ದೀಪಾವಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದೀಪಾವಳಿ
ದೀಪಾವಳಿ
ಹಬ್ಬದ ಸಂಕೇತವಾದ ದೀಪ
ಅಧಿಕೃತ ಹೆಸರು {{{official_name}}}
ಇತರ ಹೆಸರುಗಳು ದಿವಾಲಿ, ದೀಪಗಳ ಹಬ್ಬ
ಆಚರಿಸುವವರು ಹಿಂದೂ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಮತ್ತು ಭೌದ್ಧ ಧರ್ಮಗಳ ಅನುಯಾಯಿಗಳು
ರಜಾ ಪ್ರಕಾರ ಧಾರ್ಮಿಕ
ಪ್ರಾಮುಖ್ಯತೆ ವಿವಿಧ
ಆರಂಭ {{{begins}}}
ಮುಕ್ತಾಯ {{{ends}}}
ಆಚರಣೆ ದಿನ ಕಾರ್ತಿಕ ಮಾಸದ ಅಮಾವಾಸ್ಯೆಯ ಎರಡು ದಿನಗಳು ಮುಂಚೆ ಪ್ರಾರಂಭವಾಗಿ ಅದರ ಎರಡು ದಿನಗಳ ನಂತರ ಮುಗಿಯುತ್ತದೆ.
೨೦೦೬ರಲ್ಲಿ ದಿನಾಂಕ ಅಕ್ಟೋಬರ್ ೨೧
ಆಚರಣೆಗಳು ಮನೆಗಳ ದೀಪಾಲಂಕಾರ, ಪಟಾಕಿಗಳು, ಕಾಣಿಕೆಗಳು
ಆಚರಣೆ ವಿಧಿಗಳು ಪ್ರಾರ್ಥನೆ, ಪೂಜೆ
ಸಂಭಂದಿತ ಹಬ್ಬಗಳು {{{relatedto}}}

ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ಆಚರಿಸುವ ದಿನಗಳು[ಬದಲಾಯಿಸಿ]

ಪ್ರಾಮುಖ್ಯತೆ[ಬದಲಾಯಿಸಿ]

ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:

  • ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
  • ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
  • ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
  • ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
  • ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
  • ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿ ಯ ಸಂಕೇತವಗಿ ೧೬ ಗಣ-ಚರ್ಕವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.

ಆಚರಣೆ[ಬದಲಾಯಿಸಿ]

  • ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.
  • ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
  • ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
  • ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿ ಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.

ಸ್ವಾರಸ್ಯ[ಬದಲಾಯಿಸಿ]

ಅಕ್ಟೋಬರ್ ನ ಕೊನೆಯ ವಾರದಲ್ಲಿ ಅಂತರ್ಜಾಲದ ಶೋಧ ಯಂತ್ರವಾದ ಗೂಗಲ್ ನಲ್ಲಿ ಎರಡನೆ ಅತಿ ಹೆಚ್ಚು ಶೋಧಗಳು ದೀಪಾವಳಿಯ ಗ್ರೀಟಿಂಗ್ ಕಾರ್ಡ್ ಗಳಿಗಾಗಿ ನಡೆದವು!

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಬಿಬಿಸಿ ತಾಣದಲ್ಲಿ ದೀಪಾವಳಿಯ ಬಗ್ಗೆ ಮಾಹಿತಿ

"https://kn.wikipedia.org/w/index.php?title=ದೀಪಾವಳಿ&oldid=533113" ಇಂದ ಪಡೆಯಲ್ಪಟ್ಟಿದೆ