ಕೃಷ್ಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶ್ರೀ ಕೃಷ್ಣ
Sri Mariamman Temple Singapore 2 amk.jpg
ಕೋಳಲಿನೊಂದಿಗೆ ಶ್ರೀ ಕೃಷ್ಣ Sri Mariamman Temple, Singapore
ದೇವನಾಗರಿ कृष्ण
ಸಂಸ್ಕೃತ ಲಿಪ್ಯಂತರಣ Kṛiṣṇa
ಸಂಲಗ್ನತೆ Full ಅವತಾರ of ವಿಷ್ಣು or Svayam Bhagavan
ನೆಲೆ Goloka Vrindavana, Gokula, Dwarka
ಮಂತ್ರ Hare Krishna
ಆಯುಧ ಸುದರ್ಶನ ಚಕ್ರ
ಒಡನಾಡಿ ರಾಧ, ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಕಾಳಿಂದಿ, ಮಿತ್ರಾವಿಂದ, Nagnajiti, Bhadra, Lakshmana and other 16,000 or 16,100 junior queens
Mount ಗರುಡ
Texts ಭಾಗವತ ಪುರಾಣ, ವಿಷ್ಣುಪುರಾಣ, ಮಹಾಭಾರತ, ಭಗವದ್ಗೀತೆ
An article related to
Hinduism
Om symbol.svg
An image of Bala Krishna displayed during Janmashtami celebrations at a Swaminarayan Temple in London
Krishna (left) with the flute with gopi-consort Radha, Bhaktivedanta Manor, Watford, England
Krishna with his consorts Rukmini, Satyabhama and his mount Garuda; Tamil Nadu, India, late 12th-13th century[೧]
Krishna holding Govardhan hill as depicted in Pahari painting
The hunter Jara about to shoot arrow towards Krishna
Yashoda bathing the child Krishna
Krishna's foster mother Yashoda with the infant Krishna. Chola period, Early 12th century, Tamil Nadu, India.
14th-century fresco of Krishna on the interior wall of City Palace, Udaipur
Krishna with cows, herdsmen and Gopis, Pahari painting [Himalayan] from Smithsonian Institution

ಶ್ರೀಕೃಷ್ಣ ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬನಾಗಿದ್ದಾನೆ.

ಜನನ, ಜೀವನ[ಬದಲಾಯಿಸಿ]

ದೇವಕಿ ಮತ್ತು ವಸುದೇವರು ಸೆರೆಮನೆಯಲ್ಲಿ ಇರುವಾಗ ಕೃಷ್ಣನ ಜನನವಾಗುತ್ತದೆ. ತಂದೆ ವಸುದೇವ, ತಾಯಿ ದೇವಕಿ. ಸಾಕು ತಂದೆ ನಂದರಾಜ, ಸಾಕುತಾಯಿ ಯಶೋಧೆ. ಉಗ್ರಸೇನ ಮಹಾರಾಜ ಕೃಷ್ಣನ ತಾತ. ರಾಕ್ಷಸನಾದ ಕಂಸ ಕೃಷ್ಣನ ಸೋದರ ಮಾವ. ಕಂಸ ಕೃಷ್ಣನಿಂದಲೇ ಮರಣ ಹೊಂದುತ್ತಾನೆ.

ಮಹಾಭಾರತದಲ್ಲಿ[ಬದಲಾಯಿಸಿ]

 • ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡು ಬರುತ್ತದೆ. ಕಂಸ, ಶಿಶುಪಾಲ, ಮೊದಲಾದವರನ್ನು ಕೊಲ್ಲುವ ಕೃಷ್ಣ ಪಾಂಡವರ ಮಿತ್ರ. ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯುವ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ.
 • ಈ ಸಂದರ್ಭದಲ್ಲಿ ಯುದ್ಧ ಬೇಡವೆಂದು ನಿರಾಕರಿಸುವ ಅರ್ಜುನನಿಗೆ ಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ. ಮಹಾವಿಷ್ಣು ಕೃಷ್ಣನ ಅವತಾರ ತಾಳುವುದಕ್ಕೆ ಭೃಗು ಮಹರ್ಷಿಯ ಶಾಪವೇ ಕಾರಣ ಎನ್ನಲಾಗಿದೆ. ಒಮ್ಮೆ ದೇವತೆಗಳಿಗೂ ಅಸುರರಿಗೂ ೧೦೦ವರ್ಷಗಳ ಕಾಲ ಯುದ್ದವಾಗಿ ಅನೇಕ ಮಂದಿ ಅಸುರರು ಮೃತ ಹೊಂದಿದರು.
 • ಆಗ ಅಸುರರ ಗುರುವಾದ ಶುಕ್ರಾಚಾರ್ಯ ಶಕ್ತ್ಯಾಯುಧಗಳನ್ನು ಪಡೆಯಲು ಕೈಲಾಸಕ್ಕೆ ಹೋದನು. ಅಸುರರೆಲ್ಲ ಶುಕ್ರನ ತಾಯಿಯಾದ ಕಾವ್ಯಮಾತಾಳಲ್ಲಿ ಆಶ್ರಯ ಪಡೆದಿದ್ದರು. ಅವರನ್ನೇಲ್ಲ ಸಾಯಿಸಲು ದೇವೇಂದ್ರನು ಮಹಾವಿಷ್ಣುವಿನ ಸಹಾಯ ಕೋರಿದನು. ಆಗ ಮಹಾವಿಷ್ಣು ತನ್ನ ಲೋಕಕ್ಕೆ ಸಹಾಯ ಮಾಡುವ ದೃಷ್ಟಿಯಿಂದ ಸುದರ್ಶನ ಚಕ್ರದಿಂದ ಕಾವ್ಯ ಮಾತಾಳ ತಲೆ ಕತ್ತರಿಸಿದನು. ಹೆಣ್ಣೊಬ್ಬಳ ಕೊಂದ ಮಹಾವಿಷ್ಣುವಿನ ಮೇಲೆ ಭೃಗು ಮಹರ್ಷಿಯು ಕ್ರೋಧಗೊಂಡು 'ಭೂಮಿ ಮೇಲೆ ಮನುಷ್ಯನಾಗಿ ಹುಟ್ಟು' ಎಂದು ಶಪಿಸುತ್ತಾನೆ.
 • ಅದರಿಂದಾಗಿ ಮಹಾವಿಷ್ಣು ಶ್ರೀಕೃಷ್ಣನಾಗಿ ಭೂಮಿ ಮೇಲೆ ಹುಟ್ಟುತ್ತಾನೆ ಎನ್ನಲಾಗಿದೆ. ಮತ್ತೊಂದು ಪುರಾಣದ ಪ್ರಕಾರ ವಿಷ್ಣು ಕಲಿಯ ಅವತಾರವನ್ನು ನಿಗ್ರಹಿಸಲು ಕೃಷ್ಣನಾಗಿ ಹುಟ್ಟಿದ ಎನ್ನುತ್ತಾರೆ.

