ವಿಷಯಕ್ಕೆ ಹೋಗು

ಕಾಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಳಿ
The Goddess Kali, 1940s Poster art
The Goddess Kali, 1940s Poster art
Goddess of Time, Change
ದೇವನಾಗರಿकाली
Tamil scriptகாளி
ಸಂಬಂಧDevi, Mahavidya
ನೆಲೆCremation grounds
MantraOm Krīm Kālyai namaḥ ,
Om Kapālinaye Namah,
Om Hrim Shrim Krim Parameshvari Kalike Svaha
WeaponSword
ಹೆಂಡತಿಶಿವ
ವಾಹನJackal

Kālī (ಸಂಸ್ಕೃತ:काली, IPA: [kɑːliː]; ಬಂಗಾಳಿ:কালী), ಕಾಳಿಕಾ ಎಂದೂ ಪ್ರಸಿದ್ಧ (ಬಂಗಾಳಿ:কালিকা, Kālikā), ಇದು ಅನಂತ ಶಕ್ತಿಯನ್ನು ಹೊಂದಿರುವ ಹಿಂದೂ ದೇವತೆ. ಕಾಳಿ ಎನ್ನುವ ಹೆಸರು ಕಾಲ ಎನ್ನುವುದರಿಂದ ಬಂದಿದೆ. ಇದರರ್ಥ ಕಪ್ಪು, ಕಾಲ (ಸಮಯ), ಮರಣ, ಸಾವಿನ ದೇವರು, ಶಿವ. ಕಾಳಿ ಎನ್ನುವುದರ ಅರ್ಥ "ಕಪ್ಪಗಿರುವುದು". ಶಿವನನ್ನು ಕಾಲ ಎನ್ನುವುದರಿಂದ -ಅನಂತ ಕಾಲ, ಕಾಳಿ ಆತನ ಪತ್ನಿ, "ಸಮಯ" ಅಥವಾ "ಸಾವು" ಎನ್ನುವ ಅರ್ಥಗಳೂ ಇವೆ. (ಕಾಲವು ಬಂದಂತೆ). ಹೀಗೆ ಕಾಳಿಯು ಕಾಲ ಮತ್ತು ಪರಿವರ್ತನೆಯ ದೇವತೆ. ಹೀಗಿದ್ದರೂ ಕೆಲವೊಮ್ಮೆ ಕಪ್ಪಾಗಿ ಮತ್ತು ರೌದ್ರಾಕಾರವಾಗಿ ಕಾಣಿಸಿಕೊಳ್ಳುವಳು. ಅವಳ ಮೊತ್ತಮೊದಲ ಅವತಾರ ಸರ್ವನಾಶಕ ಶಕ್ತಿಸ್ವರೂಪಿಣಿಯದು, ಇನ್ನೂ ಕೆಲವು ಪ್ರಭಾವವನ್ನು ಹೊಂದಿದೆ. ವಿವಿಧ ಶಾಕ್ತ ಹಿಂದೂ ವಿಶ್ವಶಾಸ್ತ್ರಗಳಲ್ಲಿ, ಅದೇ ರೀತಿ ಶಾಕ್ತ ತಾಂತ್ರಿಕ ನಂಬಿಕೆಗಳಲ್ಲಿ ಆಕೆಯನ್ನೇ ಪರಮಸತ್ಯ ಅಥವಾ ಬ್ರಹ್ಮನ್ ಎಂದು ಪೂಜಿಸುತ್ತಾರೆ. ಅವಳನ್ನು ಭವತಾರಿಣಿ (ಅಕ್ಷರಶಃ "ಭವಬಂಧನದಿಂದ ಪಾರುಮಾಡುವವಳು") ಎಂದು ಪೂಜಿಸುತ್ತಾರೆ. ಇತ್ತೀಚಿನ ಭಕ್ತಿ ಪಂಥದವರು ಕಾಳಿಯನ್ನು ಮಂಗಳವನ್ನುಂಟುವಾಡುವ ಮಹಾಮಾತೆ ಮಹಾದೇವಿ ಎಂದು ಪರಿಗಣಿಸಿದ್ದಾರೆ.

ಕಾಳಿಯು ಭಗವಂತ ಶಿವನ ಜೊತೆಗಾರ್ತಿಯಾಗಿ ಪ್ರತಿನಿಧಿಸಲ್ಪಡುತ್ತಾಳೆ. ಶಿವನ ಶರೀರದ ಮೇಲೆ ಕಾಳಿ ನಿಂತಿರುತ್ತಾಳೆ. ದುರ್ಗಾ, ಭದ್ರಕಾಳಿ, ಸತಿ, ರುದ್ರಾಣಿ, ಪಾರ್ವತಿ ಮತ್ತು ಚಾಮುಂಡಾ ಮುಂತಾದ ಇನ್ನೂ ಅನೇಕ ಹಿಂದೂ ದೇವತೆಗಳ ಜೊತೆಗೂ ಆಕೆಯ ಸಂಬಂಧವಿದೆ. ದಶ ಮಹಾವಿದ್ಯಾಗಳು, ಹತ್ತು ಭೀಕರ ತಾಂತ್ರಿಕ ದೇವಿಯರಲ್ಲಿ ಆಕೆ ಮುಂಚೂಣಿಯಲ್ಲಿದ್ದಾಳೆ.[]

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

("ಕಪ್ಪು, ಕರಿಯ ಕರಿಯ ಬಣ್ಣದ್ದು").[] Kālī ಸ್ತ್ರೀ ಲಿಂಗ ರೂಪ kāla ಕಾಲದ ಮೂಲ ಅರ್ಥ "ಕಪ್ಪು," ಆದರೆ "ಕಾಲ(ಸಮಯ)" ಎನ್ನುವ ಅರ್ಥವೂ ಇದೆ. ಕಾಳಿ ಎನ್ನುವುದರ ಅರ್ಥ "ಕಪ್ಪಗಿರುವದು" ಮತ್ತು "ಕಾಲ" ಅಥವಾ "ಕಾಲಾತೀತ" ಎನ್ನುವ ಅರ್ಥವೂ ಇದೆ. ಕಾಳಿಯು ಶಿವ ಮತ್ತು ಶೈವರೊಂದಿಗೆ ಬಲವಾಗಿ ಸಂಬಂಧವನ್ನು ಹೊಂದಿದೆ. ಕಾಳಿಯ ಸ್ತ್ರೀ ರೂಪದ ಹೆಸರುಗಳನ್ನು ಕಾಲದ ಸ್ತ್ರೀಲಿಂಗ ರೂಪದಿಂದ ಪಡೆಯಲಾಗಿದೆ. (ಶಿವನ ವಿಶೇಷಣ). ಪ್ರಾಚೀನ ಸಂಸ್ಕೃತ ನಿಘಂಟು, ಶಬ್ದಕಲ್ಪದ್ರುಮ್್ ಹೀಗೆ ಹೇಳುತ್ತದೆ: कालः शिवः । तस्य पत्नीति - काली । kālaḥ śivaḥ । tasya patnīti kālī - "ಶಿವನು ಕಾಲ, ಹೀಗಾಗಿ ಆತನ ಪತ್ನಿ ಕಾಲಿ."

ಮೇಲೆ ವರ್ಣಿಸಿರುವಂತೆ ಇತರ ಹೆಸರುಗಳಲ್ಲಿ Kālarātri ("ಕಾಲ ರಾತ್ರಿ"), ಸೇರಿದೆ. ಮತ್ತು Kālikā ("ಕಾಲ(ಸಮಯ)ಕ್ಕೆ ಸಂಬಂಧಿಸಿ"). ಕಾಳಿ ಹೆಸರನ್ನು ಅಂಕಿತ ನಾಮದಂತೆ ಅಥವಾ ಬಣ್ಣದ ವರ್ಣನೆಯಾಗಿಯೂ ಬಳಸಬಹುದು ಎಂದು ಕೊಬರ್ನ್ ಬರೆದಿರುವನು.[] ಕಪ್ಪಿನೊಂದಿಗೆ ಕಾಳಿಯ ಸಂಬಂಧವು ಜೊತೆಗಾರ ಶಿವನೊಂದಿಗೆ ವೈರುಧ್ಯದಿಂದ ಕೂಡಿದೆ. ಶಿವನ ಶರೀರವು ಶ್ಮಶಾನದ ಬಿಳಿ ಬೂದಿಯಿಂದ ಲೇಪಿತವಾಗಿರುತ್ತದೆ (ಸಂಸ್ಕೃತ:śmaśāna ) ಅದರಲ್ಲಿಯೇ ಆತ ಧ್ಯಾನವನ್ನು ಮಾಡುತ್ತಾನೆ. ಮತ್ತು ಕಾಳಿ ಕೂಡ ಅಲ್ಲಿ ಜೊತೆಗಿರುತ್ತಾಳೆ.śmaśāna-kālī Kālī ಕಾಳಿ ಪದವು ಮೇಲಿಂದ ಮೇಲೆ ಗೊಂದಲವನ್ನು ಉಂಟುಮಾಡುತ್ತದೆ. ಕಲಿಯುಗ ಅಥವಾ ದೈತ್ಯ ಕಾಳಿಯೂ ಇದ್ದಾನೆ. ಹೇಗೆ ಇರಲಿ, ಕಾಳಿ (ಕಪ್ಪು, ಕಾಲ) ಮತ್ತು ಕಳಿ (ದುರ್ಬಲ, ಕಚ್ಚಾ, ಮೂಕ) ಇವುಗಳ ವ್ಯುತ್ಪತ್ತಿಯ ಮೂಲ ಒಂದೇ ಅಲ್ಲ, ಮತ್ತು ದೇವಿKālī ಯು ಹಿಂದೂ ಧರ್ಮದಲ್ಲಿ ಕಲಿಯುಗಕ್ಕೆ ಸಂಬಂಧಿಸಿಲ್ಲ.

ಮೂಲಗಳು

[ಬದಲಾಯಿಸಿ]

ಈ ಪದವುKālī ಅಥರ್ವ ವೇದದಲ್ಲಿಯೇ ಕಂಡುಬಂದರೂ ಅಂಕಿತನಾಮವಾಗಿ ಇದನ್ನು ಮೊದಲಿಗೆ ಬಳಸಿದ್ದು ಕಥಕ ಗೃಹ್ಯ ಸೂತ್ರದಲ್ಲಿ (19.7)[] ಎಂಬುದನ್ನು ಹಗ್ ಅರ್ಬನ್ ಟಿಪ್ಪಣಿ ಮಾಡಿದ್ದಾರೆ. ಮಂಡಕ ಉಪನಿಷತ್ ನಲ್ಲಿ ಕಾಳಿ ಎನ್ನುವುದು ಋಗ್ವೇದದ ಬೆಂಕಿಯ ದೇವರಾದ ಅಗ್ನಿಯ ಏಳು ನಾಲಿಗೆಗಳಲ್ಲಿ ಒಂದರ ಹೆಸರು. (2:4), ಆದರೆ ಇದು ದೇವಿಯನ್ನು ಉಲ್ಲೇಖಿಸಿ ಹೇಳಿದಂತಿಲ್ಲ. ಕಾಳಿಯ ಸದ್ಯದ ರೂಪವು ಮೊದಲಿಗೆ ಕಾಣಿಸಿಕೊಳ್ಳುವುದು ಮಹಾಭಾರತ ದ ಸೌಪ್ತಿಕ ಪರ್ವದಲ್ಲಿ. (10.8.64). ಅವಳನ್ನುKālarātri (ಅಕ್ಷರಶಃ, "ಕಾಳ ರಾತ್ರಿ") ಎಂದು ಕರೆದಿದ್ದಾರೆ. ಮತ್ತು ಪಾಂಡವ ಸೈನಿಕರ ಕನಸಿನಲ್ಲಿ ಕಾಣಿಸಿಕೊಳ್ಳುವಳು,ದ್ರೋಣನ ಮಗ ಅಶ್ವತ್ಥಾಮನ ದಾಳಿಯ ಸಂದರ್ಭದಲ್ಲಿ ನಡೆದ ಯುದ್ದದ ನಡುವೆ ಅವಳು ಪ್ರತ್ಯಕ್ಷಳಾಗಿ ಕೊನೆಯವರೆಗೂ ಇರುವಳು.. ಅತ್ಯಂತ ಪ್ರಸಿದ್ಧವಾಗಿ ಅವಳು ಕಾಣಿಸಿಕೊಂಡಿದ್ದು ಆರನೆ ಶತಮಾನದ ದೇವಿಮಹಾತ್ಯಮ್ನಲ್ಲಿ. ಮಹಾದೇವಿಯ ಒಂದು ಶಕ್ತಿಯಾದ ಆಕೆ ರಕ್ತಬೀಜಾಸುರನೆಂಬ ರಾಕ್ಷಸನನ್ನು ಸೋಲಿಸುತ್ತಾಳೆ. ಹತ್ತನೆ ಶತಮಾನದ ಕಾಳಿಕಾ ಪುರಾಣ ಕಾಳಿಯನ್ನು ಅಂತಿಮ ವಾಸ್ತವ ಅಥವಾ ಬ್ರಹ್ಮನ್ ಎಂದು ಪೂಜಿಸುತ್ತದೆ.

ಡೇವಿಡ್ ಕಿನ್ ಸ್ಲೇ ಪ್ರಕಾರ ಹಿಂದೂ ಧರ್ಮದಲ್ಲಿ ವಿಶಿಷ್ಟ ದೇವಿಯಾಗಿ ಕಾಳಿಯ ಮೊದಲ ಉಲ್ಲೇಖ ಕಿ.ಶ. ಸುಮಾರು 600ರಲ್ಲಿ ಕಂಡು ಬಂದಿದೆ. ಮತ್ತು ಈ ಗ್ರಂಥಗಳು "ಸಾಮಾನ್ಯವಾಗಿ ಅವಳನ್ನು ಹಿಂದೂ ಸಮಾಜದ ಪರಿಧಿಯಲ್ಲಿ ಅಥವಾ ಯುದ್ಧಭೂಮಿಯಲ್ಲಿ ಇರಿಸಿವೆ."[] ಅನೇಕ ಬಾರಿ ಅವಳನ್ನು ಶಿವನ ಶಕ್ತಿ ಎಂದು ಪರಿಗಣಿಸಲಾಗಿದೆ ಮತ್ತು ವಿವಿಧ ಪುರಾಣಗಳಲ್ಲಿ ಅವಳನ್ನು ಆತನಿಗೆ ನಿಕಟವಾಗಿ ಜೊತೆ ಮಾಡಲಾಗಿದೆ. ಕಾಳಿಕಾ ಪುರಾಣವು ಅವಳನ್ನು "ಆದಿ ಶಕ್ತಿ" (ಎಲ್ಲ ಶಕ್ತಿಗಳ ಮೂಲ) ಎಂದು ವರ್ಣಿಸುತ್ತದೆ. ಮತ್ತು "ಪರಾ ಪ್ರಕೃತಿ" ಅಥವಾ ಸೃಷ್ಟಿಯನ್ನು ಮೀರಿದ್ದು ಎಂದು ಹೇಳುತ್ತದೆ.

ತಂತ್ರಗಳಲ್ಲಿ

[ಬದಲಾಯಿಸಿ]
ಕಾಳಿ ಯಂತ್ರ

ಈ ದೇವಿಯರು ತಂತ್ರ ಯೋಗದ ಅಧ್ಯಯನ ಮತ್ತು ಆಚರಣೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾರೆ. ಮತ್ತು ಪುರುಷ ದೇವತೆಗಳಂತೆ ವಾಸ್ತವ ಸ್ವರೂಪವನ್ನು ಅರಿಯಬಲ್ಲ ವಿವೇಚನಾಶಕ್ತಿಯನ್ನು ಹೊಂದಿರುವ ಕೇಂದ್ರವೆಂದು ನಂಬಲಾಗಿದೆ. ಹೀಗಿದ್ದರೂ ಪಾರ್ವತಿಯು ಸ್ವೀಕರಿಸುವವಳು ಮತ್ತು ತಂತ್ರಗಳ ರೂಪದಲ್ಲಿ ಶಿವನ ವಿದ್ವತ್ತನ್ನು ಕಲಿಯುವ ವಿದ್ಯಾರ್ಥಿಯೆಂದು ಹೇಳಲಾಗುತ್ತದೆ. ತಾಂತ್ರಿಕ ಪ್ರತಿಮಾಶಾಸ್ತ್ರದಲ್ಲಿ, ಗ್ರಂಥಗಳಲ್ಲಿ ಮತ್ತು ಆಚರಣೆಗಳಲ್ಲಿ ಕಾಳಿಯೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.[] ಅನೇಕ ಮೂಲಗಳಲ್ಲಿ ಪರಮ ಸತ್ಯವೆಂದು ಅಥವಾ ಎಲ್ಲ ದೇವರಿಗಿಂತ ಮಹಾನ್ ಎಂದು ಹೊಗಳಲಾಗುತ್ತಿದೆ. ದೇವತೆಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಎಲ್ಲರೂ ಸಮುದ್ರದ ನೊರೆ ಗುಳ್ಳೆಗಳಂತೆ ಅವಳಿಂದಲೇ ಮೂಡುತ್ತಾರೆ ಮತ್ತು ಎಡೆಬಿಡದೆ ಉಗಮಿಸುತ್ತಾರೆ ಮತ್ತು ಮರೆಯಾಗುತ್ತಾರೆ. ತಮ್ಮ ಮೂಲ ಆಕರವನ್ನು ಬದಲಾಗದಂತೆ ಉಳಿಸಿ ಹೋಗುತ್ತಾರೆ ಎಂದು ನಿರ್ವಾಣ ತಂತ್ರ ಹೇಳುತ್ತದೆ. ನಿರುತ್ತರ-ತಂತ್ರ ಮತ್ತು ಪಿಚ್ಚಿಲ-ತಂತ್ರ ಕಾಳಿಯ ಎಲ್ಲ ಮಂತ್ರಗಳು ಸರ್ವಶ್ರೇಷ್ಠ ಎಂದು ಘೋಷಿಸುತ್ತವೆ ಮತ್ತು ಯೋಗಿನಿ-ತಂತ್ರ , ಕಾಮಾಕ್ಯ-ತಂತ್ರ ಮತ್ತು ನಿರುತ್ತರ-ತಂತ್ರ ಗಳೆಲ್ಲವೂ ಕಾಳಿ ವಿದ್ಯೆ ಗಳೆಂದು ಹೆಸರಾಗಿವೆ. (ಮಹಾದೇವಿ ಅಥವಾ "ಅದರಷ್ಟಕ್ಕೇ ದೇವತಾಶಾಸ್ತ್ರ."ವೆಂದು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.) ಮಹಾದೇವಿಸ್ವರೂಪ ದ ಸಾರವೆಂದೇ ಅವುಗಳೆಲ್ಲ ಘೋಷಿಸಿವೆ[].

