ಹಿಂದೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮ ಈಗ ಕೇವಲ ಒಂದು ಮತವಾಗಿ ಉಳಿದಿಲ್ಲ. ಅದು ಭಾರತೀಯರ ಜೀವನ ಶೈಲಿಯಾಗಿ ಅವರ ನಡವಳಿಕೆಯಾಗಿದೆ. ಪಾಶ್ಚಾತ್ಯ ದೇಶಗಳು ತಲೆಯೆತ್ತಿ ನಿಲ್ಲುವ ಮೊದಲೇ ಇಲ್ಲಿ ವೇದಗಳು ತಲೆಯೆತ್ತಿದ್ದವು. ಭಾರತ, ನೆಪಾಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಂದೂಗಳು ಒಟ್ಟು ೧೧೦ ಕೋಟಿ ಇರುವರು.

ಹಿಂದೂ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ತತ್ವಶಾಸ್ತ್ರೀಯ, ಧಾರ್ಮಿಕ ಹಾಗು ಸಾಂಸ್ಕೃತಿಕ ವ್ಯವಸ್ಥೆಗಳಿಗೆ ಸಂಬಂಧಿಸಿದ ಒಂದು ಗುರುತನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಬಳಕೆಯಲ್ಲಿ, ಅದು ಹಿಂದೂ ಧರ್ಮದ ಅನುಯಾಯಿಯನ್ನು ಸೂಚಿಸುತ್ತದೆ. ಶೈವ ಪಂಥ ಹಾಗು ವೈಷ್ಣವ ಪಂಥಗಳು ಹಿಂದೂ ಧರ್ಮವನ್ನು ಪ್ರತಿನಿಧಿಸುವ ಎರಡು ಸಾಮಾನ್ಯ ರೂಪಗಳಾಗಿವೆ.

ಹಿಂದೂ, ಯಾವುದೇ ವ್ಯಕ್ತಿಯು ಸಾಂಸ್ಕೃತಿಕವಾಗಿ, ಜನಾಂಗೀಯವಾಗಿ ಅಥವಾ ಧಾರ್ಮಿಕವಾಗಿ ತಮ್ಮನ್ನು ಭಾವಿಸುವಂತೆ ಹಿಂದೂ ಧರ್ಮದ ಅಂಶಗಳಿಗೆ ಅಂಟಿಕೊಂಡಿರುವಂತೆ ಸೂಚಿಸುತ್ತದೆ. ಇದು ಐತಿಹಾಸಿಕವಾಗಿ ದಕ್ಷಿಣ ಏಷ್ಯಾ ಸ್ಥಳೀಯ ಜನರನ್ನು ಒಂದು ಭೌಗೋಳಿಕ, ಸಾಂಸ್ಕೃತಿಕ ಅಥವಾ ಧಾರ್ಮಿಕ ಗುರುತಾಗಿ ಬಳಸಲಾಗಿದೆ.

ಸುಮಾರು ೧.೦೩ ಶತಕೋಟಿ, ಹಿಂದೂಗಳು, ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಂತರ ವಿಶ್ವದ ಮೂರನೇ ದೊಡ್ಡ ಗುಂಪಾಗಿದೆ. ಭಾರತದ ೨೦೧೧ ರ ಜನಗಣತಿಯ ಪ್ರಕಾರ, ಭಾರತದಲ್ಲಿ ಸುಮಾರು ೯೬೬ ಮಿಲಿಯನ್ ಹಿಂದೂಗಳು ವಾಸವಿದ್ದಾರೆ. ಭಾರತದ ನಂತರ ದೊಡ್ಡ ಹಿಂದೂ ಜನಸಂಖ್ಯೆಯಿರುವ ಮುಂದಿನ ೯ ದೇಶಗಳು (ಇಳಿಕೆ ಕ್ರಮದಲ್ಲಿ) : ನೇಪಾಳ, ಬಾಂಗ್ಲಾದೇಶ, ಇಂಡೋನೇಷ್ಯಾ, ಪಾಕಿಸ್ತಾನ, ಶ್ರೀಲಂಕಾ, ಯುನೈಟೆಡ್ ಸ್ಟೇಟ್ಸ್, ಮಲೇಷ್ಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಮ್ಯಾನ್ಮಾರ್. ಈ ಒಟ್ಟಿಗೆ ಲೆಕ್ಕಾಚಾರದಲ್ಲಿ ವಿಶ್ವದ ಹಿಂದೂ ಜನಸಂಖ್ಯೆಯು ೯೯% ಮತ್ತು ೨೦೧೦ ರಲ್ಲಿ ವಿಶ್ವದ ಉಳಿದ ರಾಷ್ಟ್ರಗಳು ಸೇರಿ ಸುಮಾರು ೬ ಲಕ್ಷ ಹಿಂದೂಗಳು ಹೊಂದಿತ್ತು.

"https://kn.wikipedia.org/w/index.php?title=ಹಿಂದೂ&oldid=1134245" ಇಂದ ಪಡೆಯಲ್ಪಟ್ಟಿದೆ