ವಿರಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮತ್ಸ್ಯದೇಶದ ರಾಜ.ಮಹಾಭಾರತದಲ್ಲಿ ಬರುವ ಮುಖ್ಯ ಪಾತ್ರಗಳಲ್ಲಿ ಒಂದು .ವಿರಾಟನ ಪತ್ನಿ ಸುದೇಷ್ಣೆ. ವಿರಾಟನಿಗೆ ಭೂಮಿಂಜಯ ಅಥವಾ ಉತ್ತರಕುಮಾರನೆಂಬ ಮಗನೂ,ಉತ್ತರೆಯೆಂಬ ಮಗಳೂ ಇದ್ದರು.ಪಾಂಡವರು ೧೨ ವರ್ಷಗಳ ವನವಾಸ ಮುಗಿಸಿ,೧ ವರ್ಷದ ಅಜ್ಞಾತವಾಸ ಮಾಡುವಾಗ ಈತನ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಊಳಿಗ ಮಾಡಿಕೊಂಡಿರುತ್ತಾರೆ.ಗೋಗ್ರಹಣ ಯುದ್ಧದ ಬಳಿಕ,ಪಾಂಡವರ ನಿಜಸ್ಥಿತಿ ತಿಳಿದ ಮೇಲೆ,ತನ್ನ ಮಗಳು ಉತ್ತರೆಯನ್ನು ಅರ್ಜುನನ ಮಗ ಅಭಿಮನ್ಯುವಿಗೆ ಮದುವೆ ಮಾಡಿಕೊಡುತ್ತಾನೆ.

ವಿರಾಟ ಮಹಾರಥಿ.ಮಹಾಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ಹೋರಾಡುತ್ತಾನೆ.ಯುದ್ಧದ ೧೪ನೆಯ ದಿನ ರಾತ್ರಿ ದ್ರೋಣನಿಂದ ಮಡಿಯುತ್ತಾನೆ.

"https://kn.wikipedia.org/w/index.php?title=ವಿರಾಟ&oldid=1163731" ಇಂದ ಪಡೆಯಲ್ಪಟ್ಟಿದೆ