ಮಹಾನಿರ್ವಾಣ ತಂತ್ರ ದಲ್ಲಿ ಕಾಳಿಯು ಆದಿ ಶಕ್ತಿ ಗೆ ವಿಶೇಷಣವೇ ಆಗಿದೆ. ಮತ್ತು ಒಂದು ಭಾಗದಲ್ಲಿ ಶಿವನು ಅವಳನ್ನು ಹೊಗಳುತ್ತಾನೆ:

ವಸ್ತುಗಳ ವಿಘಟನೆಯಲ್ಲಿ ಇದು ಕಾಲ (ಸಮಯ). ಆತನೇ ಎಲ್ಲವನ್ನೂ ಭಕ್ಷಿಸುವವನು, ಈ ಕಾರಣದಿಂದ ಆತನನ್ನು ಮಹಾಕಾಲನೆಂದು ಕರೆಯುವರು. (ಶಿವನ ಒಂದು ವಿಶೇಷಣ), ಮತ್ತು ಮಹಾಕಾಲನೇ ಸ್ವತಃ ಮಹಾಭಕ್ಷಕನಾಗಿರುವುದರಿಂದ ನೀನೇ ಸರ್ವಶ್ರೇಷ್ಠ ಆದಿಶಕ್ತಿ ಕಾಲಿಕಾನ ನಿರ್ಮಾತೃವೂ ಹೌದು. ಯಾಕೆಂದರೆ ನೀನು ಸರ್ವಭಕ್ಷಕ ಕಾಲ. ನೀನು ಕಾಳಿಯ ನಿರ್ಮಾತೃ, ಎಲ್ಲ ವಸ್ತುಗಳ ಮೂಲ ರೂಪ, ಮತ್ತು ಯಾಕೆಂದರೆ ನೀನು ಎಲ್ಲ ಮೂಲಗಳ ನಿರ್ಮಾತೃ ಮತ್ತು ಎಲ್ಲ ವಸ್ತುಗಳ ಸರ್ವಭಕ್ಷಕನಾಗಿರುವುದರಿಂದ ನಿನ್ನ ನಿರ್ಮಾಣವನ್ನು ಆದ್ಯ (ಆದಿ ಕಾಳಿ) ಎಂದು ಕರೆಯುವುದು. ವಿಘಟನೆಯ ಬಳಿಕ ಕಪ್ಪು ಮತ್ತು ಆಕಾರವಿಲ್ಲದ ನಿನ್ನದೇ ಸ್ವಂತ ರೂಪವನ್ನು ಮರಳಿ ಪಡೆದು, ನೀನೊಬ್ಬಳೇ ಅವರ್ಣನೀಯ ಮತ್ತು ಅನೂಹ್ಯವಾದ ಸ್ಥಿತಿಯಲ್ಲಿರುವಿ. ಒಂದು ರೂಪವನ್ನು ಹೊಂದಿದ್ದರೂ ನೀನು ಆಕಾರ ರಹಿತಳಾಗಿರುವಿ, ನಿನ್ನಷ್ಟಕ್ಕೆ ನಿನಗೆ ಆದಿ ಇಲ್ಲದಿದ್ದರೂ ಮಾಯೆಯ ಮೂಲಕ ನೀನು ಅನೇಕ ಆಕಾರ ತಳೆಯುವಿ, ಎಲ್ಲ ಆರಂಭಗಳಿಗೂ ನೀನೇ ನಿರ್ಮಾತೃವಾಗಿದ್ದರೂ, ಸೃಷ್ಟಿಕರ್ತೆ, ರಕ್ಷಕಿ ಮತ್ತು ಅದು ನಿನ್ನದೇ ನಿರ್ಮಾಣವಾಗಿದ್ದರೂ ನಾಶಮಾಡುವವಳೂ ಹೌದು []

ಕಾಳಿಯ ಆಕಾರವು ಸಾವನ್ನು, ವಿನಾಶವನ್ನು ಮತ್ತು ವಾಸ್ತವತೆಯನ್ನು ನುಂಗಿಹಾಕುವ ದರ್ಶನವನ್ನು ಸೂಚಿಸುತ್ತದೆ. ಇದು ಹೀಗಿರುವಾಗ ಆಕೆಯು ಒಂದು "ನಿಷಿದ್ಧ ವಸ್ತು"ವೂ ಹೌದು, ಅಥವಾ ತನ್ನಷ್ಟಕ್ಕೆ ಸಾವೂ ಕೂಡ. ಪಂಚತತ್ವ ಪದ್ಧತಿಯಲ್ಲಿ ಸಾಧಕ ನು ದಿಟ್ಟತನದಿಂದ ಕಾಳಿಯೊಂದಿಗೆ ಸಂಘರ್ಷವನ್ನು ಬಯಸುತ್ತಾನೆ ಮತ್ತು ಆಮೂಲಕ ಆಕೆಯನ್ನು ಅನುರೂಪಗೊಳಿಸುತ್ತಾನೆ ಮತ್ತು ಅವಳನ್ನು ಮೋಕ್ಷದ ಸಾಧನವನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ.[] ಕರ್ಪುರದಿ-ಸ್ತೋತ್ರ [] ಕೃತಿಯಲ್ಲಿ ಇದು ಸ್ಪಷ್ಟವಾಗಿದೆ. ಶ್ಮಶಾನ ಭೂಮಿಯಲ್ಲಿ ಇದು ಕಾಳಿಗೆ ಪಂಚತತ್ವ ಆಚರಣೆಯನ್ನು ನಡೆಸುವುದನ್ನು ವರ್ಣಿಸುವ ಚಿಕ್ಕ ಪದ್ಯವಾಗಿದೆ. (ಸಮಾಹನ-ಸಾಧನ )

ಓ ಮಹಾಕಾಳಿ, ಯಾರು ಶ್ಮಶಾನ ಭೂಮಿಯಲ್ಲಿ ಬೆತ್ತಲೆಯಾಗಿ, ಕೆದರಿದ ಕೂದಲುಗಳೊಂದಿಗೆ, ನಿನ್ನನ್ನು ಧ್ಯಾನ ಮಾಡುತ್ತಾನೋ, ನಿನ್ನ ಮಂತ್ರವನ್ನು ಉಚ್ಚರಿಸುತ್ತಾನೋ ಮತ್ತು ಪ್ರತಿ ಮಂತ್ರೋಚ್ಚಾರಣೆ ಸಂದರ್ಭದಲ್ಲಿ ಬೀಜಗಳನ್ನು ಹೊಂದಿರುವ ಸಾವಿರ ಅಖಂಡ ಹೂಗಳನ್ನು ನಿನಗೆ ಅರ್ಪಿಸುತ್ತಾನೋ ಆತನು ಯಾವುದೇ ಶ್ರಮವಿಲ್ಲದೆ ಈ ಭೂಮಿಯ ದೊರೆಯಾಗುತ್ತಾನೆ. ಓ ಕಾಳಿ, ಯಾವನು ಶ್ಮಶಾನ ಭೂಮಿಯಲ್ಲಿ ಮಂಗಳವಾರ ಮಧ್ಯರಾತ್ರಿ ನಿನ್ನ ಮಂತ್ರವನ್ನು ಪಠಿಸುತ್ತಾನೋ, ಒಮ್ಮೆ ತನ್ನ ಶಕ್ತಿಯ (ತನ್ನ ಮಹಿಳಾ ಸಂಗಾತಿಯ) ಒಂದು ಕೂದಲನ್ನೇ ಭಕ್ತಿಯಿಂದ ಅರ್ಪಿಸುತ್ತಾನೋ ಆತ ಮಹಾನ್ ಕವಿಯಾಗುತ್ತಾನೆ, ಭೂಮಿಯ ದೊರೆಯಾಗುತ್ತಾನೆ ಮತ್ತು ಸದಾಕಾಲ ಆನೆಯನ್ನು ಏರಿಕೊಂಡೇ ಸಂಚರಿಸುತ್ತಾನೆ. []

ಕಾಳಿಯು ಭಯಾನಕ, ಕೋಪಿಷ್ಠ, ದುರ್ಗೆ ಅಥವಾ ಶಿವನನ್ನು ಪೂಜಿಸುವ ದೈತ್ಯರನ್ನು ಸಂಹಾರ ಮಾಡುವವಳು ಎಂದು ಕರ್ಪುರದಿ-ಸ್ತೋತ್ರ ಸ್ಪಷ್ಟವಾಗಿ ಸೂಚಿಸುತ್ತದೆ. ಇಲ್ಲಿ ಅವಳು ಪಂಚಭೂತಗಳನ್ನು ಒಳಗೊಂಡ ವಿಶ್ವದ ಸರ್ವಶ್ರೇಷ್ಠ ಅಧಿನಾಯಕಿಯಾಗಿ ಗುರುತಿಸಲ್ಪಟ್ಟಿದ್ದಾಳೆ. ತನ್ನ ಪತಿಯಾದ ಭಗವಾನ್ ಶಿವನೊಂದಿಗೆ ಸೇರಿಕೊಂಡು, ಅವಳು ಜಗತ್ತನ್ನು ಸೃಷ್ಠಿಸುತ್ತಾಳೆ ಮತ್ತು ನಾಶವನ್ನೂ ಮಾಡುತ್ತಾಳೆ. ಜಗತ್ತನ್ನೇ ಆಳುವವಳು ಮತ್ತು ಧ್ಯಾನದ ವಸ್ತುವಾಗಿ ತನ್ನ ಪಾತ್ರಕ್ಕೆ ತಕ್ಕಂತೆ ಅವಳ ತೋರಿಕೆಯೂ ವಿಭಿನ್ನ ತಿರುವನ್ನು ಪಡೆಯುತ್ತದೆ.[೧೦] ತನ್ನ ಭಯಾನಕ ಸ್ವರೂಪಕ್ಕೆ ವಿರುದ್ಧವಾಗಿ ಹೆಚ್ಚು ಕರುಣಾಳುವಾದ ರೂಪವನ್ನೂ ಆಕೆ ಧರಿಸಬಲ್ಲಳು. ಆಕೆಯನ್ನು ಯುವತಿ ಮತ್ತು ಸುಂದರಿ, ಗಂಭೀರ ಮುಗುಳ್ನಗೆಯನ್ನು ಹೊಂದಿದವಳು ಮತ್ತು ತನ್ನೆರಡು ಬಲ ಕೈಗಳನ್ನು ಯಾವುದೇ ಭಯವನ್ನು ನಿವಾರಿಸುವ ಭರವಸೆಯನ್ನು ನೀಡುವಂತೆ ಮತ್ತು ವರಗಳನ್ನು ಪ್ರದಾನ ಮಾಡುವಂತೆ ಎತ್ತಿದವಳು ಎಂದು ವರ್ಣಿಸಲಾಗಿದೆ. ಹೆಚ್ಚು ಸಕಾರಾತ್ಮಕವಾದ ಲಕ್ಷಣಗಳೆಂದರೆ, ದೈವೀ ಕೋಪವನ್ನು ಮುಕ್ತಿಯನ್ನು ನೀಡುವ ದೇವಿಯಾಗಿ ಪರಿವರ್ತಿಸುವುದು. ಅದು ಸಾಧಕ ನ ಭಯವನ್ನು ಪರಿಹರಿಸುವುದು. ಇಲ್ಲಿ, ಕಾಳಿಯು ಸಾವಿನ ಮೇಲೆ ವಿಜಯ ಸಾಧಿಸಿದ ಸಂಕೇತದಂತೆ ತೋರುತ್ತಿದ್ದಾಳೆ.[೧೧]

ಬಂಗಾಳಿ ಸಂಪ್ರದಾಯದಲ್ಲಿ

[ಬದಲಾಯಿಸಿ]
ಕಾಳಿ ಪೂಜಾ ಉತ್ಸವ

ಬಂಗಾಳಿಯ ಮಧ್ಯಕಾಲದ ಕೊನೆಯ ಭಾಗದ ಭಕ್ತಿ ಸಾಹಿತ್ಯದಲ್ಲಿ ಕಾಳಿಯೂ ಒಂದು ಕೇಂದ್ರ ವ್ಯಕ್ತಿಯಾಗಿದ್ದಳು, ರಾಮಪ್ರಸಾದ ಸೇನರಂಥ (1718–75) ಭಕ್ತರೂ ಇದ್ದರು. ಶಿವನ ಪತ್ನಿಯಾಗಿ ಪಾರ್ವತಿಯು ಇದ್ದುದರ ಹೊರತಾಗಿಯೂ ಕಾಳಿಯನ್ನು ಅಪರೂಪಕ್ಕೆ ಹಿಂದೂ ಪುರಾಣಗಳಲ್ಲಿ ಮತ್ತು ಪ್ರತಿಮಾಶಾಸ್ತ್ರಗಳಲ್ಲಿ ಮಾತೃಸ್ವರೂಪಿಯೆಂದು ಹದಿನೆಂಟನೆ ಶತಮಾನದ ಆರಂಭದಲ್ಲಿ ಬಂಗಾಲಿ ಭಕ್ತಿಯು ಆರಂಭಗೊಳ್ಳುವ ವರೆಗೂ ಚಿತ್ರಿತವಾಗುತ್ತಿತ್ತು. ಬಂಗಾಳಿ ಸಂಪ್ರದಾಯದಲ್ಲಿಯೂ ಅವಳ ಸ್ವರೂಪ ಮತ್ತು ಚಟಗಳು ಸ್ವಲ್ಪ ಬದಲಾದವು.[೧೨]

ಕಾಳಿಯ ವಿಷಯದಲ್ಲಿ ತಾಂತ್ರಿಕರ ಉಪಕ್ರಮವು, ಆಕೆಯ ಉಗ್ರ ಸ್ವರೂಪದ ಹೊರತಾಗಿಯೂ ನೀರವ ರಾತ್ರಿಯಲ್ಲಿ ಶ್ಮಶಾನ ಭೂಮಿಯಲ್ಲಿ ಆಕೆಯನ್ನು ಎದುರಿಸುವ ಧೈರ್ಯವನ್ನು ಪ್ರದರ್ಶಿಸುವಂಥದ್ದು. ಇದಕ್ಕೆ ವಿರುದ್ಧ ಬಂಗಾಳಿ ಭಕ್ತರು ಕಾಳಿಯ ಬೋಧನೆಗಳನ್ನು ಸೂಕ್ತಗೊಳಿಸಿದರು ಮತ್ತು ಮಗುವಿನ ಪ್ರವೃತ್ತಿಯನ್ನು ಅಂಗೀಕರಿಸಿದರು. ಎರಡೂ ಪ್ರಕರಣಗಳಲ್ಲಿ ಭಕ್ತರ ಗುರಿ ಸಾವಿನೊಂದಿಗೆ ರಾಜಿ ಮಾಡಿಕೊಳ್ಳುವುದು ಮತ್ತು ಯಾವ ವಿಷಯಗಳು ಇವೆಯೋ ಅವುಗಳನ್ನು ಒಪ್ಪಿಕೊಳ್ಳುವ ಬಗ್ಗೆ ಅರಿತುಕೊಳ್ಳುವುದು. ಈ ಸಿದ್ಧಾತಗಳನ್ನು ರಾಮಪ್ರಸಾದರ ಬೋಧನೆಗಳಲ್ಲಿ ಚೆನ್ನಾಗಿ ವಿವರಿಸಲಾಗಿದೆ..[೧೩]

ಕಾಳಿಯು ಅವರ ಚೆನ್ನಾಗಿರುವ ವಿಷಯದಲ್ಲಿ ಉದಾಸೀನವನ್ನು ತೋರಿಸಿದ್ದಾಳೆ, ತೊಂದರೆ ಅನುಭವಿಸುವಂತೆ ಮಾಡಿದ್ದಾಳೆ, ಐಹಿಕ ಸುಖದ ಇಚ್ಛೆಯನ್ನು ಈಡೇರಿಸಲಿಲ್ಲ ಮತ್ತು ಐಹಿಕ ಒಳಿತನ್ನೆಲ್ಲ ನಾಶಮಾಡಿದಳು ಎಂದು ರಾಮಪ್ರಸಾದರು ತಮ್ಮ ಇತರ ಹಲವು ಹಾಡುಗಳಲ್ಲಿ ಟೀಕಿಸಿದ್ದಾರೆ. ಅವಳು ತಾಯಿಯಂತೆ ವರ್ತಿಸಲಿಲ್ಲ, ಈ ಕಾರಣಕ್ಕಾಗಿಯೇ ಅವಳು ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿದಳು ಎಂದು ಬರೆದಿದ್ದಾರೆ:

ಕಲ್ಲಿನಿಂದ ಹುಟ್ಟಿದವಳ ಎದೆಯಲ್ಲಿ ಕರುಣೆಯನ್ನು ಕಾಣುವುದಾದರೂ ಹೇಗೆ? [ಕಾಳಿಯು ಹಿಮಾಲಯದ ಮಗಳು ಎನ್ನುವುದರ ಉಲ್ಲೇಖ]
ಅವಳು ಕರುಣೆ ಇಲ್ಲದವಳು ಅಲ್ಲದಿದ್ದರೆ ತನ್ನ ಯಜಮಾನನ ಎದೆಗೇ ಒದೆಯುತ್ತಿದ್ದಳೆ?
ಜನರು ನಿನ್ನನ್ನು ಕರುಣಾಳು ಎಂದು ಕರೆಯುತ್ತಾರೆ, ಆದರೆ, ತಾಯೇ, ನಿನ್ನಲ್ಲಿ ಕರುಣೆಯೇ ಲವಲೇಶವೂ ಇಲ್ಲವಲ್ಲ.
ನೀನು ಇತರರ ಮಕ್ಕಳ ರುಂಡವನ್ನು ಕತ್ತರಿಸಿ ಹಾಕುವೆ ಮತ್ತು ಅದನ್ನು ನೀನು ಹಾರವನ್ನಾಗಿ ಮಾಡಿಕೊಂಡು ನಿನ್ನ ಕೊರಳಲ್ಲಿ ಧರಿಸುವೆ.
ನಾನು ನಿನ್ನನ್ನು ಎಷ್ಟುಬಾರಿ "ಮಾತೆ, ಮಾತೆ" ಎಂದು ಕರೆದೆ ಎನ್ನುವುದು ಲೆಕ್ಕಕ್ಕೇ ಬರುವುದಿಲ್ಲ. ನಾನು ಹೇಳುವುದು ನಿನಗೆ ಕೇಳಿಸುತ್ತಿದೆ, ಆದರೆ ನೀನು ಕೇಳಿಸಿಕೊಳ್ಳುವುದಿಲ್ಲ. [೧೪]

ಕಾಳಿಯ ಮಗುವಾಗಿ ಈ ಭೂಮಿಯ ಮೇಲಿನ ಸಂತೋಷ ಮತ್ತು ಆನಂದಗಳನ್ನು ನಿರಾಕರಿಸುವುದು ಸರಿಯಲ್ಲ ರಾಮಪ್ರಸಾದ್ ಒತ್ತಿ ಹೇಳುತ್ತಾರೆ ನಿರೀಕ್ಷೆ ಮಾಡಿದ್ದನ್ನು ಕೊಡುವುದಿಲ್ಲವೆಂದು ಕಾಳಿ ಹೇಳಿದಳು. ಭಕ್ತನಿಗೆ ಬಹುಶಃ ಇದು ಹಾಗೆ ಮಾಡುವುದಕ್ಕೆ ಅವಳ ಅತ್ಯಂತ ನಿರಾಕರಣೆ ಭಕ್ತರಿಗೆ ಅವರ ಮಿತಿಗಳ ಪ್ರಮಾಣದ ಅರಿವನ್ನು ಮೂಡಿಸುತ್ತದೆ ಮತ್ತು ಈ ಭೌತಿಕ ಜಗತ್ತಿನ ಆಚೆಗಿನ ವಾಸ್ತವವು ಅರಿವಿಗೆ ಬರುತ್ತದೆ.[೧೪][೧೫]

ಬಂಗಾಲಿಯ ಭಕ್ತಿ ಸಂಗೀತದ ಬಹುದೊಡ್ಡ ಭಾಗವು ಕಾಳಿಯನ್ನು ಅದರ ಕೇಂದ್ರ ಸಿದ್ಧಾಂತವಾಗಿ ಬಿಂಬಿಸುತ್ತದೆ. ಮತ್ತು ಇದು ಶ್ಯಾಮ ಸಂಗೀತವೆಂದು ಹೆಸರಾಗಿದೆ. ಬಹುತೇಕ ಪುರುಷ ಸಂಗೀತಗಾರರೇ ಇದನ್ನು ಹಾಡುತ್ತಾರೆ. ಇಂದು ಮಹಿಳೆಯರು ಕೂಡ ಈ ರೀತಿಯ ಸಂಗೀತವನ್ನು ಸ್ವೀಕರಿಸಿದ್ದಾರೆ. ಶ್ಯಾಮ ಸಂಗೀತದ ಅತ್ಯಂತ ಶ್ರೇಷ್ಠ ಹಾಡುಗಾರರಲ್ಲಿ ಒಬ್ಬರು ಪನ್ನಾಲಾಲ್ ಭಟ್ಟಾಚಾರ್ಯ. ಬಂಗಾಳದಲ್ಲಿ ಕಾಳಿ ಪೂಜಾ ಉತ್ಸವದಲ್ಲಿ ಕಾಳಿಯನ್ನು ಪೂಜಿಸುತ್ತಾರೆ. ಅಶ್ವಿನ ಮಾಸದ ಪಾಡ್ಯದ ದಿನ ಈ ಪೂಜೆ ಬರುತ್ತದೆ. ಇದು ದೀಪಾವಳಿ ಹಬ್ಬದ ಜೊತೆಗೇ ಬರುತ್ತದೆ.

