ಶೂರ್ಪನಖಿ

ವಿಕಿಪೀಡಿಯ ಇಂದ
Jump to navigation Jump to search
ಚಿತ್ರದ ಕೆಳ ಬಲ ಬದಿಯಲ್ಲಿ ಲಕ್ಶ್ಮಣನು ಶೂರ್ಪನಖಿಯ ಮೂಗು ಕತ್ತರಿಸುವ ದೃಶ್ಯವಿದೆ

ಶೂರ್ಪನಖಿ ರಾವಣನ ಸಹೋದರಿ. ವಾಲ್ಮೀಕಿ ಯ ಅನುಸಾರ ರಾಮಾಯಣದ ಎಲ್ಲಾ ಘಟನೆಗಳಗೆ ಮೂಲ ಪ್ರೇರಣೆಯ ಎರಡು ಪಾತ್ರಗಳಲ್ಲಿ ಒಬ್ಬಳು. ಇನ್ನೊಬ್ಬಳು ಕೈಕೇಯಿ ರಾಮಾಯಣದ ಅನುಸಾರ ಶೂರ್ಪನಖಿಯನ್ನು ದುಷ್ಟಬುದ್ಧಿ ಎಂಬ ರಾಕ್ಷಸನಿಗೆ ಮದುವೆ ಮಾಡಿಕೊಡಲಗಿತ್ತು. ದುಷ್ಟಬುದ್ದಿಯನ್ನು ರಾವಣ ಕೊಲ್ಲಿಸಿದ ನಂತರ ಅಣ್ಣನ ಮೇಲೆ ಸಿಟ್ಟಾಗಿ ಶೂರ್ಪನಖಿ ದಂಡಕಾರಣ್ಯ ದ ಕಾಡುಗಳಲ್ಲಿ ತಿರುಗಾಡುತ್ತಿದ್ದಳು. ಹೀಗೆ ತಿರುಗಾಡುತ್ತಿದ್ದಾಗ ರಾಮನನ್ನು ಕಂಡು ಮೋಹಿಸಿ ಮದುವೆಯಾಗಲು ಪೀಡಿಸುತ್ತಾಳೆ.ರಾಮನು ಮದುವೆಯಾಗಲು ಒಪ್ಪದೆ ತಮ್ಮ ಲಕ್ಷ್ಮಣನಲ್ಲಿಗೆ ಕಳುಹಿಸುತ್ತಾನೆ.ಅವನೂ ಒಪ್ಪದಿದ್ದಾಗ ಸಿಟ್ಟಾಗಿ ಸೀತೆಯ ಮೇಲೆ ಏರಿ ಹೋಗುತ್ತಾಳೆ. ಇದನ್ನು ತಡೆದ ಲಕ್ಷಣ ಶೂರ್ಪನಖಿಯ ಮೂಗು ಕತ್ತರಿಸುತ್ತಾನೆ. ಆಪಮಾನ ತಾಳಲಾಗದ ಶೂರ್ಪನಖಿ ಅಣ್ಣ ಖರಾಸುರನಲ್ಲಿಗೆ ಹೋಗಿ ದೂರು ಕೊಡುತ್ತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ದ್ಧ ಮಾಡಿ ಮಡಿಯುತ್ತಾನೆ. ಅಲ್ಲಿಂದ ನೇರ ಶೂರ್ಪನಖಿ ತನ್ನ ಅಣ್ಣ ರಾವಣನಲ್ಲಿ ದೂರು ಕೊಡಲು ಲಂಕೆಗೆ ಹೋಗುತ್ತಾಳೆ.ರಾವಣನಲ್ಲಿ ತನ್ನ ಬವಣೆಯನ್ನು ಹೇಳಿಕೊಂಡು ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ ರಾವಣರ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಶೂರ್ಪನಖಿ&oldid=407070" ಇಂದ ಪಡೆಯಲ್ಪಟ್ಟಿದೆ