಬ್ಬ. ಮನೆ ತುಂಬ ನೆಂಟರು ಇರುತ್ತಾರೆ. ಜಂಬೂ ಸವಾರಿ, ಹೊಸ ಬಟ್ಟೆ ತೆಗೆದುಕೊಳ್ಳುವುದು, ವಾರಪೂರ್ತಿ ಬಗೆಬಗೆ ಊಟ, ತಿಂಡಿ ಮಾಡುವುದು ಸಂತೋಷ ನೀಡುತ್ತದೆ. ಈಗ ಸಾಧಾರಣವಾಗಿದೆ. ಮಹಾರಾಜರ ಕಾಲದ ದಸರಾ ಚೆನ್ನಾಗಿತ್ತು. ಜಂಬೂ ಸವಾರಿಗೆ ಎಂಟು ದಿನದ ಮೊದಲೇ ಬೇರೆ ಬೇರೆ ಕಡೆಯಿಂದ ಜನ ಎತ್ತಿನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ಈಗಿನ ಬೋಟಿ ಬಜಾರ್ ಬಳಿ ಗಾಡಿ ಚೌಕ ಇತ್ತು, ಅಲ್ಲಿ ಗಾಡಿಗಳನ್ನು ನಿಲ್ಲಿಸಿ ತಂಗುತ್ತಿದ್ದರು.
 • ನಮ್ಮ ಹಳ್ಳಿ ಜನ ದಸರಾಕ್ಕೆ ಪೋಜು ಅನ್ನೋರು. ತೊಣಚಿಕೊಪ್ಪಲು ಮಾರುಕಟ್ಟೆಯಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿರುವ ಕುಮಾರ್ ದೃಷ್ಟಿಯಲ್ಲಿ ‘ಅಂದಿನ ದಸರಾ ಎಂದರೆ ಅಂಬಾರಿ, ಮೆರವಣಿಗೆಯಲ್ಲಿ ಬರುವ ಜನಪದ ಕಲಾ ತಂಡಗಳ ಪ್ರದರ್ಶನ, ಆನೆಗಳು ನೆನಪಾಗುತ್ತವೆ. ಆದರೆ, ಈಗಿನ ದಸರಾ ಸರ್ಕಾರವನ್ನು ಅವಲಂಬಿಸಿದೆ. ದಸರಾದಲ್ಲಿ ಏನು ಇರಬೇಕು, ಇರಬಾರದು ಅನ್ನುವುದನ್ನು ಅಧಿಕಾರದಲ್ಲಿ ಇರುವವರು ನಿರ್ಧರಿಸುತ್ತಾರೆ. ಆ ಕಾಲಕ್ಕೆ ಅದೇ ಚೆಂದ, ಈ ಕಾಲಕ್ಕೆ ಇದೇ ಚೆಂದ ಅನಿಸುತ್ತದೆ.’*‘ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಳಿಯಾಳ ಮುಂತಾದ ಪ್ರದೇಶಗಳನ್ನು ಕುಸ್ತಿಯ ನಾಡು ಎಂದೇ ಕರೆಯುವವರು ಇದ್ದಾರೆ. ಗರಡಿ ಮನೆಗಳು ಕಡಿಮೆಯಾಗಿದ್ದರೂ ಕುಸ್ತಿಗೆ ಉತ್ತರ ಕರ್ನಾಟಕದಲ್ಲಿ ಧಕ್ಕೆಯಾಗಲಿಲ್ಲ. ಆಡುವ ವಾತಾವರಣ, ಶೈಲಿ ಇತ್ಯಾದಿಗಳಲ್ಲಿ ಸ್ವಲ್ಪ ಆಧುನಿಕ ಸ್ಪರ್ಶ ಲಭಿಸಿದ್ದರೂ ಕುಸ್ತಿಯ ಕುರಿತ ಪ್ರೀತಿ ಇಲ್ಲಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ’ ಎನ್ನುತ್ತಾರೆ ಹಳಿಯಾಳ ಮೂಲದವರಾದ, ಆಳ್ವಾಸ್ ಕಾಲೇಜಿನ ಕುಸ್ತಿ ಕೋಚ್‌ ತುಕಾರಾಮ ಗೌಡ.
 • ‘ಕುಸ್ತಿಗೆ ರಾಜ್ಯದ ಬೇರೆ ಯಾವ ಭಾಗದಲ್ಲೂ ಇಲ್ಲದಷ್ಟು ಸೌಲಭ್ಯ ಉತ್ತರ ಕರ್ನಾಟಕದಲ್ಲಿ ಇದೆ ಎನ್ನಬಹುದು. ಈ ಭಾಗದ ಕ್ರೀಡಾನಿಲಯಗಳಲ್ಲಿ ತಲಾ 25 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಸ್ತಿಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಹಬ್ಬ, ಜಾತ್ರೆಯ ಸಂದರ್ಭದ ಕುಸ್ತಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವುದಕ್ಕಾಗಿ ವರ್ಷವಿಡೀ ಅಭ್ಯಾಸ ನಡೆಯುತ್ತಿರುತ್ತದೆ. ಆದ್ದರಿಂದ ಜಾತ್ರೆಗಳಿಗೆ ಕುಸ್ತಿ ಉಳಿಸುವುದರಲ್ಲಿ ಪ್ರಮುಖ ಪಾತ್ರವಿದೆ’ ಎಂಬುದು ಅವರ ಅಭಿಪ್ರಾಯ.
 • ಮಣ್ಣಿನಲ್ಲಿ ಆಡುವ ಜಂಗೀ ಕಾಟಾ ನಿಕಾಲಿ ಕುಸ್ತಿ ಈಗ ಕಡಿಮೆಯಾಗುತ್ತಿದೆ. ರಾಷ್ಟ್ರೀಯ – ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮತ್ತು ಆ ಮೂಲಕ ಜೀವನಕ್ಕೆ ದಾರಿ ಕಂಡುಕೊಳ್ಳುವ ಉದ್ದೇಶದಿಂದ ಕುಸ್ತಿಪಟುಗಳು ಪಾಯಿಂಟ್ ಕುಸ್ತಿಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪಾಲಕರು ಕೂಡ ಮಕ್ಕಳು ಪಾಯಿಂಟ್‌ ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಬಯುಸುತ್ತಿದ್ದಾರೆ. ಆದರೆ ಉತ್ಸವಗಳಲ್ಲಿ ಇನ್ನೂ ಮಣ್ಣಿನ ಕುಸ್ತಿ ಜೀವಂತವಾಗಿದೆ. ಆದ್ದರಿಂದ ಕುಸ್ತಿಗೆ ಧಕ್ಕೆಯಾಗುವ ಯಾವುದೇ ಆತಂಕ ಇಲ್ಲ.*1950ರ ಅವಧಿಯಲ್ಲೇ ಚಿನ್ನದ ಸಾಧನೆ ಮಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ತರಬೇತಿ ಕೇಂದ್ರ, ಬೆಳಗಾವಿ, ಬಾಗಲಕೋಟೆ, ಗದಗ, ಹಳಿಯಾಳದಲ್ಲಿ ಕುಸ್ತಿ ತರಬೇತಿಯನ್ನೂ ನೀಡುತ್ತಿರುವ ಕ್ರೀಡಾನಿಲಯಗಳು ಮುಂತಾದ ಸಂಸ್ಥೆಗಳು ಕೂಡ ಇಲ್ಲಿನ ಕುಸ್ತಿ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