ಪುರಾಣದಲ್ಲಿ

[ಬದಲಾಯಿಸಿ]

ರಕ್ತಬೀಜನ ಸಂಹಾರಕಿ

[ಬದಲಾಯಿಸಿ]

ಕಾಳಿಯ ಅತ್ಯಂತ ಪ್ರಸಿದ್ಧ ಪುರಾಣ ದುರ್ಗಾ ಮತ್ತು ಅವಳ ಸಹಾಯಕರಾದ ಮತ್ರಿಕರು ರಕ್ತಬೀಜನೆಂಬ ರಾಕ್ಷಸನನ್ನು ಸಂಹರಿಸಲು ವಿವಧ ರೀತಿಯಲ್ಲಿ ವಿವಿಧ ಆಯುಧಗಳಿಂದ ಗಾಯಗೊಳಿಸುತ್ತಾರೆ. ತಾವು ಪರಿಸ್ಥಿತಿಯನ್ನು ಬಗಡಾಯಿಸಿದೆವು ಎಂಬುದು ಅವರಿಗೆ ಬೇಗ ಅರಿವಾಗುತ್ತದೆ. ರಕ್ತಬೀಜನಿಂದ ಬಿದ್ದ ಪ್ರತಿ ಹನಿ ರಕ್ತದಿಂದ ಮತ್ತೊಬ್ಬ ರಕ್ತಬೀಜ ಹುಟ್ಟಿಕೊಳ್ಳುತ್ತಿದ್ದ. ಯುದ್ಧಭೂಮಿ ತುಂಬ ರಕ್ತಬೀಜನ ಪ್ರತಿರೂಪಿಗಳೇ ತುಂಬಿಹೋದರು.[೧೬] ದುರ್ಗೆಗೆ ಸಹಾಯ ಅಗತ್ಯವೆನಿಸಿತು. ಈ ರಾಕ್ಷಸರನ್ನು ನಿಗ್ರಹಿಸಲು ಅವಳು ಕಾಳಿಯನ್ನು ಕರೆದಳು. ಆ ಸಮಯದಲ್ಲಿ ದುರ್ಗೆಯೇ ಕಾಳಿಯ ರೂಪ ಧಾರಣ ಮಾಡಿದ್ದಳು ಎಂದೂ ಹೇಳುತ್ತಾರೆ.

ದೇವಿ ಮಹಾತ್ಮ್ಯ/1}ವು ವರ್ಣಿಸುತ್ತದೆ:

ಅವಳ (ದುರ್ಗೆಯ) ಹಣೆಯ ಹೊರಭಾಗವು ಹುಬ್ಬು ಗಂಟಿಕ್ಕಿ ಭೀಷಣವಾಗಿತ್ತು. ಅವಳ ಮುಖಭಾವವು ಭಯಂಕರ ಕಾಳಿಯಾಗಿ ಬದಲಾಯಿತು, ಖಡ್ಗ ಮತ್ತು ಪಾಶವನ್ನು ಅವಳು ಹಿಡಿದಿದ್ದಳು. ವಿಚಿತ್ರವಾದ ಖಟ್ವಾಂಗ (ತಲೆಬುರುಡೆಯ-ತುದಿಯ ಚಿಪ್ಪು)ವನ್ನು ಧರಿಸಿದ್ದಳು, ತಲೆಬುರುಡೆಯ ಮಾಲೆಯಿಂದ ಅಲಂಕೃತಳಾಗಿದ್ದಳು, ಹುಲಿ ಚರ್ಮವನ್ನು ಧರಿಸಿದ್ದಳು. ಅತ್ಯಂತ ದಿಗಿಲುಗೊಳಿಸುವಂಥ, ತನ್ನ ಸಣಕಲು ಮಾಂಸದ ಕಾರಣವಾಗಿ , ಅಗಲವಾಗಿ ತೆರೆದ ಬಾಯಿ, ಹೊರಚಾಚಿದ ನಾಲಿಗೆಯಿಂದಾಗಿ ಭಯಹುಟ್ಟಿಸುವಂತಿದ್ದ, ಅತ್ಯಂತ ಕೆಂಪಾದ ಕಣ್ಣುಗಳನ್ನು ಹೊಂದಿದ, ಅವಳ ಗರ್ಜನೆಯು ದಶದಿಕ್ಕುಗಳನ್ನು ವ್ಯಾಪಿಸಲು,ಬಿರುಸಿನಿಂದ ಮೇಲೆ ಬಿದ್ದು ಆ ಸೇನೆಯಲ್ಲಿದ್ದ ದೊಡ್ಡದೊಡ್ಡ ಅಸುರರನ್ನು ಕತ್ತರಿಸಿ ಹಾಕಿದಳು, ದೇವತೆಗಳ ಶತ್ರುಗಳಾದ ಆ ದಂಡನ್ನು ಭಕ್ಷಿಸಿಹಾಕಿದಳು.. [೧೭]

ಕಾಳಿಯು ರಕ್ತಬೀಜನ ರಕ್ತವನ್ನು ಆತನ ಶರೀರದಿಂದ ಹೀರಿ ಕುಡಿದು ಆತನನ್ನು ನಾಶಮಾಡಿದಳು. ಆತನ ತದ್ರೂಪಿ ರಕ್ತಬೀಜರನ್ನು ತನ್ನ ತೆರೆದ ಬಾಯಲ್ಲಿ ತುರುಕಿಕೊಂಡಳು. ತನ್ನ ಗೆಲವಿನಿಂದ ಸಂಪ್ರೀತಳಾದ ಕಾಳಿಯು ಯುದ್ಧಭೂಮಿಯಲ್ಲಿ ನೃತ್ಯಮಾಡಲು ಆರಂಭಿಸಿದಳು. ಸತ್ತವರ ಹೆಣಗಳ ಮೇಲೆ ಹೆಜ್ಜೆ ಹಾಕಿದಳು. ಅವಳ ಪತಿ ಶಿವನು ಸತ್ತವರ ನಡುವೆ ಅವಳ ಪಾದದಡಿ ಬಿದ್ದಿದ್ದನು, ಕಾಳಿಯನ್ನು ಪ್ರತಿನಿಧಿಸುವ ಪ್ರತಿಮೆಯು ದಕ್ಷಿಣ ಕಾಳಿ ಯ ರೂಪದಲ್ಲಿ ಸಾಮಾನ್ಯವಾಗಿ ಕಣ್ಣಿಗೆ ಬೀಳುವುದು.[೧೮]

ದೇವಿ ಮಹಾತ್ಮ್ಯ ದಲ್ಲಿಯ ಈ ಕಥೆಯ ಪಾಠದಲ್ಲಿ, ಕಾಳಿಯನ್ನು ಮಾತ್ರಿಕ ಎಂದೂ ಮತ್ತು ಶಕ್ತಿ ಅಥವಾ ಶಕ್ತಿಯ ದೇವಿ ಎಂದೂ ವರ್ಣಿಸಲಾಗಿದೆ. Cāṃuṇḍā (ಚಾಮುಂಡ ) ಎಂಬ ವಿಶೇಷಣವೂ ಆಕೆಗಿದೆ, ಹೇಗೆಂದರೆ. ಅವಳು ಚಂಡ ಮತ್ತು ಮುಂಡ ರಾಕ್ಷಸರನ್ನು ಸಂಹಾರ ಮಾಡಿದವಳು.[೧೯] ಚಾಮುಂಡ ವನ್ನು ಆಗಾಗ್ಗೆ ಕಾಳಿಯೊಂದಿಗೆ ಗುರುತಿಸುತ್ತಾರೆ. ಅವಳು ಕಾಣುವುದಕ್ಕೆ ಮತ್ತು ಸ್ವಭಾವದಲ್ಲಿ ಹಾಗೆಯೇ ಇದ್ದಾಳೆ.[೨೦]

ದಕ್ಷಿಣ ಕಾಳಿ

[ಬದಲಾಯಿಸಿ]
ಭದ್ರಕಾಳಿ (ಕಾಳಿಯ ಒಂದು ಸೌಮ್ಯ ಸ್ವರೂಪ), ಸಿರ್ಕಾ 1675.ಚಿತ್ರಕಲೆ; ಭಾರತದಲ್ಲಿ ಮಾಡಿದ್ದು, ಹಿಮಾಚಲಪ್ರದೇಶ, ಬಸೋಹ್ಲಿ, ಈಗ ಲಕ್ಮ ದಲ್ಲಿ ಇರಿಸಲಾಗಿದೆ.

ಅವಳ ಅತ್ಯಂತ ಪ್ರಸಿದ್ಧ ಭಂಗಿ ದಕ್ಷಿಣ ಕಾಳಿ ರೂಪದಲ್ಲಿ, ಕಾಳಿಯು ಯುದ್ದಭೂಮಿಯಲ್ಲಿ ತನ್ನ ಬಲಿಗಳ ರಕ್ತವನ್ನು ಕುಡಿಯುತ್ತಾಳೆ, ವಿನಾಶಕಾರಿಯಾದ ಹುಚ್ಚ ಆವೇಶದಿಂದ ಕುಣಿಯುತ್ತಾಳೆ ಎಂದು ಹೇಳಲಾಗಿದೆ. ತನ್ನ ಹುಚ್ಚು ಆವೇಶದಲ್ಲಿ ಅವಳು ಯುದ್ಧಭೂಮಿಯಲ್ಲಿ ಶವಗಳ ನಡುವೆ ಬಿದ್ದಿದ್ದ ತನ್ನ ಪತಿ ಶಿವನ ಶರೀರವನ್ನೇ ನೋಡಲು ವಿಫಲಳಾಗುತ್ತಾಳೆ,[೨೧] ಅಂತಿಮವಾಗಿ ಶಿವನ ಆರ್ತನಾದ ಕಾಳಿಯ ಗಮನವನ್ನು ಸೆಳೆಯುತ್ತದೆ, ಅವಳ ಕೋಪವನ್ನು ಶಮನಗೊಳಿಸುತ್ತದೆ. ಈ ಒಂದು ರೀತಿಯಲ್ಲಿ ತನ್ನ ಪತಿಗೆ ಅಗೌರವ ತೋರಿಸಿದೆನೆಂಬ ನಾಚಿಕೆಯಿಂದ, ಕಾಳಿಯು ತನ್ನ ನಾಲಿಗೆಯನ್ನು ಚುಚ್ಚಿಕೊಳ್ಳುತ್ತಾಳೆ. ಆದಾಗ್ಯೂ, ಕೆಲವು ಮೂಲಗಳು, ನಾಲಿಗೆಯ ಸಾಂಕೇತಿಕತೆಯನ್ನು ಹೇಳುವುದಕ್ಕೆ ನಂತರ ಈ ವಿವರಣೆಯನ್ನು ನೀಡಲಾಯಿತು ಎಂದು ಹೇಳುತ್ತವೆ: ತಾಂತ್ರಿಕ ಸಂದರ್ಭಗಳಲ್ಲಿ, ನಾಲಿಗೆಯು ರಾಜಸ (ಶಕ್ತಿ ಮತ್ತು ಕ್ರಿಯೆ) ಮೂಲ ತತ್ವ (ಗುಣ )ಗಳನ್ನು ಹಂತಕರಾಗಿ ಸೇವೆ ಮಾಡಿದ ಆಧ್ಯಾತ್ಮಿಕ ಮತ್ತು ದೈವಿಕ ಜೀವಿಗಳನ್ನು ಸತ್ವ ದಿಂದ ನಿಯಂತ್ರಿಸುವುದನ್ನು ನಿರ್ದೇಶಿಸುತ್ತಿರುತ್ತದೆ.[೨೨]

ಶಿವ ಮತ್ತು ಕಾಳಿಯ ನಡುವೆ ಒಂದು ನೃತ್ಯ ಸ್ಪರ್ಧೆ ನಡೆದುದನ್ನು ಒಂದು ದಕ್ಷಿಣ ಭಾರತದ ಪರಂಪರೆಯು ಹೇಳುತ್ತದೆ. ಶುಂಭ ಮತ್ತು ನಿಶುಂಭ ಎಂಬಿಬ್ಬರು ರಾಕ್ಷಸರನ್ನು ಸೋಲಿಸಿದ ಬಳಿಕ, ಕಾಳಿಯು ಕಾಡೊಂದರಲ್ಲಿ ನೆಲೆಯಾಗುತ್ತಾಳೆ. ಭೀಕರರಾದ ಸಂಗಾತಿಗಳೊಂದಿಗೆ ಅವಳು ಸುತ್ತಲಿನ ಪ್ರದೇಶವನ್ನು ಭಯಭೀತಗೊಳಿಸುತ್ತಾಳೆ. ಶಿವನ ಭಕ್ತರಲ್ಲಿ ಒಬ್ಬರು ಕಠಿಣ ತಪಸ್ಸನ್ನು ಆಚರಿಸುತ್ತಿದ್ದಾಗ ಅವರ ಏಕಾಗ್ರತೆಗೆ ಇದರಿಂದ ಅಡ್ಡಿಯಾಗುತ್ತದೆ. ಮತ್ತು ಅವರು ಈ ವಿನಾಶಕಾರಿಣಿಯಾದ ದೇವಿಯನ್ನು ಆ ಅರಣ್ಯದಿಂದ ದೂರಮಾಡುವಂತೆ ಶಿವನನ್ನು ಕೋರುತ್ತಾರೆ. ಶಿವನು ಅಲ್ಲಿಗೆ ಬಂದಾಗ ಕಾಳಿಯು ಆತನಿಗೆ ಬೆದರಿಕೆ ಒಡ್ಡುತ್ತಾಳೆ. ಆ ಪ್ರದೇಶವು ತನ್ನದೇ ಸ್ವಂತದ್ದು ಎಂದು ಹೇಳುತ್ತಾಳೆ. ಆಗ ಶಿವನು ಅವಳಿಗೆ ನೃತ್ಯ ಸ್ಪರ್ಧೆಗೆ ಆಹ್ವಾನಿಸುತ್ತಾನೆ ಮತ್ತು ಪರಿಶ್ರಮದ ತಾಂಡವ ನೃತ್ಯವನ್ನು ಮಾಡುವುದು ಅವಳಿಗೆ ಅಸಾಧ್ಯವಾಗಿ ಅವಳನ್ನು ಸೋಲಿಸುತ್ತಾನೆ. ಈ ಪ್ರಕರಣದಲ್ಲಿ ಕಾಳಿಯು ಸೋಲಿಸಲ್ಪಟ್ಟರೂ ಮತ್ತು ಉಪಟಳ ನೀಡುವ ಸ್ವಭಾವವನ್ನು ನಿಯಂತ್ರಿಸಿಕೊಳ್ಳುವ ಬಲವಂತಕ್ಕೆ ಒಳಗಾದರೂ ಇನ್ನೂ ಕೆಲವು ಪ್ರತಿಮೆಗಳು ಅಥವಾ ಇತರ ಪುರಾಣಗಳು ಅವಳನ್ನು ಇದೇ ರೀತಿಯಲ್ಲಿ ಚಿತ್ರಿಸಿದ್ದು ಇವೆ.[೨೩]

ಮಾತೃರೂಪಿಣಿ ಕಾಳಿ

[ಬದಲಾಯಿಸಿ]

ಬಾಲ ಶಿವನು ಕಾಳಿಯನ್ನು ಶಾಂತಗೊಳಿಸಿದ ಇನ್ನೊಂದು ಪುರಾಣದ ಚಿತ್ರಣವೂ ಇದೆ. ಅದೇ ರೀತಿಯ ಈ ಕಥೆಯಲ್ಲಿ ಕಾಳಿಯು ತನ್ನ ಶತ್ರುಗಳನ್ನು ಯುದ್ಧಭೂಮಿಯಲ್ಲಿ ಸೋಲಿಸುತ್ತಾಳೆ ಮತ್ತು ನಿಯಂತ್ರಣ ಮೀರಿ ನರ್ತಿಸುವುದಕ್ಕೆ ಆರಂಭಿಸುತ್ತಾಳೆ. ಸತ್ತವರ ರಕ್ತವನ್ನು ಕುಡಿಯುತ್ತಾಳೆ, ಅವಳನ್ನು ಶಾಂತಗೊಳಿಸಲು ಮತ್ತು ಜಗತ್ತಿನ ಸ್ಥಿರತೆಯನ್ನು ರಕ್ಷಿಸಲು ದೊಡ್ಡದಾಗಿ ಅಳುತ್ತಿರುವ ಶಿಶುವಿನ ರೂಪದಲ್ಲಿ ಶಿವನನ್ನು ಅಲ್ಲಿಗೆ ಕಳುಹಿಸುತ್ತಾರೆ. ಮಗುವಿನ ಸಂಕಟವನ್ನು ಕಂಡ ಕಾಳಿಯು ತನ್ನ ನರ್ತನವನ್ನು ನಿಲ್ಲಿಸಿ ಅಸಹಾಯಕ ಶಿಶುವಿನ ರಕ್ಷಣೆಗೆ ಮುಂದಾಗುತ್ತಾಳೆ. ಅವಳು ಅವನನ್ನು ಎತ್ತಿಕೊಳ್ಳುತ್ತಾಳೆ, ಅವನ ಹಣೆಗೆ ಮುತ್ತಿಕ್ಕುತ್ತಾಳೆ, ಶಿಶುರೂಪಿ ಶಿವನಿಗೆ ಎದೆಹಾಲನ್ನು ಕುಡಿಸಲು ಮುಂದಾಗುತ್ತಾಳೆ.[೨೪] ಈ ಪುರಾಣವು ಕಾಳಿಯನ್ನು ಅವಳ ಪರೋಪಕಾರಿ ಮತ್ತು ಮಾತೃಸ್ವರೂಪದಲ್ಲಿ ಚಿತ್ರಿಸುತ್ತದೆ. ಹಿಂದೂಧರ್ಮದಲ್ಲಿ ಗೌರವಿಸಲ್ಪಡುವ ಕೆಲವು ಅಂಶಗಳು ಪಶ್ಚಿಮದಲ್ಲಿ ಬಹಳಸಲ ಗೌರವಿಸಲ್ಪಡುವುದಿಲ್ಲ.


ಮಹಾಕಾಳಿ

[ಬದಲಾಯಿಸಿ]

ಮಹಾಕಾಳಿ (ಸಂಸ್ಕೃತ: ಮಹಾಕಾಳಿ, ದೇವನಾಗರಿ: महाकाली), ಅಕ್ಷರಶಃ ಅನುವಾದ ಹೀಗೆ ಮಹಾ ಕಾಲಿ , ಕಾಳಿಯ ಮಹಾನ್ ರೂಪವೆಂದು ಕೆಲವು ಸಲ ಪರಿಗಣಿಸಲ್ಪಡುತ್ತಾಳೆ, ಬ್ರಹ್ಮನ್್ನ ಅಂತಿಮ ವಾಸ್ತವವೆಂದು ಗುರುತಿಸಲ್ಪಟ್ಟಿದ್ದಾಳೆ. ದೇವಿ ಕಾಳಿಯ ಗೌರವಾರ್ಥಕ ಪದವೆಂದೂ ಸರಳವಾಗಿ ಬಳಸಲಾಗುತ್ತಿದೆ. ಉಪಾದಿ ಪದ "ಮಹಾ" ಸೇರಿಸಿ ಅವಳ ಶ್ರೇಷ್ಠತೆಯನ್ನು ಸೂಚಿಸಲಾಗುತ್ತಿದೆ.[50] ಸಂಸ್ಕೃತದಲ್ಲಿ ಮಹಾಕಾಳಿ ಎನ್ನುವುದು ವ್ಯುತ್ಪತ್ತಿ ಶಾಸ್ತ್ರದ ಪ್ರಕಾರ ಮಹಾಕಾಲದ ಸ್ತ್ರೀಲಿಂಗಿ ರೂಪ ಅಥವಾ ಮಹಾನ್ ಕಾಲ (ಇದನ್ನು ಸಾವು ಎಂದೂ ವ್ಯಾಖ್ಯಾನಿಸಲಾಗುತ್ತದೆ) ಹಿಂದೂಧರ್ಮದಲ್ಲಿ ಭಗವಾನ್ ಶಿವನಿಗೆ ಅದು ವಿಶೇಷಣ. ದೇವಿ ಮಹಾತ್ಮ್ಯ ದ ಮೊದಲ ಅಧ್ಯಾಯದಲ್ಲಿ ಮಹಾಕಾಳಿಯು ಅತ್ಯಂತ ಪ್ರಮುಖ ಸ್ಥಾನದಲ್ಲಿರುವ ದೇವಿಯಾಗಿದ್ದಾಳೆ.. ಇಲ್ಲಿ ಅವಳು ಆಕೆಯ ವಿಶ್ವರೂಪದೊಂದಿಗೆ ಶಕ್ತಿಯಾಗಿ ಚಿತ್ರಿತಳಾಗಿದ್ದಾಳೆ. ಇಲ್ಲಿ ದೇವಿಯು ಬ್ರಹ್ಮಾಂಡದ ವ್ಯವಸ್ಥೆಯನ್ನು ಮರುಸ್ಥಾಪಿಸಲು ಅವಕಾಶ ನೀಡುವ ಪ್ರತಿನಿಧಿಯಾಗಿ ಕೆಲಸ ಮಾಡುವಳು.

