ಹಕ್ಕ ರಾಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಕ್ಕ-ಬುಕ್ಕರು / Hakka Bukka
Emperor of Vijayanagara Empire
Hakka Bukka.jpg
ಹಕ್ಕ-ಬುಕ್ಕರು ವಿಜಯನಗರದ ಮೊಟ್ಟಮೊದಲ ಅರಸರು
ವಂಶ Sangama Dynasty
ಧಾರ್ಮಿಕ ನಂಬಿಕೆಗಳು Hindu

Harihara-I (Hakkaraya)13ನೇ ಶತಮಾನದಲ್ಲಿ ಕಂಪ್ಲಿಯ ರಾಜನಾಗಿದ್ದ ಕುಮಾರರಾಮನಲ್ಲಿ ದಂಡನಾಯಕರಾಗಿದ್ದ ಹಕ್ಕ-ಬುಕ್ಕರು (ಹರಿಹರ/ಹಕ್ಕರಾಯ ಮತ್ತು ಬುಕ್ಕರಾಯ) ೧೩೩೬ ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಚಾರಿತ್ರಿಕ ದಾಖಲೆಗಳ ಪ್ರಕಾರ ವಿಜಯನಗರದ ಸಂಸ್ಥಾಪಕರಾದ ಹಕ್ಕ ಮತ್ತು ಬುಕ್ಕರು ಕುಮಾರರಾಮನ ಮಾವನ ಮಕ್ಕಳು ಮತ್ತು ಹಿಂದೂ ಧರ್ಮದ ಬಗ್ಗೆ ಅನನ್ಯ ಭಕ್ತಿ ಮತ್ತು ಗೌರವಗಳನ್ನು ಹೊಂದಿದ್ದ ನಾಯಕ ಸಮುದಾಯಕ್ಕೆ ಸೇರಿದವರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ[೧][೨][೩]

ರಾಜ್ಯಧಾನಿ  : ವಿಜಯನಗರ

ಭಾಷೆ  : ಕನ್ನಡ, ತೆಲುಗು

ಧರ್ಮ  : ಹಿಂದೂ

ಆಡಳಿತ  : ಚಕ್ರಾಧಿಪತ್ಯ

ಸ್ಥಾಪಕರು  : ಹಕ್ಕ-ಬುಕ್ಕರು

ಸ್ಥಾಪನೆ  : ೧೮-೦೪-೧೩೩೬ ರಲ್ಲಿ

ವಿಜಯನಗರ ಸಾಮ್ರಾಜ್ಯವು ಆನೆಗುಂದಿಯ ಕುಮುಟ ದುರ್ಗದಲ್ಲಿರುವ ಕನಕಗಿರಿ ಸಾಮ್ರಾಜ್ಯವನ್ನು ೧೮-೦೪-೧೩೩೬ ರಲ್ಲಿ ಸ್ಥಾಪನೆ ಮಾಡಿದರು. ಇವರು ಮೂಲತಃ ಹಿಂದು ಧರ್ಮದವರು ಇವರ ಅರಾಧ್ಯ ದೈವ ಕಂಪ್ಲಿ ಸೋಮನಾಥ ದೇವರು. ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಮತ್ತು ವಿಜಯನಗರದಲ್ಲಿ ಮೊದಲು ರಾಜ್ಯಭಾರ ಮಾಡಿದ ವಂಶ ಕನಾ೯ಟಕದ ಸಂಗಮ ವಂಶ. ಸಂಗಮ ವಂಶ ಕನಕಗಿರಿಯ ವೀರಬಲ್ಲಾಳನ ಸಂಬಂಧಿ ಸಂಗಮನ ಮಕ್ಕಳಾದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರಿಂದ ಈ ವಂಶಕ್ಕೆ ಸಂಗಮ ವಂಶವೆಂದು ಹೆಸರು ಬಂದಿತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಸಂಧರ್ಭದಲ್ಲಿ ವೀರಬಲ್ಲಾಳನ ಪತ್ನಿ ಹೊಯ್ಸಳರ ಪರವಾಗಿ ಹರಿಹರನಿಗೆ ಆಶಿರ್ವಾದ ಮಾಡಿರುವುದು ಶಾಸನಗಳಲ್ಲಿ ಉಲ್ಲೇಖ್ಗೊಂಡಿದೆ.

ಸಂಗಮನನ್ನು ವೀರಬಲ್ಲಾಳನ ಕಾಲದಲ್ಲಿ ಉತ್ತರದ ಸೀಮೆಯನ್ನು ನೋಡಿಕೊಳ್ಳಲು ಕಳಿಸಲಾಗಿತ್ತು. ಹರಿಹರನ ಕಾಲದಲ್ಲಿ ಜಂಟಿ ಅರಸನಾಗಿದ್ದ ಬುಕ್ಕನು ಹೆಚ್ಚಾಗಿ ದ್ವಾರ್ಸಮುದ್ರದಲ್ಲಿಯೆ ಇರುತ್ತಿದ್ದುದು. ಹಾಗೂ ವಿಜಯನಗರದ್ ಅರಸರು ಹೊಯ್ಸಳರ ದೇಗುಲಗಳಿಗೆ ನೀಡಿರುವ ಕಾಣಿಕೆಗಳು ಈ ವಾದವನ್ನು ಪು‍ಶ್ಟೀಕರಿಸುತ್ತವೆ.[೪]

ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು ಹಕ್ಕ ,ಬುಕ್ಕ,ಮಾರೆಪ್ಪ ಮುದ್ದಪ್ಪ,ಕಂಪಣ್ಣ. ಈ ಸಂಗಮನಾಯಕನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ, ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪನಾಯಕನ ಹೆಸರನ್ನು ನಾಮಕರಣ ಮಾಡುತ್ತಾನೆ, ಇನ್ನೊಬ್ಬ ಮಗನಿಗೆ ತನ್ನ ಧಮ೯ಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು ಮಾರೆಪ್ಪ ಎಂದು ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶಿಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ

ಉಲ್ಲೇಖಗಳು[ಬದಲಾಯಿಸಿ]

೧. http://hampi.in/a-forgotten-empire-chapter-2

೨. ಕರ್ನಾಟಕದ ಇತಿಹಾಸ

  1. "http://www.kanaja.in/ಚಿತ್ರದುರ್ಗ-ಜಿಲ್ಲೆಯ-ಬುಡಕ-6/". Retrieved 30 ಅಕ್ಟೋಬರ್ 2016.  External link in |title= (help)
  2. "http://belagavisuddi.com/valmiki-jayanthi-belagavi-dc-meeting/". Retrieved 30 ಅಕ್ಟೋಬರ್ 2016.  External link in |title= (help)
  3. "http://belagavisuddi.com/valmiki-jayanthi-belagavi-dc-meeting/". Retrieved 30 ಅಕ್ಟೋಬರ್ 2016.  External link in |title= (help)
  4. ಕರ್ನಾಟಕದ ಇತಿಹಾಸ
"https://kn.wikipedia.org/w/index.php?title=ಹಕ್ಕ_ರಾಯ&oldid=760408" ಇಂದ ಪಡೆಯಲ್ಪಟ್ಟಿದೆ