ಬುಕ್ಕ ರಾಯ I

ವಿಕಿಪೀಡಿಯ ಇಂದ
Jump to navigation Jump to search
ವಿಜಯನಗರ ಸಾಮ್ರಾಜ್ಯ
ಸಂಗಮ ವಂಶ
ಹರಿಹರ I 1336–1356
ಬುಕ್ಕ ರಾಯ I 1356–1377
ಹರಿಹರ ರಾಯ II 1377–1404
ವಿರೂಪಾಕ್ಷ ರಾಯ 1404–1405
ಬುಕ್ಕ ರಾಯ II 1405–1406
ದೇವ ರಾಯ I 1406–1422
ರಾಮಚಂದ್ರ ರಾಯ 1422
ವೀರ ವಿಜಯ ಬುಕ್ಕ ರಾಯ 1422–1424
ದೇವ ರಾಯ II 1424–1446
ಮಲ್ಲಿಕಾರ್ಜುನ ರಾಯ 1446–1465
ವಿರೂಪಾಕ್ಷ ರಾಯ II 1465–1485
ಪ್ರೌಢ ರಾಯ 1485
ಸಾಳ್ವ ವಂಶ
ಸಾಳ್ವ ನರಸಿಂಹ ದೇವ ರಾಯ 1485–1491
ತಿಮ್ಮ ಭೂಪಾಲ 1491
ನರಸಿಂಹ ರಾಯ II 1491–1505
ತುಳುವ ವಂಶ
ತುಳುವ ನರಸ ನಾಯಕ 1491–1503
ವೀರ ನರಸಿಂಹ ರಾಯ 1503–1509
ಕೃಷ್ಣ ದೇವ ರಾಯ 1509–1529
ಅಚ್ಯುತ ದೇವ ರಾಯ 1529–1542
ವೆಂಕಟ I 1542
ಸದಶಿವ ರಾಯ 1542–1570
ಅರವೀಡು ವಂಶ
ಆಳಿಯ ರಾಮ ರಾಯ 1542–1565
ತಿರುಮಲ ದೇವ ರಾಯ 1565–1572
ಶ್ರೀರಂಗ I 1572–1586
ವೆಂಕಟ II 1586–1614
ಶ್ರೀರಂಗ II 1614
ರಾಮ ದೇವ ರಾಯ 1617–1632
ವೆಂಕಟ III 1632–1642
ಶ್ರೀರಂಗ III 1642–1646

ಬುಕ್ಕ (1356-1377 CE) ಅಥವಾ ಒಂದನೆಯ ಬುಕ್ಕ ರಾಯ, ಸಂಗಮ ರಾಜವಂಶದ, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದರು.[೧][೨] ತೆಲುಗು ಕವಿ ನಾಚನಾಸೋಮ, ಬುಕ್ಕನ ಆಸ್ಥಾನ ಕವಿಗಳಲ್ಲೊಬ್ಬನ್ನಾಗಿದ್ದ.

ಹಿನ್ನೆಲೆ[ಬದಲಾಯಿಸಿ]

ವಿದ್ಯಾರಣ್ಯರೊಂದಿಗೆ ಹರಿಹರ ಮತ್ತು ಬುಕ್ಕ

ಹಕ್ಕ ಮತ್ತು ಅವನ ಸಹೋದರ ಬುಕ್ಕನ ಆರಂಭಿಕ ಜೀವನದ ವಿವರಗಳು ಲಭ್ಯವಿಲ್ಲ. ಸಿದ್ಧಾಂತಗಳಲ್ಲಿನ ಹಲವು ಹೇಳಿಕೆಗಳಿಗೆ ಸಾಕ್ಷಗಳಿಲ್ಲ. ಇತಿಹಾಸಕಾರರ ಉಲ್ಲೇಖನಗಳಲ್ಲಿ ತಾರೀಕುಗಳು ಸಹ ಕೆಲವು ಕಡೆ ತಪ್ಪಿವೆ. ಇತಿಹಾಸಕಾರ ಫಾದ್ರಿ ಹೆನ್ರಿ ಹೇರಾಸ್ ಸಿದ್ಧಾಂತದ ಪ್ರಕಾರ, ಹಕ್ಕ-ಬುಕ್ಕ ಸಹೋದರರು ವಿರೂಪಾಕ್ಷ ಮತ್ತು ಕೇಶವನಂತಹ ಕರ್ನಾಟಕದ ದೇವರುಗಳ ಭಕ್ತರಾಗಿದ್ದರು. ಪರ್ಷಿಯನ್ ಇತಿಹಾಸಕಾಕರ, ಫರಿಷ್ತಾ ಈ ಅರಸರನ್ನು ಕರ್ನಾಟಕದವರೆಂದು ಉಲ್ಲೇಖಿಸಿದ್ದಾನೆ.