ಮೂರ್ತಿಚಿತ್ರಣ

[ಬದಲಾಯಿಸಿ]
ಚಿತ್ರ:Kali Dakshineswar.jpg
ದಕ್ಷಿಣೇಶ್ವರದ ಕಾಳಿ ದೇವಾಲಯದ ಮೂರ್ತಿ, ಪಶ್ಚಿಮ ಬಂಗಾಳ, ಭಾರತ, ಅದರ ಯಂತ್ರದ ಜೊತೆ

ಹೆಚ್ಚಾಗಿ ಕಾಳಿಯನ್ನು ಎರಡು ರೀತಿಯಲ್ಲಿ ಚಿತ್ರಿಸಿದ್ದಾರೆ: ಒಂದು ಜನಪ್ರಿಯವಾಗಿರುವ ನಾಲ್ಕು ತೋಳುಗಳನ್ನು ಹೊಂದಿರುವ ರೂಪ, ಮತ್ತೊಂದು ಹತ್ತು ತೋಳುಗಳ ಮಹಾಕಾಳಿಯ ರೂಪ. ಎರಡೂ ರೂಪಗಳಲ್ಲಿ ಅವಳನ್ನು ಬಣ್ಣದಲ್ಲಿ ಕಪ್ಪು ಎಂದು ವರ್ಣಿಸಲಾಗಿದೆ. ಆದರೆ ಬಹುತೇಕ ಸಲ ಜನಪ್ರಿಯ ಭಾರತೀಯ ಕಲೆಯಲ್ಲಿ ನೀಲಿ ಬಣ್ಣದಲ್ಲಿ ಅವಳನ್ನು ಚಿತ್ರಿಸಲಾಗಿದೆ. ಅವಳ ಕಣ್ಣುಗಳು ಕೆಂಪಾಗಿ ಅಮಲಿನಿಂದ ಮತ್ತೇರಿಸುವಂತೆ ಮತ್ತು ಅತ್ಯಂತ ಕ್ರೋಧದಿಂದ ಇವೆ ಎಂದು ವರ್ಣಿಸಲಾಗಿದೆ. ತಲೆಕೂದಲು ಕೆದರಿಕೊಂಡಿವೆ, ಚಿಕ್ಕ ಕೋರೆಹಲ್ಲು ಕೆಲವೊಮ್ಮೆ ಅವಳ ಬಾಯಿಂದ ಮುಂದೆ ಚಾಚಿರುತ್ತದೆ ಮತ್ತು ಅವಳ ನಾಲಿಗೆ ಹೊರಕ್ಕೆ ಚಾಚಿರುತ್ತದೆ. ಹೆಚ್ಚಾಗಿ ಅವಳನ್ನು ನಗ್ನವಾಗಿ ಅಥವಾ ಮಾನವ ತೋಳುಗಳಿಂದ ಮಾಡಿದ ಸ್ಕರ್ಟ್ ಧರಿಸಿರುವಂತೆ ಮತ್ತು ಮಾನವ ತಲೆಬುರುಡೆಗಳಿಂದ ಮಾಡಿದ ಹಾರವನ್ನು ಧರಿಸಿರುವಂತೆ ತೋರಿಸುತ್ತಾರೆ. ಸತ್ತಂತೆ ಕಾಣುವ ಶಿವನ ಜೊತೆಯಲ್ಲಿ ಅವಳು ನಿಂತಾಗ ಅವಳ ಸಂಗಡ ಸರ್ಪಗಳು ಮತ್ತು ಒಂದು ನರಿ ಇರುತ್ತದೆ. ಸಾಮಾನ್ಯವಾಗಿ ಎಡ ಪಾದ ಮುಂದಿರುತ್ತದೆ, ಇದು ಹೆಚ್ಚು ಪ್ರಸಿದ್ಧವಾದ ದಕ್ಷಿಣ ಮಾರ್ಗವನ್ನು ಅಥವಾ ಬಲ-ಗೈ ಮಾರ್ಗವನ್ನು ಸಂಕೇತಿಸುತ್ತದೆ. ಇದಕ್ಕೆ ವಿರುದ್ಧವಾದದ್ದು ಹೆಚ್ಚು ಕುಖ್ಯಾತವಾದ ಮತ್ತು ಕಟ್ಟಳೆಗಳನ್ನು ಮೀರುವ ವಾಮಮಾರ್ಗ ಅಥವಾ ಎಡ-ಗೈ ಮಾರ್ಗ.[೨೫]

ಹತ್ತು ತೋಳಿನ ಮಹಾಕಾಳಿಯ ರೂಪವನ್ನು ಹೊಳೆಯುತ್ತಿರುವ ನೀಲಿ ಕಲ್ಲಿನಂತೆ ಚಿತ್ರಿಸಲಾಗಿದೆ. ಅವಳಿಗೆ ಹತ್ತು ಮುಖಗಳು ಮತ್ತು ಹತ್ತು ಪಾದಗಳು ಮತ್ತು ಮೂರು ಕಣ್ಣುಗಳಿವೆ. ಅವಳ ಎಲ್ಲ ಕಾಲುಗಳೂ ಆಭರಣಗಳಿಂದ ಅಲಂಕೃತವಾಗಿವೆ. ಶಿವನ ಸಾಂಗತ್ಯ ಇಲ್ಲ.[೨೬]

ಕಾಳಿಗೆ ಕಪ್ಪು ಬಣ್ಣದ ಮೋಹವಿದ್ದು, ಮುಖವರ್ಣವು ಆಪ್ಯಾಯಮಾನವಾಗಿದೆ, ಅತ್ಯಂತ ಸುಂದರಿ, ಸಿಂಹದ ಸವಾರಿ ಮಾಡುವವಳು, ನಾಲ್ಕು ತೋಳುಗಳು, ಒಂದು ಖಡ್ಗ ಮತ್ತು ನೀಲಿ ಕಮಲಗಳನ್ನು ಹಿಡಿದವಳು, ಅವಳ ತಲೆಗೂದಲು ಕೆದರಿದೆ, ಶರೀರವು ದೃಢವಾಗಿ ಮತ್ತು ಯವ್ವನದಿಂದ ಕೂಡಿದೆ ಎಂದು ಕಾಳಿಕಾ ಪುರಾಣ ವು ವರ್ಣಿಸುತ್ತದೆ.[೨೭]

ಕಾಣಲು ಭೀಕರವಾಗಿರುವ ರೂಪದ ಹೊರತಾಗಿಯೂ ಕಾಳಿ ಮಾತೆಯು ಕೆಲವೊಮ್ಮೆ ಅತ್ಯಂತ ದಯಾಳುವಾಗಿಯೂ ಮತ್ತು ಎಲ್ಲ ಹಿಂದೂ ದೇವಿಯರಲ್ಲಿ ಹೆಚ್ಚು ಪ್ರಿಯಳಾಗಿಯೂ ಪರಿಗಣಿಸಲ್ಪಡುತ್ತಾಳೆ. ಏಕೆಂದರೆ ಆಕೆಯ ಭಕ್ತರು ಆಕೆಯನ್ನು ಇಡೀ ವಿಶ್ವದ ಮಾತೆಯೆಂದು ಪರಿಗಣಿಸುತ್ತಾರೆ. ಮತ್ತು ಆಕೆಯ ಭಯಂಕರ ರೂಪದ ಕಾರಣದಿಂದ ಅವಳು ಹೆಚ್ಚಾಗಿ ಮಹಾನ್ ರಕ್ಷಕಿಯಾಗಿ ತೋರುತ್ತಾಳೆ. ಒಮ್ಮೆ ಭಕ್ತನೊಬ್ಬ ಬಂಗಾಳಿ ಸಂತ ರಾಮಕೃಷ್ಣ ಅವರು, ಜನರೇಕೆ ನನ್ನ ಬದಲು ಮಾತೆಯನ್ನೇ ಏಕೆ ಪೂಜಿಸಲು ಇಷ್ಟಪಡುತ್ತಾರೆ ಎಂದು ಭಕ್ತನೊಬ್ಬನನ್ನು ಪ್ರಶ್ನಿಸಿದರು. ಈ ಭಕ್ತನು ಆಲಂಕಾರಿಕವಾಗಿ ಉತ್ತರಿಸಿದ, "ಮಹಾರಾಜ, ಅವರೆಲ್ಲ ತೊಂದರೆಯಲ್ಲಿದ್ದಾಗ ನಿನ್ನಬಳಿಗೆ ಓಡಿ ಬರುತ್ತಾರೆ. ಆದರೆ, ನೀನೇ ಕಷ್ಟದಲ್ಲಿರುವಾಗ ಎಲ್ಲಿಗೆ ಓಡುವಿ?"[೨೮]

ರಾಮಕೃಷ್ಣ ಅವರ ಪ್ರಕಾರ, ಕತ್ತಲೆಯೇ ಸರ್ವಶ್ರೇಷ್ಠ ಮಾತೆ, ಅಥವಾ ಕಾಳಿ:

ನನ್ನ ಮಾತೆಯು ಆತ್ಮಸಾಕ್ಷಿಯ ತತ್ವ. ಆಕೆಯು ಅಖಂಡ ಸಚ್ಚಿದಾನಂದ; ಅದೃಷ್ಯ ವಾಸ್ತವ, ಅರಿವು ಮತ್ತು ಪರಮಾನಂದ. ರಾತ್ರಿ ನಕ್ಷತ್ರಗಳ ನಡುವಣ ಆಕಾಶವು ಪರಿಪೂರ್ಣ ಕತ್ತಲು. ಸಾಗರದಾಳದ ನೀರೂ ಅದೇ ರೀತಿಯದು; ಅಗಣಿತವು ಯಾವತ್ತೂ ರಹಸ್ಯಪೂರ್ಣ ಕತ್ತಲು. ಈ ಮತ್ತೇರಿದ ಕತ್ತಲೆಯೇ ನನ್ನ ಪ್ರೀತಿಯ ಕಾಳಿ.

-ಶ್ರೀ ರಾಮಕೃಷ್ಣ

ಅವಳ ಇತಿಹಾಸದುದ್ದಕ್ಕೂ ಜಗತ್ತಿನ ಉದ್ದಗಲಕ್ಕಿರುವ ಕಲಾವಿದರು ಕಾಳಿಯನ್ನು ಕೋಟ್ಯಾನುಕೋಟಿ ಭಂಗಿಯಲ್ಲಿ ಮತ್ತು ಪರಿಸರದಲ್ಲಿ ಚಿತ್ರಿಸಿದ್ದಾರೆ. ಅವುಗಳಲ್ಲಿ ಕೆಲವು ಜನಪ್ರಿಯ ವರ್ಣನೆಯ ರೂಪದಿಂದ ಭಿನ್ನವಾದದ್ದು ಮತ್ತು ಕೆಲವೊಮ್ಮೆ ಮಾದಕವಾಗಿಯೂ ರೇಖಿಸಿದ್ದಾರೆ. ಈ ದೇವಿಗೆ ಜನಪ್ರಿಯತೆಯನ್ನು ನೀಡುತ್ತ, ಕಲಾವಿದರು ಎಲ್ಲಕಡೆಯೂ ಕಾಳಿಯ ಪ್ರತಿಮಾಶಾಸ್ತ್ರವನ್ನು ಬೃಹತ್್ಗೊಳಿಸಿ ವೈಭವೀಕರಿಸುವುದನ್ನು ಮುಂದುವರಿಸಿದ್ದಾರೆ. ಸಮಕಾಲೀನ ಕಲಾವಿದರಾದ ಚಾರ್ಲ್ಸ್ ವಿಶ್ ಮಚ್ಚು ತೈಯೆಬ್ ಮೆಹತಾ ಅವರ ಕಲೆಗಳಲ್ಲಿ ಇದು ಸ್ಪಷ್ಟವಾಗಿದೆ. ಅವರು ಕೆಲವೊಮ್ಮೆ ಸಾಂಪ್ರದಾಯಿಕತೆಯೊಂದಿಗೆ ದೊಡ್ಡ ಸ್ವಾತಂತ್ರ್ಯವನ್ನೇ ತೆಗೆದುಕೊಂಡಿದ್ದಾರೆ, ಸಂಕೇತಗಳನ್ನು ಅಂಗೀಕರಿಸಿದ್ದಾರೆ ಆದರೆ ಇನ್ನೂ ನಿಜವಾದ ಪೂಜ್ಯಭಾವನೆಯನ್ನು ಶಾಕ್ತ ಪಂಥಕ್ಕೆ ಪ್ರದರ್ಶಿಸಿದ್ದಾರೆ.

ಜನಪ್ರಿಯ ರೂಪ

[ಬದಲಾಯಿಸಿ]
ಕಾಳಿಯ ದಕ್ಷಿಣ ಭಾರತದ ಒಂದು ಚಿತ್ರ

ಕಾಳಿಯ ಶಾಸ್ತ್ರೀಯ ಚಿತ್ರಗಳು ಅನೇಕ ಲಕ್ಷಣಗಳನ್ನು ಪಡೆದುಕೊಂಡಿವೆ, ಅವು ಹೀಗಿವೆ: ಕಾಳಿಯ ಅತ್ಯಂತ ಸಾಮಾನ್ಯವಾದ ನಾಲ್ಕು ಕೈಗಳ ಪ್ರತಿಮಾಶಾಸ್ತ್ರದ ಪ್ರತಿಮೆಯು ಪ್ರತಿ ಕೈಯಲ್ಲಿ ವಿವಿಧ ಆಯುಧಗಳಾದ ಒಂದು ಖಡ್ಗ, ಒಂದು ತ್ರಿಶೂಲ, ಕತ್ತರಿಸಿದ ತಲೆ, ಒಂದು ಬೋಗುಣಿ ಅಥವಾ ತಲೆಬುರುಡೆಯ ಚಿಪ್ಪು (ಕಪಾಲ) ಕತ್ತರಿಸಿದ ತಲೆಯಿಂದ ರಕ್ತವನ್ನು ಹಿಡಿಯುವಂತೆ ತೋರಿಸುತ್ತದೆ.

ಇವುಗಳಲ್ಲಿ ಎರಡು ಕೈಗಳು (ಸಾಮಾನ್ಯವಾಗಿ ಎಡದ್ದು) ಒಂದು ಖಡ್ಗ ಮತ್ತು ಒಂದು ಕತ್ತರಿಸಿದ ರುಂಡವನ್ನು ಹಿಡಿದಿರುತ್ತವೆ. ಖಡ್ಗವು ದಿವ್ಯ ಜ್ಞಾನವನ್ನು ಸಂಕೇತಿಸುತ್ತದೆ. ಮಾನವನ ತಲೆಯು ಮಾನವನ ಅಹಂಕಾರವನ್ನು ಸಂಕೇತಿಸುತ್ತದೆ. ಮೋಕ್ಷವನ್ನು ಸಾಧಿಸಬೇಕಿದ್ದರೆ ಅಹಂಕಾರವನ್ನು ದಿವ್ಯಜ್ಞಾನವು ನಾಶಮಾಡಬೇಕು. ಉಳಿದ ಎರಡು ಕೈಗಳು (ಸಾಮಾನ್ಯವಾಗಿ ಬಲದ್ದು) ಅಭಯ (ಭೀತಿಯನ್ನು ದೂರಮಾಡುವ ಹಾಗೆ) ಮತ್ತು ವರದ(ಆಶೀರ್ವದಿಸುವಂತೆ) ಮುದ್ರೆಗಳಲ್ಲಿರುತ್ತವೆ.ಇದರರ್ಥ, ಆಕೆಯನ್ನು ಪೂಚಿಸುವ ಭಕ್ತರು (ಅಥವಾ ನಿಜ ಹೃದಯದಿಂದ ಆಕೆಯನ್ನು ಪೂಜಿಸುವ ಯಾರೇ ಆಗಲಿ) ರಕ್ಷಿಸಲ್ಪಡುತ್ತಾರೆ. ಆಕೆಯು ಇಹದಲ್ಲಿ ಮತ್ತು ಪರದಲ್ಲಿಯೂ ಅವರಿಗೆ ಮಾರ್ಗದರ್ಶನ ಮಾಡುವಳು.[೨೯]

ಅವಳು ಮಾನವ ತಲೆಬುರುಡೆಗಳು ಇರುವ ಮಾಲೆಯನ್ನು ಧರಿಸಿರುತ್ತಾಳೆ. ತಲೆ ಬುರುಡೆ ಸಂಖ್ಯೆ ವಿಭಿನ್ನವಾಗಿ 108 (ಹಿಂದೂಧರ್ಮದಲ್ಲಿ ಈ ಅಂಕಿ ಮಂಗಳಕರವಾದದ್ದು ಮತ್ತು ಎಣಿಸಬೇಕಾದ ತಲೆಗಳನ್ನು ಜಪ ಮಾಲೆಯಲ್ಲಿ ಅಥವಾ ಮಂತ್ರಗಳ ಪುನರಾವರ್ತನೆಗೆ ಜಪಮಾಲೆ ಬಳಸುವರು.) ಅಥವಾ 51, ಇದು ವರ್ಣಮಾಲೆ ಅಥವಾ ಸಂಸ್ಕೃತ ಅಕ್ಷರ ಮಾಲೆ, ದೇವನಾಗರಿಯ ಅಕ್ಷರ ಮಾಲೆಯನ್ನು ಪ್ರತಿನಿಧಿಸುತ್ತದೆ. ಹಿಂದೂಗಳು ಸಂಸ್ಕೃತವು ಚೈತನ್ಯದ ಭಾಷೆ ಎಂದು ಮತ್ತು ಪ್ರತಿಯೊಂದು ಅಕ್ಷರವೂ ಒಂದು ಶಕ್ತಿಯ ರೂಪವನ್ನು ಪ್ರತಿನಿಧಿಸುತ್ತದೆ ಅಥವಾ ಕಾಳಿಯ ರೂಪವನ್ನು ಎಂದುನಂಬುತ್ತಾರೆ, ಹೀಗಾಗಿ ಆಕೆಯನ್ನು ಸಾಮಾನ್ಯವಾಗಿ ಭಾಷೆಯ ತಾಯಿ ಮತ್ತು ಎಲ್ಲ ಮಂತ್ರಗಳ ತಾಯಿ ಎಂದು ತಿಳಿಯುತ್ತಾರೆ.[೩೦]

ಅವಳನ್ನು ಆಗಾಗ್ಗೆ ನಗ್ನವಾಗಿ ಚಿತ್ರಿಸುತ್ತಾರೆ. ಅವಳು ಮಾಯೆಯ ಆವರಣವನ್ನು ಮೀರಿ ನಿಲ್ಲುವವಳು, ಏಕೆಂದರೆ ಅವಳು ಪರಿಶುದ್ಧಳ (ನಿರ್ಗುಣ) ಆತ್ಮಸಾಕ್ಷಿಯ ಪರಮಾನಂದ ಮತ್ತು ಪ್ರಕೃತಿಗಿಂತ ಮೇಲಿರುವವಳು ಎಂಬುದನ್ನು ಸಂಕೇತಿಸುತ್ತದೆ. ಪರಮ ಅವ್ಯಕ್ತ ಸ್ಥಿತಿಯಲ್ಲಿ ಅವಳು ಬ್ರಹ್ಮನ್ ಆಗಿರುವುದರಿಂದ ಅವಳನ್ನು ಕಡುಗಪ್ಪು ಎಂದು ತೋರಿಸುತ್ತಾರೆ. ಅವಳಿಗೆ ಶಾಶ್ವತ ಗುಣಗಳಿಲ್ಲ- ವಿಶ್ವಕ್ಕೇ ಪ್ರಳಯ ಬಂದರೂ ಅವಳ ಅಸ್ತಿತ್ವ ಮುಂದುವರಿಯುತ್ತದೆ. ಈ ಕಾರಣದಿಂದ ಬಣ್ಣ, ಬೆಳಕು, ಒಳಿತು, ಕೆಡಕುಗಳ ಪರಿಕಲ್ಪನೆಯನ್ನು ಅವಳಿಗೆ ಆರೋಪಿಸಲು ಬರುವುದಿಲ್ಲ ಎನ್ನುವುದು ನಂಬಿಕೆ. ಅವಳು ಪರಿಶುದ್ಧಳು, ಅವ್ಯಕ್ತ ಶಕ್ತಿ, ಆದಿ ಶಕ್ತಿ[೩೧]

