ವಿಜಯನಗರ ಸಾಮ್ರಾಜ್ಯ
ಗೋಚರ
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ. ೧೩೨೦ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. ಕುಮಾರರಾಮನ ಆಸೆಯಂತೆ ಅವನ ಮಾವನ ಮಕ್ಕಳಾದ ಹಕ್ಕ-ಬುಕ್ಕರು ಗುರು ವಿದ್ಯಾರಣ್ಯ ಸಹಾಯದೊಂದಿಗೆ (೧೩೩೬)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ [೧].
ವಿಜಯನಗರ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ | |
---|---|
೧೩೩೬–೧೬೪೬ | |
Status | ಸಾಮ್ರಾಜ್ಯ |
Capital | ವಿಜಯನಗರ |
Common languages | ಕನ್ನಡ, ತೆಲುಗು |
Religion | ಹಿಂದೂ ಧರ್ಮ |
Government | ರಾಜಪ್ರಭುತ್ವ |
ರಾಜ | |
• ೧೩೩೬-೧೩೫೬ | ಹಕ್ಕ ರಾಯ |
• ೧೬೪೨-೧೬೪೬ | ಮೂರನೇ ಶ್ರೀರಂಗ |
History | |
• Established | ೧೩೩೬ |
• ಪೂರ್ವ ದಾಖಲೆಗಳು | ೧೩೪೩ |
• Disestablished | ೧೬೪೬ |
Currency | ವಿಜಯನಗರ ನಾಣ್ಯ ಪದ್ಧತಿ |
Today part of | ಭಾರತ |
ಇತಿವೃತ್ತ
- ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗುಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
- ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ ಬಹಮನಿ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು.
- ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ, ಸುರಪೂರ ಹೀಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ಅಂದಿಗೇ ಗಂಡುಗಲಿ ಕುಮಾರರಾಮನ ಕನಸ್ಸು ತಟಸ್ಥವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು. ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.
ಇತಿಹಾಸ
- ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾoತಗಳಿವೆ. ೧೩ನೇ ಶತಮಾನದಲ್ಲಿ(೧೨೯೦) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ ಕುಮಾರರಾಮನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು) ಮುಸ್ಲೀಂರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು.
- ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯರು ಕುಮಾರರಾಮನ ಮಾವನ ಮಕ್ಕಳು ಮತ್ತು ಕಾಕತೀಯರ ಸಂಭಂದಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿಂದ ಕಾಕತೀಯರು ಅಧೀನಕ್ಕೆ ಬಂದಿದ್ದ ಉತ್ತರ ಪ್ರಾಂತ್ಯ ಗಳ ಮಂಡಳಿಕರಾಗಿದ್ದರು.
ಹರಿಹರ (ಕ್ರಿ.ಶ.೧೩೩೬ ರಿಂದ ೧೩೫೬)
- ಸಂಗಮನ ಐವರು ಮಕ್ಕಳಾದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
- ಕೆಲವು ಇತಿಹಾಸಕಾರರ ಪ್ರಕಾರ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯರು ಕನ್ನಡಿಗರಾಗಿದ್ದರು ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು ಕುಮಾರರಾಮನ ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು. ಹಕ್ಕ-ಬುಕ್ಕರು ನಾಯಕ (ಬೇಡ, ವಾಲ್ಮೀಕಿ) ಸಮುದಾಯಕ್ಕೆ ಸೇರಿದವರು[೨][೩], ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶಿಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ.
- ಆದರೂ ಕೂಡ ಇತಿಹಾಸಕಾರರ ಒಮ್ಮತ ಅಭಿಪ್ರಾಯದಂತೆ ಪೂಜ್ಯ ಶ್ರೀ. ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು ಅವರ ರಾಜಧಾನಿ "ವಿದ್ಯಾನಗರ" ವಾಗಿತ್ತು. ಶ್ರೀ. ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದು, ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರು.ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೊತ್ತಲಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಮ್ಮಡಿ ದೇವರಾಯ ಮತ್ತು ಕ್ರಿಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ ದೊಢ್ಢದಾಗಿ ವಿಸ್ತಾರವಾಗಿತ್ತು. ೧೪ನೇ ಶತಮಾನದ ಆರ೦ಭದಲ್ಲಿ, ದಕ್ಷಿಣ ಭಾರತದ ಹಿ೦ದೂ ಸಾಮ್ರಾಜ್ಯಗಳಾಗಿದ್ದ ದೇವಗಿರಿಯ ಯಾದವರು, ವಾರ೦ಗಲ್ಲಿನ ಕಾಕತೀಯರು, ಮಧುರೈನ ಪಾ೦ಡ್ಯರು;
ಉಲ್ಲೇಖಗಳು
ಉಲ್ಲೇಖಗಳು