ಕಂಪ್ಲಿ
Kampli
ಕಂಪ್ಲಿ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬಳ್ಳಾರಿ |
Founded by | ಕಂಪಿಲರಾಯ |
Elevation | ೪೧೪ m (೧,೩೫೮ ft) |
Population (2011) | |
• Total | ೩೯,೩೦೭ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
Website | www |
ಕಂಪ್ಲಿ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.
ಇದು ಹೊಸಪೇಟೆಯ ವಾಯವ್ಯಕ್ಕೆ 32ಕಿಮೀ ದೂರದಲ್ಲಿ ತುಂಗಭದ್ರಾ ನದಿಯ ಸನಿಹದಲ್ಲಿದೆ. ಇತಿಹಾಸ ಪ್ರಸಿದ್ಧ ಸ್ಥಳ. ಕೈಗಾರಿಕಾ ಕೇಂದ್ರ. ಜನಸಂಖ್ಯೆ 39,307 (2011).
ತುಂಗಭದ್ರಾನದಿಯ ಅಂಚಿನಲ್ಲಿರುವ ಆ ನದಿಯ ಪಾತ್ರ ಭೂಮಿಯಲ್ಲಿ ಉಪಲಬ್ಧವಾದ ಕಪ್ಪು ಬಂಡೆಗಳಿಂದ ರಚಿತವಾಗಿರುವ ಇಲ್ಲಿನ ಕೋಟೆಯನ್ನು ಬಳ್ಳಾರಿಯ ಪಾಳೆಯಗಾರರಲ್ಲೊಬ್ಬ ಕಟ್ಟಸಿದನೆಂದು ಪ್ರತೀತಿ. ಕೋಟೆಯಲ್ಲಿ ಮತ್ತು ಕೋಟೆಯ ಹೊರಗಿರುವ ಪೇಟೆಯಲ್ಲಿ ಇಕ್ಕಟ್ಟಾದ ರಸ್ತೆಗಳ ಇಕ್ಕೆಲದಲ್ಲೂ ಗುಂಪು ಮನೆಗಳಿವೆ.
ಮೊದಲು ಇಲ್ಲಿ ನೇಯ್ಗೆ ಪ್ರಧಾನವೆನಿಸಿತ್ತು. ಕಬ್ಬಿನಿಂದ ಬೆಲ್ಲ ತಯಾರಿಸುತ್ತಿದ್ದರು. ಮರದ ಕೆತ್ತನೆ ಕೆಲಸ ಹಾಗೂ ಆಟದ ಸಾಮಾನುಗಳನ್ನು ಮಾಡುವ ಉದ್ಯಮಗಳಿಗೂ ಈ ಸ್ಥಳ ಹೆಸರಾಗಿತ್ತು. 1954ರಿಂದ ಇಲ್ಲಿ ಒಂದು ಸಹಕಾರಿ ಸಕ್ಕರೆ ಕಾರ್ಖಾನೆ ನಡೆಯುತ್ತಿದೆ. ಇದು ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲನೆಯ ಸಹಕಾರಿ ಸಕ್ಕರೆ ಕಾರ್ಖಾನೆ. ಕಬ್ಬು ಅರೆಯುವ ಕಾಲದಲ್ಲಿ ಇದು ಸು.1000 ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತದೆ. ಇಲ್ಲಿನ ನಗರ ಪಂಚಾಯಿತಿ 1896ರಲ್ಲೇ ಸ್ಥಾಪಿತವಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲೇ ಅತಿ ಪುರಾತನ ಪಂಚಾಯಿತಿಗಳಲ್ಲೊಂದಾಗಿದೆ. ಇದು 1960ರಲ್ಲಿ ಹೊಸ ನಿಯಮಗಳಿಗನು ಸಾರವಾಗಿ ಪುನರ್ರೂಪಿತವಾಗಿದೆ. 1958ರಲ್ಲಿ ಸ್ಥಾಪಿತವಾದ ಇಲ್ಲಿಯ ಮಹಿಳಾಸೇವಾ ಸಮಾಜ ಮಹಿಳೆಯರ ಅಭ್ಯುದಯಕ್ಕಾಗಿ ದುಡಿಯುತ್ತಿದೆ. ಗಾಂಧೀಕುಟೀರ ಸಮಾಜಸೇವೆ ನಡೆಸುತ್ತಿದೆ.
11-14ನೆಯ ಶತಮಾನಗಳಲ್ಲಿ ಇದು ಕಂಪಿಲಿ ರಾಜ್ಯ ಎಂಬ ಚಿಕ್ಕ ರಾಜ್ಯಮೊಂದರ ರಾಜಧಾನಿಯಾಗಿತ್ತು 1851ರ ವರೆಗೆ ಇದು ತಾಲ್ಲೂಕಿನ ಕೇಂದ್ರವಾಗಿತ್ತು. ಅಂದಿನ ಕಂಪ್ಲಿ ತಾಲ್ಲೂಕು ಈಗಿನ ಹೊಸಪೇಟೆ ತಾಲ್ಲೂಕಿನ ಭಾಗಗಳನ್ನೊಳಗೊಂಡಿತ್ತು.