 • ಧಾರವಾಡ, ಹಳಿಯಾಳ, ಬಾಗಲಕೋಟೆ, ಬೆಳಗಾವಿ ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌.ಐ.ಎಸ್‌) ತರಬೇತಿ ಪಡೆದ ಕೋಚ್‌ಗಳು ಕುಸ್ತಿ ತರಬೇತಿ ನೀಡುತ್ತಿದ್ದರೆ ಅನುಭವದಿಂದ ಪಡೆದ ವಿದ್ಯೆಯನ್ನು ಧಾರೆ ಎರೆಯುವ ನೂರಾರು ಕೋಚ್‌ಗಳು ಕುಸ್ತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ.
 • ಜಾತ್ರೆ, ಉತ್ಸವಗಳಲ್ಲಿ ಕುಸ್ತಿ: ಜಾತ್ರೆ ಮತ್ತು ಉತ್ಸವಗಳು ಉತ್ತರ ಕರ್ನಾಟಕ ಕುಸ್ತಿಯ ಪ್ರಮುಖ ಪ್ರೇರಣೆಗಳು. ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ ಮುಂತಾದವುಗಳಲ್ಲಿ ಕುಸ್ತಿಯದ್ದೇ ಜಾತ್ರೆ ನಡೆಯುತ್ತದೆ. ಊರ ದೇವರ ಜಾತ್ರೆಗಳಲ್ಲಿ ಕುಸ್ತಿ ಅವಿಭಾಜ್ಯ ಅಂಗವಾಗಿರುತ್ತದೆ. ಅದನ್ನು ನೋಡಲು ಸೇರುವ ಜನರು ಸಾವಿರಾರು. ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಾದಾಮಿ, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ, ಸಂಕೇಶ್ವರ, ಗೋಕಾಕ ಮುಂತಾದ ಕಡೆಗಳಲ್ಲಿ ಜಾತ್ರೆಯ ಸಂದರ್ಭ ನಡೆಯುವ ಕುಸ್ತಿ ನೋಡಲು ಜನರು ಮುಗಿ ಬೀಳುತ್ತಾರೆ. ಹಳಿಯಾಳದಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‌ಷಿಪ್‌ನಂಥ ವಾರ್ಷಿಕ ಕುಸ್ತಿ ಸಂಪ್ರದಾಯ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿಗೆ ಚೇತನ ತುಂಬುತ್ತಿವೆ.*10 Oct, 2016,
 • ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಅಖಾಡಗಳು ಖಾಲಿ; ಕುಸ್ತಿ ತರಬೇತುದಾರರು ತಮ್ಮೂರಿನಲ್ಲಿರುವುದಿಲ್ಲ. ಯಾಕೆಂದರೆ ಅವರೆಲ್ಲರೂ ಮೈಸೂರಿನಲ್ಲಿ ಬೀಡುಬಿಟ್ಟಿರುತ್ತಾರೆ. ತಮ್ಮ ಶಿಷ್ಯಂದಿರ ಸ್ಪರ್ಧೆ ಇರಲಿ, ಇಲ್ಲದಿರಲಿ; ಅವರು ದಸರಾ ಕುಸ್ತಿಯ ಸೊಬಗು ಸವಿಯುವ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಕುಸ್ತಿ ಮೇಲಿನ ಪ್ರೀತಿ ಇದಕ್ಕೆ ಒಂದು ಕಾರಣವಾದರೆ, ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ.
 • ದಸರಾ ಕುಸ್ತಿಯಂತೆ ಉತ್ತರ ಕರ್ನಾಟಕದಲ್ಲಿ ಹಬ್ಬ–ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ಇದೆ. ಜಾತ್ರೆಗಳಿಗೆ ಇಲ್ಲಿ ಕುಸ್ತಿಗಳು ಕಳೆಗಟ್ಟುತ್ತವೆ. ದಶಕಗಳ ಹಿಂದೆ ಥಿಯೇಟರ್‌ ಕುಸ್ತಿ (ಟಿಕೆಟ್‌ ಇರಿಸಿ ಆಡಿಸುವ ಸ್ಪರ್ಧೆ) ನಡೆಯುತ್ತಿದ್ದ ಈ ಭಾಗದಲ್ಲಿ ನಂತರ ಕುಸ್ತಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಂಗೀ ಕಾಟಾ ನಿಕಾಲಿಯಲ್ಲಿನ ‘ಡಾವ್‌’ಗಳ ಸವಿಯುಂಡ ಜನರು ಪಾಯಿಂಟ್ ಕುಸ್ತಿಯ ಪಟ್ಟುಗಳಿಗೂ ಮಾರುಹೋಗಿದ್ದಾರೆ. ಮಣ್ಣಿನಲ್ಲಿ ನಡೆಯುತ್ತಿದ್ದ ‘ಮಟ್ಟಿ ಕುಸ್ತಿ’ ನಿಧಾನಕ್ಕೆ ಮ್ಯಾಟ್‌ ಮೇಲೇರಿದೆ. ಫ್ರೀ ಸ್ಟೈಲ್‌ ಕುಸ್ತಿಯಿಂದ ಗ್ರೀಕೊ ರೋಮನ್‌ ಶೈಲಿಗೂ ಪದಾರ್ಪಣೆಯಾಗಿದೆ. ಇದ್ಯಾವುದೂ ಕುಸ್ತಿ ಮೇಲಿನ ಮೋಹಕ್ಕೆ ಧಕ್ಕೆ ತರಲಿಲ್ಲ. ಮೈಯನ್ನು ಕಟ್ಟುಮಸ್ತಾಗಿಸಲು, ಹೆಸರು ಗಳಿಸಲು ಮತ್ತು ಊರ ಜನರ ಪ್ರೀತಿಗೆ ಪಾತ್ರರಾಗಲು ಕುಸ್ತಿ ಆಡುತ್ತಿದ್ದವರು ಈಗ ಪಾಯಿಂಟ್‌ ಕುಸ್ತಿಯ ಬೆನ್ನುಹತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ಕುಸ್ತಿ ಜೀವನೋಪಾಯ ಮಾರ್ಗವಾಗಿಯೂ ಮಾರ್ಪಟ್ಟಿದೆ. ಈ ಕ್ರೀಡೆಯ ಬಗ್ಗೆ ಕಾಳಜಿ ವಹಿಸಲು ಇದು ಕೂಡ ಒಂದು ಕಾರಣವಾಗಿದೆ.

