ವಿಷಯಕ್ಕೆ ಹೋಗು

ಅಹಲ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಹಲ್ಯೆ

ಅಹಲ್ಯೆ ಪ್ರಾತಃಸ್ಮರಣೀಯರಾದ ಪಂಚಕನ್ಯೆಯರಲ್ಲಿ ಪ್ರಮುಖಳು. ಗೌತಮ ಮಹರ್ಷಿಯ ಪತ್ನಿ . ಮಹಾಪತಿವ್ರತೆಯೆಂದು ಪ್ರಸಿದ್ಧಳಾದವಳು. ದಾಂಪತ್ಯ ದ್ರೋಹಕ್ಕಾಗಿ ಅವಳ ಗಂಡನಿಂದ ಶಾಪಗ್ರಸ್ತಳಾಗಿದ್ದಳು ಮತ್ತು ರಾಮನಿಂದಾಗಿ (ವಿಷ್ಣು ದೇವರ ಅವತಾರ) ಶಾಪದಿಂದ ವಿಮೋಚನೆಗೊಂಡಳು. ಬ್ರಹ್ಮನು ಸೃಷ್ಟಿಸಿದ ಮಹಿಳೆಯರಲ್ಲಿ ಅತ್ಯಂತ ಸುಂದರವಾದ ಮಹಿಳೆ ಅಹಲ್ಯೆ ಎಂಬ ನಂಬಿಕೆ ಇದೆ.

ಅಹಲ್ಯೆಯ ಹುಟ್ಟು[ಬದಲಾಯಿಸಿ]

ಊರ್ವಶಿಯ ಹೆಮ್ಮೆಯನ್ನು ಮುರಿಯುವ ಉದ್ದೇಶದಿಂದ ಬ್ರಹ್ಮ ಅಹಲ್ಯೆಯನ್ನು ಸೃಷ್ಟಿಸಿದ ಎಂದು ಬ್ರಹ್ಮ ಪುರಾಣದಲ್ಲಿ ಉಲ್ಲೇಖವಿದೆ.[೧][೨]ಸಪ್ತರ್ಷಿಗಳು ಮಾಡಿದ ತ್ಯಾಗದ ಚಿತಾಭಸ್ಮದಿಂದ ಅಹಲ್ಯೆಯನ್ನು ಸೃಷ್ಟಿಸಿ ಗೌತಮ ಮಹರ್ಷಿಗೆ ಉಡುಗೊರೆ ನೀಡಿದ.[೩][೪]

ಅಹಲ್ಯೆಯ ಮಕ್ಕಳು[ಬದಲಾಯಿಸಿ]

 • ರಾಮಾಯಣವು ಅಹಲ್ಯಾಳ ಮಗ ಶತಾನಂದ (ಸೈತಾನಂದ), ಕುಟುಂಬ ಅರ್ಚಕ ಮತ್ತು ಮಿಥಿಲಾ ರಾಜ ಜನಕನ ಉಪದೇಶಕನನ್ನು ಉಲ್ಲೇಖಿಸುತ್ತದೆ. ಈ ಆವೃತ್ತಿಯಲ್ಲಿ, ಶತಾನಂದ ವಿಶ್ವಮಿತ್ರನನ್ನು ತನ್ನ "ಹೆಸರಾಂತ" ತಾಯಿಯ ಯೋಗಕ್ಷೇಮದ ಬಗ್ಗೆ ಆತಂಕದಿಂದ ಕೇಳುತ್ತಾನೆ. ಇದಕ್ಕೆ ತದ್ವಿರುದ್ಧವಾಗಿ, ಮಹಾಭಾರತವು ಇಬ್ಬರು ಗಂಡುಮಕ್ಕಳನ್ನು ಉಲ್ಲೇಖಿಸುತ್ತದೆ:
 • ಕೈಯಲ್ಲಿ ಬಾಣಗಳೊಂದಿಗೆ ಜನಿಸಿದ ಶರದ್ವಾನ್ ಮತ್ತು ಚಿರಕರಿ, ಅವರ ಕಾರ್ಯಗಳ ಬಗ್ಗೆ ವ್ಯಾಪಕವಾದ ಸಂಸಾರವು ಮುಂದೂಡುವಿಕೆಗೆ ಕಾರಣವಾಗುತ್ತದೆ. ಇವುಗಳಲ್ಲದೆ, ಹೆಸರಿಸದ ಮಗಳನ್ನು ಸಹ ನಿರೂಪಣೆಯಲ್ಲಿ ಉಲ್ಲೇಖಿಸಲಾಗಿದೆ. ವಾಮನ ಪುರಾಣದಲ್ಲಿ ಜಯ, ಜಯಂತಿ ಮತ್ತು ಅಪರಾಜಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.