ಮಹಾಕಾಳಿ ರೂಪ

[ಬದಲಾಯಿಸಿ]

ಕಾಳಿಯನ್ನು ಹತ್ತು ತಲೆಗಳುಳ್ಳ, ಹತ್ತು ತೋಳುಗಳ ಮತ್ತು ಹತ್ತು ಕಾಲುಗಳುಳ್ಳ ಮಹಾಕಾಳಿಯನ್ನಾಗಿ ಚಿತ್ರಿಸುತ್ತಾರೆ. ಅವಳ ಪ್ರತಿಯೊಂದು ಕೈಗಳು ವಿವಿಧ ಉಪಕರಣಗಳನ್ನು ಹೊಂದಿರುತ್ತವೆ ಅವುಗಳು ಭಿನ್ನಭಿನ್ನವಾಗಿರುತ್ತವೆ. ಆದರೆ ಇವು ಪ್ರತಿಯೊಂದೂ ಹಿಂದೂ ದೇವರೊಬ್ಬರ ಶಕ್ತಿಯನ್ನು ಪ್ರತಿನಿಧಿಸುತ್ತದೆ ಮತ್ತು ಆಯುಧಗಳನ್ನು ಅಥವಾ ಸಾಂಪ್ರದಾಯಿಕ ವಸ್ತುವಿನಂದ ಅದು ಯಾವ ದೇವರು ಎಂದು ಗುರುತಿಸಲಾಗುತ್ತದೆ. ಇದರ ಪರಿಣಾಮವೇನೆಂದರೆ ಮಹಾಕಾಳಿಯು ಎಲ್ಲವನ್ನೂ ಅಂತರ್ಗತಗೊಳಿಸಿಕೊಂಡಿರುತ್ತಾಳೆ ಮತ್ತು ಈ ದೇವತೆಗಳೆಲ್ಲ ಹೊಂದಿರುವ ಖಸ್ತಿಗೆ ಹೊಣೆಗಾರಳಾಗಿರುತ್ತಾಳೆ. ಮಹಾಕಾಳಿಯು ಬ್ರಹ್ಮನ್್ಗೆ ಸಾದೃಶ್ಯಳು ಎನ್ನುವ ವ್ಯಾಖ್ಯಾನಕ್ಕೆ ಅನುಗುಣವಾಗಿ ಇದು ಇದೆ. ಹತ್ತು ತಲೆಗಳನ್ನು ತೋರಿಸದೆ ಇರುವಾಗ, ಒಂದು "ಏಕಮುಖಿ" ಅಥವಾ ಒಂದು ತಲೆಯ ಪ್ರತಿಮೆಯು ಹತ್ತು ಕೈಗಳನ್ನು ಒಳಗೊಂಡಿರಬಹುದು, ಇದು ಅದೇ ಪರಿಕಲ್ಪನೆಯನ್ನು ಸಂಕೇತಿಸುತ್ತದೆ: ವಿವಿಧ ದೇವರುಗಳ ಶಕ್ತಿಯು ಕೇವಲ ಅವಳ ಅನುಗ್ರಹದಿಂದ ಅವರಿಗೆ ಪ್ರಾಪ್ತವಾಗಿರುವುದು.

ಕಾಳಿ ಮೂರ್ತಿ ಚಿತ್ರಣದಲ್ಲಿ ಶಿವ

[ಬದಲಾಯಿಸಿ]

ಈ ಎರಡೂ ಚಿತ್ರಗಳಲ್ಲಿ ಬೋರಲು ಬಿದ್ದಿರುವ, ನಿಶ್ಚೇಷ್ಟ ಅಥವಾ ಸತ್ತುಬಿದ್ದಿರುವ ಶಿವನ ಶರೀರದ ಮೇಲೆ ಅವಳು ನಿಂತಿರುವಂತೆ ತೋರಿಸಲಾಗಿದೆ. ಶಿವನ ಶವದ ಹಾಗೆ ತೋರುವುದರ ಮೇಲೆ ಆಕೆ ನಿಂತಿರುವುದರ ಹಿಂದಿನ ಕಾರಣವನ್ನು ವಿವರಿಸುವ ಪೌರಾಣಿಕ ಕಥೆಯೊಂದು ಇದೆ, ಅದನ್ನು ಹೀಗೆ ಹೇಳುವರು:

ಒಮ್ಮೆ ಕಾಳಿಯು ಎಲ್ಲ ದೈತ್ಯರನ್ನು ಯುದ್ಧದಲ್ಲಿ ಸೋಲಿಸಿದಳು. ವಿಜಯದ ಕೇವಲ ಆನಂದದಲ್ಲಿ ಅವಳು ಭಯಂಕರ ನೃತ್ಯಕ್ಕೆ ತೊಡಗಿದಳು. ಎಲ್ಲ ಜಗತ್ತು ಅಥವಾ ಲೋಕಗಳು ಅವಳ ನೃತ್ಯದ ಪರಿಣಾಮವಾಗಿ ನಡುಗಲು ಆರಂಭವಾದವು ಮತ್ತು ಓಲಾಡತೊಡಗಿದವು. ಕಾರಣ ಎಲ್ಲ ದೇವತೆಗಳ ಕೋರಿಕೆಯ ಮೇರೆಗೆ, ಶಿವನು ಸ್ವತಃ ಆಕೆಗೆ ಆ ವರ್ತನೆಯನ್ನು ಬಿಡುವಂತೆ ಕೇಳಿದನು. ಆದರೆ ಅವಳು ಅದನ್ನು ಕೇಳಲಾಗದಷ್ಟು ಮತ್ತೇರಿದ ಸ್ಥಿತಿಯಲ್ಲಿ ಇದ್ದಳು. ಇದರಿಂದ ಶಿವನು ಅವಳ ನರ್ತನದ ಆಘಾತವನ್ನು ತಾನೇ ಹೀರಿಕೊಳ್ಳುವುದಕ್ಕಾಗಿ ದೈತ್ಯರ ಶವಗಳ ನಡುವೆ ತಾನೂ ಶವದಂತೆ ಬಿದ್ದುಕೊಳ್ಳುವನು. ತನ್ನ ಪತಿಯ ಶರೀರದ ಮೇಲೆ ತನ್ನ ಪಾದವು ಬಿದ್ದಕೂಡಲೆ ಕಾಳಿಗೆ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ಅವಳು ನಾಚಿಕೆಯಿಂದ ತನ್ನ ನಾಲಿಗೆಯನ್ನು ಕಡಿದುಕೊಳ್ಳುತ್ತಾಳೆ.[೩೨]

ಕಾಳಿಯು ತನ್ನ ಪತಿಯ ಶರೀರದ ಮೇಲೆ ನಿಂತಿರುವುದಕ್ಕೆ ತಾಂತ್ರಿಕ ವಿವರಣೆಯು ಈ ರೀತಿ ಇದೆ:

ಶಿವ ತತ್ವ (ಶಿವ ಎನ್ನುವುದು ದೈವೀ ಪ್ರಜ್ಞೆ) ನಿಷ್ಕ್ರಿಯ ಮತ್ತು ಶಕ್ತಿ ತತ್ವ (ಕಾಳಿಯೇ ದೈವೀ ಶಕ್ತಿ) ಸಕ್ರಿಯವಾಗಿತ್ತು. ಶಿವ, ಅಥವಾ ಮಹಾದೇವನು ಎಲ್ಲ ಹೆಸರುಗಳು, ರೂಪಗಳು ಮತ್ತು ಚಟುವಟಿಕೆಗಳ ಆಚೆಗಿನ ಪರಿಪೂರ್ಣ, ಪರಿಶುದ್ಧ ಅರಿವು ಬ್ರಹ್ಮನ್್ನನ್ನು ಪ್ರತಿನಿಧಿಸುತ್ತಾನೆ. ಇನ್ನೊಂದೆಡೆ ಕಾಳಿಯು ಎಲ್ಲ ಹೆಸರುಗಳ, ರೂಪಗಳ ಮತ್ತು ಚಟುವಟಿಕೆಗಳ ಪ್ರಚ್ಛನ್ನ ( ಮತ್ತು ವ್ಯಕ್ತವಾಗಿರುವ) ಶಕ್ತಿಯ ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತಾಳೆ. ಅವಳು ಅವನ ಶಕ್ತಿ ಅಥವಾ ಸೃಷ್ಟಿ ಶಕ್ತಿ ಮತ್ತು ಎಲ್ಲ ಅರಿವಿನ ಸಮಗ್ರ ವಿಷಯದ ಹಿಂದಿನ ವಸ್ತುವಿನಂತೆ ಕಾಣುವಳು. ಶಿವನ ಹೊರತಾಗಿ ಅವಳ ಅಸ್ತಿತ್ವವಿಲ್ಲ ಅಥವಾ ಅವನನ್ನು ಬಿಟ್ಟು ಅವಳು ಸ್ವತಂತ್ರವಾಗಿ ಕ್ರಿಯೆಯಲ್ಲಿ ತೊಡಗಲಾರಳು, ಇದರರ್ಥ, ಶಕ್ತಿ, ವಿಶ್ವದ ಎಲ್ಲ ವಸ್ತು/ಚೈತನ್ಯವು ಶಿವನಿಂದ ಅಥವಾ ಬ್ರಹ್ಮನ್್ನಿಂದ ಭಿನ್ನವಾದುದಲ್ಲ ಆದರೆ ಅದು ಬ್ರಹ್ಮನ್್ದೇ ಪ್ರೇರಕ ಶಕ್ತಿಯ ಚೈತನ್ಯ.[೩೩]

ಚಿತ್ರ:Kali Traditional.jpg
ಕಾಳಿ ಸಾಂಪ್ರದಾಯಿಕ ರೂಪದಲ್ಲಿ, ಶಿವನ ಎದೆಯ ಮೇಲೆ ನಿಂತಿರುವುದು.

ಅದ್ವೈತ ಶಕ್ತಿ ವಾದದಲ್ಲಿ ಇದೊಂದು ಮುಂದುವರಿದ ಪರಿಕಲ್ಪನೆ, ಕಾಶ್ಮೀರದ ಶೈವಧರ್ಮವೆಂದು ಪ್ರಸಿದ್ಧವಾಗಿರುವ ದ್ವೈರೂಪ್ಯವಿಲ್ಲದ ಕಾಶ್ಮೀರದ ತ್ರಿಕಾ ತತ್ವಜ್ಞಾನದೊಂದಿಗೂ ಇದರ ಸಹಮತವಿದೆ. ಅಭಿನವಗುಪ್ತರೊಂದಿಗೆ ಇರುವ ಸಂಬಂಧವೂ ಅತ್ಯಂತ ಪ್ರಸಿದ್ಧ. ಬಳಕೆ ಮಾತಿನಲ್ಲಿ ಹೇಳಿಕೆಯೊಂದಿದೆ, "ಶಕ್ತಿ ಇಲ್ಲದ ಶಿವ ಶವ ಇದ್ದಂತೆ" ಎಂದು. ಇದರರ್ಥ ಕ್ರಿಯೆಯ ಚೈತನ್ಯ (ಶಕ್ತಿ) ಅಂದರೆ ಮಹಾಕಾಳಿ ಇಲ್ಲದಿರುವುದು (ದೇವನಾಗರಿಯಲ್ಲಿ ಚಿಕ್ಕ "ಐ" ಪ್ರತಿನಿಧಿಸುತ್ತದೆ) ಶಿವ (ಅಥವಾ ಸ್ವಯಂ ಪ್ರಜ್ಞೆ) ನಿಷ್ಕ್ರಿಯನಾದಹಾಗೆ. ಶವದ ಅರ್ಥ ಸಂಸ್ಕೃತದಲ್ಲಿ ಕಳೇಬರ ಪದಗಳ ಮೇಲೆ ಆಟವಾಡುವುದಾದರೆ ಎಲ್ಲ ಸಂಸ್ಕೃತ ವ್ಯಂಜನಗಳು ಚಿಕ್ಕ ಅಕ್ಷರ "ಅ" ಇಲ್ಲದೆ ಪೂರ್ಣವಾಗುವುದೇ ಇಲ್ಲ. ಚಿಕ್ಕ ಅಕ್ಷರ "ಐ" ಸ್ತ್ರೀ ಚೈತನ್ಯವನ್ನು ಅಥವಾ ಸೃಷ್ಟಿಯನ್ನು ಪ್ರಚೋದಿಸುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅವಳೇಕೆ ತನ್ನ ಪತಿ ಮತ್ತು ಶಾಕ್ತ ಧರ್ಮಕ್ಕೆ ಪೂರಕನಾಗಿರುವ ಅಥವಾ ಶೈವಧರ್ಮದಲ್ಲಿ ಪರಮೋಚ್ಚ ದೇವನಾಗಿರುವ ಶಿವನ ಮೇಲೆ ನಿಂತಿದ್ದಾಳೆ ಎನ್ನುವುದಕ್ಕೆ ಆಗಾಗ್ಗೆ ನೀಡುವ ವಿವರಣೆ ಇದು.

ಸಂಕೀರ್ಣವಾಗಿರುವ ಈ ತಾಂತ್ರಿಕ ಸಾಂಕೇತಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಶಿವ ಮತ್ತು ಕಾಳಿಯ ಹಿಂದಿನ ಅರ್ಥವು ಶಂಕರ ಅಥವಾ ಉಪನಿಷತ್ತುಗಳಲ್ಲಿ ರೂಢಿಯಲ್ಲಿ ವರ್ಣಿಸಿರುವ ಅದ್ವೈತ ರೂಪದಿಂದ ದೂರವಾದ್ದು ಅಲ್ಲ ಎಂಬುದನ್ನು ನೆನಪಿಸಿಕೊಳ್ಳುವುದು ಮಹತ್ವದ್ದು. ಮಹಾನಿರ್ವಾಣ ಮತ್ತು ಕುಲಾರ್ಣವ ತಂತ್ರಗಳೆರಡ ಪ್ರಕಾರ, ಅದೇ ಪರಿಪೂರ್ಣ ಸತ್ಯವನ್ನು ಗ್ರಹಿಸಲು ಎರಡು ವಿಭಿನ್ನ ಮಾರ್ಗಗಳಿವೆ. ಮೊದಲಿನದು ಅಲೌಕಿಕ ಬಯಲು, ಇದನ್ನು ಆಗಾಗ್ಗೆ ಜಡ, ಇನ್ನೂ ಅನಂತ ಎಂದು ವರ್ಣಿಸುತ್ತಾರೆ. ಇದು ಇ್ಲಲಿದೆ ಎಂದರೆ ಅಲ್ಲಿ ಯಾವುದೇ ವಸ್ತುವಿರುವುದಿಲ್ಲ, ಯಾವುದೇ ವಿಶ್ವ ಇರುವುದಿಲ್ಲ ಮತ್ತು ಕೇವಲ ಜ್ಞಾನ ಮಾತ್ರ ಅಲ್ಲಿರುವುದು. ಈ ರೀತಿಯ ವಾಸ್ತವವನ್ನು ಶಿವ, ಪರಿಪೂರ್ಣವಾದ ಸತ್-ಚಿತ್-ಆನಂದ- ಅಸ್ತಿತ್ವ, ಜ್ಞಾನ ಮತ್ತು ಪರಮಾನಂದ ಎಂದು ತಿಳಿಯುತ್ತಾರೆ. ಎರಡನೆಯದು ಒಂದು ಸಕ್ರಿಯ ಬಯಲು, ಒಂದು ಅಂತರ್ಗತವಾಗಿರುವ ಬಯಲು, ಮಾಯೆಯ ಬಯಲು ವಿಷಯ, ಅಂದರೆ, ಎಲ್ಲಿ ಅವಕಾಶ-ಕಾಲದ ಭ್ರಮೆ ಇರುವುದೋ ಮತ್ತು ನಿಜವಾದ ವಿಶ್ವದ ದರ್ಶನ ಇರುವುದಿಲ್ಲವೋ ಅದು. ಈ ರೂಪದ ವಾಸ್ತವವನ್ನು ಕಾಳಿ ಅಥವಾ ಶಕ್ತಿ ಎಂದು ತಿಳಿಯುತ್ತಾರೆ. ಮತ್ತು (ಅಖಂಡತೆಯಲ್ಲಿ) ಅದೇ ಪರಿಪೂರ್ಣ ಸತ್-ಚಿತ್-ಆನಂದವೆಂದು ಇನ್ನೂ ಸ್ಪಷ್ಟವಾಗಿ ಹೇಳುತ್ತಾರೆ. ಈ ಎರಡನೆ ಬಯಲಿನಲ್ಲಿ ವಿಶ್ವವು (ನಾವು ಸಾಮಾನ್ಯವಾಗಿ ತಿಳಿದಿರುವಂತೆ) ಅನುಭವಕ್ಕೆ ಬರುತ್ತದೆ ಮತ್ತು ಇದನ್ನು ತಾಂತ್ರಿಕ ದ್ರಷ್ಟಾರ ಶಕ್ತಿ ಅಥವಾ ಮಾತೆ ಕಾಳಿಯ ಆಟವೆಂದು ವರ್ಣಿಸುತ್ತಾನೆ.[೩೪]

ಕಾಳಿ ಮತ್ತು ಭೈರವ (ಶಿವನ ಉಗ್ರರೂಪ) ಒಟ್ಟಿಗೆ, 18ನೆ ಶತಮಾನ, ನೇಪಾಳ

ತಾಂತ್ರಿಕ ದೃಷ್ಟಿಕೋನದಿಂದ ನೋಡಿದಾಗ ಒಬ್ಬನು ವಾಸ್ತವವನ್ನು ಬದಿಗಿಟ್ಟು ಧ್ಯಾನಸ್ಥನಾದರೆ, ಅದು ಪರಿಶುದ್ಧ ಪವಿತ್ರ ಪ್ರಜ್ಞೆಯಾಗುತ್ತದೆ (ಸೃಷ್ಟಿ, ಸ್ಥಿತಿ ಅಥವಾ ಲಯದ ಚಟುವಟಿಕೆ ಅಲ್ಲಿರುವುದಿಲ್ಲ) ಅದನ್ನೇ ಶಿವ ಅಥವಾ ಬ್ರಹ್ಮನ್ ಎಂದು ಒಬ್ಬರು ಹೇಳಬಹುದು. ಯಾವಾಗ ಒಬ್ಬನು ಕ್ರಿಯಾಶಕ್ತಿ ಮತ್ತು ಸೃಷ್ಟಿಯೇ ವಾಸ್ತವ ಎಂದುಕೊಂಡು ಧ್ಯಾನಸ್ಥನಾದರೆ, ಪರಿಶುದ್ಧ ಪ್ರಜ್ಞೆಯ ಸಂಪೂರ್ಣ ಸಂತೃಪ್ತಿ ಎಂದು ಭಾವಿಸಿದರೆ ((ಸೃಷ್ಟಿ, ಸ್ಥಿತಿ ಅಥವಾ ಲಯದ ಚಟುವಟಿಕೆಗಳೊಂದಿಗೆ) ಒಬ್ಬರು ಅದನ್ನು ಕಾಳಿ ಅಥವಾ ಶಕ್ತಿ ಎಂದು ಹೇಳಬಹುದು. ಹೇಗಿದ್ದರೂ, ಎರಡೂ ಪ್ರಕರಣದಲ್ಲಿ ಯೋಗಿನಿ ಅಥವಾ ಯೋಗಿಯು ಅದೇ ವಾಸ್ತವದಲ್ಲಿ ಆಸಕ್ತಿಯನ್ನು ಹೊಂದಿರುವುದು.- ಭಿನ್ನತೆ ಇರುವುದು ಹೆಸರಿನಲ್ಲಿ ಮಾತ್ರ ಮತ್ತು ಕಾಣಿಸಿಕೊಳ್ಳುವ ರೀತಿಯ ಚಂಚಲತೆಯಲ್ಲಿ. ಶಿವನ ಎದೆಯ ಮೇಲೆ ಕಾಳಿಯು ನಿಂತಿರುವುದರ ಅರ್ಥದ ನೆಲೆಗಳನ್ನು ಸಾಮಾನ್ಯವಾಗಿ ಹೀಗೆ ಒಪ್ಪಿಕೊಳ್ಳಲಾಗಿದೆ.[೩೩]

