ಇಂದ್ರಪ್ರಸ್ಥ
ಗೋಚರ
Indraprastha | |
|---|---|
| Khandavaprastha | |
top: burning of Khandava Forest to build Indraprastha (Mahabharata scene, as depicted at Banteay Srei) bottom: medieval fort Purana Qila built on the site of ancient Indraprastha | |
Location of Purana Qila in Delhi, believed as site of Indraprastha | |
| Coordinates: 28°36′34″N 77°14′39″E / 28.60944°N 77.24417°E | |
| Country | India |
| State | Delhi |
| Current Name | Delhi |
| Founded by | Pandava |
| Named after | Indradev |
ಇಂದ್ರಪ್ರಸ್ಥ (ಸಂಸ್ಕೃತ:इन्द्रप्रस्थ) ಮಹಾಭಾರತದಲ್ಲಿ ಪಾಂಡವರ ರಾಜಧಾನಿಯಾಗಿದ್ದ ಪ್ರಾಚೀನ ನಗರ. ದೇವಲೋಕದ ಶಿಲ್ಪಿ ಮಯನಿಂದ ನಿರ್ಮಿತವಾದ ಸುಂದರ ಮಾಯಾ ನಗರಿ. ಇದು ಯಮುನಾ ನದಿಯ ತೀರದಲ್ಲಿದ್ದು, ನವಕಾಲೀನ ರಾಜಧಾನಿಯಾದ ದೆಹಲಿಯ ಸಮೀಪವಿತ್ತು. ದ್ರೌಪದಿಸ್ವಯಂವರ ನಂತರ ಧೃತರಾಷ್ಟ್ರ ಪಾಂಡವರನ್ನು ಬರಮಾಡಿಕೊಂಡು ಅವರಿಗೋಸ್ಕರ ರಚಿಸಿಕೊಟ್ಟ ವಾಸಸ್ಥಳ. ವಿಶ್ವಕರ್ಮನಿಂದ ನಿರ್ಮಿತವಾಗಿ ಇಂದ್ರನ ಅಪೇಕ್ಷೆಯಂತೆ ಇಂದ್ರಪ್ರಸ್ಥವೆಂಬ ಹೆಸರನ್ನು ಪಡೆಯಿತು. ಶ್ರೀಕೃಷ್ಣನ ಅಪ್ಪಣೆಯ ಮೇರೆಗೆ ಪ್ರಾಕಾರಗಳಿಂದಲೂ ಸೌಧಗಳಿಂದಲೂ ಎಲ್ಲ ಸಂಪತ್ತಿನಿಂದಲೂ ಕೂಡಿ ಮಹೇಂದ್ರಪುರಕ್ಕೆ ಸಮಾನವಾಗಿರುವಂತೆ ವಿಶ್ವಕರ್ಮನಿಂದ ಸಿದ್ಧಗೊಂಡಿತು. ಮಹಾಪ್ರಸ್ಥಾನ ಸಮಯದಲ್ಲಿ ಪಾಂಡವರು ಶ್ರೀಕೃಷ್ಣನ ಮೊಮ್ಮಗನಾದ ವಜ್ರನಿಗೆ ಪಟ್ಟಗಟ್ಟಿದ ಸ್ಥಳ. ಈಗಿನ ಹಳೆಯ ದೆಹಲಿಯೇ ಇದೆಂದು ಪ್ರತೀತಿ.