ಸಂಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ಆಗುಹೋಗುಗಳನ್ನು ವಿವರಿಸುತ್ತಿರುವ ಸಂಜಯ

ಸಂಜಯ ಮಹಾಭಾರತದಲ್ಲಿ ಧೃತರಾಷ್ಟ್ರನ ಸಾರಥಿ. ಇವನಿಗೆ ದಿವ್ಯದೃಷ್ಟಿ (ದೂರದಲ್ಲಿ ನಡೆಯುವ ಘಟನೆಗಳನ್ನು ಕುಳಿತಲ್ಲೆ ನೋಡುವ ಶಕ್ತಿ) ಇತ್ತು.ಕುರುಕ್ಷೇತ್ರ ಯುದ್ಧ ನಡೆಯುವಾಗ ಸಂಜಯ ಧೃತರಾಷ್ಟ್ರನಿಗೆ ಅಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಯಥಾವತ್ತಾಗಿ ವರ್ಣಿಸುತ್ತಿದ್ದ ಭಗವದ್ಗೀತೆಯ ಪ್ರಾರಂಭದಲ್ಲಿ "ಸಂಜಯ ಉವಾಚ" ಎಂಬ ವಾಕ್ಯ ಬರುತ್ತದೆ. ಇದು ಯುದ್ಧಭೂಮಿಯಲ್ಲಿ ಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂಭಾಷಣೆಯನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದಾಗಿರುತ್ತದೆ.

"https://kn.wikipedia.org/w/index.php?title=ಸಂಜಯ&oldid=1047280" ಇಂದ ಪಡೆಯಲ್ಪಟ್ಟಿದೆ