ಪರ್ಷಿಯನ್ ಇತಿಹಾಸಕಾರ, ಫರಿಷ್ತಾ ಈ ಅರಸರನ್ನು ಕರ್ನಾಟಕದವರೆಂದು ಉಲ್ಲೇಖಿಸಿದ್ದಾನೆ. [೩][೪][೫]

ಮತ್ತೊಂದು ಸಿದ್ಧಾಂತದ ಹೇಳುವಂತೆ, ಹಕ್ಕ-ಬುಕ್ಕರು ವಾರಂಗಲ್-ನ ಕಾಕತೀಯ ರಾಜನ ಸೈನ್ಯದಲ್ಲಿದ್ದರು. ವಾರಂಗಲ್ ರಾಜನನ್ನು ಮೊಹಮ್ಮದ್ ಬಿನ್ ತುಘ್ಹಲಕ್ ಸೋಲಿಸಿ ಹಕ್ಕ-ಬುಕ್ಕರು ಸೆರೆಯಾಳುಗಳನ್ನಾಗಿ ಮಾಡಿಕೊಂಡು ದೆಹಲಿಗೆ ಕಳುಹಿಸಿದ ಮತ್ತು ಅಲ್ಲಿ ಇಸ್ಲಾಮ್ ಧರ್ಮಕ್ಕೆ ಮತಾಂತರಕ್ಕೆ ಪ್ರಯತ್ನಿಸಿದ. ಅಲ್ಲಿಂದ ತಪ್ಪಿಸಿಕೊಂಡು ಬಂದು, ವಿದ್ಯಾರಣ್ಯರ ಆಶೀರ್ವಾದಗಳೊಂದಿಗೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ರಾಜ್ಯಭಾರ[ಬದಲಾಯಿಸಿ]

ಬುಕ್ಕ ರಾಯನ 21 ವರ್ಷ ಆಳ್ವಿಕೆಯಲ್ಲಿ (37 ಇತಿಹಾಸಕಾರ ನನಿಜ್ ಪ್ರಕಾರ) ಸಾಮ್ರಾಜ್ಯವು ಬಹಳಷ್ಟು ಅಭಿವೃದ್ಧಿ ಹೊಂದಿತು. ಬುಕ್ಕ ರಾಯ ದಕ್ಷಿಣ ಭಾರತದ ರಾಜ್ಯಗಳನ್ನು ವಶಪಡಿಸಿಕೊಂಡು, ನಿರಂತರವಾಗಿ ಸಾಮ್ರಾಜ್ಯದ ಪ್ರದೇಶವನ್ನು ವಿಸ್ತರಿಸಿದ.

