ರಾವಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ರಾವಣ
Ravi Varma-Ravana Sita Jathayu.jpg
EthnicLegend, thamizhan
ಬಿರುದುಗಳುಲಂಕೆಯ ಅರಸ
ಪೂರ್ವಾಧಿಕಾರಿಕುಬೇರ
ಉತ್ತರಾಧಿಕಾರಿವಿಭೀಷಣ
ಪಟ್ಟದರಸಿಮಂಡೋದರಿ, ಧ್ಯಾನಮಾಲಿನಿ
ಮಕ್ಕಳುಇಂದ್ರಜಿತು
Yohmoththa
ಅತಿಕಾಯ
ಅಕ್ಷಯ ಕುಮಾರ
ದೇವಾಂತಕ
ನರಾಂತಕ
ತ್ರಿಶಿರ
ಮಂಥ
ತಂದೆವಿಶ್ರಾವಸ್
ತಾಯಿಕೈಕೇಸಿ
ಧಾರ್ಮಿಕ ನಂಬಿಕೆಗಳುಶೈವ ಪಂಥ
ಹಿತ್ತಾಳೆಯ ರಥದಲ್ಲಿ ರಾವಣ, ಸಿಯರ್ಸೋಲ್ ರಾಜ್ಬರಿ, ಪಶ್ಚಿಮ ಬಂಗಾಳ, ಭಾರತ.

ರಾವಣ ರಾಮಾಯಣದಲ್ಲಿ ಲಂಕೆಯಲ್ಲಿದ್ದ ರಾಕ್ಷಸ ರಾಜ. ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದು, ಸಾಮಾನ್ಯ ಮನುಷ್ಯರಿಂದ ಮಾತ್ರ ಸಾಯುವೆನೆಂಬುದೇ ಆ ವರ. ರಾವಣನ ತಂದೆ ವಿಶ್ರವಸ್ ಎಂಬ ಋಷಿ. ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕ ಕಂಟಕನಾಗಿ ಪರಿಣಮಿಸುತ್ತಾನೆ. ಇವನು ಶಿವನ ಪರಮ ಭಕ್ತನು ಹೌದು. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ರಾವಣ ಲಂಕೆಯ ರಾಜನಾದುದರಿಂದ ಇವನನ್ನು 'ಲಂಕೇಶ'ನೆಂದು ಕರೆಯುವರು. ಇವನಿಗೆ ಇಬ್ಬರು ತಂಗಿಯರು -ಶೂರ್ಪನಖಿ ಮತ್ತು ಲಂಕಿಣಿ, ಇಬ್ಬರು ತಮ್ಮಂದಿರು -ಕುಂಭಕರ್ಣ ಮತ್ತು ವಿಭೀಷಣ. ರಾವಣ ತಂಗಿ ಶೂರ್ಪನಖಿಗೆ ರಾಮ ಮತ್ತು ಲಕ್ಷ್ಮಣರು ಅವಮಾನ ಮಾಡಿದರೆಂದು ಪರಿಭಾವಿಸಿ ತಂಗಿಯ ಗೌರವ ಉಳಿಸಲು ರಾಮನ ಧರ್ಮಪತ್ನಿ ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟು, ಅವಳ ಮೋಹಕ್ಕೆ ಸಿಲುಕಿ ಮನವೊಲಿಸಲಾಗದೆ ಸೋಲುತ್ತಾನೆ. ನಂತರ ರಾಮನಿಂದ ಹತನಾಗುತ್ತಾನೆ.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]


ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ರಾವಣ&oldid=1065084" ಇಂದ ಪಡೆಯಲ್ಪಟ್ಟಿದೆ