ಸಂಸಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರ್

Bhavachakra describing the cycle of saṃsāra: illustrated in the wheel are six realms of existence in which a sentient being can reincarnate, according to the rebirth doctrine of Buddhism. Yama, the god of death, is at the top of the outer rim. The outer rim shows the Twelve Nidānas doctrine.

ಸಂಸಾರ ಎಂಬುದು ಒಂದು ಪಾಲಿ/ ಸಂಸ್ಕೃತ ಶಬ್ಧ. ಇದರ ಅರ್ಥ "ಜಗತ್ತು" ಎಂದು.[೧][೨] ಹಿಂದೂ ಧರ್ಮ, ಬೌದ್ಧ ಧರ್ಮ, ಬೋನ್, ಜೈನ ಧರ್ಮ, ತಾವೋ ಧರ್ಮ, ಯಾರ್ಸಾನ್‍ನಲ್ಲಿ, ಸಂಸಾರವು ಜನನ, ಜೀವನ, ಮರಣ ಮತ್ತು ಮರುಹುಟ್ಟಿನ (ಪುನರ್ಜನ್ಮ) ಪುನರಾವರ್ತಿಸುವ ಚಕ್ರ.[೨] ಇದು ಬಹುತೇಕ ಎಲ್ಲಾ ಭಾರತೀಯ ಧರ್ಮಗಳ ಮೂಲಭೂತ ನಂಬಿಕೆ. .[೩][೪][೫] ಸಿಖ್ ಧರ್ಮದಲ್ಲಿ ಈ ಪರಿಕಲ್ಪನೆಯು ಸ್ವಲ್ಪ ವಿಭಿನ್ನವಾಗಿದೆ ಮತ್ತು ವರ್ತಮಾನದಲ್ಲಿನ ಒಬ್ಬರ ಕ್ರಿಯೆಗಳು ಮತ್ತು ಪರಿಣಾಮಗಳನ್ನು ನೋಡುತ್ತದೆ. ಈ ಏಷ್ಯಾದ ಧರ್ಮಗಳ ದೃಷ್ಟಿಕೋನದ ಪ್ರಕಾರ, ಒಬ್ಬ ವ್ಯಕ್ತಿಯ ಪ್ರಸಕ್ತ ಜೀವನವು ಅನೇಕವುಗಳಲ್ಲಿ ಕೇವಲ ಒಂದು-ಜನನದ ಮೊದಲು ಹಳೆಯ ಅಸ್ತಿತ್ವಗಳಿಗೆ ಮರಳುವ ಮತ್ತು ಮರಣದ ಆಚೆ ಭವಿಷ್ಯದ ಅವತಾರಗಳಲ್ಲಿ ಮುಂದೆ ತಲುಪುವ. ಸಂಸಾರದ ಪರಿಕಲ್ಪನೆಯು ವೇದಗಳ ನಂತರ ಸಾಹಿತ್ಯದಲ್ಲಿದೆ.ಈ ಸಿದ್ಧಾಂತವನ್ನು ವೇದಗಳಲ್ಲಿ ಚರ್ಚಿಸಲಾಗಿಲ್ಲ.[೬][೭] ಇದು ಹೆಚ್ಚು ಪರಿಪಕ್ವವಾಗಿ ಮೊದಲ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ.[೮][೯] ಸಂಸಾರದ ಪೂರ್ಣ ಪ್ರತಿಪಾದನೆ ಕ್ರಿ ಪೂ ಮೊದಲನೆಯ ಶತಮಾನದ ಹಿಂದೂ ತತ್ವಶಾಸ್ತ್ರ ಗ್ರಂಥಗಳಲ್ಲಿ ಅಂತೆಯೇ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಪ್ರತಿಪಾದನೆಗಳಲ್ಲಿ ಕಂಡುಬರುತ್ತದೆ.[೩][೯][೧೦] ಸಂಸಾರ ಸಿದ್ಧಾಂತ ಹಿಂದೂಧರ್ಮದ ಕರ್ಮ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದೆ. ಸಂಸಾರದಿಂದ ಬಿಡುಗಡೆ ಹೊಂದುವ ದಾರಿಯ ಅನ್ವೇಷನೆ ಭಾರತೀಯ ಪರಂಪರೆಯ ಮೂಲದಲ್ಲೇ ಇದೆ.ಸಂಸಾರದಿಂದ ಬಿಡುಗಡೆ ಹೊಂದುವುದನ್ನು ಮೋಕ್ಷ,ನಿರ್ವಾಣ, ಮುಕ್ತಿ ಅಥವಾ ಕೈವಲ್ಯ ಎಂದು ಕರೆಯುತ್ತಾರೆ.[೩] [೧೧] ===ಪರಿಭಾಷೆ===ಅ ಎಲ್ಲಾ ಭಾರತೀಯ ಧರ್ಮಗಳಲ್ಲಿನ ಮೂಶ್ಲಭೂತ ಪರಿಕಲ್ಪನೆಯಾದ ಸಂಸಾರವು ಕರ್ಮ ಸಿದ್ಧಾಂತಕ್ಕೆ ಸಂಬಂಧಿಸಿದೆ.ಎಲ್ಲಾ ಜೀವಿಗಳು ಜನ್ಮ ಮತ್ತು ಪುನರ್ಜನ್ಮಗಳ ಚಕ್ರದ ಮೂಲಕ ಸಾಗುತ್ತವೆ ಎಂಬ ನಂಬಿಕೆ ಇವುಗಳಲ್ಲಿದೆ. ಸಂಸಾರ ಎಂಬ ಪದವು "ಸತತ ಅಸ್ತಿತ್ವದ ಚಕ್ರ", "ಪರಿವರ್ತನೆ","ಕರ್ಮಚಕ್ರ", "ಜೀವನ ಚಕ್ರ" ಮತ್ತು "ಎಲ್ಲಾ ಜೀವನ,ವಸ್ತು,ಅಸ್ತಿತ್ವದ ಆವರ್ತಕತೆ"ಎಂಬ ನುಡಿಗಟ್ಟುಗಳಿಗೆ ಸಂಬಂಧಿಸಿದೆ.[೨][೧೨][೧೩]