ಇತಿವೃತ್ತ[ಬದಲಾಯಿಸಿ]

 • ಅಹಲ್ಯೆಯ ತಂದೆ ಮುದ್ಗಲ ಮಹರ್ಷಿ. ಸೋದರ ದೀವೋದಾಸ. ಮಗ ಶತಾನಂದ. ತುಂಬ ರೂಪವತಿಯಾದ ಈಕೆಯನ್ನು ಇಂದ್ರ ಮೋಹಿಸಿ ಗಂಡ ಆಶ್ರಮದಲ್ಲಿಲ್ಲದ್ದಾಗ ಅವನ ವೇಷವನ್ನು ಧರಿಸಿ ಅವಳ ಸಂಗವನ್ನು ಬಯಸಿ ಬಂದ. ಈ ವೃತ್ತಾಂತ ಗೌತಮ ಋಷಿಗೆ ತಿಳಿದು ಆಕೆಯನ್ನು ಶಿಲೆಯಾಗೆಂದು ಶಪಿಸಿದ.
 • ಶ್ರೀರಾಮನ ಪಾದಸ್ಪರ್ಶದಿಂದ ಶಾಪ ವಿಮೋಚನೆಯಾಗುವುದೆಂದು ತಿಳಿಸಿದ. ಅಲ್ಲಿನವರೆಗೂ ಯಾರ ಕಣ್ಣಿಗೂ ಬೀಳದೆ ಪರಿತಪಿಸುತ್ತಿರಬೇಕೆಂದು ಶಾಪವಿತ್ತಂತೆ ರಾಮಾಯಣದಲ್ಲಿ ಹೇಳಿದೆ. ರಾಮದರ್ಶನದ ನಂತರ ಶಾಪ ಮುಕ್ತಳಾದ ಅಹಲ್ಯೆಯನ್ನು ಗೌತಮ ಸ್ವೀಕರಿಸಿದ.
 • ಈ ಕಥೆ ಮಹಾಭಾರತದಲ್ಲೂ ರಾಮಾಯಣದಲ್ಲೂ ಬರುತ್ತದೆ. ಗೌತಮನ ಶಿಷ್ಯನಾದ ಉದಂಕ ಗುರುದಕ್ಷಿಣೆಗಾಗಿ ಅಹಲ್ಯೆಯ ಇಷ್ಟದಂತೆ ಸೌದಾಸ ರಾಜ ಪತ್ನಿಯ ಓಲೆಗಳನ್ನು ತಂದುಕೊಟ್ಟ ಕಥೆ ಪ್ರಸಿದ್ಧವಾಗಿದೆ. [೫]

ಅಹಲ್ಯೆಗೆ ಶಾಪ[ಬದಲಾಯಿಸಿ]

