ಕೈಕೇಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಮನನ್ನು ವನವಾಸಕ್ಕೆ ಕಳುಹಿಸುವಂತೆ ಒತ್ತಾಯಿಸುತ್ತಿರುವ ಕೈಕೇಯಿ

ಕೈಕೇಯಿ ಭರತನ ತಾಯಿ. ದಶರಥನ '೩'ನೆ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ.ದಶರಥನಿಗೆ ಕೌಸಲ್ಯೆ, ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ಈಕೆಯು ಕೇಕೆಯ ದೇಶದ ಅಶ್ವಪತಿ ರಾಜನ ಮಗಳು. ಈಕೆಯು ಮಂಟಥರೆಯ ದುರ್ಭೋಧನೆಗೆ ಒಳಗಾಗಿ ಶ್ರೀರಾಮನ ವನವಾಸಕ್ಕೆ ಕಾರಣಳಾದಳು. ಒಮ್ಮೆ ಶಂಭನೆಂಬ ರಾಕ್ಷಸ (ತಿಮಿಧ್ವಜ)ಇಂದ್ರನನ್ನು ತುಂಬಾ ಪೀಡಿಸಲು, ಇಂದ್ರನು ದಶರಥನ ಸಹಾಯದೊಡನೆ ಹೋರಾಡಿ ಅವನನ್ನು ಕೊಂದನು. ಈ ಯುದ್ಧದಲ್ಲಿ ದಶರಥನು ಕೈಕೇಯಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದನು. ಅಲ್ಲಿ ತಿಮಿಧ್ವಜನ ಬಾಣದ ಹೊಡೆತಕ್ಕೆ ದಶರಥನು ಎಚ್ಚರ ತಪ್ಪಿ ಬೀಳಲು ದಶರಥನನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ದಶರಥನು ಈಕೆಯ ಸಾಹಸವನ್ನು ಮೆಚ್ಚಿ ಎರಡು ವರಗಳನ್ನು ಕೇಳುವಂತೆ ಹೇಳಲು. ಕೈಕೇಯು ಈ ವರಗಳನ್ನು ಮುಂದೆ ಶ್ರೀರಾಮನ ಪಟ್ಟಾಭಿಷೇಕದ ಸಮಯದಲ್ಲಿ ಕೇಳಿ ರಾಮನ ವನವಾಸಕ್ಕೆ ಕಾರಣಳಾದಳು. ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ ರಾಮಾಯಣದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು.ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲವಾಗಿ ಅವನಿಗೆ ಅಗ್ನಿದೇವನು ಪಾಯಸವನ್ನು ವರವಾಗಿ ಕೊಡುತ್ತಾನೆ. ರಾಜನು ಅದರ ಮೂರು ಸಮ ಭಾಗಗಳನ್ನು ಮಾಡಿ ಮೂವರಿಗೂ ಹಂಚುತ್ತಾನೆ. ಆಗ ಬ್ರಹ್ಮನ ಶಾಪದಿಂದ ಹದ್ದಿನರೂಪ ಹೊಂದಿದ್ದ ಅಪ್ಸರ ಸ್ತ್ರೀಯು ಸುಮಿತ್ರೆಯ ಪಾಯಸವನ್ನು ಕಿತ್ತುಕೊಂಡು ಹೋಗಿ ಶೇ‌‌ಷಾಚಲದಲ್ಲಿ ತಪಸ್ಸು ಮಾಡುತ್ತಿದ್ದ ಅಂಜನಾದೇವಿಯ ಕೈಯಲ್ಲಿ ಹಾಕಿ ಶಾಪವಿಮುಕ್ತಿ ಪಡೆದು ಸ್ವರ್ಗ ಲೋಕವನ್ನು ಸೇರಿದಳು.ಇದನ್ನು ಕಂಡ ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದು(ರಾಮನವಮಿ) ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೆಯಿ ಭರತನಿಗೂ ,ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನನಿಗೂ ಜನುಮ ನೀಡುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಕೈಕೇಯಿ&oldid=408340" ಇಂದ ಪಡೆಯಲ್ಪಟ್ಟಿದೆ