ಮೊನಿಯರ್-ವಿಲಿಯಮ್ಸ್ ಪ್ರಕಾರ, ಸಂಸಾರವು ಸಂಸ್ (ಸಂಸ) ಎಂಬ ಪದದಲ್ಲಿ ಬೇರೂರಿದೆ, ಇದರರ್ಥ "ಸುತ್ತು ಹೋಡೆಯುವುದು, ಸುತ್ತುವುದು, ಸ್ಥಿತಿಯ ಅನುಕ್ರಮವಾಗಿ ಹಾದುಹೋಗುವುದು, ಕೊನೆಮುಟ್ಟಲು ಅಥವಾ ಪಡೆಯಲು ಪಥದಲ್ಲಿ ಚಲಿಸುವುದು".[೧೪] ಈ ಮೂಲದಿಂದ ಒಂದು ಪರಿಕಲ್ಪನಾ ರೂಪವು ನಮ್ಮ ಪ್ರಾಚೀನ ಗ್ರಂಥಗಳಲ್ಲಿ "ಸಂಸ್ಮರಣ" ಎಂಬ ಶಬ್ದದ ಮೂಲಕ ದೊರೆಯುತ್ತದೆ. ಸಂಸ್ಸ್ಮರಣ ಎಂದರೆ ವಿವಿಧ ಸ್ಥಿತಿಗಳಲ್ಲಿ ಅಂದರೆ ಜನನ, ಪುನರ್ಜನ್ಮದ ಮೂಲಕ ಸಾಗುವುದು ಅಥವಾ ಪ್ರಾಪಂಚಿಕ ಅಸ್ತಿತ್ವದ ಅನುಕ್ರಮ ಸ್ಥಿತಿಗಳ ಮೂಲಕ ಹಾದುಹೋಗುವುದು.ಈ ಪರಿಕಲ್ಪನೆಯು ಮೋಕ್ಷದ ಪರಿಕಲ್ಪನೆಗೆ ವಿರುದ್ಧವಾಗಿದೆ.ಮೋಕ್ಷವನ್ನು ಮುಕ್ತಿ,ನಿರ್ವಾಣ, ನಿಬ್ಬಾಣ ಅಥವಾ ಗುರಿಯಿಲ್ಲದ ಜನನ ಮರಣ ಪುನರ್ಜನ್ಮದ ಚಕ್ರದಿಂದ ವಿಮೋಚನೆಯನ್ನು ಸೂಚಿಸುತ್ತದೆ.[೧೧][೧೪] ಸಂಸಾರದ ಪರಿಕಲ್ಪನೆ ವೇದೋತ್ತರ ಕಾಲದಲ್ಲಿಯೇ ಅಭಿವೃದ್ಧಿಗೊಂಡಿತಾದರೂ,ಅಲ್ಲಿ ಇದರ ಸ್ವಷ್ಟ ನಿರೂಪಣೆ ಇಲ್ಲ.ಆರಂಬಿಕ ಉಪನಿಷತ್ತುಗಳಲ್ಲಿ ಇದರ ಕಲ್ಪನೆ ಪೂರ್ಣವಾಗಿ ಬೆಳೆಯುತ್ತದೆ.ಸಂಸಾರ ಎಂಬ ಪದವು ಮೋಕ್ಷದ ಜೊತೆಗೆ ಹಲವಾರು ಪ್ರಧಾನ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಕಥಾ ಉಪನಿಷತ್ತಿನಲ್ಲಿ, ಶ್ವೇತಾಶ್ವರ ಉಪನಿಷದ್ ನ ೬.೧೬ ಶ್ಲೋಕದಲ್ಲಿ,[೧೫] ಮೈತ್ರಿ ಉಪನಿಷದ್ ನ ೧.೪ ಮತ್ತು ೬.೩೪ ಶ್ಲೋಕಗಳಲ್ಲಿ ಸಂಸಾರ ಶಬ್ದದ ಉಲ್ಲೇಖವಿದೆ.[೧೬]

