ಹಕ್ಕ-ಬುಕ್ಕ

ವಿಕಿಪೀಡಿಯ ಇಂದ
Jump to navigation Jump to search

alt=|thumb|396x396px

ಹರಿಹರ-I (ಹಕ್ಕ) ಮತ್ತು ಬುಕ್ಕರಾಯ-I
Emperors of Vijayanagara Empire
ವಂಶಸಂಗಮ ವಂಶ
ಧಾರ್ಮಿಕ ನಂಬಿಕೆಗಳುಹಿಂದೂ/ ವಾಲ್ಮೀಕಿ / ಬೇಡ

'

ವಿಜಯನಗರ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ విజయనగర సామ్రాజ్యం
1336–1646


Flag

ವಿಜಯನಗರ ಸಾಮ್ರಾಜ್ಯದ ವಿಸ್ತಾರ, 1446, 1520 CE
ರಾಜಧಾನಿ ವಿಜಯನಗರ
ಭಾಷೆಗಳು ಕನ್ನಡ, ತೆಲುಗು
ಧರ್ಮ ಹಿಂದೂ
ಸರ್ಕಾರ ರಾಜ ಪ್ರಭುತ್ವ
King
 -  1336–1356 ಹರಿಹರ I
ಇತಿಹಾಸ
 -  ಸ್ಥಾಪಿತ 1336
 -  ಉಪಲಬ್ಧ ಮೊದಲ ದಾಖಲೆ 1343
 -  ಸ್ಥಾಪನೆ ರದ್ದತಿ 1646
ಚಲಾವಣೆ ವಿಜಯನಗರದ ನಾಣ್ಯಗಳು
ಇದಕ್ಕಿಂತ ಮೊದಲು
ಹೊಯ್ಸಳ ಸಾಮ್ರಾಜ್ಯ
ಕಾಕತೀಯ ವಂಶ
ಉಮ್ಮತ್ತೂರು ಪಾಳೇಗಾರರ ವಂಶ
ಪಾಂಡ್ಯನ್ ವಂಶ
ರೆಡ್ಡಿ ವಂಶ
ಇಂದು ಇವುಗಳ ಭಾಗ  ಭಾರತ
Warning: Value specified for "continent" does not comply

ಕುಮಾರರಾಮ: 13ನೇ ಶತಮಾನದಲ್ಲಿ ಕಂಪ್ಲಿಯ ರಾಜನಾಗಿದ್ದ ಕುಮಾರರಾಮ ವಾಲ್ಮೀಕಿ/ಬೇಡ [೧] ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ. ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು.ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಲಿಷ್ಠ ಹಿಂದೂ ಸಾಮ್ರಾಜ್ಯದ ಕನಸುಕಂಡವನು ಈ ಕುಮಾರ ರಾಮ.13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ಧಿ.

 • ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ ಅಥವಾ ರಾಮನಾಥ ಚರಿತೆ ಕನ್ನಡದ ಮೊಟ್ಟ ಮೊದಲ ಚಾರಿತ್ರಿಕಕಾವ್ಯ ಮತ್ತು ವೀರಕಾವ್ಯ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ದೇ.ಜ.ಗೌ ಅವರು "ಕುಮಾರರಾಮ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ತಳಹದಿ ಹಾಕಿ, ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ಮೆರೆದ ಗಂಡುಗಲಿ" ಎಂದಿದ್ದಾರೆ.
 • 1320 ರಲ್ಲಿ ಮಹ್ಮದ್ ಬಿನ್ ತುಗಲಕ್ನ ಕುತಂತ್ರದಿಂದ ಸಾವನ್ನಪಿದ. ಕುಮಾರರಾಮನ ಆಸೆಯಂತೆ ಅವನ ಅಕ್ಕನ ಮಕ್ಕಳಾದ ಹಕ್ಕ-ಬುಕ್ಕರು (ಹರಿಹರ ಮತ್ತು ಬುಕ್ಕರಾಯ) ೧೩೩೬ ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಚಾರಿತ್ರಿಕ ದಾಖಲೆಗಳ ಪ್ರಕಾರ ವಿಜಯನಗರದ ಸಂಸ್ಥಾಪಕರಾದ ಹಕ್ಕ ಮತ್ತು ಬುಕ್ಕರು ಕುಮಾರರಾಮನ ಸಹೋದರಿ 'ಮಾರೆವ್ವಳ ' ಮಕ್ಕಳು ಎಂಬುದು ಕುಮಾರರಾಮನ ಜೀವನ ಚರಿತ್ರೆಯಿಂದ ತಿಳಿದುಬರುತ್ತದೆ.
 • ವಿಜಯನಗರದ ಆರಾಧ್ಯ ದೈವ ಈಗಿನ [[[ಹಂಪಿ]]]ಯ ವಿರೂಪಾಕ್ಷ ಅಥವಾ ಪಂಪಾಪತಿ.
 • ವಿಜಯನಗರ ಸಾಮ್ರಾಜ್ಯವು ಆನೆಗುಂದಿಯ ಕುಮ್ಮಟ ದುರ್ಗದಲ್ಲಿರುವ ಕನಕಗಿರಿ ಸಾಮ್ರಾಜ್ಯವನ್ನು ೧೮-೦೪-೧೩೩೬ ರಲ್ಲಿ ಸ್ಥಾಪನೆ ಮಾಡಿದರು. ಇವರು ವಿಜಯನಗರ್ಸಲ್ಮುಲಿ ಮೊದಲು ರಾಜ್ದಾಯಭಾರ ಮಾಡಿದ ಸಂಗಮ ವಂಶ ವಾಲ್ಮೀಕಿ/ಬೇಡ [೨] ಇವರ ಅರಾಧ್ಯ ದೈವ ಕಂಪ್ಲಿ ಸೋಮನಾಥ ದೇವರು.
 • ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಮತ್ತು ವಿಜಯನಗರದಲ್ಲಿ ಮೊದಲು ರಾಜ್ಯಭಾರ ಮಾಡಿದ ವಂಶ ಕನಾ೯ಟಕದ ಸಂಗಮ ವಂಶ. ಸಂಗಮ ವಂಶ ಕನಕಗಿರಿಯ ಕಂಪಿಲರಾಯನ ಅಳಿಯನಾದ ಸಂಗಮನ ಮಕ್ಕಳಾದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರಿಂದ ಈ ವಂಶಕ್ಕೆ ಸಂಗಮ ವಂಶವೆಂದು ಹೆಸರು ಬಂದಿತು.
 • ಆನೆಗೊಂದಿಯ ಕುಮ್ಮಟ ದುರ್ಗದ ಕನಕಗಿರಿ ಸಾಮ್ರಾಜ್ಯದ ವೀರ ಪರಾಕ್ರಮಿ ಅರಸನಾಗಿದ್ದ ಮುಮ್ಮಡಿ ಸಿಂಗನಾಯಕನ ಮಗ ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯ. ಈ ವೀರ ಕಂಪಿಲರಾಯನ ಮಗನೆ ಪುವ್ವಲದೊರೆ, ಪರನಾರಿ ಸಹೋದರ, ದೆಹಲಿ ಸುಲ್ತಾನರ ಮಿಂಡ, ಆದಿ ದೈವೀ ಪುರುಷ ಗಂಡುಗಲಿ ಕುಮಾರರಾಮ
 • ಈ ಕನಕಗಿರಿ ಸಂಸ್ಥಾನದ ಗಂಡುಗಲಿ ಕುಮಾರರಾಮನ ಸಹೋದರಿ ಮಾರವ್ವ. ಈ ಮಾರವ್ವಳನ್ನು ಬುಕ್ಕ ಭೂಪನಾಯಕನ ಮಗ ಸಂಗಮನು ಮದುವೆಯಾಗುತ್ತಾನೆ. ಹರಿಹರ ಬುಕ್ಕರ ತಂದೆ ಸಂಗಮನು ಕುಮ್ಮಟದುಗ೯ದ ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಅಳಿಯ.[೧][೨]
 • ಈ ಸಂಗಮನು ಮೊದಲು ಕುರಗೋಡು ಪ್ರಾಂತ್ಯದಲ್ಲಿದ್ದಿದ್ದರಿಂದ ಈ ಸಂಗಮನಿಗೆ ಕುರಗೋಡು ಸಂಸ್ಥಾಪಕನೆಂದು ಕರೆಯುತ್ತಿದ್ದರು ಮುಂದೆ ಕಂಪಿಲರಾಯನ ಮಗ ಗಂಡುಗಲಿ ಕುಮಾರರಾಮನ ಸಹೋದರಿಯಾದ ಮಾರೆವ್ವಳನ್ನು ವಿವಾಹವಾಗುತ್ತಾನೆ.ಈ ಕಂಪಿಲರಾಯನ ಮಗ ಗಂಡುಗಲಿ ಕುಮಾರರಾಮನ ಜೊತೆಗಾರನು ಮತ್ತು ಆತನ ಭಾವನು ಆಗಿದ್ದರಿಂದ ಸಂಗಮನನ್ನು ಭಾವ ಸಂಗಮನೆಂದೆ ಪ್ರಸಿದ್ಧನಾಗಿದ್ದನು. ಕಂಪಿಲರಾಯನ ಮಗ ಶ್ರೀ ಗಂಡುಗಲಿ ಕುಮಾರರಾಮನು ತನ್ನ ಭಾವನಾದ ಸಂಗಮನನ್ನು ತನ್ನ ಸೈನ್ಯದ ಸೇನಾಧಿಪತಿಯನ್ನಾಗಿ ಮಾಡುತ್ತಾನೆ.
 • ಈ ಕನಕಗಿರಿ ಸಂಸ್ಥಾನದ ಮಹಾನ್ ನಾಯಕಾಚಾಯ೯ ಶ್ರೀ ವೀರ ಕಂಪಿಲರಾಯ ಮತ್ತು ಆತನ ಪತ್ನಿಯಾದ ಹರಿಹರದೇವಿಯ ಅಳಿಯ ಸಂಗಮ.[೩][೩][೪]
 • ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು. ಹರಿಹರ ಅಥವಾ ಹಕ್ಕ ,ಬುಕ್ಕ,ಮಾರಪ್ಪ ಮುದ್ದಪ್ಪ, ಕಂಪಣ್ಣ. ಈ ಸಂಗಮನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ. ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪಣ್ಣ ಹೆಸರನ್ನು ನಾಮಕರಣ ಮಾಡುತ್ತಾನೆ. ಇನ್ನೊಬ್ಬ ಮಗನಿಗೆ ತನ್ನ ಧರ್ಮಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು, ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶೀಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ.
 • ಹಕ್ಕ-ಬುಕ್ಕರು ಮೂಲತಃ ತುರ್ವಸು ಸಂತತಿಯ ವಾಲ್ಮೀಕಿ/ಬೇಡ [೩]ಸಮುದಾಯಕ್ಕೆ ಸೇರಿದವರು ಮತ್ತು ಅಪ್ಪಟ ಕನ್ನಡಿಗರು. ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು.ಪ್ರಾಚೀನ ಕಾಲದಿಂದಲೂ ಕುಮ್ಮಟದ ಪ್ರದೇಶದಲ್ಲಿ ವಾಲ್ಮೀಕಿ/ಬೇಡರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯ ವಜವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶಿಲಾ-ಶಾಸನಗಳು ಮತ್ತು ಇತಿಹಾಸಕಾರರು ಸ್ಪಷ್ಟಪಡಿಸುತ್ತಾರೆ.[೫][೬][೭][೮][೯]