ಪುರಾಣಗಳಲ್ಲಿ ದಸರಾ

ಆಚರಣಾ ವಿಧಿ ವಿಧಾನಗಳು

ಮೈಸೂರು ಪ್ರಜೆಗಳ ಕಣ್ಣಲ್ಲಿ ದಸರಾ

 • ದಸರಾ ಹಳೆಯ ಮೈಸೂರಿಗರಿಗೆ ಇಂದಿಗೂ ನಾಡಹಬ್ಬ. ಇದೊಂದು ಸಂಭ್ರಮದ ಸಂದರ್ಭ. ರಾಜರ ಆಳ್ವಿಕೆಯ ಕಾಲದ ನೆನಪಿನಲ್ಲಿ ಈಗಿನ ಆಚರಣೆಗಳನ್ನು ನೋಡುವ ಹಿರಿಯ ತಲೆಗಳಿಗೆ ಆಗಿನ ದಿನಗಳೇ ಚಂದ ಎಂಬ ಹಳಹಳಿಕೆ. ಮೈಸೂರು ನಗರದಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ, ದಸರೆಯ ದಿನಗಳಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದ ಮಂಡ್ಯ, ಚಾಮರಾಜನಗರ ಜಿಲ್ಲೆಯ ಗ್ರಾಮೀಣರಿಗೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ನೆನಪನ್ನೇ ಪ್ರಧಾನವಾಗಿ ಉಳಿಸಿದೆ.
 • ಈಗಿನ ಚಾಮುಂಡೇಶ್ವರಿ ಮೆರವಣಿಗೆ ಹಿರಿಯ ತಲೆಗಳಿಗೆ ಮಹಾರಾಜರು ಅಂಬಾರಿಯ ಮೇಲೆ ಸಾಗುತ್ತಿದ್ದ ಅಂದಿನ ದೃಶ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ.
 • ದಸರಾ ಅಂದ್ರೆ ಜಂಬೂ ಸವಾರಿ, ಅದ್ದೂರಿ ಮೆರವಣಿಗೆ, ಆಮೇಲೆ ಚಾಮುಂಡಿ ಬೆಟ್ಟ, ಅಲ್ಲಿನ ಜಾತ್ರೆ, ತೇರು, ಕೆ.ಆರ್.ಎಸ್. ಡ್ಯಾಮ್ ಎಲ್ಲಾ ನೆನಪಾಗುತ್ತವೆ. ಈಗಿನ ದಸರಾ ಪರವಾಗಿಲ್ಲ. ಮಹಾರಾಜರು ದಸರಾ ನಡೆಸುತ್ತಿದ್ದಾಗ ಜಂಬೂ ಸವಾರಿ ಅರಮನೆಯಿಂದ ಬನ್ನಿಮಂಟಪಕ್ಕೆ ಹೋಗಿ ಮತ್ತೆ ಅಲ್ಲಿಂದ ವಾಪಸ್ಸು ಬರುತ್ತಿತ್ತು.
 • ಅಂಬಾರಿ ಮೇಲೆ ಮಹಾರಾಜರು ಕುಳಿತಿರುತ್ತಿದ್ದರು. ಅವರ ಹಿಂದೆ ಮಂತ್ರಿ ಕುಳಿತಿರುತ್ತಿದ್ದರು. ಅವರು ದೇವರ ರೀತಿ ಇದ್ರು, ಜನ ಅವರಿಗೆ ಕೈ ಮುಗಿಯುತ್ತಿದ್ದರು. ಅವರೂ ನಮಗೆ ನಮ್ಮತ್ತ ಕೈ ಬೀಸುತ್ತಿದ್ದರು. ಈಗ ಅಂಬಾರಿ ಮೇಲೆ ಮಹಾರಾಜರು ಇಲ್ಲ, ಚಾಮುಂಡಿ ದೇವಿ ವಿಗ್ರಹ ಇರುತ್ತೆ. ಈಗಿನ ಮೆರವಣಿಗೆಗಿಂತ ಆಗಿನ ಮೆರವಣಿಗೆಯೇ ಚೆನ್ನಾಗಿತ್ತು. ರಾಜರ ಕಾಲದಲ್ಲಿ ಅರಮನೆಯ ಆವರಣದಲ್ಲಿ ಮೈಸೂರಿನ ಪ್ರತಿಷ್ಠಿತ ವ್ಯಕ್ತಿಗಳಿಗೆ ಸುಖಾಸೀನಗಳ ವ್ಯವಸ್ಥೆ ಮಾಡಿ ದರ್ಬಾರು ನಡೆಸುತ್ತಿದ್ದರು; ಅದರಲ್ಲಿ ವೈಭವವಿತ್ತು. *ಸಂಗೀತ, ಕಲೆ, ನೃತ್ಯ ಇವುಗಳಿಗೆ ರಾಜಾಶ್ರಯದಲ್ಲಿದ್ದವರಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿತ್ತು. ಈಗ ರಾಜಾಶ್ರಯ ಇಲ್ಲ, ಎಲ್ಲವು ಸರ್ಕಾರದ ಆಣತಿಯಂತೆ ನಡೆಯುತ್ತಿದೆ.. ಈಗ ಜನಜಂಗುಳಿ. ವಯಸ್ಸಾದವರು ಅಲ್ಲಿಗೆ ಹೋಗಿ ದಸರಾ ನೋಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೇ ಟಿ.ವಿ.ಯಲ್ಲಿ ವೀಕ್ಷಿಸುವುದೇ ಸರಿ..’ ಅಂತ ಅವರಿಗೆ ಅನಿಸಿದೆ.