ಇತಿಹಾಸ[ಬದಲಾಯಿಸಿ]

ಸಂಸಾರದ ಪುನರಾವರ್ತಿತ ಪುನರ್ಜನ್ಮದ ಪರಿಕಲ್ಪನೆಯು ಕ್ರಿ.ಪೂ.ಮೊದಲ ಸಹಸ್ರಮಾನದ ಭಾರತ ಮತ್ತು ಪ್ರಾಚೀನ ಗ್ರೀಸ್ ಎರಡೂ ಪಠ್ಯಗಳಲ್ಲಿ ಕಂಡುಬರುತ್ತದೆ.[೧೭][೧೮] ಭಾರತದಲ್ಲಿ ಪುನರ್ಜನ್ಮದ ಕಲ್ಪನೆ ವೇದ ಕಾಲದಲ್ಲೇ ಇತ್ತಾದರೂ ನಂತರದ ಪಠ್ಯಗಳಾದ ಉಪನಿಷತ್ತುಗಳು, ಅರಣ್ಯಕಗಳು ಇವುಗಳಲ್ಲಿ ಹೆಚ್ಚು ಸ್ಪುಟವಾದ ವಿವರಣೆ ದೊರೆಯುತ್ತದೆ. ಆದರೂ ಇವುಗಳಲ್ಲಿಯೂ ಈ ಕಲ್ಪನೆಯು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ[೧೯].ಈ ಪರಿಕಲ್ಪನೆಯು ಕ್ರಿ.ಪೂ.ಮೊದಲ ಶತಮಾನದ ಮದ್ಯಭಾಗದಲ್ಲಿ ಭೌದ್ಧ ಧರ್ಮ, ಜೈನ ಧರ್ಮ ಮತ್ತು ಹಿಂದೂ ತತ್ವಶಾಸ್ತ್ರದ ಹಲವು ಪರಂಪರೆಗಳಲ್ಲಿ ವಿಶಿಷ್ಟ ಗುಣಲಕ್ಷಣಗಳೊಂದಿಗೆ ವಿವರವಾದ ಸಿದ್ಧಾಂತಗಳು ಅರಳುತ್ತವೆ.ಸಂಸಾರದ ಇತಿಹಾಸ ಸಾಮಾನ್ಯವಾಗಿ ಜೀವಿಗಳ ಪುನರ್ಜನ್ಮದ ಬಗ್ಗೆ ವಿವರಿಸುತ್ತದೆಯಾದರೂ, ಅದರ ಐತಿಹಾಸಿಕ ಬೆಳವಣಿಗೆ ಮಾನವ ಅಸ್ತಿತ್ವದ ನಿಜವಾದ ಸ್ವರೂಪ ಮತ್ತು ಜೀವಿ ಒಮ್ಮೆ ಮಾತ್ರ ಸಾಯುತ್ತದೆಯೇ ಎಂಬ ಪ್ರಶ್ನೆಗಳೊಂದಿಗೆ ಪ್ರಾರಂಭವಾಯಿತು.ಇದು "ಪುನರ್ಮೃತ್ಯು" ಮತ್ತು "ಪುನರವೃತ್ತಿ" ಪರಿಕಲ್ಪನೆಗಳಿಗೆ ಮೊದಲು ಕಾರಣವಾಯಿತು.[೯]

