ವಿಷಯಕ್ಕೆ ಹೋಗು

ಬಹಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹಮನಿ ರಾಜ್ಯ:

೧೩೪೭ರಲ್ಲಿ ಗುಲ್ಬರ್ಗಾದಲ್ಲಿ ಬಹಮನಿ ರಾಜ್ಯ ಸ್ಥಾಪನೆಯಾಯಿತು.  ಅಲ್ಲಾವುದ್ದೀನ್ ತನ್ನ ಸಾಮ್ರಾಜ್ಯವನ್ನು ಅದೋನಿಯ ವರೆಗೆ ವಿಸ್ತರಿಸಿದನು. ಅಲಾವುದ್ದೀನ್ ಬಹಮನಿ ತನ್ನ ೬೭ನೇತ ವಯಸ್ಸಿನಲ್ಲಿ ೧೩೫೮ರಲ್ಲಿ ತೀರಿಕೊಂಡನು. ಇವನ ನಂತರ ಮಹಮ್ಮದ್ ಶಾಹ ಪಟ್ಟಕ್ಕೆ ಬಂದನು.[೧೩೫೮-೧೩೭೫].

ಮಹಮ್ಮದನ ಆಳ್ವಿಕೆಯ ಆರಂಭದಲ್ಲಿಯೇ ವಿಜಯನಗರ ಹಾಗು ವಾರಂಗಲ್ಲಿನ ಹಿಂದುಗಳಿಂದ ಬಹಮನಿ ಸುಲ್ತಾನರ ಬಂಗಾರ ಹಾಗು ಬೆಳ್ಳಿಯ ನಾಣ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕರಗಿಸಲಾಯಿತು. ಅನೇಕ ವರ್ತಕರನ್ನು ಕೊಲ್ಲಲಾಯಿತು. ಸುಲ್ತಾನನು ಪಾಠಣ್ ನತ್ತ ಸಾಗಿ, ವಿನಾಯಕ ದೇವನನ್ನು ಸೆರೆಹಿಡಿದು ಸುಟ್ಟುಹಾಕಿದನು. ಅವನು ಹಿಂದಿರುಗುವಾಗ ಹಿಂದೂ ಪಡೆಗಳು ಅವನನ್ನು ಬೆನ್ನಟ್ಟಿದವು. ಸುಲ್ತಾನನ ಪಡೆಗಳು ಪಲಾಯನಗೊಂಡವು. ಕೇವಲ ೧೫೦೦ ಮಂದಿ ಸೈನಿಕರು ಮಾತ್ರ ಕಲಬುರಗಿಗೆ ಮರಳಿದರು.

ಮಹಮ್ಮದ ಶಾಹ ಹೊಸ ಸೈನ್ಯವನ್ನು ಕಟ್ಟಿ, ವಾರಂಗಲ್ ಹಾಗೂ ಗೋಲ್ಕೊಂಡಾಗಳ ವಿರುದ್ಧ ದಂಡಯಾತ್ರೆ ಗೈದನು. ೧೩೬೬ರಲ್ಲಿ ಶಾಹ,  ವಿಜಯನಗರದ ಕಡೆ ದಂಡಯಾತ್ರೆ ನಡೆಸಿದ. ವಿಜಯನಗರದ ಅರಸ ಬುಕ್ಕರಾಯ ಸೈನ್ಯದೊಂದಿಗೆ ಎದುರಾಗಿ ಮುದ್ಗಲ್ ವಶಪಡಿಸಿಕೊಂಡ ಮತ್ತು ಹಲವಾರು ಬಹಮನಿ  ಸೈನಿಕರನ್ನು ಕೊಂದನು.  ಮಹಮ್ಮದನು ಪ್ರತಿಕ್ರಿಯೆ ತೋರಿ ಮುದ್ಗಲ್ಲಿನಲ್ಲಿ ನೆಲೆನಿಂತನು ಮತ್ತು ಹಲವಾರು ಹಿಂದುಗಳನ್ನು ಕೊಂದನು. ಈತನು ಆದೋನಿ ವಶಪಡಿಸಿಕೊಳ್ಳಲು ತೆರಳಿದನು. ಈ ಎರಡೂ ಸೈನ್ಯಗಳು ೨೩-೭-೧೩೬೬ ರಲ್ಲಿ ಎದುರು ಬದುರಾಗಿ ಹೋರಾಡಿದವು. ಎರಡೂ ಬದಿಗಳಲ್ಲಿ ಬಹುಸಂಖ್ಯಯ ಸಾವುಗಳಾದವು. ಬುಕ್ಕರಾಯ ಯುದ್ಧದಲ್ಲಿ ಸೋತನು. ಕಿಶನ್ ರಾಯ ಕಾಡುಬೆಟ್ಟಗಳಿಗೆ ಓಡಿದನು.

ಮಹಮ್ಮದ್ ಶಾಹ ೨೧-೪-೧೩೭೫ರಲ್ಲಿ ತೀರಿಕೊಂಡನು. ನಂತರ ಅವನ ಮಗ ಮುಜಾಹಿದ್ ಪಟ್ಟಕ್ಕೆ ಬಂದನು. ೧೩೭೮ರಲ್ಲಿ ದಾವೂದ್ ಖಾನನು ಮುಜಾಹಿದನ ಕೊಲೆ ಮಾಡಿದನು. ನಂತರ ಮಹಮ್ಮದ್-೧ ಅಧಿಕಾರಕ್ಕೆ ಬಂದನು. ತದನಂತರ ಅಧಿಕಾರಕ್ಕಾಗಿ ಒಳಜಗಳಗಳು ನಡೆದವು. ೧೩೯೭ರಲ್ಲಿ ದಾವೂದನ ಮಗ ಫಿರೋಜ್ ಅರಸನಾದನು. ಈತನು ೧೪೨೨ರಲ್ಲಿ ಮರಣ ಹೊಂದಿದನು.

೧೪೨೨ರಲ್ಲಿ ಅಹಮದ್ ಷಹ-೧ ಪಟ್ಟಕ್ಕೆ ಬಂದನು. ಈತನು ೧೪೨೩ರಲ್ಲಿ ವಿಜಯನಗರದ ಮೇಲೆ ದಂಡೆತ್ತಿ ಹೋದನು. ಹಲವಾರು ಹಿಂದುಗಳನ್ನು ಕೊಂಡನು. ೧೪೨೪ರಲ್ಲಿ ವಾರಂಗಲ್ ಪತನವಾಯಿತು ಮತ್ತು ಬಹಮನಿ ರಾಜ್ಯದ ಭಾಗವಾಯಿತು. ಕೃಷ್ಣಾ ನದಿಗುಂಟ ಬಹಮನಿ ರಾಜ್ಯ ವಿಸ್ತರಿಸಿತು. ೧೪೨೯ರಲ್ಲಿ ಬಹಮನೀಯರ ರಾಜಧಾನಿಯು ಬೀದರಿಗೆ ವರ್ಗಾವಣೆ ಆಯಿತು. ಅಹಮದ್ ಷಹ  ೨೭-೨-೧೪೩೫ ರಂದು ತೀರಿಕೊಂಡನು.

೧೪೩೬ರಲ್ಲಿ ಅಲಾವುದ್ದೀನ್-ಅಹಮದ್-ಶಹಾ ಪಟ್ಟಕ್ಕೆ ಬಂದನು. ೧೪೪೩ರಲ್ಲಿ ವಿಜಯನಗರ ಮತ್ತು ಬಹಮನಿಗಳ ಮಧ್ಯ ಯುದ್ಧ ಜರುಗಿತು. ಎರಡು ಕಡೆಗಳಿಂದ ಹಲವಾರು ಸೈನಿಕರು ಮಡಿದರು. ದೇವರಾಯನ ಮಗ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ. ೧೪೫೮ರಲ್ಲಿ ಅಲಾವುದ್ದೀನ್ ಅಹಮದ್-ಶಹಾ ತೀರಿಕೊಂಡ. ಮತ್ತು ಅವನ ಮಗ ಹುಮಾಯುನ್ ಪಟ್ಟಕ್ಕೆ ಬಂದ.

೧೪೬೧ರಲ್ಲಿ ಹುಮಾಯುನ್ ಮರಣಹೊಂದಿದ. ಆಗ ಇನ್ನೂ ಎಂಟು ವರುಷದ ನಿಜಾಮ್ ಶಾಹ ಪಟ್ಟಕ್ಕೆ ಬಂದ. ೧೪೬೨-ನಿಜಾಮ್ ಶಾಹನ ತಮ್ಮ ಮೊಹಮ್ಮದನು ಅಧಿಕಾರಕ್ಕೆ ಬಂದನು. ಮಹಮೂದ ಗವಾನ್ ಇವರ ಪ್ರಧಾನ ಮಂತ್ರಿ ಇದ್ದರು. ಗವಾನನು ಗೋವಾವನ್ನು ವಶಪಡಿಸಿಕೊಂಡ.

೧೪೬೯ರಲ್ಲಿ ಹೊನ್ನಾವರದಿಂದ ೧೦೦೦೦ ಮುಸಲ್ಮಾನರನ್ನು ಕೊಲ್ಲಲಾಯಿತು. ಕೆಲವರು ಓಡಿಹೋದರು. ೧೪೭೦- ಯುಸೂಫ್ ಆದಿಲ್ ಶಹಾ ಬಿಜಾಪುರದಲ್ಲಿ ಸ್ವತಂತ್ರ ರಾಜ್ಯ ಸ್ಥಾಪಿಸಿಕೊಂಡನು. ೧೪೭೫ರಲ್ಲಿ ಎರಡು-ವರುಷದ, ಭೀಕರ ಬರ ಬಂತು.

೧೪೭೮ರಲ್ಲಿ ಮೊಹಮ್ಮದನು ಒರಿಸ್ಸಾದ ಮೇಲೇರಿ ಹೋದ ಮತ್ತು ಸೋಲಿಸಿದ. ಸುಲ್ತಾನನು, ನರಸಿಂಹರಾಯ ಅರಸನ ರಾಜಮುಂಡ್ರಿಯಲ್ಲಿ ಹೊಕ್ಕ. ೧೪೮೧ರಲ್ಲಿ - ಪ್ರಧಾನ ಮಂತ್ರಿ ಮಹಮೂದ ಗವಾನ್ ಕೊಲೆಯಾದನು. ಇದು ಬಹಮನಿ ಸಾಮ್ರಾಜ್ಯ ಒಡೆಯಲು ಕಾರಣವಾಯಿತು. ೧೪೮೨ರಲ್ಲಿ ಮಹಮ್ಮದ್ ಶಾಹ ತೀರಿಕೊಂಡನು. ಅವನ ೧೨ ವರುಷದ ಮಗ, ೨ನೇ ಮಹಮ್ಮದ, ಪಟ್ಟಕ್ಕೆ ಬಂದ. ಬಹಮನಿ ಸಾಮ್ರಾಜ್ಯವು;  ಬಿಜಾಪುರ, ಬೀದರ, ಬಿರಾರ್ ,ಅಹಮದ್ನಗರ್ ಹಾಗೂ ಗೋಲ್ಕೊಂಡಾಗಳಾಗಿ ಒಡೆದು ಹೋಯಿತು.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಬಹಮನಿ&oldid=1177274" ಇಂದ ಪಡೆಯಲ್ಪಟ್ಟಿದೆ