 • ಜಂಬೂ ಸವಾರಿ ನೋಡಲು ಸಂತಸವಾಗುತ್ತದೆ. ಮತ್ತು ಆ ಜನರ ಗುಂಪಿನಲ್ಲಿ ಹರ ಸಾಹಸ ಮಾಡಿ ವೀಕ್ಷಿಸುವುದು ಖುಷಿ ನೀಡಿದೆ. ಹಿಂದೆ ಒಮ್ಮೆ ತಳ್ಳುವ ಗಾಡಿಯ ಮೇಲೆ ನಿಂತು ದಸರಾ ವೀಕ್ಷಣೆ ಮಾಡಿದ್ದ ಅವರಿಗೆ ವಸ್ತು ಪ್ರದರ್ಶನಕ್ಕೂ ಭೇಟಿ ಕಡ್ಡಾಯ. ಆದರೆ ಅಲ್ಲಿಗೆ ಕುಟುಂಬದವರೆಲ್ಲಾ ಹೋಗಿ ಸುತ್ತಾಡಿ ವಿವಿಧ ಆಟಗಳನ್ನು ಆಡುವ ಉಮೇದು. ಆದರೆ ಕೊಳ್ಳುವುದಕ್ಕೆ ಹೋದರೆ ಎಲ್ಲವೂ ದುಬಾರಿ’ ಎಂಬ ಆಸಮಾಧಾನ.
 • ಗಂಜಾಂ ವ್ಯಾಪಾರಿ ಮಂಜುನಾಥ್ ಅವರಿಗೆ ‘ದಸರಾ ಅಂದ್ರೆ ಮಹಾರಾಜರ ನೆನಪಾಗುತ್ತದೆ. ಆದರೂ ಈಗಿನ ಅಂಬಾರಿ ಮೆರವಣಿಗೆ ಆಕರ್ಷಕವಾಗಿದೆ. ನಮ್ಮ ತಂದೆ ಹೇಳುತ್ತಿದ್ದ ದಸರಾಗೂ ಇಂದಿನ ದಸರಾಗೂ ವ್ಯತ್ಯಾಸ ಇದೆ. ಜಾನಪದ ಕಲಾ ಮೇಳಗಳು ಖುಷಿ ಕೊಡುತ್ತವೆ. ಅಂದಿನ ದಸರಾ ಸೊಗಡು ಈಗ ಇಲ್ಲ. ಎಂಟ್ಹತ್ತು ಬಾರಿ, ಮಕ್ಕಳು ಮರಿ ಕಟ್ಟಿಕೊಂಡು ದಸರಾ ನೋಡಿದ್ದೀನಿ. ಮೈಸೂರು ಹೊಸದೇನಲ್ಲ. ಆದರೆ ದಸರಾ ಸಂದರ್ಭದ ಮೈಸೂರು ಅಂದರೆ ನಾಡಿನ ಪರಂಪರೆಯನ್ನು ಬಿಂಬಿಸುವ ಕೇಂದ್ರವಾಗಿ ಬದಲಾಗುತ್ತದೆ.’ ಎಂಬ ಸಮಾಧಾನ.
 • ಮಲ್ಲೇಗೌಡನಕೊಪ್ಪಲು ಗೃಹಿಣಿ ಮಂಜುಳಾ ಮರೀಗೌಡರಿಗೆ ‘ದಸರಾ ಅಂದರೆ ಚಿನ್ನದ ಅಂಬಾರಿನೇ ನೆನಪಾಗೋದು. ಈಗಿನ ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಮೆರಗು ಪಡೆದುಕೊಂಡಿವೆ. ಸರ್ಕಾರ ನಾಡಹಬ್ಬಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿರುವುದರಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಹಿಂದೆ ಮಹಾರಾಜರೇ ಅಂಬಾರಿ ಏರಿ ರಾಜಬೀದಿಯಲ್ಲಿ ಸಾಗುತ್ತಿದ್ದುದರಿಂದ ಉತ್ಸವ ಕಳೆಗಟ್ಟುತ್ತಿತ್ತಂತೆ...’