ಉಲ್ಲೇಖಗಳು[ಬದಲಾಯಿಸಿ]

  1. Klaus Klostermaier 2010, p. 604.
  2. ೨.೦ ೨.೧ ೨.೨ Mark Juergensmeyer & Wade Clark Roof 2011, pp. 271–72.
  3. ೩.೦ ೩.೧ ೩.೨ Bodewitz, Henk (2019). "Chapter 1 – The Hindu Doctrine of Transmigration: Its Origin and Background". In Heilijgers, Dory H.; Houben, Jan E. M.; van Kooij, Karel (eds.). Vedic Cosmology and Ethics: Selected Studies. Gonda Indological Studies. Vol. 19. Leiden and Boston: Brill Publishers. pp. 3–19. doi:10.1163/9789004400139_002. ISBN 978-90-04-40013-9. ISSN 1382-3442.
  4. Yadav, Garima (2018), "Abortion (Hinduism)", Hinduism and Tribal Religions, Encyclopedia of Indian Religions, Springer Netherlands, pp. 1–3, doi:10.1007/978-94-024-1036-5_484-1, ISBN 978-9402410365
  5. Flood, Gavin D. (1996), An Introduction to Hinduism, Cambridge University Press
  6. A.M. Boyer: Etude sur l'origine de la doctrine du samsara. Journal Asiatique, (1901), Volume 9, Issue 18, S. 451–53, 459–68
  7. Yuvraj Krishan: . Bharatiya Vidya Bhavan, 1997, ISBN 978-81-208-1233-8
  8. ಉಲ್ಲೇಖ ದೋಷ: Invalid <ref> tag; no text was provided for refs named amboyer
  9. ೯.೦ ೯.೧ ೯.೨ Stephen J. Laumakis 2008, pp. 90–99.
  10. ಉಲ್ಲೇಖ ದೋಷ: Invalid <ref> tag; no text was provided for refs named Krishan1997p17
  11. ೧೧.೦ ೧೧.೧ Shirley Firth (1997). Dying, Death and Bereavement in a British Hindu Community. Peeters Publishers. pp. 106, 29–43. ISBN 978-90-6831-976-7.
  12. Rita M. Gross (1993). Buddhism After Patriarchy: A Feminist History, Analysis, and Reconstruction of Buddhism. State University of New York Press. pp. 148. ISBN 978-1-4384-0513-1.
  13. ಉಲ್ಲೇಖ ದೋಷ: Invalid <ref> tag; no text was provided for refs named ykrishanp24
  14. ೧೪.೦ ೧೪.೧ Monier Monier-Williams (1923). A Sanskrit-English Dictionary. Oxford University Press. pp. 1040–41.
  15. Shvetashvatara Upanishad षष्ठः अध्यायः Archived 26 October 2020 ವೇಬ್ಯಾಕ್ ಮೆಷಿನ್ ನಲ್ಲಿ. Wikisource
  16. Maitri Upanishad ref>Shvetashvatara Upanishad षष्ठः अध्यायः Archived 26 October 2020 ವೇಬ್ಯಾಕ್ ಮೆಷಿನ್ ನಲ್ಲಿ. Wikisource
  17. Norman C. McClelland (2010). Encyclopedia of Reincarnation and Karma. McFarland. pp. 102–03. ISBN 978-0-7864-5675-8.
  18. Clifton D. Bryant; Dennis L. Peck (2009). Encyclopedia of Death and the Human Experience. SAGE Publications. pp. 841–46. ISBN 978-1-4522-6616-9.
  19. Stephen J. Laumakis 2008, p. 90.
"https://kn.wikipedia.org/w/index.php?title=ಸಂಸಾರ&oldid=1177647" ಇಂದ ಪಡೆಯಲ್ಪಟ್ಟಿದೆ