ಭೀಷ್ಮ

ವಿಕಿಪೀಡಿಯ ಇಂದ
Jump to navigation Jump to search
Shantanu stops Ganga from drowning their eighth child, who later was known as Bhishma.
Painting depicting presentation by Ganga of her son Devavrata (the future Bhishma) to his father, Shantanu
ರಾಜ ರವಿವರ್ಮ ಅವರಿಂದ ಭೀಷ್ಮ ತನ್ನ ಪ್ರತಿಜ್ಞೆಯನ್ನು ಮಾಡುತ್ತಿರುವ ದೃಶ್ಯದ ಚಿತ್ರಣ
Bhishma abducting princesses Amba, Ambika and Ambalika from the assemblage of suitors at their swayamvara.


ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಈತ ಶಂತನು ಮತ್ತು ಗಂಗೆಯರ ಪುತ್ರ. ಶಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ಞಾನವನ್ನು ದೇವರಿಷಿ ಬ್ರಹಸ್ಪತಿ ಮೊದಲಾದವರಿಂದ ಕಲಿತನು. ಶಸ್ತ್ರ ವಿದ್ಯೆಯನ್ನು ಋಷಿ ಭಾರದ್ದ್ವಾಜರಿಂದ, ಪರಶುರಾಮರಿಂದ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಭೀಷ್ಮ ಪ್ರತಿಜ್ಞೆ ಮಾಡುತ್ತಾನೆ. ತನ್ನ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಬಹುಶಃ ಶ್ರೀಕೃಷ್ಣನ ನಂತರ ಮಹಾಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಯೆಂದೆನಿಸಿಕೊಳ್ಳುತ್ತಾನೆ. ಇಡೀ ಮಹಾಭಾರತದ ಆಗು ಹೋಗು, ಒಳ ಹೊರಗುಗಳನ್ನು ಈತ ಬಲ್ಲವನಾಗಿರುತ್ತಾನೆ."https://kn.wikipedia.org/w/index.php?title=ಭೀಷ್ಮ&oldid=578819" ಇಂದ ಪಡೆಯಲ್ಪಟ್ಟಿದೆ