ಹೀಗಿದ್ದರೂ, ದೈವೀ ಸುರತದ ಚಿತ್ರಗಳ ಬಗೆಗೂ ಆಗಾಗ್ಗೆ ವಿವಾದವು ಸುತ್ತಿಕೊಂಡಿದೆ.ಸಾಮಾನ್ಯವಾಗಿ ಒಪ್ಪಿತವಾದ ಸರ್ವಸಮ್ಮತ ವಿಷಯವೆಂದರೆ, ಅದು ಅನುಗ್ರಹದ ಮತ್ತು ಇಂದ್ರಿಯ ಸುಖ ಲೋಲುಪತೆ ಕಳಂಕದಿಂದ ಮುಕ್ತವಾದದ್ದು ಎಂಬುದು. ತಂತ್ರದಲ್ಲಿ ಮಾನವ ಶರೀರವು ವಿಶ್ವದ ಅಣುರೂಪವನ್ನು ಸಂಕೇತಿಸುತ್ತದೆ; ಆದುದರಿಂದ ಲೈಂಗಿಕ ಪ್ರಕ್ರಿಯೆಗಳು ಜಗತ್ತಿನ ಸೃಷ್ಟಿಗೆ ಕಾರಣವಾಗುತ್ತವೆ. ಅಗ್ನಿ ಹಾಗೂ ಅದರ ಸುಡುವ ಶಕ್ತಿಯಿಂದ ಹೇಗೆ ಪ್ರತ್ಯೇಕಿಸಲು ಆಗುವುದಿಲ್ಲವೋ ಅದೇ ರೀತಿ ಶಿವ ಮತ್ತು ಕಾಳಿ (ಅಥವಾ ಶಕ್ತಿ)ಯನ್ನು ಬೇರ್ಪಡಿಸಲು ಆಗದೆ ಇದ್ದರೂ ಸೃಷ್ಟಿ ಕ್ರಿಯೆಯ ಕಾಲಕ್ಕೆ ಅವರು ಪ್ರತ್ಯೇಕ ಪಾತ್ರಗಳನ್ನು ಹೊಂದಿರುತ್ತಾರೆ. ಶಿವ ಪುರುಷನಾಗಿ ಮತ್ತು ಕಾಳಿಯು ಸ್ತ್ರೀಯಾಗಿ ಅವರ ಕೂಡುವಿಕೆಯಿಂದ ಮಾತ್ರ ಸೃಷ್ಟಿಯು ಸಾಧ್ಯವಾಗುವುದು. ಇದು ನಮಗೆ ಸಾಂಖ್ಯರ ಪ್ರಕೃತಿ ಮತ್ತು ಪುರುಷ ಸಿದ್ಧಾಂತವನ್ನು ನೆನಪಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷ ಹೇಗೆ ನಿಷ್ಕ್ರಿಯನೋ ಹಾಗೆ ಇಲ್ಲಿ ಪ್ರಕಾಶ- ವಿಮರ್ಶಾ ಪ್ರಾಯೋಗಿಕ ಮೌಲ್ಯವನ್ನು ಹೊಂದಿಲ್ಲ. ಇದು (ಮತ್ತೊಮ್ಮೆ) ಶಿವ ಮತ್ತು ಶಕ್ತಿಯ ಹಾಗೂ ಅವರ ಕೂಡುವಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ.[೩೫]

ಕಾಳಿಯು ಮೃತನಾದ ಶಿವನ ಅಥವಾ ಶವದ (ಸಂಸ್ಕೃತದಲ್ಲಿ ಕಳೇಬರ) ಮೇಲೆ ನಿಂತಿರುವುದು ಕುಂಡಲಿನಿ ಶಕ್ತಿಯು ಮನುಷ್ಯನ ಶರೀರದಲ್ಲಿ ಉಂಟುಮಾಡುವ ಮಾನಸಿಕ ಮತ್ತು ದೈಹಿಕ ಬದಲಾವಣೆಯಿಂದ ಮನುಷ್ಯನಲ್ಲಾಗುವ ಅಸಹಾಯಕತೆಯನ್ನು ಸೂಚಿಸುತ್ತದೆ ಎಂದು ಗೋಪಿಕೃಷ್ಣ ಸೂಚಿಸುತ್ತಾರೆ.[೩೬]

ಬೆಳವಣಿಗೆ

[ಬದಲಾಯಿಸಿ]

ನಂತರದ ಸಂಪ್ರದಾಯಗಳಲ್ಲಿ, ಕಾಳಿಯು ಶಿವನೊಂದಿಗೆ ಅಪರಿಹಾರ್ಯವಾಗಿ ಜೊತೆಯಾಗಿಬಿಡುತ್ತಾಳೆ. ಕಾಳಿಯ ಅನಿಯಂತ್ರಿತ ರೂಪವು ಆಗಾಗ್ಗೆ ಕ್ರೂರವೂ ಮತ್ತು ನಿಯಂತ್ರಣಕ್ಕೆ ನಿಲುಕದ್ದೂ ಆಗಿಬಿಡುವುದು. ಮತ್ತು ಶಿವನು ಮಾತ್ರ ಆಕೆಯನ್ನು ನಿಯಂತ್ರಿಸಬಲ್ಲವನು. ಇದು ಇಬ್ಬರಿಗೂ ಏಕೆಂದರೆ, ಅವಳು ಆಗಾಗ್ಗೆ ಆತನ ಪತ್ನಿಯರಲ್ಲಿ ಒಬ್ಬಳ ರೂಪ ಧಾರಣ ಮಾಡಿರುತ್ತಾಳೆ ಮತ್ತು ಅವಳ ಕ್ರೂರತನದಲ್ಲಿ ಆತನು ಅವಳಿಗೆ ಸರಿಸಾಟಿಯಾಗಬಲ್ಲ. ಪ್ರಾಚೀನ ಕೃತಿ ಕಾಳಿ ಕೌತುವಂನಲ್ಲಿ ಶಿವನೊಂದಿಗೆ ಅವಳ ನೃತ್ಯ ಸ್ಪರ್ಧೆಯ ವರ್ಣನೆ ಇದೆ. ಅಲ್ಲಿಂದಲೇ ಪವಿತ್ರ 108 ಕರಣಗಳು ಮೂಡುತ್ತವೆ. ಶಿವನು ಊರ್ಧ್ವ ತಾಂಡವವನ್ನು ನರ್ತಿಸಿ ಸ್ಪರ್ಧೆಯನ್ನು ಗೆಲ್ಲುತ್ತಾನೆ. ಊರ್ಧ್ವ ತಾಂಡವವು ಒಂದು ಕರಣವಾಗಿದ್ದು ಇದರಲ್ಲಿ ಆತ ತನ್ನ ಕಾಲನ್ನು ತಲೆಗೆ ಎತ್ತುತ್ತಾನೆ. ಇತರ ಗ್ರಂಥಗಳಲ್ಲಿ ಶಿವನು ಅಳುತ್ತಿರುವ ಶಿಶುವಿನ ರೂಪದಲ್ಲಿ ಕಾಣಿಸಿಕೊಂಡನೆಂದೂ ಮತ್ತು ತಾಯಿಯ ಮುಂದೆ ಮಗುವಿನಂತೆ ಅತ್ತನೆಂದು ವರ್ಣಿಸಲಾಗಿದೆ. ಆಕೆಯನ್ನು ನಿಗ್ರಹಿಸಲು ಶಿವನು ಸಮರ್ಥ ಎಂದು ಹೇಳಲಾಗಿದ್ದರೂ ಮೂರ್ತಿಚಿತ್ರಣವು ಆಗಾಗ್ಗೆ ಬಿದ್ದಿರುವ ಶಿವನ ಶರೀರದ ಮೇಲೆ ಅವಳು ನರ್ತನ ಮಾಡುವುದನ್ನು ತೋರಿಸುತ್ತದೆ. ಮತ್ತು ಅವರಿಬ್ಬರೂ ಒಟ್ಟಿಗೆ ನರ್ತಿಸುವ ಚಿತ್ರಗಳೂ ಸಾಕಷ್ಟಿವೆ. ಮತ್ತು ಅವರಿಬ್ಬರೂ ವಿನಾಶಕಾರಿಯಾಗಿ ಪ್ರಹಾರ ಮಾಡಿದಾಗ ಜಗತ್ತು ಪ್ರಳಯವನ್ನು ಎದುರಿಸುವ ಸ್ಥಿತಿಯನ್ನು ತಲುಪಿತ್ತು.

ತಂತ್ರದಲ್ಲಿ ಶಿವನ ಪಾಲ್ಗೊಳ್ಳುವಿಕೆ ಮತ್ತು ಕಾಳಿಯ ಕರಾಳ ಸ್ವಭಾವವು ತಾಂತ್ರಿಕ ಚಿತ್ರಗಳಲ್ಲಿ ಅವಳು ಪ್ರಾಮುಖ್ಯತೆ ಪಡೆಯುವಂತೆ ಆಯಿತು. ತಾಂತ್ರಿಕ ಪೂಜಾರಿಗಳಿಗೆ ಅವರು ಆಕೆಯ ಸುಂದರ, ಪರಿಪಾಲಕಿಯ ಮತ್ತು ಮಾತೃತ್ವದಿಂದ ನೀಡುವ ಆಶೀರ್ವಾದವನ್ನು ಸ್ವೀಕರಿಸುವ ಹಾಗೆಯೇ ಅವಳ ಶಾಪವನ್ನು ಎದುರಿಸಲು, ಸಾವಿನ ಭಯವನ್ನು ಎದುರಿಸಲು ಇದು ಅಗತ್ಯ. ಅವರಿಗೆ ವಿದ್ವತ್ತು ಎಂದರೆ ಯಾವುದೇ ನಾಣ್ಯಕ್ಕೆ ಒಂದೇ ಬದಿ ಎನ್ನುವುದು ಇರುವುದಿಲ್ಲ ಎಂಬುದನ್ನು ಕಲಿಯುವುದು: ಹೇಗೆ ಜೀವನವಿಲ್ಲದೆ ಸಾವಿಲ್ಲವೋ, ಅದೇ ಕಾರಣಕ್ಕೆ ಸಾವಿಲ್ಲದೆ ಜೀವನದ ಅಸ್ತಿತ್ವವಿಲ್ಲ. ಕಾಳಿಯ ಪಾತ್ರವು ಕೆಲವೊಮ್ಮೆ ಅವ್ಯಕ್ತದ ಆಚೆಯೂ ಬೆಳೆಯುತ್ತದೆ- ಅದನ್ನು ವಿರೋಧಿಸಲೂ ಬಹುದು- ಆಕೆಯು ವಿದ್ವತ್ತನ್ನು ತರಬಲ್ಲವಳು ಮತ್ತು ಅವಳು ಮಹಾನ್ ಆಧ್ಯಾತ್ಮಿಕ ಗೂಢಾರ್ಥವನ್ನು ಕೆಲವು ತಾಂತ್ರಿಕ ಪಠ್ಯಗಳ ಮೂಲಕ ನೀಡಬಲ್ಲಳು. ನಿರ್ವಾಣ ತಂತ್ರವು ಅವಳ ಅನಿಯಂತ್ರಿತ ಸ್ವರೂಪವನ್ನು ಪರಮಸತ್ಯವೆಂದು ಸ್ಪಷ್ಟವಾಗಿ ಹೇಳಿದೆ. ಬ್ರಹ್ಮ, ವಿಷ್ಣು ಮತ್ತು ರುದ್ರರಾದ ತ್ರಿಮೂರ್ತಿಗಳು ಸಮುದ್ರದ ಮೇಲಿನ ಗುಳ್ಳೆಗಳಂತೆ ಅವಳಲ್ಲಿಯೇ ಮೂಡಿ ಅವಳಲ್ಲಿಯೇ ಮರೆಯಾಗುವರು ಎಂದು ಹೇಳುತ್ತದೆ. ಹೀಗಿದ್ದರೂ ಅದೊಂದು ಅತ್ಯಂತದ ಪ್ರಕರಣ, ಯೋಗಿನಿ- ತಂತ್ರ, ಕಾಮಾಖ್ಯ- ತಂತ್ರ ಮತ್ತು ನಿರುತ್ತರ- ತಂತ್ರವು ಅವಳನ್ನು ಮಹಾದೇವಿಯ (ಬಹುದೊಡ್ಡ ದೇವಿ, ಅವಳು ಈ ಪ್ರಕರಣದಲ್ಲಿ ಎಲ್ಲ ದೇವರುಗಳ ಸಂಯೋಜನೆ) ಸ್ವರೂಪ (ಸ್ವಯಂ ರೂಪಿ) ಎಂದು ಘೋಷಿಸುತ್ತವೆ.

ಬೆಳವಣಿಗೆಯ ಅಂತಿಮ ಹಂತದಲ್ಲಿ ಕಾಳಿಯನ್ನು ಮಹಾನ್ ಮಾತೆಯೆಂದು ಕರೆದು ಪೂಜಿಸುವುದು ಮತ್ತು ಅವಳ ಸಾಮಾನ್ಯವಾದ ಹಿಂಸಾ ರೂಪ ರಹಿತ ಮಾಡುವುದು. ಈ ಆಚರಣೆಯು ಹೆಚ್ಚು ಸಾಂಪ್ರದಾಯಿಕವಾದ ಚಿತ್ರಣವನ್ನು ಮುರಿಯುತ್ತದೆ. ಈ ಸಂಪ್ರದಾಯದ ಮಾರ್ಗಪ್ರವರ್ತಕರೆಂದರೆ 18ನೆ ಶತಮಾನದ ಶಾಕ್ತ ಕವಿಗಳಾದ ರಾಮಪ್ರಸಾದ್್ ಸೇನರಂಥವರು. ಅವರು ಕಾಳಿಯ ಚಂಚಲ ಸ್ವಭಾವದ ಬಗ್ಗೆ ಜಾಗೃತಿ ಮೂಡಿಸಿದರು. 19ನೆ ಶತಮಾನದ ಬಂಗಾಳಿ ಸಂತ ರಾಮಕೃಷ್ಣ ಕೂಡ ಕಾಳಿಯ ಮಹಾನ್ ಭಕ್ತ. ಇವರ ಪಶ್ಚಿಮದಲ್ಲಿಯ ಜನಪ್ರಿಯತೆಯು ಈ ದೇವಿಯ ಹೆಚ್ಚು ಆಧುನಿಕ, ಅನಿಶ್ಚಿತತೆಯ ವಿವರಣೆಗಳ ಕೊಡುಗೆ ನೀಡಿತು. ಸಾಮಾನ್ಯ ಮತ್ತು ಆಧುನಿಕ ಪೂಜಾರಿಗಳಿಗೆ ಕಾಳಿಯು ಅಷ್ಟೊಂದು ಭಯಾನಕಳಾಗಿಲ್ಲ ಮತ್ತು ಪ್ರಾಚೀನ ಸಂಪ್ರದಾಯದಲ್ಲಿ ಶಿಕ್ಷಣಪಡೆದವರು ಮಾತ್ರ ಆಕೆ ಕೋಪಿಷ್ಠ ಅವಯವಹೊಂದಿರುವಂತೆ ಕಾಣುತ್ತಾರೆ ಎಂದು ರಚೆಲ್ ಮ್ಯಾಕ್್ಡರ್್ಮೋಟ್ ಕೃತಿಯು ಸೂಚಿಸುತ್ತದೆ. ದೇವಿಯ ಬೆಳವಳಿಗೆಯಲ್ಲಾದ ಶ್ರೇಯದ ಕೆಲವು ಭಾಗವನ್ನು ಸಾಂಖ್ಯರಿಗೂ ಕೊಡಲೇಬೇಕು. ಸಾಮಾನ್ಯವಾಗಿ ದೇವಿಯನ್ನು ಭ್ರಮೆಗೆ, ಮಹಾಮಾಯೆಗೆ ಹೋಲಿಸುತ್ತಾರೆ, ತ್ರಿಗುಣಗಳ ಸ್ವಭಾವದ ಮೇಲೆ ನಿಯಂತ್ರಿಸುವ ಸ್ವಭಾವವನ್ನು ಹೊಂದಿದವಳು (ಆದರೆ ಅದರ ಬಂಧನಕ್ಕೆ ಒಳಗಾಗದವಳು), ಮಹಾ-ಕಾಳಿ, ಮಹಾ- ಲಕ್ಷ್ಮಿ ಮತ್ತು ಮಹಾ- ಸರಸ್ವತಿ ಈ ಮೂರು ಸ್ವರೂಪಗಳ ಧಾರಣ ಮಾಡುವವಳು, ಇವು ಅವಳ ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ರೂಪಗಳು. ಈ ದೃಷ್ಟಿಯಲ್ಲಿ ಕಾಳಿಯು ಸರಳವಾಗಿ ಬ್ರಹ್ಮಾಂಡದ ಒಂದು ಭಾಗ.

ಚಿತ್ರ:TIME Magazine October 27 1947 cover.jpg
1947 ಟೈಮ್ ಮ್ಯಾಗಜಿನ್ ಮುಖಪುಟ, ಬೋರಿಸ್ ಆರ್ಟಿಜಿಬಾಶೆಫ್ ರಚಿಸಿದ್ದು. ಭಾರತ ವಿಭಜನೆಯನ್ನು ಸಂಕೇತಿಸುವ ಕಾಳಿ ತನ್ನನ್ನು ತಾನೆ ಗಾಯಗೊಳಿಸಿಕೊಳ್ಳುತ್ತಿರುವ ರೇಖಾಚಿತ್ರ.

