ವಿಷಯಕ್ಕೆ ಹೋಗು

ಯಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಕ್ಷ
Remains of the colossal statues of the Parkham Yaksha (150 BCE) and the Mudgarpani ("Mace-holder") Yaksha (100 BCE), Mathura. These colossal statues stand around two metres tall.[] The Mudgarpani Yaksha holds a mudgar mace in the right hand, and the left hand used to support a small standing devotee or child joining hands in prayer.[][]
Art of Mathura, Mathura Museum

ಯಕ್ಷ ಸಾಮಾನ್ಯವಾಗಿ ಪರೋಪಕಾರಿ, ಭೂಮಿ ಹಾಗು ಮರದ ಬೇರುಗಳಲ್ಲಿ ಅಡಗಿರುವ ಪ್ರಾಕೃತಿಕ ಸಂಪತ್ತುಗಳ ಕಾವಲುಗಾರರಾದ ವಿಶಾಲ ವರ್ಗದ ಪ್ರಾಕೃತಿಕ ಅತಿಮಾನುಷ ಚೇತನಗಳ ಹೆಸರು. ಅವು ಹಿಂದೂ, ಜೈನ ಮತ್ತು ಬೌದ್ಧ ಸಾಹಿತ್ಯದಲ್ಲಿ ಕಾಣಿಸುತ್ತವೆ. ಯಕ್ಷಿ ಅಥವಾ ಯಕ್ಷಿಣಿ ಈ ಶಬ್ದದ ಸ್ತ್ರೀ ರೂಪ. ಯಕ್ಷ - ಮೊತ್ತಮೊದಲು ಸೃಷ್ಟಿಯಲ್ಲಿ ಚತುರ್ಮುಖ ಹುಟ್ಟಿದ. ತರುವಾಯ ಚತುರ್ಮುಖ ಜಲವನ್ನು ಸೃಷ್ಟಿಸಿದ. ಈ ಜಲದ ರಕ್ಷಣೆಗಾಗಿ ಕೆಲವು ಪ್ರಾಣಿಗಳನ್ನು ಜೊತೆಯಲ್ಲಿಯೇ ಸೃಜಿಸಿದ. ಈ ಪ್ರಾಣಿಗಳೆಲ್ಲವು ಬಹಳ ಹಸಿವು ನೀರಡಿಕೆಗಳಿಂದ ಕೂಡಿದ್ದವು. ತಮ್ಮನ್ನು ಸೃಜಿಸಿದ ಬ್ರಹ್ಮನ ಬಳಿಗೆ ಬಂದು ತಮ್ಮ ಕೆಲಸವೇನೆಂದು ಕೇಳಿಕೊಂಡವು ಚತುರ್ಮುಖ ಈ ಜಲವನ್ನು ರಕ್ಷಿಸಿರಿ ಎಂದ. ಇದನ್ನು ಕೇಳಿ ಕೋಪಗೊಂಡ ಕೆಲವು ಪ್ರಾಣಿಗಳೂ ಜಲವನ್ನು ಕುಡಿದವು. ಮೆತ್ತೆ ಕೆಲವು ರಕ್ಷಣೆಯನ್ನು ಮಾಡಿದುವು. ನೀರು ಕುಡಿದವರನ್ನು ಯಕ್ಷ ಎಂತಲೂ ನೀರನ್ನು ರಕ್ಷಿಸಿದವರನ್ನು ರಕ್ಷ (ರಾಕ್ಷಸ) ಎಂತಲೂ ಕರೆದ. ಹೀಗೆ ಯಕ್ಷರ ಉತ್ಪತ್ತಿ. ಯಕ್ಷರ ಅಧಿಪತಿ ಕುಬೇರ. ಇವನ ಪ್ರಜೆಗಳೇ ಯಕ್ಷರು. ದೇವತೆಗಳಲ್ಲಿ ಇವರದೊಂದು ಪಂಗಡ. ಕಾವೇರಿ, ನರ್ಮದಾ, ನದಿಗಳ ಸಂಗಮವಾದ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿ ಮಹಾದೇವನನ್ನು ಪೂಜಿಸಿದ ಕಾರಣ ಕುಬೇರ ಯಕ್ಷ ರಾಜ್ಷಾಧಿಪತಿಯಾದ. ಕುಬೇರನ ಅಸ್ಥಾನದಲ್ಲಿ ಶಂಖಪದ್ಮ, ಮಣಿಭದ್ರ, ಶ್ವೇತಛತ್ರ, ಗುಹ್ಯಕ, ಸ್ರೂಣಕ, ಸೂರ್ಯಭಾನು, ವೇಣು, ಗಂಡಪಿಂಡ, ವೃಷಾರ, ದೃಮ, ಹಿಮಚಂದ್ರ, ಪಿಂಗಳಾಕ್ಷ, ಪ್ರಪಾಲಕ ಮೊದಲಾದ ಅನೇಕ ಯಕ್ಷರು ಕುಬೇರನನ್ನು ಓಲೈಸುತ್ತಿರುತ್ತಾರೆಂದು ಪುರಾಣ ಪ್ರತೀತಿ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೆಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. 1 2 Dated 100 BCE. Quintanilla, Sonya Rhie (2007). History of Early Stone Sculpture at Mathura: Ca. 150 BCE – 100 CE (in ಇಂಗ್ಲಿಷ್). BRILL. p. 368, fig. 88. ISBN 9789004155374.
  2. Quintanilla, Sonya Rhie (2007). History of Early Stone Sculpture at Mathura: Ca. 150 BCE – 100 CE (in ಇಂಗ್ಲಿಷ್). BRILL. p. 365, fig. 85. ISBN 9789004155374.
  3. Dalal, Roshen (2010). The Religions of India: A Concise Guide to Nine Major Faiths. Penguin Books India. p. 398. ISBN 978-0-14-341517-6.
"https://kn.wikipedia.org/w/index.php?title=ಯಕ್ಷ&oldid=1360537" ಇಂದ ಪಡೆಯಲ್ಪಟ್ಟಿದೆ