 • ‘ಈಗಿನ ದಸರಾ ಆಚರಣೆ ಬರೀ ಹಣದ , ನಾಜೂಕು, ಥಳುಕಿನಿಂದ ಕೂಡಿದೆ. ಮಹಾರಾಜರ ಕಾಲದ ದಸರಾ ನೋಡಿದ್ದೇನೆ. ಆಗಿನ ವೈಭವ, ಅಂದ-ಚೆಂದವೇ ಬೇರೆ. ಅದನ್ನು ಈಗ ಎಲ್ಲಿ ನೋಡಲು ಸಾಧ್ಯ? ಅದೇ ಊರಿನ ಚಿಕ್ಕಣ್ಣನವರಿಗೆ ದಸರಾ ಎಂದಾಕ್ಷಣ ‘ಜಂಬೂ ಸವಾರಿ ಹಾಗೂ ಅದರ ಜೊತೆ ಬರುವ ಆನೆಗಳು, ಕುದುರೆಗಳು, ಒಂಟೆ ಗಳು, ಗೊಂಬೆಗಳು ನೆನಪಾಗುತ್ತವೆ’. ‘ಕಳೆದ ಎಂಟು ವರ್ಷಗಳಿಂದ ಹೋಗುತ್ತಲೇ ಇದ್ದೇನೆ. ಅರಮನೆ, ಮೃಗಾಲಯ, ಜಂಬೂ ಸವಾರಿ ನೋಡುತ್ತೇನೆ. ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತೇನೆ.. ಇವೆಲ್ಲ ಹಳ್ಳಿಯ ನಮಗೊಂದು ಅವಕಾಶ ಎಂಬ ಮೆಚ್ಚುಗೆ.
 • ೧೯೫೫ ರಲ್ಲಿ ದಸರಾ ನೋಡುವ ಸೌಭಾಗ್ಯ ಪಡೆದಿದ್ದ ಚಾಮರಾಜನಗರ ಜಿಲ್ಲೆ ಅರಳೀಕಟ್ಟೆಯ ರೈತ ಬಸಪ್ಪ ಅವರಿಗೆ ‘ಆಗ ಜಯಚಾಮರಾಜೇಂದ್ರ ಒಡೆಯರ್ ರಾಜ ಪೋಷಾಕು ತೊಟ್ಟು ಆನೆಯ ಅಂಬಾರಿಯನ್ನೇರಿ ಸಾರೋಟಿನಲ್ಲಿ ಹೋಗುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದಾಗಿತ್ತು. ಈಗ ಸರ್ಕಾರವೇ ದಸರಾ ನಡೆಸುವುದರಿಂದ ಅಂದಿನ ವೈಭವ ಕೊಡಲು ಸಾಧ್ಯವಿಲ್ಲ. ಆಗ ಜನರೂ ಇಂತಹ ದೊಡ್ಡ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿದ್ದರು. ಗತಕಾಲದ ವೈಭವವನ್ನು ಬಿಂಬಿಸುವ ಉತ್ಸವ ಇದಾಗಿದೆ. ಇಲ್ಲಿ ಪ್ರಜಾರಾಜ್ಯದ ವೈಖರಿ ಎದ್ದು ಕಾಣುತ್ತಿದೆ. ಸರ್ಕಾರ ಜನಪ್ರತಿನಿಧಿಗಳೊಂದಿಗೆ ತನ್ನದೇ ಆದ ರೀತಿಯಲ್ಲಿ ಆಚರಿಸುತ್ತಿದೆ ಎಂಬ ವಿಶ್ವಾಸ.
 • ನಮ್ಮ ತಂದೆಯವರು ಅವರ ಸ್ನೇಹಿತರ ಜೊತೆ ದಸರಾ ವೀಕ್ಷಿಸಲು ಹೋಗುತ್ತಿದ್ದರು. ಬಂದು ಅಲ್ಲಿ ನಡೆದ ಘಟನಾವಳಿಗಳನ್ನು ಹಂಚಿ ಕೊಳ್ಳುತ್ತಿದ್ದರು. ಈಗಿನ ದಸರಾ ಆಚರಣೆ ಯಲ್ಲಿ ಅಷ್ಟೇನೂ ಸ್ವಾರಸ್ಯವಿಲ್ಲ. ಎಲ್ಲರಲ್ಲಿಯೂ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ’ ಎನ್ನುವುದು ಕಳೆದ ಇಪ್ಪತ್ತು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ಕೊಡುತ್ತಿರುವ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರಿನ ರೈತ ವಿ.ಕೆ. ಗಿರೀಶರ ಅಭಿಪ್ರಾಯ.
 • ಈಗಿನದು ಅಧಿಕಾರಿಗಳ ದಸರಾ’ ಎಂಬುದು ಗುಂಡ್ಲುಪೇಟೆಯ ಎ.ಜಿ.ಸುರೇಶ್ ಅವರ ಆಕ್ಷೇಪ. ಅವರಿಗೆ ‘ಜಂಬೂ ಸವಾರಿ ಮೊದಲಿಗೆ ನೆನಪಿಗೆ ಬರುತ್ತದೆ. ಆದರೀಗ ಮಹಾರಾಜರು ಆ ಅಂಬಾರಿ ಮೇಲೆ ಇರುವುದಿಲ್ಲವಲ್ಲ ಎನ್ನುವ ಕೊರಗು. ಈಗಿನ ದಸರಾ ಕೇವಲ ತೋರಿಕೆ ಮತ್ತು ರಾಜಕೀಯ ಮಿಶ್ರಿತ.