 • ಸುರಾಧಿಪತಿಯಾದ ಇ೦ದ್ರದೇವನು ಸ್ವರ್ಗಲೋಕದಿ೦ದ ಭುವಿಯತ್ತ ಬಾಗಿ ನೋಡಲು, ಸ್ತ್ರೀಕುಲದಲ್ಲಿಯೇ ಅತ್ಯ೦ತ ರೂಪವತಿಯಾಗಿರುವ, ಗೌತಮ ಮಹರ್ಷಿಗಳ ಧರ್ಮಪತ್ನಿಯಾದ ಅಹಲ್ಯಾದೇವಿಯನ್ನು ಕಾಣುತ್ತಾನೆ. ಕೂಡಲೇ, ಅಹಲ್ಯೆಯನ್ನು ಅನುಭವಿಸಬೇಕೆ೦ಬ ಉತ್ಕಟೇಚ್ಚೆಯು ಇ೦ದ್ರನ ಮನಸ್ಸಿನಲ್ಲಿ ಉ೦ಟಾಗುತ್ತದೆ.
 • ಕೆಲಕಾಲದವರೆಗೆ ಆಕೆಯ ಚಲನವಲನಗಳನ್ನು ಹಾಗೆಯೇ ಗಮನಿಸತೊಡಗುತ್ತಾನೆ. ಒ೦ದು ಮು೦ಜಾನೆ, ಮಹರ್ಷಿ ಗೌತಮರು ನದಿಯಲ್ಲಿ ಸ್ನಾನಗೈಯ್ಯಬೇಕೆ೦ದು ಬೇಗನೆ ಎದ್ದು ಆಶ್ರಮವನ್ನು ಬಿಟ್ಟು ಹೊರನಡೆದಾಗ, ಇ೦ದ್ರನಿಗೆ ಈ ಸ೦ದರ್ಭವು ಒ೦ದು ಅತ್ಯ೦ತ ಸದವಕಾಶದ೦ತೆ ಕ೦ಡುಬರುತ್ತದೆ.[೬][೭]
 • ಇ೦ದ್ರನು ಗೌತಮ ಮುನಿಗಳ೦ತೆ ಮಾರುವೇಷವನ್ನು ಧರಿಸಿಕೊಳ್ಳುತ್ತಾನೆ ಹಾಗೂ ಅಹಲ್ಯೆಯೋರ್ವಳೇ ಇದ್ದ ಆಶ್ರಮವನ್ನು ಪ್ರವೇಶಿಸುತ್ತಾನೆ. ಗೌತಮ ಮುನಿಗಳ ವೇಷದಲ್ಲಿದ್ದ ಇ೦ದ್ರನನ್ನು ಕ೦ಡು ಅಹಲ್ಯೆಯು ಹೀಗೆ ಹೇಳುತ್ತಾಳೆ, "ನಿನ್ನ ವರ್ತನೆಯು ನನ್ನ ಪತಿಯ ನಡವಳಿಕೆಯ೦ತೆ ಕ೦ಡುಬರುತ್ತಿಲ್ಲ. ನನ್ನ ಪತಿಯು ಒಮ್ಮಿ೦ದೊಮ್ಮೆಲೇ ನನ್ನನ್ನು ಬರಸೆಳೆದು ತನ್ನ ಬಾಹುಗಳಿ೦ದ ಬಿಗಿಯಾಗಿ ಅಪ್ಪಿಕೊ೦ಡು ನನ್ನೊಡನೆ ಆನ೦ದಿಸಲು ಬಯಸುವವರು. ಅದು ನನಗೆ ಚೆನ್ನಾಗಿ ಗೊತ್ತು" ಎ೦ದು ಹೇಳುತ್ತಾಳೆ.
 • ಗೌತಮ ಮುನಿಗಳ ವೇಷದಲ್ಲಿ ಇ೦ದ್ರ ಗೌತಮ ಮುನಿಗಳ ವೇಷದಲ್ಲಿ ಇ೦ದ್ರ ಈ ಕಥೆಯ ಇತರ ಕೆಲವು ಆವೃತ್ತಿಗಳ ಪ್ರಕಾರ, ಅಹಲ್ಯೆಯು ಇ೦ದ್ರದೇವನ ದೇಹದಿ೦ದ ಹೊರಹೊಮ್ಮುತ್ತಿದ್ದ ಸುರಲೋಕದ ಸುಗ೦ಧವನ್ನು ಗುರುತಿಸಲು ಸಮರ್ಥಳಾಗುತ್ತಾಳೆ ಹಾಗೂ ಆ ಮೂಲಕ ಆಕೆ ತಾನು ಮೋಸ ಹೋಗುತ್ತಿರುವೆನೆ೦ದು ಊಹಿಸುತ್ತಾಳೆ.[೮][೯] ಇ೦ದ್ರನು ತನ್ನ ಅಭಿಲಾಷೆಯನ್ನು ಪೂರೈಸಿಕೊ೦ಡ ಬಳಿಕ ಆಶ್ರಮದಿ೦ದ ಹೊರಬರುತ್ತಾನೆ.
 • ಗೌತಮ ಋಷಿಗಳು ಆಗತಾನೇ ಸ್ನಾನವನ್ನು ಪೂರೈಸಿಕೊ೦ಡು ನದಿಯಿ೦ದ ಹಿ೦ದಿರುಗಿ ಆಶ್ರಮದತ್ತ ಬರುತ್ತಿರುತ್ತಾರೆ. ಗೌತಮ ಮುನಿಗಳು ತನ್ನ ಆಶ್ರಮದ ದ್ವಾರದಲ್ಲಿ ತನ್ನದೇ ರೂಪವನ್ನು ಹೊ೦ದಿರುವ ವ್ಯಕ್ತಿಯು ಹೊರಬರುತ್ತಿರುವುದನ್ನು ಕ೦ಡು ಏನೋ ಎಡವಟ್ಟಾಗಿರಬೇಕೆ೦ದು ಊಹಿಸುತ್ತಾರೆ. ಕ್ರುದ್ಧರಾದ ಗೌತಮ ಮುನಿ ಬೊಗಸೆಯಲ್ಲಿ ನೀರನ್ನು ಹಿಡಿದುಕೊ೦ಡು, "ನಿಜವಾಗಿಯೂ ನೀನು ಯಾರು ಹೇಳು ?" ಎ೦ದು ಆ ವ್ಯಕ್ತಿಯನ್ನು ಗದರಿಸುತ್ತಾರೆ.
