ರಘುವಂಶಮ್

ವಿಕಿಪೀಡಿಯ ಇಂದ
(ರಘುವಂಶ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಘುವಂಶ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ. ೧೯ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯ ರಘು, ದಶರಥ, ರಾಮ ಸೇರಿದಂತೆ ದಿಲೀಪನಿಂದ ಹಿಡಿದು ಅಗ್ನಿವರ್ಣನವರೆಗೆ ಬರುವ ರಘುವಂಶದ ರಾಜರ ಕಥೆಗಳನ್ನು ಒಳಗೊಂಡಿದೆ. ಹತ್ತನೇ ಸರ್ಗದಿಂದ ಹದಿನೈದನೇ ಸರ್ಗದವರೆಗೆ ರಾಮನ ಕಥೆಯನ್ನು ವರ್ಣಿಸಲಾಗಿದೆ. ಅನಂತರವೂ ಆಯಾಯಾ ಕಾಲದ ರಾಮನ ವಂಶದ ರಾಜರುಗಳ ಚರಿತ್ರೆಯನ್ನು ಹೇಳಲಾಗಿದೆ.ಕೊನೆಯ ಸರ್ಗವು ಅಗ್ನಿವರ್ಣನ ರಾಜ್ಯಾಭಿಷೇಕದೊಂದಿಗೆ ಮುಗಿಯುತ್ತದೆ. ಕಾಳಿದಾಸನು ಅಗ್ನಿವರ್ಣನ ನಂತರದ ರಾಜರುಗಳ ವಿವರಗಳನ್ನೂ ಬರೆಯಲು ಬಯಸಿದ್ದರೂ ಆತ ಮೃತ್ಯುವಶವಾದನೆಂದು ಕೆಲವರು ಅಭಿಪ್ರಾಯವಿದೆ. ಮತ್ತೆ ಕೆಲವರು ಕಾಳಿದಾಸ ಬರೆದ ಮುಂದಿನ ಕಥೆ ಅನುಪಲಬ್ಧವೆಂದು ಭಾವಿಸುತ್ತಾರೆ.ರಘುವಂಶದಲ್ಲಿ ಬರುವ ರಾಜರುಗಳ ವಿವರಗಳಿಗೂ ರಾಮಾಯಣದ ವಿವರಗಳಿಗೂ ಸಾಕಷ್ಟು ಭೇದಗಳಿವೆ. ಆದರೆ ವಾಯುಪುರಾಣದ ವರ್ಣನೆಗಳು ರಘುವಂಶದ ವರ್ಣನೆಗಳಿಗೆ ಸದೃಶವಾಗಿರುವುದನ್ನು ಗಮನಿಸಬಹುದು.

      ಇಪ್ಪತ್ತೊಂದು ಸರ್ಗಗಳಲ್ಲಿ ರಘುವಂಶದ ರಾಜರುಗಳ ಹೆಸರುಗಳು ಹೀಗಿವೆ:


 1. ದಿಲೀಪ
 2. ರಘು
 3. ಅಜ
 4. ದಶರಥ
 5. ರಾಮ
 6. ಕುಶ
 7. ಅತಿಥಿ
 8. ನಿಷಧ
 9. ನಲ
 10. ನಭ
 1. ಪುಂಡರೀಕ
 2. ಕ್ಷೇಮಧನ್ವಾ
 3. ದೇವಾನೀಕ
 4. ಅಹೀನಗು
 5. ಪಾರಿಯಾತ್ರ
 6. ಶಿಲ
 7. ಉನ್ನಾಭ
 8. ವಜ್ರನಾಭ
 9. ಶಂಖಣ
 10. ವ್ಯುಷಿತಾಶ್ವ
 1. ವಿಶ್ವಸಹ
 2. ಹಿರಣ್ಯನಾಭ
 3. ಕೌಸಲ್ಯ
 4. ಬ್ರಹ್ಮಿಷ್ಠ
 5. ಪುತ್ರ
 6. ಪುಷ್ಯ
 7. ಧೃವಸಂಧಿ
 8. ಸುದರ್ಶನ
 9. ಅಗ್ನಿವರ್ಣ
"https://kn.wikipedia.org/w/index.php?title=ರಘುವಂಶಮ್&oldid=486373" ಇಂದ ಪಡೆಯಲ್ಪಟ್ಟಿದೆ