ಉಲ್ಲೇಖಗಳು

 1. "http://www.janakalotishreekumararama.org/". Retrieved 30 ಅಕ್ಟೋಬರ್ 2016. Check date values in: |accessdate= (help); External link in |title= (help)
 2. https://en.wikipedia.org/wiki/Origin_of_Vijayanagara_Empire
 3. ೩.೦ ೩.೧ http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕಥನ-14/
 4. ಕುಮಾರರಾಮನ ಸಾಂಗತ್ಯ.
 5. http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕಥನ-14/
 6. http://kannadamma.net/?p=130044
 7. http://www.kanaja.in/%E0%B2%B5%E0%B3%8D%E0%B2%AF%E0%B2%BE%E0%B2%A7-%E0%B2%9A%E0%B2%B0%E0%B2%BF%E0%B2%A4%E0%B3%86-%E0%B2%AC%E0%B3%87%E0%B2%A1-%E0%B2%95%E0%B3%81%E0%B2%B2%E0%B2%AE%E0%B3%82%E0%B2%B2%E0%B2%A6-%E0%B2%95-4/
 8. ಕುಮಾರರಾಮ
 9. http://vijaykarnataka.indiatimes.com/district/koppala/-/articleshow/45967545.cms

೧೦: https://www.worldwidejournals.com/paripex/recent_issues_pdf/2014/July/July_2014_1405423027__72.pdf