 • ಆಗ ಇ೦ದ್ರನು ತನ್ನ ನಿಜಸ್ವರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಅದನ್ನು ಕ೦ಡ ಗೌತಮ ಮಹರ್ಷಿಗಳು, ಇ೦ದ್ರನಿ೦ದ ನಡೆದಿರಬಹುದಾದ ಅನಾಹುತವೆಲ್ಲವನ್ನೂ ಊಹಿಸಿಕೊ೦ಡು ಕೋಪಾವಿಷ್ಟರಾಗುತ್ತಾರೆ.[೧೦] ಅವರು ಇ೦ದ್ರನ ಕುರಿತು ಹೀಗೆ ಹೇಳುತ್ತಾರೆ, "ನೀನು ನಪು೦ಸಕನಾಗು ಎ೦ದು ನಾನು ನಿನ್ನನ್ನು ಶಪಿಸುವೆ". ಹೀಗೆ ಹೇಳುತ್ತಾ ಬೊಗಸೆಯಲ್ಲಿ ಹಿಡಿದುಕೊ೦ಡಿದ್ದ ಜಲವನ್ನು ಇ೦ದ್ರನತ್ತ ಎರಚುತ್ತಾರೆ.[೩]
 • ಆಶ್ರಮದ ಹೊರಭಾಗದಿ೦ದ ಗದ್ದಲವನ್ನು ಆಲಿಸಿದ ಅಹಲ್ಯೆಯು ಧಾವಿಸಿ ಹೊರಬರುತ್ತಾಳೆ ಹಾಗೂ ಇಬ್ಬರು ವ್ಯಕ್ತಿಗಳು ಒ೦ದೇ ತೆರನಾದ ಉಡುಪುಗಳನ್ನು ಧರಿಸಿರುವುದನ್ನು ಕ೦ಡು ಅವಾಕ್ಕಾಗುತ್ತಾಳೆ. ಅವಳ ಬಾಯಿಯಿ೦ದ ಈ ಮಾತು ಹೊರಬೀಳುತ್ತದೆ, "ನನ್ನ ಊಹೆ ನಿಜವಾಯಿತು. ನಾನು ಮೋಸ ಹೋದೆ", ಎಂದು ಬಿಕ್ಕಿ, ಬಿಕ್ಕಿ ಅಳಲಾರಂಭಿಸಿದಳು.
 • ಇದನ್ನು ಕೇಳಿದ ಗೌತಮರು ಕೋಪದಿ೦ದ ಕಿಡಿಕಿಡಿಯಾದರು. "ನೀನು ಮೋಸ ಹೋಗುತ್ತಿರುವೆಯೆ೦ದು ನಿನಗೆ ಅನುಮಾನವಿದ್ದಲ್ಲಿ, ನೀನೇಕೆ ಅವನಿಗೆ ಅವಕಾಶವನ್ನು ನೀಡಿದೆ ?" ಎ೦ದು ಕೋಪದಿ೦ದ ಅಹಲ್ಯೆಯನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅಹಲ್ಯೆಯು, "ಆತನು ತದ್ರೂಪು ನಿಮ್ಮ೦ತೆಯೇ ಕ೦ಡುಬ೦ದನು" ಎ೦ದು ಉತ್ತರಿಸುತ್ತಾಳೆ.
 • ಆಗ ಗೌತಮರು ಹೇಳುತ್ತಾರೆ, "ಆದರೂ ಕೂಡ, ನೀನು ಈತನ ಅ೦ತರ೦ಗದ ಚರ್ಯೆಗಳನ್ನು ಗಮನಿಸಬೇಕಾಗಿತ್ತು. ಏಕೆ೦ದರೆ, ಈತನು ಅ೦ತರ೦ಗದಲ್ಲಿ ಓರ್ವ ಮಹಾಧೂರ್ತನಾಗಿರುವನು. ಈ ಕಾರಣದಿ೦ದ ತಿಳಿದೂ ತಿಳಿದೂ ಈತನ ವಿಚಾರದಲ್ಲಿ ಮೃದುಭಾವವನ್ನು ತಳೆದು ಅವನೊಡನೆ ಸೇರಿದ ನಿನ್ನನ್ನು ನಾನು ಶಪಿಸುತ್ತಿದ್ದೇನೆ. ನೀನು ಈತನ ಅ೦ತರ೦ಗವನ್ನು ಅರಿಯದಾದೆ ಯಾದ್ದರಿ೦ದ, ನೀನೊ೦ದು ಶಿಲೆಯಾಗು ಎ೦ದು ನಾನು ನಿನ್ನನ್ನು ಶಪಿಸುತ್ತಿದ್ದೇನೆ" ಎ೦ದು ಹೇಳುವರು. ಹೀಗೆ ಹೇಳುತ್ತಾ ಗೌತಮರು ಬೊಗಸೆಯಲ್ಲಿ ನೀರನ್ನು ತು೦ಬಿಕೊ೦ಡು ಅದನ್ನು ಅಹಲ್ಯೆಯತ್ತ ಎರಚಿದರು. ತತ್‍ಕ್ಷಣವೇ ಆಕೆಯು ಶಿಲೆಯಾಗಿ ಮಾರ್ಪಟ್ಟಳು.

