ಘಟೋತ್ಕಚ
ಗೋಚರ
ಘಟೋತ್ಕಚ ಭೀಮ ಮತ್ತು ಹಿಡಿಂಬೆಯರ ಮಗ. ಇವನಿಗೆ ತಾಯಿಯ ಕಡೆಯಿಂದ ಅನೇಕ ರಾಕ್ಷಸ ಶಕ್ತಿಗಳು ಬಂದಿದ್ದವು. ಇದರಿಂದಾಗಿ ಕುರುಕ್ಷೇತ್ರ ಯುದ್ಧದಲ್ಲಿ ಇವನು ಪ್ರಮುಖ ಪಾತ್ರವಹಿಸಿದನು. ಇವನನ್ನು ಕೊಲ್ಲಲು ಕರ್ಣನು ತನ್ನಲ್ಲಿದ್ದ ಅಮೂಲ್ಯವಾದ ಇಂದ್ರಾಸ್ತ್ರವನ್ನು ಪ್ರಯೋಗಿಸಬೇಕಾಯಿತು. ಇದು ಕುರುಕ್ಷೇತ್ರ ಯುದ್ಧದ ಒಂದು ಮುಖ್ಯ ತಿರುವು ಆಗಿ ಪರಿಣಮಿಸಿತು.