ಸರ್ ಜಾನ್ ವುಡ್ರೋಫ್ ಮತ್ತು ಜಾರ್ಜ್ ಫ್ಯುಯೆರ್್ಸ್ಟೀನರಂಥ, ಅನೇಕ ತಾಂತ್ರಿಕ ವಿದ್ವಾಂಸರು (ಅದೇ ರೀತಿ ಪ್ರಾಮಾಣಿಕವಾಗಿ ಆಚರಣೆ ನಡೆಸುವವರು), ನೀವು ಹೇಗೆ ಒಲಿಸಿಕೊಳ್ಳುತ್ತೀರಿ, ಹೇಗೆ ಪ್ರಾರ್ಥಿಸುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಶಿವ ಮತ್ತು ದೇವಿ ಪ್ರತಿದಿನವೂ ಸರಳವಾಗಿ ಗುರುತಿಸಬಲ್ಲ ಸಂಕೇತಗಳು, ಜ್ಞಾನ, ಕಾಲ-ಸಮಯ, ನೈಮಿತ್ತಿಕ ಮತ್ತು ಈ ಎಲ್ಲ ಬಂಧನಗಳಿಂದ ಮುಕ್ತಿಯನ್ನು ಕರುಣಿಸುವ ಪ್ರಕ್ರಿಯೆ ಮೊದಲಾದ ಅಮೂರ್ತ (ಇನ್ನೂ ಸ್ಪರ್ಶಗ್ರಾಹ್ಯವಾಗಬೇಕಾದ) ಪರಿಕಲ್ಪನೆಗಳೂ ಇವೆ ಎಂಬುದನ್ನು ಒಪ್ಪುತ್ತಾರೆ ಶಿವ, ಪರಿಶುದ್ಧ, ಪರಿಪೂರ್ಣ ಜ್ಞಾನವನ್ನು ಸಂಕೇತಿಸುತ್ತದೆ. ಮತ್ತು ದೇವಿಯ ಆ ಜ್ಞಾನದ ತಿರುಳನ್ನು ಸಂಕೇತಿಸುತ್ತದೆ. ಅಂತಿಮವಾಗಿ ಅವೆರಡೂ ಒಂದೇ- ಸಂಪೂರ್ಣವಾಗಿ ಮೈತಳೆದ, ಎಲ್ಲ ವಿಷಯಗಳ, ಎಲ್ಲ ವಸ್ತುಗಳ ಮತ್ತು ಆ "ಎರಡರ" ನಡುವಿನ ಎಲ್ಲ ಕ್ರಿಯಾಸಂಬಂಧಗಳ ಸೂಕ್ಷ್ಮಾತಿಸೂಕ್ಷ್ಮ ಬ್ರಹ್ಮಾಂಡದ ಸಮ್ಮಿಳನ. ಪುರುಷ ಹಾಗೂ ಮಹಿಳೆಯ ಹಾಗೆ ಇಬ್ಬರೂ ಅನೇಕ ಸಾಮಾನ್ಯ, ಮಾನವ ಲಕ್ಷಣಗಳನ್ನು ಹೊಂದಿದ್ದರೂ ಅದೇ ಕಾಲಕ್ಕೆ ಅವರು ಭಿನ್ನವಾಗಿರುತ್ತಾರೆ. ಮತ್ತು ಅದೇ ಕಾರಣಕ್ಕೆ ಪರಸ್ಪರ ಪೂರಕವಾಗಿರುತ್ತಾರೆ.[೩೭]

ಪೂಜಾರಿಗಳು ಸರಳವಾಗಿ ಕಾರ್ಯಸಾಧುವಲ್ಲದ ವಿವಿಧ ಅನುಕಂಪದ ಮತ್ತು ಭಯಾನಕ ಗುಣಗಳನ್ನು ದೇವಿಗೆ ವಿಧಿಸುತ್ತಾರೆ. ಅವರು ಹೀಗೆ ಮಾಡುವುದು ಏಕೆಂದರೆ ಅವರಿಗೆ ಆಯ್ಕೆಮಾಡಿಕೊಳ್ಳುವುದಕ್ಕೆ ವೈವಿಧ್ಯದ ಸಂಕೇತಗಳಿವೆ. ಈ ಸಂಕೇತಗಳನ್ನು ಅವರು ಗುರುತಿಸಬಹುದು ಮತ್ತು ತಮ್ಮದೇ ದೃಷ್ಟಿಕೋನದ ಸಂಬಂಧವನ್ನು ಅದಕ್ಕೆ ನೀಡಬಹುದು, ಇದು ಕಾಲ, ಸ್ಥಳ ಮತ್ತು ವೈಯಕ್ತಿಕ ನೆಲೆಯಲ್ಲಿಯೂ ಎಂದಿಗೂ ಬದಲಾಗುವುದಿಲ್ಲ. ಸಂವೇದನೆಯ ದತ್ತ ಮಾಹಿತಿಯನ್ನು ಆದ್ಯ ವ್ಯವಸ್ಥೆಯ ಮೂಲಕ ಅರ್ಥೈಸಿಕೊಳ್ಳಲು ಆಗದೆ ಇರುವುದನ್ನು ವರ್ಣಿಸುವಾಗ ಆಧುನಿಕ ರಸಾಯನ ಶಾಸ್ತ್ರಜ್ಞರು ಮತ್ತು ಭೌತ ಶಾಸ್ತ್ರಜ್ಞರು ವೈವಿಧ್ಯಮಯ ಅಣು ಮತ್ತು ಪರಮಾಣು ಮಾದರಿಗಳನ್ನು ಬಳಸಿಕೊಳ್ಳುವಂತೆಯೇ ಮೂಲತತ್ತ್ವಶಾಸ್ತ್ರ ಮತ್ತು ಜ್ಞಾನಮೀಮಾಂಸೆಯವರೂ ಮಾಡುವರು. ಇತರ ಧರ್ಮಗಳಿಗೆ ಹೋಲಿಸಿದಲ್ಲಿ, ತಂತ್ರದ ವಿಶಿಷ್ಟ ಸಿದ್ಧಾಂತಗಳಲ್ಲಿ ಒಂದೆಂದರೆ, ಅದು ಭಕ್ತರಿಗೆ ವಿಶಾಲವಾದ ವ್ಯೂಹದಲ್ಲಿ ಪೂರಕ ಸಂಕೇತಗಳನ್ನು ಒಬ್ಬನ ಮನವೊಲಿಸಿಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರವರ ಅಗತ್ಯ ಮತ್ತು ರುಚಿಗೆ ತಕ್ಕಂತೆ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ. ಸೌಂದರ್ಯಶಾಸ್ತ್ರದ ನೆಲೆಯಿಂದ ಹೇಳುವುದಾದರೆ, ಯಾವುದಕ್ಕೂ ನಿಷೇಧವಿಲ್ಲ ಮತ್ತು ಯಾವುದೂ ಸಂಪ್ರದಾಯವಲ್ಲ. ಈ ಅರ್ಥದಲ್ಲಿ, ಕಾಳಿಗೆ ದೇವಿಯ ಕೆಲವು ಉದಾತ್ತ ಗುಣಗಳನ್ನು ಬಿಂಬಿಸುವುದು ಅಪಚಾರವಲ್ಲ ಮತ್ತು ಕಾಳಿಯಲ್ಲಾದ ಬೆಳವಣಿಗೆಗಳು ನಿಜಕ್ಕೂ ಇರುವುದು ಅದನ್ನು ಆಚರಿಸುವವರಲ್ಲಿಯೇ ಹೊರತು ಮೂರ್ತಿಯಲ್ಲಿ ಅಲ್ಲ.

1947ರ ಅಕ್ಟೋಬರ್ 21ರ ಟೈಮ್ ಮ್ಯಾಗಜಿನ್್ನಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ಆ ವರ್ಷ ನಡೆದ ದೇಶ ವಿಭಜನೆಯಿಂದ ಬ್ರಿಟಿಷ್ ಭಾರತದಲ್ಲಿ ಮನುಷ್ಯರು ಅನುಭವಿಸುದ ಸಂಕಟಗಳಿಗೆ ಒಂದು ಸಂಕೇತ ಮತ್ತು ರೂಪಕವಾಗಿ ಕಾಳಿಯನ್ನು ಬಳಸಿಕೊಳ್ಳಲಾಗಿದೆ.[೩೮] ಫೀನಿಕ್ಸ್ ಫೋರ್ಸ್ ಮುಖಪುಟದಲ್ಲಿ ಕೊಲೆಗಡುಕ ರಾತ್ರಿ ವರದಿಗೆ ಕಾಳಿಯ ಮೂರ್ತಿ ಚಿತ್ರ ಬಳಸಿದ್ದು ಕಂಡುಬಂದಿದೆ (1985)

ಹೊಸ ಯುಗ ಮತ್ತು ನವನಾಸ್ತಿಕತೆಯಲ್ಲಿ

[ಬದಲಾಯಿಸಿ]

ಕಾಳಿಯ ಬಗ್ಗೆ ಉತ್ಸುಕರಾಗಿರುವ ಪಶ್ಚಿಮದವರ ಒಂದು ಅಕಾಡೆಮಿಕ್ ಅಧ್ಯಯನವು ಗಮನಿಸಿರುವುದೇನೆಂದರೆ, "ಇತಿಹಾಸದಲ್ಲಿ ಕಂಡುಬಂದಿರುವಂತೆ ಎಲ್ಲ ಮಿಶ್ರ ಸಂಸ್ಕೃತಿಯ ಧರ್ಮಗಳ ಸ್ಥಾನಾಂತರದಲ್ಲಿ, ಪಶ್ಚಿಮದಲ್ಲಿ ಕಾಳಿ ಭಕ್ತಿಪಂಥವು ತನ್ನ ನೂತನ ಪರಿಸರದಲ್ಲಿ ಅದನ್ನು ಅಂಗೀಕರಿಸುವುದೇ ಆದಲ್ಲಿ ತನ್ನದೇ ಆದ ಭಾರತೀಯ ರೂಪವನ್ನು ಸ್ವೀಕರಿಸಬೇಕು."[೩೯] ಕಾಳಿಯನ್ನು ಪಶ್ಚಿಮದವರು ಸ್ವೀಕರಿಸುವುದೆಂದರೆ ಸಾಂಸ್ಕೃತಿಕ ಅಸಮತೋಲನ ಕಂಡುಬರುವುದೆಂಬ ಆರೋಪಗಳು ಎದ್ದಿವೆ:

"ವಿವಿಧ ಲೇಖಕರು ಮತ್ತು ವಿಚಾರವಾದಿಗಳು [...] ಮುಖ್ಯಮಾಗಿ ಮಹಿಳಾವಾದಿಗಳಿಗೆ ಮತ್ತು ದೇವಿ ಆರಾಧನೆಯಿಂದ ಆಕರ್ಷಿತರಾದ ಹೊಸ ಯುಗದ ಆಧ್ಯಾತ್ಮಿಕತೆಯಲ್ಲಿ ಪಾಲ್ಗೊಂಡವರಿಗೆ ಕಾಳಿಯು ಪ್ರತಿಫಲನಕ್ಕೆ ಮತ್ತು ಪರಿಶೋಧನೆಗೆ ಒಂದು ರೋಮಾಂಚಕ ಚಿತ್ರ ಎಂಬುದನ್ನು ಕಂಡುಕೊಂಡಿದ್ದಾರೆ. [ಅವರಿಗೆ], ಕಾಳಿಯು ಅಖಂಡತೆ ಮತ್ತು ಉಪಶಮನದ ಸಂಕೇತ. ಜೊತೆಗೆ ಅದುಮಿಟ್ಟ ಮಹಿಳಾ ಶಕ್ತಿ ಮತ್ತು ಲೈಂಗಿಕತೆಯೊಂದಿಗೆ ಅದು ವಿಶೇಷವಾಗಿ ಸಂಬಂಧವನ್ನು ಹೊಂದಿದೆ. [ಹೇಗಾದರೂ, ಇಂಥ ವ್ಯಾಖ್ಯಾನಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ] ಸಂದಿಗ್ಧತೆ ಮತ್ತು ತಪ್ಪುನಿರೂಪಣೆಯು ಈ ಲೇಖಕರಲ್ಲಿ ಹಿಂದೂ ಇತಿಹಾಸದ ಬಗ್ಗೆ ಇರುವ ಜ್ಞಾನದ ಕೊರತೆಯಿಂದ ಹೊರಹೊಮ್ಮಿದ್ದು. [ಅವರು ಕೇವಲ ಅಪರೂಪಕ್ಕೆ] ಹಿಂದೂ ಧಾರ್ಮಿಕ ಸಂಪ್ರದಾಯದ ವಿದ್ವಾಂಸರು ಬರೆದ ಮಾಹಿತಿಯನ್ನು ಎತ್ತಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು ಇತರ ಜನಪ್ರಿಯ ಮಹಿಳಾವಾದಿ ಮೂಲಗಳನ್ನು ಸುಲಬಕ್ಕೆ ಅವಲಂಬಿಸಿದ್ದನ್ನು ಬಿಟ್ಟರೆ ಕಾಳಿಯ ಭಾರತೀಯ ಹಿನ್ನೆಲೆಯನ್ನು ಅಧ್ಯಯನ ಮಾಡಿ ವ್ಯಾಖ್ಯಾನಿಸಿದ್ದರ ನೆಲೆಯನ್ನು ಹೊಂದಿಲ್ಲ. [...] ಈ ಚರ್ಚೆಯಿಂದ ಮೂಡಿದ ಅತ್ಯಂತ ಮಹತ್ವದ ವಿಷಯವೆಂದರೆ- 'ಸರಿಯಾದ' ವ್ಯಾಖ್ಯಾನವೇ ಎನ್ನುವದಕ್ಕಿಂತ ಹೆಚ್ಚು ಮಹತ್ವದ ಪ್ರಶ್ನೆಯೆಂದರೆ- ಇತರ ಜನರ ಧಾರ್ಮಿಕ ಸಂಕೇತಗಳನ್ನು ಅಂಗೀಕರಿಸುವುದರ ಬಗೆಗಿನ ಕಾಳಜಿ. [...] ಇನ್ನೊಂದು ಸಂಸ್ಕೃತಿಯ ದೇವಿಯ ಪೂಜೆ.ನ್ನು ಆಮದು ಮಾಡಿಕೊಳ್ಳುವುದು ಕಠಿಣವಾದುದು: ಆಳವಾದ ಸಾಂಕೇತಿಕ ಅರ್ಥಗಳು ಮೂಲ ಸಂಸ್ಕೃತಿಯಲ್ಲಿ ಅಡಗಿದ್ದುದು ಲಭ್ಯವಾಗದೆ ಹೋದಾಗ ಧಾರ್ಮಿಕ ಸಾಹಚರ್ಯ ಮತ್ತು ಸೂಚಿತಾರ್ಥಗಳನ್ನು ಕಲಿತುಕೊಳ್ಳಬೇಕು, ಕಲ್ಪಿಸಿಕೊಳ್ಳಬೇಕು ಮತ್ತು ಸ್ವಯಂಪ್ರಕಾಶಿಸಿಕೊಳ್ಳಬೇಕು."[೪೦]

ಉಲ್ಲೇಖಗಳು

[ಬದಲಾಯಿಸಿ]
  1. ಎನ್ಸೈಕ್ಲೋಪೀಡಿಯಾ ಇಂಟರ್ನ್ಯಾಷನಲ್ , ಗ್ರೋಲಿಯರ್ ಅವರಿಂದ, ಹಕ್ಕುಗಳು ಕೆನಡಾದಲ್ಲಿ ಸಂಯೋಜನೆಯಾಗಿವೆ 1974. AE5.E447 1974 031 73-11206 ISBN 0-7172-0705-6 ಪುಟ 95
  2. ಪಾಣಿನಿ 4.1.42
  3. ಕೋಬರ್ನ್, ಥಾಮಸ್; Devī-Māhātmya — ಕ್ರಿಸ್ಟಿಲೈಜೇಶನ್ ಆಫ್ ದಿ ಗಾಡೆಸ್ ಟ್ರೆಡಿಶನ್ ; ಮೋತಿಲಾಲ್ ಬನಾರಸಿದಾಸ್, ಡೆಲ್ಲಿ, 1984; ISBN 81-208-0557-7 ಪುಟಗಳು 111–112.
  4. ಹುಗ್ ಅರ್ಬನ್, "ಇಂಡಿಯಾಸ್ ಡಾರ್ಕೆಸ್ಟ್ ಹಾರ್ಟ್: ಕಾಳಿ ಇನ್ ಕೊಲೋನಿಯಲ್ ಇಮ್ಯಾಜಿನೇಶನ್," ಎನ್ಕೌಂಟರಿಂಗ್ ಕಾಳಿ: ಇನ್ ದಿ ಮಾರ್ಜಿನ್ಸ್, ಆ್ಯಟ್ ದಿ ಸೆಂಟರ್, ಇನ್ ದಿ ವೆಸ್ಟ್, ರಾಚೆಲ್ ಫೆಲ್ ಮೆಕ್ ಡರ್ಮಾಟ್ ಮತ್ತು ಜೆಫ್ರಿ ಕೃಪಾಲ್ ಅವರು ಸಂಪಾದಿಸಿದ್ದು (ಬರ್ಕಲಿ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಮುದ್ರಣಾಲಯ, 2003)
  5. ಡೇವಿಡ್.ಕಿನ್್ಸ್ಲೇ, ತಾಂತ್ರಿಕ್ ವಿಸನ್ಸ್ ಆಫ್ ದಿ ಡಿವೈನ್ ಫೆಮಿನೈನ್: ದಿ ಟೆನ್ ಮಹಾವಿದ್ಯಾಸ್ (ಬರ್ಕಲಿ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಮುದ್ರಣಾಲಯ, 1997), ಪುಟ. 70
  6. ೬.೦ ೬.೧ ಡಿ.ಕಿನ್್ಸ್ಲೇ ಪುಟ. 122.
  7. ಡಿ.ಕಿನ್್ಸ್ಲೇ ಪುಟ. 122–123.
  8. ೮.೦ ೮.೧ ಡಿ.ಕಿನ್್ಸ್ಲೇ ಪುಟ. 124.
  9. ಕೃಪಾನಿಧಿ ಸ್ತೋತ್ರ, ತಾಂತ್ರಿಕ ಗ್ರಂಥ ಸಂಪುಟ IX, ಅರ್ಥರ್ ಅವಲಾನ್ (ಸರ್ ಜಾನ್ ವುಡ್ರೋಫೆ), ಕಲ್ಕತ್ತಾ ಆಗಮಾನುಸಂಧಾನ ಸಮಿತಿ, 1922.
  10. ಡಿ.ಕಿನ್್ಸ್ಲೇ ಪುಟ. 124–125.
  11. ಡಿ.ಕಿನ್್ಸ್ಲೇ ಪುಟ. 125.
  12. ಡಿ.ಕಿನ್್ಸ್ಲೇ ಪುಟ. 126.
  13. ಡಿ.ಕಿನ್್ಸ್ಲೇ ಪುಟ.125–126.
  14. ೧೪.೦ ೧೪.೧ ಡಿ.ಕಿನ್್ಸ್ಲೇ ಪುಟ. 128.
  15. "MantraOnNet.com:Text & Images of Kali". Archived from the original on 2010-12-25. Retrieved 2010-10-11.
  16. ಡಿ.ಕಿನ್್ಸ್ಲೇ ಪುಟ. 118.
  17. ದೇವಿ ಮಹಾತ್ಮ್ಯಮ್ , ಸ್ವಾಮಿ ಜಗದೀಶ್ವರಾನಂದ, ರಾಮಕೃಷ್ಣ ಮಠ, 1953.
  18. ಡಿ.ಕಿನ್್ಸ್ಲೇ ಪುಟ. 118–119.
  19. ವಾಂಗು ಪುಟ. 72.
  20. ಕಿನ್್ಸ್ಲೇ ಪುಟ. 241 ಅಡಿ ಟಿಪ್ಪಣಿಗಳು.
  21. ಡಿ.ಕಿನ್್ಸ್ಲೇ ಪುಟಗಳು. 119, 130.
  22. ಮ್ಯಾಕ್ ಡರ್ಮಾಟ್ 2003.
  23. ಡಿ.ಕಿನ್್ಸ್ಲೇ ಪುಟ. 119.
  24. ಡಿ.ಕಿನ್್ಸ್ಲೇ ಪುಟ. 131.
  25. ದಿ ಆರ್ಟ್ ಆಫ್ ತಂತ್ರ , ಫಿಲಿಪ್ ರಾವ್್ಸನ್, ಥಾಮ್ಸ್ ಮತ್ತು ಹಡ್ಸನ್, 1973.
  26. ಶಂಕರನಾರಾಯಣನ್. ಎಸ್. ದೇವಿ ಮಹಾತ್ಮ್ಯ. ಪುಟ 127.
  27. ಡೇವಿಡ್ ಗೋರ್ಡನ್ ವೈಟ್ (ಸಂ.), ತಂತ್ರ ಇನ್ ಪ್ರ್ಯಾಕ್ಟಿಸ್ , ISBN 81-208-1778-8 ಪುಟ 466.
  28. ಶ್ರೀ ರಾಮಕೃಷ್ಣ (ದಿ ಗ್ರೇಟ್ ಮಾಸ್ಟರ್) , ಸ್ವಾಮಿ ಶಾರದಾನಂದ, ರಾಮಕೃಷ್ಣ ಮಠ, 1952, ಪುಟ 624, ಶ್ರೀ ರಾಮಕೃಷ್ಣ: ದಿ ಸ್ಪಿರಿಚ್ಯುವಲ್ ಗ್ಲೋ , ಕಮಲಪಾದ ಹತಿ, ಪಿ.ಕೆ. ಪ್ರಾಮಾಣಿಕ್, ಓರಿಯಂಟ್ ಬುಕ್ ಕಂ., 1985, ಪುಟಗಳು 17–18.
  29. ತಂತ್ರ ಇನ್ ಪ್ರ್ಯಾಕ್ಟಿಸ್ , ಡೇವಿಡ್ ಗೋರ್ಡನ್ ವೈಟ್, ಪ್ರಿನ್ಸ್ಟನ್ ಮುದ್ರಣಾಲಯ, 2000, ಪುಟಗಳು 477.
  30. ತಂತ್ರ ಇನ್ ಪ್ರ್ಯಾಕ್ಟಿಸ್ , ಡೇವಿಡ್ ಗೋರ್ಡನ್ ವೈಟ್, ಪ್ರಿನ್ಸ್ಟನ್ ಮುದ್ರಣಾಲಯ, 2000, ಪುಟಗಳು 475.
  31. ತಂತ್ರ ಇನ್ ಪ್ರ್ಯಾಕ್ಟಿಸ್ , ಡೇವಿಡ್ ಗೋರ್ಡನ್ ವೈಟ್, ಪ್ರಿನ್ಸ್ಟನ್ ಮುದ್ರಣಾಲಯ, 2000, ಪುಟಗಳು 463–488.
  32. ಹಿಂದು ಗಾಡ್ಸ್ ಆ್ಯಂಡ್ ಗಾಡೆಸಸ್ , ಸ್ವಾಮಿ ಹರ್ಷಾನಂದ, ರಾಮಕೃಷ್ಣ ಮಠ, 1981, ಪುಟಗಳು 116–117.
  33. ೩೩.೦ ೩೩.೧ ತಂತ್ರ (ದಿ ಪಾತ್ ಆಫ್ ಎಸ್ಕಾಟ್ಸಿ) , ಜಾರ್ಜ್ ಫ್ಯುಯೆರ್್ಸ್ಟೀನ್, ಸಂಭಾಳ, 1998, ಪುಟಗಳು 70–84, ಶಕ್ತಿ ಆ್ಯಂಡ್ ಶಾಕ್ತ , ಅರ್ಥರ್ ಅವೋಲಾನ್ (ಸರ್ ಜಾನ್ ವುಡ್ರೋಫ್), ಆಕ್ಸ್್ಫರ್ಡ್ ಮುದ್ರಣಾಲಯ/ಗಣೇಶ ಆ್ಯಂಡ್ ಕಂ.., 1918.
  34. ತಂತ್ರ ಇನ್ ಪ್ರ್ಯಾಕ್ಟಿಸ್ , ಡೇವಿಡ್ ಗೋರ್ಡನ್ ವೈಟ್, ಪ್ರಿನ್ಸ್ಟನ್ ಮುದ್ರಣಾಲಯ, 2000, ಪುಟಗಳು 463–488, ಶಕ್ತಿ ಆ್ಯಂಡ್ ಶಾಕ್ತ , ಅರ್ಥರ್ ಅವೋಲಾನ್ (ಸರ್ ಜಾನ್ ವುಡ್ರೋಫ್), ಆಕ್ಸ್್ಫರ್ಡ್ ಮುದ್ರಣಾಲಯ/ಗಣೇಶ ಆ್ಯಂಡ್ ಕಂ.., 1918.
  35. ಇಂಪ್ಯಾಕ್ಟ್ ಆಫ್ ತಂತ್ರ ಆನ್ ರಿಲಿಜನ್ ಆ್ಯಂಡ್ ಆರ್ಟ್ , ಟಿ.ಎನ್.ಮಿಶ್ರಾ, ಡಿ.ಕೆ. ಪ್ರಿಂಟ್ ವರ್ಲ್ಡ್, 1997, ವಿ.
  36. ಕೃಷ್ಣ ಗೋಪಿ (1993)ಲಿವಿಂಗ್ ವಿಥ್ ಕಂಡಲಿನಿ : (ಶಂಭಾಳ, 1993 ISBN 0877739471).
  37. ತಂತ್ರ (ದಿ ಪಾಥ್ ಆಫ್ ಎಸ್ಕಾಟ್ಸಿ) , ಜಾರ್ಜ್ ಪ್ಯುಯೆರ್್ಸ್ಟೀನ್, ಸಂಭಾಳ, 1998, ಶಕ್ತಿ ಆ್ಯಂಡ್ ಶಾಕ್ತ , ಅರ್ಥರ್ ಅವೋಲಾನ್ (ಸರ್ ಜಾನ್ ವುಡ್ರೋಫ್), ಆಕ್ಸ್್ಫರ್ಡ್ ಮುದ್ರಣಾಲಯ/ಗಣೇಶ ಆ್ಯಂಡ್ ಕಂ.., 1918.
  38. ದಿ ಟ್ರಯಲ್ ಆಫ್ ಕಾಳಿ Archived 2009-06-16 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್ ಮ್ಯಾಗಜಿನ್ , ಅಕ್ಟೋಬರ್ 27, 1947.
  39. ಮ್ಯಾಕ್ ಡರ್ಮೋಟ್, ರಚೇಲ್ ಪೆಲ್, "ದಿ ವೆಸ್ಟರ್ನ್ ಕಾಳಿ", ಇನ್ ಹಾವ್ಲಿ, ಜಾನ್ ಸ್ಟ್ರಾಟನ್ ಆ್ಯಂಡ್ ವುಲ್ಫ್ ಡೊನ್ನಾಎಂ., ದೇವಿ: ದಿ ಗಾಡೆಸ್ ಇನ್ ಇಂಡಿಯಾ , ಪುಟ. 305.
  40. ಮ್ಯಾಕ್್ಡರ್ಮೆಟ್ ರಚೇಲ್ ಫೆಲ್, "ದಿ ವೆಸ್ಟರ್ನ್ ಕಾಳಿ", ಇನ್ ಹಾವ್ಲಿ, ಜಾನ್ ಸ್ಟ್ರಾಟನ್ ಆ್ಯಂಡ್ ವುಲ್ಫ್, ಡೊನ್ನಾ ಎಂ., ದೇವಿ: ದಿ ಗಾಡೆಸ್ ಇನ್ ಇಂಡಿಯಾ , ಪುಟಗಳು. 281–305.


