ಕುಬೇರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕುಬೇರ

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ [ಮಿಶ್ರವಶುವಿನ]ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ಮೇರು ಪರ್ವತ ಪ್ರಾಂತ್ಯದಲ್ಲಿನ ತೃಣಬಿಂದುವಿನ ಆಶ್ರಮದಲ್ಲಿದ್ದು, ವೇದಾಧ್ಯಯನ ಮಾಡುತ್ತಿದ್ದನು. ಆಶ್ರಮದ ಪ್ರದೇಶ ಬಹಳ ಸುಂದರ, ರಮಣೀಯವಾಗಿದ್ದುದರಿಂದ, ವಿಹಾರಕ್ಕೆ ಆ ಪ್ರದೇಶಕ್ಕೆ ದೇವಕನ್ಯೆಯರು, ಋಷಿ ಕನ್ಯೆಯರು, ರಾಜರ್ಷಿಕನ್ಯೆಯರು, ಎಲ್ಲರೂ ಬರುತ್ತಿದ್ದರು. ಇವರಿಂದ ತನಗೆ ತಪೋಭಂಗವಾಗುವುರಿಂದ, ಅಲ್ಲಿಗೇ ಯಾರು ಬರಬಾರದೆಂದು ಹೇಳಿದರು. ಬಂದು ಋಷಿಕನ್ಯೆಯರೇನಾದರೂ ನೋಡಿದರೆ ಅವರು ಗರ್ಭಿಣಿಯಾಗುತ್ತಾರೆಂದು ಶಾಪ ಕೊಟ್ಟನು. ಈ ವಿಷಯ ಗೊತ್ತಿಲ್ಲದೇ ತೃಣಬಿಂದುವಿನ ಮಗಳು ಒಂದುದಿನ ಆಶ್ರಮಕ್ಕೆ ಬಂದು ಪುಲಸ್ತ್ಯನನ್ನ ನೋಡಿದುದರಿಂದ ಬಸುರಿ ಆಗುತ್ತಾಳೆ. ಇದನ್ನು ತಿಳಿದುಕೊಂಡ ತೃಣಬಿಂದು, ಮಗಳ ಜೊತೆ ಋಷಿ ಹತ್ತಿರ ಹೋಗಿ ನಡೆದುದನ್ನೇಲ್ಲಾ ತಿಳಿಸಿ, ತನ್ನ ಮಗಳನ್ನು ಮದುವೆ ಮಾಡಿಕೋ ಬೇಕೆಂದು ಬೇಡಿಕೊಳ್ತಾನೆ. ಋಷಿ ಅದಕ್ಕೆ ಒಫ್ಫುತಾನೆ. ಇವರಿಗೆ ಮಿಶ್ರವಸು ಹುಟ್ಟುತ್ತಾನೆ. , ಮಿಶ್ರವಸುವೆಂಬ ಬ್ರಹ್ಮನಿಂದ ಇಲಬಿಲೆ/ಇಲಾಬಿದ(llAVIDA)ಳ ಮಗ ಕುಬೇರ ಎಂದು ಹೇಳಲಾಗುತ್ತದೆ. ಸೋಮನೆಂಬುದು ಇವನ ಹೆಸರು. ಈ ಕಾರಣದಿಂದ ಉತ್ತರ ದಿಕ್ಕಿಗೆ ಸೌಮ್ಯೆಯೆಂದು ಹೆಸರು. ಇವನು ನರವಾಹನ, ನವನಿಧಿಗಳು ಇವನ ವಶವರ್ತಿಗಳು. ಇವನ ಹೆಂಡತಿ ವೃದ್ದಿ/ಭದ್ರೆ. ಅಗಸ್ತ್ಯ ಋಷಿಯ ಮೂಲಕ ಇವನಿಗೆ ಮನುಷ್ಯನಿಂದ ಕಷ್ಟವೂ, ಮಾನಭಂಗ ಲಭಿಸುವಂತೆ ಶಾಪ ಪ್ರಾಪ್ತಿ. ಇವನ ಮಲತಾಯಿ ಮಕ್ಕಳಾದ ರಾವಣ, ಕುಂಭಕರ್ಣರು ಇವನನ್ನು ಸೋಲಿಸಿ ಲಂಕಾಧಿಪತ್ಯವನ್ನೂ, ಪುಷ್ಪಕವಿಮಾನವನ್ನೂ ಕಸಿದುಕೊಂಡ ಬಳಿಕ, ಕುಬೇರ ಶಿವನ ಅನುಮತಿಯಂತೆ ಕೈಲಾಸ ಪರ್ವತದಲ್ಲಿ 'ಅಲಕಾನಗರಿ' ನಿರ್ಮಿಸಿಕೊಂಡು, ಯಕ್ಷರಿಗೆ ಅಧಿಪತಿಯಾದನು. ಇವನ ಮಂತ್ರಿ ಪ್ರಹಾಸ, ಮಣಿಭದ್ರ, ಮಣಿಮಂತ, ಮಣಿಕಂಧರ, ಮಣಿಭೂಷ ಮುಂತಾದವರು. ಇವನು ಅತುಲೈಶ್ವರ್ಯ ಸಂಪನ್ನನಾಗಿದ್ದಾನೆ.

"https://kn.wikipedia.org/w/index.php?title=ಕುಬೇರ&oldid=371681" ಇಂದ ಪಡೆಯಲ್ಪಟ್ಟಿದೆ