ವಿಕ್ರಮ ಶಕೆ
ವಿಕ್ರಮ ಶಕೆನೇಪಾಳದ ಅಥಿಕೃತ ಕ್ಯಾಲೆಂಡರ್.ಇದನ್ನು ಮಲಾವಿ ಸಾಮ್ರಾಜ್ಯದ ವಿಕ್ರಮಾದಿತ್ಯ ಎಂದು ಪ್ರಸಿದ್ಧನಾದ ಶತಕರ್ಣಿಕ ರಾಜನು ಪ್ರಾರಂಭಿಸಿದ.ಇದು ಸೌರಮಾನ ಪದ್ಧತಿಯಲ್ಲಿದೆ.ಇದು ಸಾಮಾನ್ಯ ಬಳಕೆಯಲ್ಲಿರುವ ಗ್ರೆಗೋರಿಯನ್ ಕ್ಯಾಲೆಂಡರಿಗಿಂತ ೫೬.೭ವರ್ಷ ಹಿಂದಿದೆ.ಬಳಕೆಯಲ್ಲಿರುವ ಅತ್ಯಂತ ಪ್ರಾಚೀನ ಶಕ ವರ್ಷ ಎಂದರೆ ವಿಕ್ರಮ ಶಕೆ. ಇದರ ಆರಂಭ ಕ್ರಿ.ಪೂ. 58. ಶಕ ವರ್ಷದ ಕಾಲಗಣನೆಯು ಕ್ರಿ.ಶ.78ರಿಂದ ಆರಂಭ ಆಗುತ್ತದೆ. 13ನೆಯ ಶತಮಾನದ ನಂತರ ಈ ಶಕ ವರ್ಷವೇ ಶಾಲೀವಾಹನ ಶಕೆ ಎನಿಸಿಕೊಂಡಿತು. ವಿಕ್ರಮಾದಿತ್ಯ ಶಕೆಯು ಭಾರತೀಯ ಶಕೆಯಾಗಿದೆ. ಇದನ್ನು ಕ್ರಿ.ಪೂ 58 ರಿಂದ ಎಣಿಸಲಾಗಿದೆ. ಈ ಶಕೆಯು ಶಾಲಿವಾಹನ ಶಕೆಯ ಆರಂಭಕ್ಕೆ 136 ವರ್ಷಗಳ ಮೊದಲು ಜಾರಿಯಲ್ಲಿತ್ತು . ಮಾನವ ಇತಿಹಾಸದಲ್ಲಿ ಐತಿಹಾಸಿಕ ವ್ಯಕ್ತಿಗಳ ಹೆಸರಿನ ಶಕೆಯಲ್ಲಿ ಬಳಸುವುದು ವಾಡಿಕೆ. ಈ ರೀತಿ ಬಳಕೆಗೆ ಬಂದ ಶಕೆಯಲ್ಲಿ ಇದು ಒಂದು. ಈ ಶಕೆಯು ಭಾರತವನ್ನು ಆಳಿದ ಐತಿಹಾಸಿಕ ವ್ಯಕ್ತಿ ವಿಕ್ರಮಾದಿತ್ಯನ ಹೆಸರಿನೊಂದಿಗೆ ಪ್ರಾರಂಭವಾಯಿತು .
ಇದು ಭಾರತೀಯ ಉಪಖಂಡದಲ್ಲಿ ಐತಿಹಾಸಿಕವಾಗಿ ಬಳಸಲಾಗುವ ಹಿಂದೂ ಕ್ಯಾಲೆಂಡರ್ ಆಗಿದೆ. ಇದನ್ನು ಇನ್ನೂ ಹಲವಾರು ಭಾರತೀಯ ರಾಜ್ಯಗಳು ಮತ್ತು ನೇಪಾಳದಲ್ಲಿ ಬಳಸಲಾಗುತ್ತದೆ. ಇದು ಪ್ರತಿ ಸೌರ-ನಕ್ಷತ್ರ ವರ್ಷದಲ್ಲಿ ಹನ್ನೆರಡು ಚಂದ್ರ ತಿಂಗಳುಗಳನ್ನು ಬಳಸುವ ಚಾಂದ್ರಸೌರ ಕ್ಯಾಲೆಂಡರ್ ಆಗಿದೆ. ವಿಕ್ರಮ್ ಶಕ ಕ್ಯಾಲೆಂಡರ್‌ನ ವರ್ಷ ಲೆಕ್ಕಾಚಾರವು ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 57 ವರ್ಷಗಳು ಮುಂದಿದೆ.
ವಿಕ್ರಮ್ ಸಂವತ್ ನೇಪಾಳದ ಅಧಿಕೃತ ಕ್ಯಾಲೆಂಡರ್ ಆಗಿದೆ. ಮತ್ತು ಧಾರ್ಮಿಕ ದಿನಾಂಕಗಳಿಗೆ ಮಾತ್ರ ಬಳಸುವ ಭಾರತಕ್ಕಿಂತ ಭಿನ್ನವಾಗಿ, ವಿಕ್ರಮ್ ಸಂವತ್‌ನ ಸೌರ ಆವೃತ್ತಿಯು ಶಾಲಾ ಅವಧಿಗಳಿಂದ ಹಿಡಿದು ಕಾನೂನು ಒಪ್ಪಂದಗಳವರೆಗೆ ಮತ್ತು ಯಾವುದೇ ಅಧಿಕೃತ ಕಾರ್ಯಕ್ರಮಗಳವರೆಗೆ ಎಲ್ಲದಕ್ಕೂ ಬಳಸಲಾಗುವ ಅಧಿಕೃತ ಕ್ಯಾಲೆಂಡರ್ ಆಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Kyoto University Gregorian – Saka – Vikrami Calendar Converter Tool, version 3.14, Prof. Michio Yano and M. Fushimi. For Kartikadi Vikram used in North India to AD, select Try,Vikram Purnimanta.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |