ಬಲರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಲರಾಮ
Bala Rama
ದೇವನಾಗರಿबलराम
ಸಂಸ್ಕೃತ ಲಿಪ್ಯಂತರಣBalarāma
ಸಂಲಗ್ನತೆಅವತಾರ of ಆದಿಶೇಷ or ವಿಷ್ಣು
ಆಯುಧPlough, Mace
ಸಂಗಾತಿRevati
Krishna and Balarama meet their parents. Painting by Raja Ravi Varma
Krishna-Balarama deities at the Krishna-Balarama Temple in Vrindavan
Duryodana was defeated by Bhima - A scene from Razmanama
Balarama, next to the river Yamuna. Copyright BBTI

ಬಲದೇವ, ಬಲಭದ್ರ, ಮತ್ತು ಹಲಾಯುಧ ಎಂಬ ಹೆಸರುಗಳನ್ನು ಹೊತ್ತ ಬಲರಾಮ ಕೃಷ್ಣನ ಹಿರಿಯಣ್ಣ. ದಕ್ಷಿಣ ಭಾರತದ ಬಹುತೇಕ ವೈಷ್ಣವರ ಪ್ರಕಾರ ಬಲರಾಮನು ವಿಷ್ಣುವಿನ ಒಂಬತ್ತನೇ ಅವತಾರ. ವಿಷ್ಣುವನ್ನು ಹೊಂದುವ ದೈವೀ ಸರ್ಪಆದಿಶೇಷನ ಅವತಾರವಾಗಿಯೂ ಪರಿಗಣಿಸಲಾಗುತ್ತದೆ. ಭಾಗವತ ಪುರಾಣದ ಪ್ರಕಾರ ಕೃಷ್ಣನೇ ವಿಶ್ವದ ಮೂಲ. ಈ ಪ್ರಕಾರ ಕೃಷ್ಣನ ಮೊದಲ ಅವತಾರವೇ ಬಲರಾಮ. ಬಲರಾಮನಿಂದ ಇತರ ಅವತಾರಗಳು ಹುಟ್ಟಿದವು.

ಅಸ್ತಿತ್ವ[ಬದಲಾಯಿಸಿ]

ಬಲರಾಮನ ಹುಟ್ಟು ವಸುದೇವ ಮತ್ತು ದೇವಕಿಯರ ಪುತ್ರನಾಗಿ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನು ದೇವಕಿಯ ಎಲ್ಲ ಮಕ್ಕಳನ್ನು ಕೊಲ್ಲುವ ಹೊಂಚು ಹಾಕಿದ್ದನು. ಇದಕ್ಕೆ ಕಾರಣ ದೇವಕಿಯ ಎಂಟನೇ ಸಂತಾನ ಕಂಸನ ಹತ್ಯೆ ಮಾಡುವುದೆಂಬ ಅಶರೀರವಾಣಿ. ಈ ಕಾರಣದಿಂದ ಕಂಸನು ದೇವಕಿ ಮತ್ತು ವಸುದೇವನನ್ನು ಬಂಧನದಲ್ಲಿಟ್ಟು ಅವರ ಮಕ್ಕಳನ್ನು ಹುಟ್ಟಿದ ಕೂಡಲೇ ಕೊಲ್ಲುತ್ತಾ ಬಂದನು. ಕಾಲಾನಂತರ ದೇವಕಿ ಏಳನೇ ಸಲ ಗರ್ಭಿಣಿಯಾದಳು. ಆದರೆ ಗರ್ಭದಲ್ಲಿದ್ದ ಮಗು ಮಾಯೆಯಿಂದ/ಪವಾಡದಿಂದ ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಹರಿಯಿತು. ಈ ಕಾರಣದಿಂದ ಬಲರಾಮನ ಇನ್ನೊಂದು ಹೆಸರು ಸಂಕರ್ಷಣ ಎಂದು. ಮಗುವಿನ ಹೆಸರು ರಾಮ ಎಂದಿದ್ದರೂ, ಅವನ ಅತೀವ ಶಕ್ತಿಯ ಕಾರಣ "ಬಲರಾಮ" ಎಂದು ಕರೆಯಲಾಯಿತು. ಹೀಗೆ ರೋಹಿಣಿ ಬಲರಾಮನಿಗೆ ಜನ್ಮ ಕೊಟ್ಟು ಪಾಲಿಸಿದಳು. ಬಲರಾಮನು ತನ್ನ ಬಾಲ್ಯವನ್ನು ಸಹೋದರ ಕೃಷ್ಣನ ಜೊತೆ ಹಸುಗಳನ್ನು ಕಾಯುವ ಗೋಪಾಲನಾಗಿ ಕಳೆದನು.

ಕೃಷ್ಣನ ಸಹೋದರ[ಬದಲಾಯಿಸಿ]

Krishna and Balarama playing with cows -- copyright 2005 BBTI

ವೈಷ್ಣವರು ನಂಬುವ ಪ್ರಕಾರ ಬಲರಾಮನು ದೇವರ ಅಪರಾವತಾರ. ಅವನನ್ನು ಕೃಷ್ಣನಷ್ಟೇ ಪೂಜಿಸಲಾಗುತ್ತದೆ. ಆದರೆ ಕೃಷ್ಣನು ಕಂಡು ಬಂದಾಗಲೆಲ್ಲ ಬಲರಾಮನು ಅವನ ಸಹೋದರನಾಗಿ ಕಂಡುಬರುತ್ತಾನೆ. ಬಲರಾಮನು ಕೃಷ್ಣನ ಎಲ್ಲ ಅವತಾರಗಳಲ್ಲಿಯೂ ಅವನ ಜೊತೆಗಿರುತ್ತಾನೆ. ರಾಮಾಯಣದಲ್ಲಿ ರಾಮನ ತಮ್ಮ ಲಕ್ಷ್ಮಣನಾಗಿ ಮತ್ತು ಕಲಿಯುಗದಲ್ಲಿ ಚೈತನ್ಯನ 'ಸಂಕೀರ್ತನ ಸಾರುತ್ತಾನೆ. ಕೃಷ್ಣ ಮತ್ತು ಬಲರಾಮರ ಮಧ್ಯೆ ಒಂದೇ ವ್ಯತ್ಯಾಸವೆಂದರೆ ಮೈಬಣ್ಣ. ಕೃಷ್ಣನು ಕಪ್ಪಗಿದ್ದರೆ ಬಲರಾಮನು ಬೆಳ್ಳಗೆ.

ಶಾರೀರಿಕ ಲಕ್ಷಣಗಳು[ಬದಲಾಯಿಸಿ]

ಬಲರಾಮನನ್ನು ಯಾವಾಗಲೂ ಬಿಳಿ ಚರ್ಮ ಹೊಂದಿರುವುದಾಗಿ ತೋರಿಸಲಾಗುತ್ತದೆ. ಅವನ ಆಯುಧಗಳೆಂದರೆ ನೇಗಿಲು (ಹಲ) ಮತ್ತು ಗದೆ. ಸಾಂಪ್ರದಾಯಿಕವಾಗಿ ಬಲರಾಮನು ನೀಲಿ ಬಟ್ಟೆಗಳನ್ನು ಧರಿಸುತ್ತಾನೆ. ಕೂದಲನ್ನು ಗಂಟಿನಲ್ಲಿ ಕಟ್ಟಿ ಕಿವಿಗೆ ಒಡವೆ, ಕೈಗೆ ಕಂಕಣ ಮತ್ತು ತೋಳಬಂದಿ ಧರಿಸಿರುತ್ತಾನೆ. ಬಲರಾಮನನ್ನು ಅತಿ ಶಕ್ತಿಶಾಲಿ ಎಂದು ಚಿತ್ರಿಸಲಾಗುತ್ತದೆ.