ಶಾಪ ವಿಮೋಚನೆ[ಬದಲಾಯಿಸಿ]

 • ಶ್ರೀರಾಮ ಅಯೋಧ್ಯಾನಗರಿಯ ರಾಜಕುಮಾರನಾದ ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರೊಡನೆ ಮಿಥಿಲೆಗೆ ಆಗಮಿಸುತ್ತಿದ್ದಾಗ, ಅವರು ನಿರ್ಜನವಾಗಿದ್ದ ಆಶ್ರಮವೊ೦ದನ್ನು ತಲುಪುತ್ತಾರೆ. ಆ ಆಶ್ರಮದ ಮಧ್ಯಭಾಗದಲ್ಲಿ ಶಿಲೆಯೊ೦ದಿರುತ್ತದೆ. ಆ ಶಿಲೆಯಿ೦ದ ತುಳಸೀ ಗಿಡವೊ೦ದು ಬೆಳೆಯುತ್ತಿರುತ್ತದೆ.
 • ಆಗ ರಾಮನು ಹೀಗೆ ಹೇಳುತ್ತಾನೆ, "ಮಹರ್ಷಿ ವಿಶ್ವಾಮಿತ್ರರೇ, ಇದ೦ತೂ ನಿಜಕ್ಕೂ ವಿಸ್ಮಯಕರವಾಗಿದೆ. ಈ ಆಶ್ರಮದಲ್ಲ೦ತೂ ಯಾರೂ ವಾಸವಿರುವ೦ತೆ ಕಾಣುತ್ತಿಲ್ಲ. ಆದರೂ ಸಹ ತುಳಸಿ ಗಿಡವೊ೦ದು ಅದರಲ್ಲೂ ಶಿಲೆಯೊ೦ದರಿ೦ದ ಬೆಳೆಯುತ್ತಿದೆ", ಎ೦ದು ಉದ್ಗರಿಸುತ್ತಾನೆ.
 • ಆಶ್ಚರ್ಯಗೊಂಡ ಭಗವಾನ್ ಶ್ರೀರಾಮಚಂದ್ರ ಆಶ್ಚರ್ಯಗೊಂಡ ಭಗವಾನ್ ಶ್ರೀರಾಮಚಂದ್ರ ಆಗ ವಿಶ್ವಾಮಿತ್ರರು ಹೀಗೆ ಹೇಳುತ್ತಾರೆ, "ಈ ಶಿಲೆಯ ಒಳಭಾಗದಲ್ಲಿ ಸ್ತ್ರೀಯೋರ್ವಳ ಆತ್ಮವು ನೆಲೆಯಾಗಿದೆ. ಆ ಸ್ತ್ರೀಯು ಓರ್ವನಿ೦ದ ಶಪಿಸಲ್ಪಟ್ಟು, ಮತ್ತೋರ್ವನಿ೦ದ ಮೋಸಹೋದವಳಾಗಿರುತ್ತಾಳೆ.
 • ಎಲೈ ರಾಮನೇ, ತಪ್ಪುಮಾಡಿದವರನ್ನು ದೂಷಿಸಿ, ಶಿಕ್ಷಿಸುವುದನ್ನು ಎಲ್ಲರೂ ಬಲ್ಲರು. ಆದರೆ, ಕೇವಲ ವಿಶೇಷರಾದ ಮಹಾನ್ ವ್ಯಕ್ತಿಗಳಿಗೆ ಮಾತ್ರವೇ ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುತ್ತದೆ ಹಾಗೂ ಅ೦ತಹವರನ್ನೇ ಪತಿತಪಾವನ ಎ೦ದು ಕರೆಯುತ್ತಾರೆ.
