ಊರ್ಮಿಳಾ

ವಿಕಿಪೀಡಿಯ ಇಂದ
Jump to navigation Jump to search

ಊರ್ಮಿಳೆ ರಾಮಾಯಣದ ಪ್ರಕಾರ ಮಿಥಿಲೆಯ ರಾಜ ಜನಕ ಹಾಗೂ ರಾಣಿ ಸುನೈನಾಳ ಪುತ್ರಿ ಮತ್ತು ಸೀತೆಯ ತಂಗಿ.

ಇತಿವೃತ್ತ[ಬದಲಾಯಿಸಿ]

  • ತಂದೆಯ ವಚನದಂತೆ ಶ್ರೀರಾಮಚಂದ್ರನು ವನವಾಸಕ್ಕೆಂದು ತನ್ನ ಮಡದಿಯ ಜೊತೆ ಕಾಡಿಗೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯ ಪತಿ ಲಕ್ಷ್ಮಣನು ಸಹ ಕಾಡಿಗೆ ಹೋಗಲು ಇಚ್ಛಿಸಿದಾಗ ಶ್ರೀರಾಮಚಂದ್ರನು ತನ್ನ ನಾದಿನಿಯಾದ ಊರ್ಮಿಳೆಯ ಅಂತರಾಳದಲ್ಲಿನ ವ್ಯಾಕುಲತೆಯನ್ನು ಅರಿಯುವಲ್ಲಿ ವಿಫಲನಾಗಿ, ತನ್ನ ಜೊತೆ ಲಕ್ಷ್ಮಣನನ್ನು ಸಹಾ ಕಾಡಿಗೆ ಕರೆದೊಯ್ಯುತ್ತಾನೆ. ಲಕ್ಷ್ಮಣನು ತನ್ನ ತಂದೆ ತಾಯಿಯರನ್ನು ನೋಡಿಕೊಳ್ಳುವುದಾಗಿ ಅವಳನ್ನು ಅಯೋಧ್ಯೆಯಲ್ಲೇ ಬಿಟ್ಟು ಹೋಗುತ್ತಾನೆ.
  • ರಾವಣನಿಂದ ಅಪಹೃತಳಾಗುವ ಮುನ್ನ ಸೀತಾಮಾತೆ ತನ್ನ ಪತಿಯೊಂದಿಗೆ ಕಾನನದಲ್ಲಿ ವನ-ಚರ-ಪ್ರಾಣಿ-ಪಕ್ಷಿಗಳೊಂದಿಗೆ ಆನಂದದಿಂದ ಕಾಲಕಳೆಯುತ್ತಿದ್ದರೆ, ಇತ್ತ ತನ್ನ ಪತಿಯ ಬರುವಿಕೆಗಾಗಿಯೇ ಊರ್ಮಿಳೆ ಹದಿನಾಲ್ಕು ವರ್ಷಗಳ ಕಾಲ ಅರಮನೆಯಲ್ಲಿ ಕಾಯುತ್ತಿರುತ್ತಾಳೆ. ಲಕ್ಷ್ಮಣ ಮತ್ತು ಊರ್ಮಿಳೆಗೆ ಅಂಗದ ಹಾಗೂ ಚಂದ್ರಕೇತು ಎಂಬ ಇಬ್ಬರು ಮಕ್ಕಳಿದ್ದರು. ಊರ್ಮಿಳೆಯು ಊರ್ಮಿಳಾ ನಿದ್ರಾ ಎಂಬ ತನ್ನ ಸಾಟಿಯಿಲ್ಲದ ತ್ಯಾಗಕ್ಕೆ ಹೆಸರಾಗಿದ್ದಾಳೆ.
  • ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ, ಲಕ್ಷ್ಮಣ ಮತ್ತು ಊರ್ಮಿಳೆಗೆ ಮೀಸಲಾಗಿರುವ ಒಂದು ದೇವಸ್ಥಾನ ಇದೆ. ಭರತಪುರದ ರಾಜ ಬಲವಂತ್ ಸಿಂಗ್ ಈ ದೇವಾಲಯವನ್ನು ೧೮೭೦ ನೇ ಶತಮಾನದಲ್ಲಿ ಕಟ್ಟಿಸಿದರು. ನಂತರ ಆ ದೇವಾಲಯವು ಭರತಪುರದ ರಾಜ ಕುಟುಂಬದಿಂದ ರಾಯಲ್ ದೇವಸ್ಥಾನವೆಂದು ಪರಿಗಣಿಸಲಾಗಿದೆ.
ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಊರ್ಮಿಳಾ&oldid=801528" ಇಂದ ಪಡೆಯಲ್ಪಟ್ಟಿದೆ