ಜನಮೇಜಯ
ಜನಮೇಜಯ | |
---|---|
ಹಸ್ತಿನಾಪುರದ ರಾಜ
| |
![]() | |
ಮಹರ್ಷಿ ವ್ಯಾಸರೊಂದಿಗೆ ಜನಮೇಜಯ. | |
ಪೂರ್ವಾಧಿಕಾರಿ | ಪರೀಕ್ಷಿತ |
ಉತ್ತರಾಧಿಕಾರಿ | ಶತಾನಿಕ |
ರಾಜ ವಂಶ | ಕುರುವಂಶ |
ತಂದೆ | ಪರೀಕ್ಷಿತ |
ತಾಯಿ | ರಾಣಿ ಮದ್ರಾವತಿ |
ಧರ್ಮ | ಹಿಂದೂ ಧರ್ಮ |
ಜನಮೇಜಯನು ಮಹಾಭಾರತದ ಕತೆಯಲ್ಲಿ ಕುರು ವಂಶದ ರಾಜ, ಪರೀಕ್ಷಿತರಾಜನ ಮಗನು; ಪರೀಕ್ಷಿತ ರಾಜನು ಅಭಿಮನ್ಯುವಿನ ಮಗ , ಅರ್ಜುನನ ವೊಮ್ಮಗ. ವ್ಯಾಸಮಹರ್ಷಿಗಳ ಶಿಷ್ಯರಾದ ವೈಶಂಪಾಯನರು ಹೇಳಿದ ಮಹಾಭಾರತದ ಕತೆಯ ಕೇಳುಗನು ಇವನು.
ತಕ್ಷಕನೆಂಬ ನಾಗನಿಂದ ತನ್ನ ತಂದೆ ಪರೀಕ್ಷಿತನು ಸತ್ತದ್ದರಿಂದ ಇವನು ನಾಗವಂಶವನ್ನೆಲ್ಲಾ ನಿರ್ನಾಮ ಮಾಡಲು ಸರ್ಪಯಜ್ಞವನ್ನು ಕೈಗೊಂಡನು. ಆ ಸಮಯದಲ್ಲಿ ವೈಶಂಪಾಯನರು ಭರತನಿಂದಾರಂಭಿಸಿ ಕೌರವ ಪಾಂಡವರ ನಡುವಿನ ಯುದ್ಧದವರೆಗಿನ ಅವನ ಹಿರಿಯರ ಕತೆಯನ್ನು ಹೇಳಿದರು.

ಬಾಲಕನಾದ ಆಸ್ತಿಕ ಮುನಿಯು ಸರ್ಪಗಳನ್ನೆಲ್ಲ ನಾಶ ಪಡಿಸುವ ಯಜ್ಞಕ್ಕೆ ಅಡ್ಡಿಯಾದನು . ಅವನ ತಂದೆ ಒಬ್ಬ ಬ್ರಾಹ್ಮಣ , ತಾಯಿ ನಾಗಕುಲದವಳು. ಜ್ಞಾನಿಯಾದ ಆತನ ಮಾತುಗಳನ್ನು ಕೇಳಿ ತಕ್ಷಕನನ್ನು ಬಿಡುಗಡೆ ಮಾಡಿದನು, ಸರ್ಪಯಜ್ಞವನ್ನು ನಿಲ್ಲಿಸಿ ನಾಗಕುಲದವರೊಂದಿಗೆ ದ್ವೇಷವನ್ನು ಕೈಬಿಟ್ಟನು. ನಂತರ ಕುರು ಕುಲದವರು ಮತ್ತು ನಾಗ ಕುಲದವರು ಶಾಂತಿಯಿಂದ ಬಾಳಿದರು.