ಕೃಷ್ಣನ ಇತರ ಹೆಸರುಗಳು[ಬದಲಾಯಿಸಿ]

 1. ಅಚಲ: ಅಲಗಾಡದವ, ಒಂದೆಡೆ ಸ್ಥಿರವಾಗಿ ನೆಲೆಸುವವನು.
 2. ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು.
 3. ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತೃವಾಗಿದ್ದವನು.
 4. ಕಾಲದೇವ: ಯಮನನ್ನು ಮೀರಿಸಿದವ.
 5. ಗಿರಿಧರ: ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ (ಗೋವರ್ಧನ)
 6. ಗೋಪಾಲ: ಗೋವುಗಳನ್ನು ಪಾಲಿಸಿ, ಕಾಪಾಡುವವನು.
 7. ವೇಣುಗೋಪಾಲ : ಕೊಳಲನ್ನು ನುಡಿಸುವವನು.
 8. ಗೋವಿಂದ: ಹಸುಗಳನ್ನು ರಕ್ಷಿಸುವವನು
 9. ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು
 10. ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು
 11. ಜಗನ್ನಾಥ: ಜಗತ್ತಿಗೆ ನಾಯಕನಾದವನು
 12. ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು
 13. ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು
 14. ಪತೀತ ಪಾವನ: (?) ಪಾಪಿಗಳನ್ನು ಉದ್ದರಿಸುವವನು
 15. ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು)
 16. ಪಾರ್ಥ ಸಾರಥಿ: ಅರ್ಜುನನ ಸಾರಥಿ
 17. ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು.
 18. ಮಾಧವ: ವಸಂತ ಋತು ತರುವವ (?)
 19. ಲಕ್ಷ್ಮಿ ಒಡೆಯ/ಲಕ್ಷ್ಮಿಪತಿ: ವಿಷ್ಣುವಿನ ಹೆಂಡತಿ : ಮಾ =ಲಕ್ಷ್ಮಿ -ಧವ =ಒಡೆಯ, ಪತಿ (ವಿಕ್ಷನರಿ)
 20. ಮುಕುಂದ: ಮುಕ್ತಿಯನ್ನು ಕೊಡುವವನು
 21. ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು
 22. ವಾಸುದೇವ: ವಸುದೇವನ ಮಗ
 23. ಶ್ಯಾಮಸುಂದರ: ಕಪ್ಪು ವರ್ಣದವನು
 24. ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು
 25. ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು
 26. ನವನೀತ : ತಾಜಾ ಬೆಣ್ಣೆಯನ್ನು ತಿಂದವನು
 27. ಸುದರ್ಶನ : ಸುದರ್ಶನ ಚಕ್ರ ಹೊಂದಿದವ
 28. ಮುರಳಿ : ಕೊಳಲನ್ನು ಹೊಂದಿದವ
 29. ಜನಾರ್ಧನ :
 30. ಮುರಾರಿ :
 31. ಘನಶ್ಯಾಮ:
 32. ದಾಮೋದರ:
 33. ಪಾಂಡುರಂಗ:
 34. ಕೇಶವ:
 35. ವಿಠಲ:
 36. ರಂಗ :
 37. ಮುಖಿಲ: (?) (ಚರ್ಚೆ)

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]ವಿಷ್ಣುವಿನ ಅವತಾರಗಳು

HinduSwastika.svg
ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬಲರಾಮ | ಬುದ್ಧ | ಕಲ್ಕಿ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ HinduSwastika.svg
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ( ಟೆಂಪ್ಲೇಟಿನಲ್ಲಿ ದಶಾವತಾರ ದ ೧೧ ಹೆಸರಿದೆ- ಅದರಲ್ಲಿ 'ಬಲರಾಮ ದಶಾವತಾರದಲ್ಲಿ ಸೇರುವುದಿಲ್ಲ -ಅವನು ಆದಿಶೇಷನ ಅವತಾರವೆಂದು ಹೇಳುವರು)

"https://kn.wikipedia.org/w/index.php?title=ಕೃಷ್ಣ&oldid=600460" ಇಂದ ಪಡೆಯಲ್ಪಟ್ಟಿದೆ