ಮೈಸೂರು ದಸರಾದಲ್ಲಿ ಕುಸ್ತಿ

Cite error: Closing </ref> missing for <ref> tag

‘ಮಹಾರಾಜರ ಕಾಲವೇ ಚೆನ್ನ’

ರೂಪಾಯಿಗೆ ಬಾಡಿಗೆ ಸೂಟು

1913ರಲ್ಲಿ ಬೆಂಗಳೂರಿನಲ್ಲಿ ದಸರಾ ಕುಸ್ತಿ

 • 10 Oct, 2016
 • ದಸರಾ ಕುಸ್ತಿ ಚಟುವಟಿಕೆಗೆ ಅನನ್ಯವಾದ ಸಾಂಸ್ಕೃತಿಕ ಮೆರುಗು ಇರುವಂತೆಯೇ, ಚಾರಿತ್ರಿಕ ಹೆಜ್ಜೆಗುರುತುಗಳಿವೆ. ಭಾರತದ ಮಟ್ಟಿಗೆ ಕುಸ್ತಿ ಕ್ರೀಡೆಗೆ ಬೆನ್ನೆಲುಬಾಗಿ ನಿಂತ ಅನೇಕ ಇತಿಹಾಸ ಪುರುಷರ ನಡುವೆ ಕೃಷ್ಣರಾಜೇಂದ್ರ ಒಡೆಯರ್‌ ಹೆಸರು ಎದ್ದು ಕಾಣುತ್ತದೆ. ಬೆಂಗಳೂರಿನಲ್ಲಿ ದಸರಾ ಕುಸ್ತಿಯನ್ನು ಆರಂಭಿಸಿದ ಕುರಿತ ಚರಿತ್ರೆಯ ಮಾಹಿತಿಗಳ ಬಗ್ಗೆ ವೇಮಗಲ್‌ ಸೋಮಶೇಖರ್‌ ಇಲ್ಲಿ ಬರೆದಿದ್ದಾರೆ.
 • ದಸರಾ ಉತ್ಸವದ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿದ್ದ ಕುಸ್ತಿ ಚಟುವಟಿಕೆ ಬಹಳ ಹಿಂದೆಯೇ ಬೆಂಗಳೂರಿಗೂ ವಿಸ್ತರಣೆಗೊಂಡಿದೆ. ಅದು 1912ರ ವರ್ಷ. ದಸರಾ ಕುಸ್ತಿಯ ಸ್ವರ್ಧಾಕೂಟಗಳನ್ನು ಬೆಂಗಳೂರಿನಲ್ಲಿಯೂ ನಡೆಸಬೇಕೆಂದು ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಘೋಷಿಸಿದರು. ಅದರ ಮರುವರ್ಷವೇ ಬೆಂಗಳೂರಿನಲ್ಲಿ ದಸರಾ ಕುಸ್ತಿ ರಂಗು ಪಡೆದುಕೊಂಡಿತು.
 • 1913ರಲ್ಲಿ ನವರಾತ್ರಿ ಮುಗಿದ ಒಡನೇ ಲಾಲ್‌ಬಾಗ್‌ನಲ್ಲಿ ಆಗಿನ ಆಲ್ಬರ್ಟ್‌ ವಿಕ್ಟರ್‌ ಸಭಾಂಗಣದಲ್ಲಿ ದಿನ ಬಿಟ್ಟು ದಿನ ಹೊನಲು ಬೆಳಕಿನಲ್ಲಿ ಒಂದು ತಿಂಗಳ ಕಾಲ ಕುಸ್ತಿ ಸ್ವರ್ಧೆಗಳು ನಡೆದವು. ಆಗಿನ್ನೂ ಲಾಲ್‌ಬಾಗ್‌ ಪ್ರದೇಶಕ್ಕೆ ವಿದ್ಯುಚ್ಛಕ್ತಿ ಸಂಪರ್ಕ ಇರಲಿಲ್ಲ. ಈ ಕುಸ್ತಿಗಾಗಿಯೇ ವಿದ್ಯುಚ್ಛಕ್ತಿಯ ವಿಶೇಷ ಸಂಪರ್ಕ ಕಲ್ಪಿಸಲಾಗಿತ್ತು. ಆ ಕುಸ್ತಿ ಕೂಟದಲ್ಲಿ ಮೈಸೂರು ಸಂಸ್ಥಾನದ ಎಲ್ಲಾ ಪ್ರದೇಶಗಳಿಂದಲೂ ಪೈಲ್ವಾನರು ಪಾಲ್ಗೊಂಡಿದ್ದರು. ಮೈಸೂರಿನ ಆಗಿನ ಜನಪ್ರಿಯ ಪೈಲ್ವಾನ್‌ ತಿಮ್ಮಯ್ಯನವರು ಮತ್ತು ಬೆಂಗಳೂರಿನ ಪುಲಾರಿ ಸಾಬ್ಜಾನ್‌ ಎಂಬುವವರ ನಡುವೆ ಸುಮಾರು 20 ನಿಮಿಷಗಳ ಕಾಲ ಜಿದ್ದಾಜಿದ್ದಿನ ಕುಸ್ತಿ ನಡೆಯಿತು. ಈ ಹಣಾಹಣಿಯನ್ನು ಯುವರಾಜ ನರಸಿಂಹರಾಜ ಒಡೆಯರ್‌ ಅವರು ಆಗಿನ ಬ್ರಿಟಿಷ್‌ ರೆಸಿಡೆಂಟರ ಜತೆ ಕುಳಿತು ವೀಕ್ಷಿಸಿದ್ದರು. ಮೈಸೂರಿನ ತಿಮ್ಮಯ್ಯ ಗೆದ್ದಿದ್ದರು.
 • ತಿಮ್ಮಯ್ಯನವರಿಗೆ ಅಂದು ಆಕರ್ಷಕವಾದ ಬೆಳ್ಳಿಯ ಟ್ರೋಫಿ ಮತ್ತು ರೂ.250 ನಗದು (ಸುಮಾರು ಈಗಿನ 60,000) ಬಹುಮಾನವನ್ನು ಯುವರಾಜರು ನೀಡಿದರು. ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್‌ ಅವರು ಘೋಷಿಸಿದ್ದ ರೂ.1000ವನ್ನು (ಈಗಿನ 2,50,000 ರೂ.)(ಅವರ ಪರವಾಗಿ ರೆಸಿಡೆಂಟರು ತಿಮ್ಮಯ್ಯನವರಿಗೆ ನೀಡಿ ಗೌರವಿಸಿದರು. ಪುಲಾರಿ ಸಾಬ್ಜಾನ್‌ರಿಗೂ ₹ 150ನ್ನು ನೀಡಲಾಯಿತು. ಗೆದ್ದ ತಿಮ್ಮಯ್ಯನವರು 1914ರ ಜನವರಿ 6ರಂದು ಸಂಜೆ ರೈಲಿನಲ್ಲಿ ಮೈಸೂರು ತಲುಪಿದಾಗ ರೈಲ್ವೆ ನಿಲ್ದಾಣದಲ್ಲಿ ಅವರ ನೂರಾರು ಮಂದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ದೀಪಾಲಂಕಾರ ಮಾಡಿದ್ದ ಕುದುರೆ ಗಾಡಿಯಲ್ಲಿ ಅವರನ್ನು ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಆ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೈಸೂರಿನ ಸಾಹುಕಾರ್‌ ಮೊಗಣ್ಣನವರು ಸೇರಿದಂತೆ ಅನೇಕ ಗಣ್ಯರು ಅಂದು ತಿಮ್ಮಯ್ಯನವರಿಗೆ ಶಾಲು, ನಗದು ಬಹುಮಾನಗಳನ್ನು ನೀಡಿ ಗೌರವಿಸಿದ್ದರು.
 • ಆ ದಿನಗಳಲ್ಲಿ ಸರ್ದಾರ್‌ ಗೋಪಾಲರಾಜೇ ಅರಸು ಅವರು ಸ್ವತಃ ಪೈಲ್ವಾನರಾಗಿದ್ದುದರಿಂದ, ಆ ದಿನಗಳಲ್ಲಿ ದಸರಾ ಕುಸ್ತಿ ಸ್ವರ್ಧೆಗಳಿಗೆ ಅವರೇ ತೀರ್ಪುಗಾರರಾಗಿರುತ್ತಿದ್ದರು. ಅವರನ್ನು ಆ ದಿನಗಳಲ್ಲಿ ಎಲ್ಲರೂ ‘ಗೋಪಾಲ ಬುದ್ದಿ’ ಎಂದೇ ಕರೆಯುತ್ತಿದ್ದರು.[೧]