ಭಾಗವತ ಪುರಾಣದಲ್ಲಿ[ಬದಲಾಯಿಸಿ]

ಒಂದು ದಿನ ವಸುದೇವನು ಗರ್ಗಮುನಿಯನ್ನು ಪುತ್ರರಾದ ಕೃಷ್ಣ ಮತ್ತು ಬಲರಾಮರಿಗೆ ಹೆಸರನ್ನಿಡುವ ಸಲುವಾಗಿ ಆಹ್ವಾನಿಸಿದನು. ಆಗ ಗರ್ಗಮುನಿಯು ಕಂಸನ ವಿಷಯ ತಿಳಿಸಿ, ಹೆಸರಿಡುವ ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಿದರೆ ಕಂಸನಿಗೆ ಈ ವಿಷಯ ತಿಳಿದು ಕೃಷ್ಣನ ವಿಷಯವಾಗಿ ಸಂಶಯಗೊಳ್ಳುವನೆಂದು ಹೇಳಿದಾಗ, ಈ ಸಮಾರಂಭವನ್ನು ಗುಪ್ತವಾಗಿ ನಡೆಸಲಾಯಿತು.

ಮಹಾಭಾರತದಲ್ಲಿ[ಬದಲಾಯಿಸಿ]

ಬಲರಾಮನು ಕೌರವ ದುರ್ಯೋಧನ ಮತ್ತು ಪಾಂಡವ ಭೀಮರಿಗೆ ಗದಾವಿದ್ಯೆಯನ್ನು ಕಲಿಸಿದನು.ಬಲರಾಮನಿಗೆ ದುರ್ಯೋಧನನ ಮೇಲೆ ವಿಶೇಷವಾದ ಅಭಿಮಾನವಿತ್ತು. ನಂತರ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರೇ ಗೆಲ್ಲುವರೆಂದು ತಿಳಿದಿದ್ದ ಕಾರಣ ಯಾರಿಗೂ ಸಹಾಯ ಮಾಡಲು ಇಚ್ಛಿಸದೆ ತೀರ್ಥಯಾತ್ರೆ ಹೋಗುತ್ತಾನೆ.ಅಂತಿಮವಾಗಿ ಭೀಮನು ಗದಾಯುದ್ಧದಲ್ಲಿ ದುರ್ಯೋಧನನನ್ನು ತೊಡೆಯ ಮೇಲೆ ಹೊಡೆದು ಕೊಂದಾಗ ಬಲರಾಮನು ಭೀಮನನ್ನು ಕೊಲ್ಲುವ ಬೆದರಿಕೆ ಹಾಕಿದನು. ಇದನ್ನು ತಡೆದ ಕೃಷ್ಣನು ಬಲರಾಮನಿಗೆ ಭೀಮನ ಪ್ರತಿಜ್ಞೆಯ ನೆನಪು ಮಾಡಿದನು.

ಅಂತ್ಯ[ಬದಲಾಯಿಸಿ]

ಭಾಗವತ ಪುರಾಣದ ಪ್ರಕಾರ ಪ್ರಭಾಸ ಕ್ಷೇತ್ರದಲ್ಲಿ ಯದುವಂಶದ ನಿರ್ನಾಮದ ಬಳಿಕ, ಕೃಷ್ಣನ ಅಂತ್ಯದ ಬಳಿಕ ಧ್ಯಾನಮಗ್ನನಾಗಿ ತನ್ನ ಬಾಯಿಯಿಂದ ಸರ್ಪ ರೂಪವಾಗಿ ಶರೀರವನ್ನು ತ್ಯಜಿಸುತ್ತಾನೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]


ವಿಷ್ಣುವಿನ ಅವತಾರಗಳು

ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬಲರಾಮ | ಬುದ್ಧ | ಕಲ್ಕಿ
"https://kn.wikipedia.org/w/index.php?title=ಬಲರಾಮ&oldid=1170543" ಇಂದ ಪಡೆಯಲ್ಪಟ್ಟಿದೆ