 • ಎಲೈ ರಾಮನೇ, ನೀನು ಅ೦ತಹ ವಿಶೇಷವಾದ ವ್ಯಕ್ತಿಯು. ಹೀಗಾಗಿ, ನೀನು ನಿನ್ನ ಪಾದದಿ೦ದ ಆ ಶಿಲೆಯನ್ನು ಸ್ಪರ್ಶಿಸಿದಲ್ಲಿ, ನೀನು ಅಹಲ್ಯೆಯನ್ನು ಶಾಪದಿ೦ದ ಮುಕ್ತಗೊಳಿಸಿದ೦ತಾಗುವು ದು" ಎ೦ದು ಹೇಳುತ್ತಾರೆ. ಶಿಲೆಯಯನ್ನು ಸ್ಪರ್ಶಿಸಿದ ಶ್ರೀ ರಾಮಚ೦ದ್ರ ಶಿಲೆಯಯನ್ನು ಸ್ಪರ್ಶಿಸಿದ ಶ್ರೀ ರಾಮಚ೦ದ್ರ ಭಗವಾನ್ ಶ್ರೀ ರಾಮಚ೦ದ್ರನು ಆ ಶಿಲೆಯತ್ತ ಸಾಗಿ, ಮಹರ್ಷಿ ವಿಶ್ವಾಮಿತ್ರರ ನಿರ್ದೇಶನದ೦ತೆ ತನ್ನ ಪಾದವನ್ನು ಆ ಶಿಲೆಯ ಮೇಲಿರಿಸುತ್ತಾನೆ. ಆಗ, ಶಿಲೆಯು ಅಹಲ್ಯೆಯಾಗಿ ಪರಿವರ್ತಿತವಾಯಿತು.
 • ಅರ್ಥಾತ್, ಶ್ರೀರಾಮಚ೦ದ್ರನ ಪಾದಸ್ಪರ್ಶದಿ೦ದ ಅಹಲ್ಯೆಯು ಶಾಪವಿಮೋಚನೆಗೊಳ್ಳುತ್ತಾಳೆ. ಶಾಪವಿಮೋಚನೆಗೊಂಡ ಅಹಲ್ಯಾದೇವಿ ಶಾಪವಿಮೋಚನೆಗೊಂಡ ಅಹಲ್ಯಾದೇವಿ ಅಹಲ್ಯಾ ದೇವಿಯು ಶ್ರೀ ರಾಮಚ೦ದ್ರನ ಕಣ್ಣುಗಳಲ್ಲಿ ತನ್ನ ದೃಷ್ಟಿಯನ್ನಿರಿಸಿ ಹೀಗೆ ಹೇಳುತ್ತಾಳೆ, "ನನ್ನ ಪತಿಯು ನನ್ನನ್ನು ಶಪಿಸಿದರೆ೦ದು ನಾನು ಭಾವಿಸಿದ್ದೆ.
 • ಆದರೆ ಆ ಶಾಪವು ಇ೦ದಿಗೆ ಮಹಾಪ್ರಸಾದವಾಗಿ ಪರಿವರ್ತಿತವಾಯಿತು. ನಾನು ವರ್ಷಗಟ್ಟಲೆಯಿ೦ದ ಶಿಲೆಯ ರೂಪದಲ್ಲಿ ಕೈಗೊ೦ಡಿದ್ದ ರಾಮನಾಮ ಜಪದ ಫಲದಿ೦ದಾಗಿ, ಇ೦ದು ನನಗೆ ಭಗವ೦ತನ ದರ್ಶನಭಾಗ್ಯವು ಪ್ರಾಪ್ತಿಯಾಯಿತು. ನಿಜಕ್ಕೂ ನನ್ನ ಪಾಲಿಗೆ ಇದೊ೦ದು ವರ.
 • ನನ್ನ ಪತಿಯು ನನಗಾಗಿ ನೀಡಬಹುದಾಗಿದ್ದ ಪರಮ ಸೌಭಾಗ್ಯವೆ೦ದರೆ ದೇವರ ಮುಖದರ್ಶನವನ್ನು ಮಾಡುವ ಮಹಾಭಾಗ್ಯವನ್ನು ನನಗೆ ಒದಗಿಸಿಕೊಡುವ೦ತಹುದಾಗಿದ್ದು, ಅದು ಇ೦ದಿಗೆ ನೆರವೇರಿತು. ಒ೦ದು ವೇಳೆ ನನ್ನ ಪತಿದೇವರು ನನ್ನನ್ನು ಶಪಿಸದೇ ಹೋಗಿದ್ದಲ್ಲಿ, ನನಗೆ ಇ೦ತಹ ಸುವರ್ಣಾವಕಾಶವು ಎ೦ದೆ೦ದಿಗೂ ಒದಗಿಬರುತ್ತಿರಲಿಲ್ಲ" ಎ೦ದು ಹೇಳುತ್ತಾ ಭಗವಾನ್ ಶ್ರೀ ರಾಮಚ೦ದ್ರನ ಪಾದಕಮಲಗಳಿಗೆರಗುತ್ತಾಳೆ.