ಭಾರತದ ಇತರೆಡೆಗಳಲ್ಲಿ ದಸರಾ

 • ಇದೇ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ 'ದಶೇರ'ವಾಗಿಯೂ, 'ದುರ್ಗಾ ಪೂಜೆ'ಯಾಗಿಯೂ ಆಚರಿಸುತ್ತಾರೆ. ೯ ದಿನಗಳ ಈ ಹಬ್ಬಕ್ಕೆ 'ನವರಾತ್ರಿ' ಎಂಬ ಹೆಸರೂ ಇರುವುದು. ಆಯುಧ ಪೂಜೆ, ವಿಜಯ ದಶಮಿ ಗಳನ್ನೊಳಗೊಂಡ ಹಲವು ದಿನಗಳ ಹಬ್ಬದಾಚರಣೆ ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
 • ಬಂಗಾಳದಲ್ಲಿ ಈ ಸಮಯದಲ್ಲಿ ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುವುದು. ಆ ಸಮಯದಲ್ಲಿ ಕೊಲ್ಕತ್ತಾ ದಲ್ಲಿ ವಿಪರೀತವಾದ ಜನಸಂದಣಿ ಸೇರುವುದು. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುವರು.
 • ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುವರು. ಅವು ಯಾವುವೆಂದರೆ, ದುರ್ಗಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾ ಗೌರಿ ಮತ್ತು ಸಿದ್ಧಿಧಾತ್ರಿ. ದೇವೀಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಆರಾಧನೆಯಿಂದ ಪ್ರಾಪ್ತಗೊಳಿಸಿಕೊಳ್ಳಬಹುದು.

ಮಡಿಕೇರಿ ದಸರಾ

ಮಡಿಕೇರಿಯ ದಂಡಿನ ಮಾರಿಯಮ್ಮ ದೇವಾಲಯದ ಕರಗ
ಮಡಿಕೇರಿಯ ಕರಗ ಕುಣಿತದ ಒಂದು ದ್ರಶ್ಶ
ಮಡಿಕೇರಿಯ ದಸರಾ ಮೆರವಣಿಗೆಯ ಮಂಟಪದ ಒಂದು ದ್ರಶ್ಶ
 • ಮಡಿಕೇರಿಯಲ್ಲಿ ದಸರಾ ಆಚರಣೆ ಬಹಳ ವಿಭಿನ್ನವಾಗಿರುತ್ತದೆ. ಮಹಾಲಯ ಅಮವಾಸ್ಯೆಯ ಮಾರನೆಯ ದಿನದಂದು ಕರಗ ಹೊರಡುವುದರೊಂದಿಗೆ ದಸರಾ ಉತ್ಸವ ಅರಂಭವಾಗುತ್ತದೆ. ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರು ವರುಶದ ಇತಿಹಾಸವಿದೆ. ನವರಾತ್ರಿಯ ಮೊದಲನೆಯ ದಿನದಂದು ನಾಲಕ್ಕು ಮಾರಿಯಮ್ಮ ದೇವಾಲಯದ ಪೂಜಾರಿಗಳು ಕರಗ ಕಟ್ಟುವ ಸಲಕರಣೆಗಳೊಂದಿಗೆ ನಗರದ ಹೊರವಲಯದಲ್ಲಿರುವ ಪಂಪಿನ ಕೆರೆ ಬಳಿ ತೆರಳಿ ಕರಗವನ್ನು ಕಟ್ಟಲಾಗುತ್ತದೆ.
 • ಬಳಿಕ ಒಂಬತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಪೂಜೆ ಸ್ವೀಕರಿಸುತ್ತದೆ.ಇಲ್ಲಿಯ ಕರಗ ಕುಣಿತವು ನೊಡಲು ಬಲು ಅಂದ.ದಸರೆಯ ದಿನದಂದು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರರೊಂದಿಗೆ ಕರಗ ಉತ್ಸವ ಮುಕ್ತಾಯಗೊಳ್ಳುವುದು. ದಸರೆಯ ದಿನ ರಾತ್ರಿ ನಡೆಯುವ ದಶ ಮಂಟಪಗಳ ಮೆರವಣಿಗೆಯಂತೂ ದೇವ ಲೊಕವನ್ನೇ ಧರೆಗಿಳಿಸಿದಂತೆ ಭಾಸವಾಗುವುದು.
 • ಪ್ರತಿ ಮಂಟಪವು ದೇವತೆಗಳಿಂದ ರಕ್ಕಸರನ್ನು ಸಂಹರಿಸುವ ಕಲಾಕೃತಿಯನ್ನು ಹೊಂದಿರುತ್ತವೆ. ಲಕ್ಷ ಸಂಖ್ಯೆಯಲ್ಲಿ ಜನರು ಬಂದು ಈ ಮೆರವಣಿಗೆಯನ್ನು ನೋಡಿ ಆನಂದಿಸುತ್ತಾರೆ.

ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ಈ ಹಬ್ಬದ ವಿಶೇಷ.

ಉಲ್ಲೇಖ

[೨] [೩] [೪]

 1. ‘ಮೈಸೂರು ಸ್ಟಾರ್‌’ ವಾರ ಪತ್ರಿಕೆಯ 1914ರ ಜನವರಿ 12ರ ಸಂಚಿಕೆಯ ಪುಟ 5ರಲ್ಲಿ ಪ್ರಕಟಗೊಂಡ ವರದಿ.-ವೇಮಗಲ್‌ ಸೋಮಶೇಖರ್‌[permanent dead link]
 2. https://kannada.oneindia.com/news/mysore/mysuru-dasara-historical-steps-108070.html
 3. "ಆರ್ಕೈವ್ ನಕಲು". Archived from the original on 2018-10-01. Retrieved 2018-08-27.
 4. "ಆರ್ಕೈವ್ ನಕಲು". Archived from the original on 2018-10-01. Retrieved 2018-08-27.
"https://kn.wikipedia.org/w/index.php?title=ದಸರ&oldid=1070672" ಇಂದ ಪಡೆಯಲ್ಪಟ್ಟಿದೆ