ವಿಷಯಕ್ಕೆ ಹೋಗು

ಮಯಾಸುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಯ ಇಂದ ಪುನರ್ನಿರ್ದೇಶಿತ)
ಮಯಾಸುರ
Ruler of Talatala Loka
ಸಂಲಗ್ನತೆDanava
ನೆಲೆTalatala Loka
ಮಕ್ಕಳುMayavi
Dundubhi
Mandodari and Vyomasura
ತಂದೆತಾಯಿಯರು

ಹಿಂದೂ ಪುರಾಣದಲ್ಲಿ, ಮಯ ಅಥವಾ ಮಯಾಸುರ ಅಸುರ, ದೈತ್ಯ ಮತ್ತು ರಾಕ್ಷಸ ಜನಾಂಗಗಳ ಒಬ್ಬ ಮಹಾನ್ ಪ್ರಾಚೀನ ರಾಜನಾಗಿದ್ದನು. ಅವನು ಅಧೋಲೋಕದ ಜನರ ಮುಖ್ಯ ವಾಸ್ತುಶಿಲ್ಪಿ ಸಹ ಆಗಿದ್ದನು. ಮಯಾಸುರನು ತನ್ನ ವಾಸ್ತುಶಿಲ್ಪೀಯ ಸಾಮರ್ಥ್ಯಗಳಿಗಾಗಿ ಹೆಸರುವಾಸಿಯಾಗಿದ್ದನು. ಮಯ ತ್ರಿಪುರ ಎಂಬ ಮೂರು ಹಾರುವ ನಗರಗಳನ್ನು ನಿರ್ಮಿಸಿ ಅವುಗಳ ರಾಜನಾದನು . ಈ ನಗರಗಳು ಅಪಾರ ಸಂಪತ್ತು ಮತ್ತು ಶಕ್ತಿಯಿಂದ ಜಗತ್ತನ್ನು ಆಳುತ್ತಿದ್ದವು . ಆದರೆ ಅವುಗಳ ದುಷ್ಟ ಸ್ವಭಾವದಿಂದಾಗಿ, ಶಿವನು ಅವುಗಳನ್ನು ನಾಶಮಾಡಿದನು. ಶಿವನ ಭಕ್ತನಾದ ಮಯ ಆ ವಿನಾಶದಿಂದ ಪಾರಾದನು.

ರಾಕ್ಷಸರ ಶಿಲ್ಪಿ

[ಬದಲಾಯಿಸಿ]

ಮಯ ಮಾಯಾ ರಾಷ್ಟ್ರ ಎಂಬ ನಗರವನ್ನು ನಿರ್ಮಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು . ಮಾಯಾ ರಾಷ್ಟ್ರವನ್ನು ಈಗ ಮೀರತ್ ಎಂದು ಕರೆಯಲಾಗುತ್ತದೆ . ಮಂಡೋದರಿ ಲಂಕಾದ ರಾಜ ರಾವಣನ ಸುಂದರ ಪತ್ನಿ ಮಯನ ಮಗಳು . ಖಾಂಡವವನದಲ್ಲಿ ವಾಸವಾಗಿದ್ದ. ಖಾಂಡವವನವನ್ನು ಅಗ್ನಿದೇವ ಭಕ್ಷಿಸುವಾಗ ಈತ ಪ್ರಾಣ ರಕ್ಷಣೆಗಾಗಿ ಅರ್ಜುನನನ್ನು ಮೊರೆಹೊಕ್ಕ. ಅರ್ಜುನನ ಮುಖೇನ ಕೃಷ್ಣನಿಂದಲೂ ಅಭಯ ಪಡೆದ. ತನ್ನ ಕೃತಜ್ಞತೆಯ ಕುರುಹಾಗಿ ಮಯ ಧರ್ಮರಾಜನಿಗೆ ಲೋಕವೇ ಬೆರಗಾಗುವಂಥ ಸಭಾಭವನ ನಿರ್ಮಿಸಿಕೊಟ್ಟ. ಅವನು ಇಂದ್ರಪ್ರಸ್ಥದಲ್ಲಿ ಯಧಿಷ್ಠಿರನಿಗೆ ಒಂದು ಭವ್ಯವಾದ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿದನು . ಆ ಕಟ್ಟಡವು ಮಾಯಾ ಸಭೆ ಎಂದು ಪ್ರಸಿದ್ಧವಾಯಿತು . ಅಷ್ಟೇ ಅಲ್ಲದೆ ಒಂದು ಸರೋವರದಿಂದ ದಿವ್ಯವಾದ ಗದೆ ಹಾಗೂ ದೇವದತ್ತವೆಂಬ ಶಂಖವನ್ನು ತಂದು ಗದೆಯನ್ನು ಭೀಮನಿಗೂ ಶಂಖವನ್ನು ಅರ್ಜುನನಿಗೂ ಕೊಟ್ಟ. ಈ ವೃತ್ತಾಂತ ಮಹಾಭಾರತದ ಸಭಾಪರ್ವದಲ್ಲಿ ಬಂದಿದೆ.

"https://kn.wikipedia.org/w/index.php?title=ಮಯಾಸುರ&oldid=1324575" ಇಂದ ಪಡೆಯಲ್ಪಟ್ಟಿದೆ