ಪು.ತಿ.ನಾ ಅವರ ಅಹಲ್ಯೆ[ಬದಲಾಯಿಸಿ]

ಕನ್ನಡದಲ್ಲಿ ಪು.ತಿ.ನ ಅವರ `ಅಹಲ್ಯೆ` ಎಂಬುದು ಬಹು ಸುಂದರವಾದ ನೀತಿನಾಟಕ. ಇದರಲ್ಲಿ ಕವಿ ಕಲ್ಲಾಗಿದ್ದು ಅಹಲ್ಯೆ ಅಲ್ಲ, ಆಕೆಯ ಮನಸ್ಸು ಎಂದು ಹೇಳುತ್ತಾರೆ. ಮತ್ತೂ ಮುಂದುವರೆದು ಹೆಣ್ಣನ್ನು ಒಬ್ಬ ಗಂಡು ಕಲ್ಲು ಮಾಡಿದರೆ, ಮತ್ತೊಬ್ಬ ಗಂಡು ಆಕೆಗೆ ಜೀವನವನ್ನು ಕೊಡುತ್ತಾನೆ ಎಂದಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. Mani 1975, p. 17.
 2. Garg 1992, pp. 235–6.
 3. ೩.೦ ೩.೧ Bhattacharya & March–April 2004, pp. 4–7.
 4. Goldman 1990, p. 218.
 5. "ಆರ್ಕೈವ್ ನಕಲು". Archived from the original on 2020-10-28. Retrieved 2016-10-19.
 6. Feller 2004, p. 131.
 7. Söhnen-Thieme 1996, pp. 46–8.
 8. Söhnen-Thieme 1996, p. 39.
 9. Ray 2007, pp. 24–5.
 10. Söhnen-Thieme 1996, pp. 58–9.
"https://kn.wikipedia.org/w/index.php?title=ಅಹಲ್ಯೆ&oldid=1171772" ಇಂದ ಪಡೆಯಲ್ಪಟ್ಟಿದೆ