1360ರ ಹೊತ್ತಿನಲ್ಲಿ, ಅರ್ಕೊಟ್ ನ (ಇಂದಿನ ವೆಲ್ಲೂರ್, ತಮಿಳುನಾಡು) ಶಂಭುವರಾಯರ ರಾಜ್ಯ ಮತ್ತು ಕೊಂಡವೀಡು ರೆಡ್ಡಿಗಳನ್ನು ಸೋಲಿಸಿ ಪೆನುಕೊಂಡ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡ. ಬುಕ್ಕ 1371 ರಲ್ಲಿ, ಮಧುರೈನ ಸುಲ್ತಾನರನ್ನು ಸೋಲಿಸಿದನು ದಕ್ಷಿಣಕ್ಕೆ ರಾಮೇಶ್ವರಂ ವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ. ಬುಕ್ಕ ಮತ್ತು ಅವನ ಪುತ್ರ ಕುಮಾರ ಕಂಪಣ ದಕ್ಷಿಣ ಭಾರತದ ಬಹುತೇಕ ಪ್ರಭುತ್ವಗಳ ವಿರುದ್ಧ ಜಯಗಳಿಸಿದರು. ಬುಕ್ಕನ ಪತ್ನಿ ಗಂಗಾಂಬಿಕಾ ಬರೆದ ಸಂಸ್ಕೃತ ಕೃತಿ ಮಧುರಾ ವಿಜಯಂ (ಅಥವಾ ವೀರಕಂಪಾರ ಚರಣ್ರಾಮ್) ನಲ್ಲಿ ಈ ಪ್ರಯತ್ನಗಳನ್ನು ದಾಖಲಿಸಲಾಗಿದೆ. 1374 ರ ಸುಮಾರಿಗೆ, ತುಂಗಭದ್ರ-ಕೃಷ್ಣ ತಪ್ಪಲಿನ ಕೃಷಿ ಪ್ರದೇಶದಲ್ಲಿ, ಬಹಮನಿಗಳಿಗಿಂತಲೂ ಶಕ್ತಿಶಾಲಿಯಾದರು. ಒಡಿಶಾ (ಓರಿಯಾ) ರಾಜ್ಯವನ್ನು ಗೋವಾ ರಾಜ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ಅವನ ಮಗ ಕುಮಾರ ಕಂಪಾನಾ ಅವರೊಂದಿಗೆ ಪ್ರಚಾರ ಮಾಡಿದರು ಮತ್ತು ಅವರ ಪತ್ನಿ ಗಂಗಾಂಬಿಕಾ ಬರೆದ ಸಂಸ್ಕೃತ ಕೃತಿ ಮಧುರಾ ವಿಜಯಂ (ವೀರಕಂಪಾರ ಚರಣ್ರಾಮ್ ಎಂದು ಸಹ ಕರೆಯುತ್ತಾರೆ) ಅವರ ಪ್ರಯತ್ನಗಳನ್ನು ದಾಖಲಿಸಲಾಗಿದೆ. 1374 ರ ಹೊತ್ತಿಗೆ ಅವರು ತುಂಗಭದ್ರ-ಕೃಷ್ಣ ದೋಬ್ ನಿಯಂತ್ರಣಕ್ಕೆ ಬಹಮನಿಗಳ ಮೇಲೆ ಒಂದು ಮೇಲುಗೈ ಪಡೆದರು. ಒಡಿಶಾ (ಓರಿಯಾ) ಮತ್ತು ಗೋವಾ ರಾಜ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸಿಲೋನ್ ನ ಜಾಫ್ನಾ ಸಾಮ್ರಾಜ್ಯ ಮತ್ತು ಮಲಬಾರ್ನ ಝಮೊರಿನ್ ರಾಜ್ಯಗಳಿಂದ ಕಪ್ಪ ಕಾಣಿಕೆಗಳನ್ನು ಪಡೆದುಕೊಂಡರು.

ಉಲ್ಲೇಖಗಳು:[ಬದಲಾಯಿಸಿ]

  1. Phrof A V Narasimha Murthy: Rare Royal Brothers: Hakka and Bukka Archived 13 October 2011 at the Wayback Machine.
  2. Sen, Sailendra (2013). A Textbook of Medieval Indian History. Primus Books. pp. 103–106. ISBN 978-9-38060-734-4.
  3. http://www.bellary.nic.in/history.htm
  4. concise history of Karnataka : suryanath kamath PG 159
  5. http://www.historyfiles.co.uk/KingListsFarEast/IndiaVijayanagar.htm


Seal of Karnataka.svg ಈ ಲೇಖನವನ್ನು ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ ಅಥವಾ ಸಂಪಾದಿಸಲಾಗಿದೆ.