  • ಶಕ್ತಿ ಆ್ಯಂಡ್ ಶಾಕ್ತ , ಅರ್ಥರ್ ಅವಲಾನ್ (ಸರ್ ಜಾನ್ ವುಡ್ರೋಫ್), ಆಕ್ಸಫರ್ಡ್ ಮುದ್ರಣಾಲಯ/ಗಣೇಶ ಆ್ಯಂಡ್ ಕೋ., 1918
  • ಶ್ರೀ ರಾಮಕೃಷ್ಣ (ದಿ ಗ್ರೇಟ್ ಮಾಸ್ಟರ್) , ಸ್ವಾಮಿ ಶಾರದಾನಂದ, ರಾಮಕೃಷ್ಣ ಮಠ,1952
  • ದೇವಿ ಮಹಾತ್ಮ್ಯಮ್ , ಸ್ವಾಮಿ ಜಗದೀಶ್ವರಾನಂದ, ರಾಮಕೃಷ್ಣ ಮಠ, 1953
  • ದಿ ಆರ್ಟ್ ಆಫ್ ತಂತ್ರ , ಫಿಲಿಪ್ ರಾವ್್ಸನ್, ಥೇಮ್ಸ್ ಆ್ಯಂಡ್ ಹಡ್ಸನ್, 1973
  • ಹಿಂದೂ ಗಾಡ್ಸ್ ಆ್ಯಂಡ್ ಗಾಡೆಸಸ್ , ಸ್ವಾಮಿ ಹರ್ಷಾನಂದ, ರಾಮಕೃಷ್ಣ ಮಠ, 1981
  • ಶ್ರೀ ರಾಮಕೃಷ್ಣ: ದಿ ಸ್ಪಿರಿಚ್ಯುವಲ್ ಗ್ಲೋ , ಕಮಲಪಾದ ಹತಿ, ಪಿ.ಕೆ.ಪ್ರಾಮಾಣಿಕ, ಓರಿಯಂಟ್ ಬುಕ್ ಕಂ., 1985
  • ಹಿಂದೂ ಗಾಡೆಸಸ್ , ಡೇವಿಡ್ ಆರ್ ಕಿನ್್ಸ್ಲೇ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, 1988
  • ಕಾಳಿ (ದಿ ಬ್ಲಾಕ್ ಗಾಡೆಸ್ ಆಫ್ ದಕ್ಷಿಣೇಶ್ವರ) ಎಲಿಜಾಬೆತ್ ಯು. ಹಾರ್ಡಿಂಗ್, ಲಿಕೋಲಾಸ್ ಹೇಸ್, 1993
  • ಇಂಪ್ಯಾಕ್ಟ್ ಆಫ್ ತಂತ್ರ ಆನ್ ರಿಲಿಜನ್ ಆ್ಯಂಡ್ ಆರ್ಟ್ , ಟಿ.ಎನ್.ಮಿಶ್ರಾ, ಡಿ.ಕೆ.. ಪ್ರಿಂಟ್ ವರ್ಲ್ಡ್, 1997
  • ಇಂಡಿಯನ್ ಆರ್ಟ್ (ರಿವೈಸ್ಡ್) , ರಾಯ್ ಸಿ.. ಕ್ರಾವೆನ್, ಥೇಮ್ಸ್ ಆ್ಯಂಡ್ ಹಡ್ಸನ್, 1997
  • ಎ ಡಿಕ್ಷನರಿ ಆಫ್ ಬುದ್ದಿಸ್ಟ್ ಆ್ಯಂಡ್ ಹಿಂದೂ ಐಕೊನೋಗ್ರಾಫಿ (ಇಲ್್ಸ್ಟ್ರೇಟೆಡ್) , ಫ್ರೆಡರಿಕ್ ಡಬ್ಲ್ಯೂ. ಬನ್ಸ್, ಡಿ.ಕೆ.ಪ್ರಿಂಟ್ ವರ್ಲ್ಡ್, 1997
  • ತಂತ್ರ (ದಿ ಪಾತ್ ಆಫ್ ಎಕ್ಸ್್ಟೇಸ್) , ಜಾರ್ಜ್ ಪ್ಯುಯೆರ್್ಸ್ಟೀನ್, ಸಂಭಾಳ, 1998
  • ಆಕ್ಸ್್ಫರ್ಡ್ ಕಾನ್್ಸಿಸ್ ಡಿಕ್ಸನರಿ ಆಫ್ ವರ್ಲ್ಡ್ ರಿಲಿಜನ್ಸ್ , ಜಾನ್ ಬೌಕರ್, ಆಕ್ಸ್್ಫರ್ಡ್ ಮುದ್ರಣಾಲಯ, 2000
  • ತಂತ್ರ ಇನ್ ಪ್ರ್ಯಾಕ್ಟಿಸ್ , ಡೇವಿಡ್ ಗಾರ್ಡನ್ ವೈಟ್, ಪ್ರಿನ್ಸ್್ಟನ್ ಮುದ್ರಣಾಲಯ, 2000
  • ಎನ್್ಕೌಂಟರಿಂಗ್ ಕಾಳಿ (ಇನ್ ದಿ ಮಾರ್ಜಿನ್ಸ್, ಆ್ಯಟ್ ದಿ ಸೆಂಟರ್, ಇನ್ ದಿ ವೆಸ್ಟ್) , ರಚೆಲ್ ಪೆಲ್ಲ್ ಮೆಕ್್ಡರ್ಮೋಟ್, ಬರ್ಕಲಿ : ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಮುದ್ರಣಾಲಯ, 2003

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಷಣ್ಮುಖ ಅನಂತನಾಥ ಆ್ಯಂಡ್ ಶ್ರೀ ಮಾ ಕ್ರಿಸ್ಟಿನಾ ಬೈರ್ಡ್, ಡಿವೈನ್ ಇನಿಶಿಯೇಶನ್ ಶ್ರೀ ಕಾಳಿ ಪಬ್ಲಿಕೇಶನ್ಸ್ (2001) ISBN 0-9582324-0-7 - ಮಹಾದೇವಿಯ ಮೇಲೆ ಒಂದು ಅಧ್ಯಾಯವಿದೆ, ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯ ದ ವಿವರಣೆ ಇದೆ.
  • ಸ್ವಾಮಿ ಜಗದೀಶ್ವರಾನಂದ, tr., ದೇವಿ ಮಹಾತ್ಮ್ಯಮ್ ಚೆನ್ನೈ, ರಾಮಕೃಷ್ಣ ಮಠ. ಐ ಎಸ್ ಬಿ ಎನ್ 0-471-80580-7.
  • ಎಲಿಜಾಬೆತ್ ಉಷಾ ಹಾರ್ಡಿಂಗ್, ಕಾಳಿ: ದಿ ಬ್ಲಾಕ್ ಗಾಡೆಸ್ ಆಫ್ ದಕ್ಷಿಣೇಶ್ವರ ISBN 0-89254-025-7
  • ದೇವದತ್ತ ಕಾಳಿ, ಇನ್ ಪ್ರೇಸ್ ಆಫ್ ದಿ ಗಾಡೆಸ್, ದಿ ದೇವಿ ಮಹಾತ್ಮ್ಯಮ್ ಆ್ಯಂಡ್ ಇಟ್ಸ್ ಮೀನಿಂಗ್ ISBN 0-89254-080-X
  • ಡೇವಿಡ್ ಕಿನ್್ಸ್ಲೇ, ಹಿಂದೂ ಗಾಡೆಸಸ್: ವಿಸನ್ ಆಫ್ ದಿ ಡಿವೈನ್ ಫೆಮಿನೈನ್ ಇನ್ ದಿ ಹಿಂದೂ ರಿಲಿಜಿಯಸ್ ಟ್ರೆಡಿಶನ್ಸ್ ISBN 81-208-0379-5
  • ರಚೆಲ್ ಫೆಲ್ಲ್ ಮೆಕ್್ಡರ್ಮೋಟ್, ಎನ್್ಕೌಂಟರಿಂಗ್ ಕಾಳಿ: ಇನ್ ದಿ ಮಾರ್ಜಿನ್ಸ್, ಆ್ಯಟ್ ದಿ ಸೆಂಟರ್, ಇನ್ ದಿ ವೆಸ್ಟ್ (ISBN 0-520-23240-2)
  • ಅಜಿತ್ ಮೂಕೆಜೀ, ಕಾಳಿ: ದಿ ಫೆಮಿನೈನ್ ಫೋರ್ಸ್ ISBN 0-89281-212-5
  • ಸ್ವಾಮಿ ಸತ್ಯಾನಂದ ಸರಸ್ವತಿ,ಕಾಳಿ ಪೂಜಾ ISBN 1-887472-64-9
  • ರಾಮಪ್ರಸಾದ ಸೇನ್, ಗ್ರೇಸ್ ಆ್ಯಂಡ್ ಮರ್ಸಿ ಇಂನ್ ಹರ್ ವೈಲ್ಡ್ ಹೇರ್: ಸಿಲೆಕ್ಟೆಡ್ ಪೋಯೆಮ್ಸ್ ಟು ದಿ ಮದರ್ ಗಾಡೆಸ್ ISBN 0-934252-94-7
  • ಸರ್ ಜಾನ್ ವುಡ್ರೋಫ್ (ಅಕಾ ಅರ್ಥರ್ ಅವಲೋನ್)ಹೈಮ್ಸ್ ಟು ದಿ ಗಾಡೆಸ್ ಆ್ಯಂಡ್ಹೈಮ್ ಟು ಕಾಳಿ ISBN 81-85988-16-1
  • ರಾಬರ್ಟ್ ಇ ಸ್ವೋಬೋಡಾ, ಅಘೋರ, ಆ್ಯಟ್ ದಿ ಲೆಫ್ಟ್ ಹ್ಯಾಂಡ್ ಆಫ್ ದಿ ಗಾಡ್ ISBN 0-914732-21-8
  • ಡಿಮಿಟ್ರಿ ಕಿಟ್ಸಿಕಿಸ್, L'Orocc, dans l'âge de Kali ISBN 2-89040-359-9
  • ಲೆಕ್ಸ್ ಹಿಕ್ಸನ್, ಮದರ್ ಆಫ್ ದಿ ಯುನಿವರ್ಸ್: ವಿಸನ್ಸ್ ಆಫ್ ದಿ ಗಾಡೆಸ್ ಆ್ಯಂಡ್ ತಾಂತ್ರಿಕ್ ಹೈಮ್ಸ್ ಆಫ್ ಎನ್್ಲೈಟ್್ಮೆಂಟ್ ISBN 0-8356-0702-X
  • ನೀಲಾ ಭಟ್ಟಾಚಾರ್ಯ ಸಕ್ಸೇನಾ, ಇನ್ ದಿ ಬಿಗಿನಿಂಗ್ ಈಸ್ ಡಿಸೈರ್: ಟ್ರೇಸಿಂಗ್ ದಿ ಕಾಳಿಸ್ ಫೂಟ್ ಪ್ರಿಂಟ್ಸ್ ಇನ್ ಇಂಡಿಯನ್ ಲಿಟರೇಚರ್ ISBN 818798161X
  • ದಿ ಗಾಡೆಸ್ ಕಾಳಿ ಆಫ್ ಕೋಲ್ಕತಾ (ISBN 81-7476-514-X) ಸೋಮ ಎ. ಚಟರ್ಜಿ ಅವರಿಂದ
  • ಎನ್್ಕೌಂಟರಿಂಗ್ ದಿ ಗಾಡೆಸ್: ದೇವಿ ಮಹಾತ್ಮ್ಯದ ಅನುವಾದ ಮತ್ತು ಅದರ ವ್ಯಾಖ್ಯಾನದ ಅಧ್ಯಯನ (ISBN 0-7914-0446-3)ಥಾಮಸ್ ಬಿ.ಕೋಬರ್ನ್ ಅವರಿಂದ
  • ಡಿಕ್ಷನರಿ ಆಫ್ ಹಿಂದು ಲೋರ್ ಆ್ಯಂಡ್ ಲೆಜೆಂಡ್ (ISBN 0-500-51088-1) ಅನ್ನಾ ದಲ್ಲಾಪಿಕೋಲೋ ಅವರಿಂದ
  • ಕಾಳಿ: ದಿ ಬ್ಲಾಕ್ ಗಾಡೆಸ್ ಆಫ್ ದಕ್ಷಿಣೇಶ್ವರ (ISBN 0-89254-025-7) ಎಲಿಜಾಬೆತ್ ಉಷಾ ಹಾರ್ಡಿಂಜ್ ಅವರಿಂದ
  • ಇನ್ ಪ್ರೇಸ್ ಆಫ್ ದಿ ಗಾಡೆಸ್: ದಿ ದೇವಿ ಮಹಾತ್ಮ್ಯಮ್ ಆ್ಯಂಡ್ ಇಟ್ಸ್ ಮೀನಿಂಗ್ (ISBN 0-89254-080-X) ದೇವದತ್ತ ಕಾಳಿ ಅವರಿಂದ
  • ಹಿಂದು ಗಾಡೆಸಸ್: ವಿಸನ್ ಆಫ್ ದಿ ಡಿವೈನ್ ಫೆಮಿನೈನ್ ಇನ್ ದಿ ಹಿಂದು ರಿಲಿಜಿಯಸ್ ಟ್ರೆಡಿಶನ್ಸ್ (ISBN 81-208-0379-5) ಡೇವಿಡ್ ಕಿನ್್ಸ್ಲೇ ಅವರಿಂದ
  • ತಾಂತ್ರಿಕ್ ವಿಸನ್ಸ್ ಆಫ್ ದಿ ಡಿವೈನ್ ಫೆಮಿನೈನ್ (ISBN 0-520-20499-9) ಡೇವಿಡ್ ಕಿನ್್ಸ್ಲೇ ಅವರಿಂದ
  • ಆಫರಿಂಗ್ ಫ್ಲಾವರ್ಸ್, ಫೀಡಿಂಗ್ ಸ್ಕಲ್ಸ್: ಪಾಪ್ಯುಲರ್ ಗಾಡೆಸ್ ವರ್ಶಿಫ್ ಇನ್ ವೆಸ್ಟ್ ಬೆಂಗಾಲ್ (ISBN 0-195-16791-0) ಜೂನ್ ಮೆಕ್ ಡೆನಿಯಲ್ ಅವರಿಂದ
  • ಎನ್್ಕೌಂಟರಿಂಗ್ ಕಾಳಿ: ಇನ್ ದಿ ಮಾರ್ಜಿನ್ಸ್, ಆ್ಯಟ್ ದಿ ಸೆಂಟರ್, ಇನ್ ದಿ ವೆಸ್ಟ್ (ISBN 0-520-23240-2) ರಚೇಲ್ ಫೆಲ್ಲ್ ಮೆಕ್್ಡರ್ಮೋಟ್ ಅವರಿಂದ
  • ಮದರ್ ಆಫ್ ಮೈ ಹಾರ್ಟ್, ಡಾಟರ್ ಆಫ್ ಮೈ ಡ್ರೀಮ್ಸ್: ಬಂಗಾಳದ ಭಕ್ತಿಗೀತೆಗಳಲ್ಲಿ ಕಾಳಿ ಮತ್ತು ಉಮಾ (ISBN 0-19-513435-4) ರಚೇಲ್ ಫೆಲ್ಲ್ ಮೆಕ್್ಡರ್ಮೋಟ್ ಅವರಿಂದ
  • ಕಾಳಿ: ದಿ ಫೆಮೆನೈನ್ ಫೋರ್ಸ್ (ISBN 0-89281-212-5) ಅಜಿತ್ ಮೂಕರ್ಜಿ ಅವರಿಂದ
  • ಸೀಕಿಂಗ್ ಮಹಾದೇವಿ: ಕನ್್ಸ್ಟ್ರಕ್ಟಿಂಗ್ ದಿ ಐಡೆಂಟಿಟಿಸ್ ಆಫ್ ದಿ ಹಿಂದು ಗ್ರೇಟ್ ಗಾಡೆಸ್ (ISBN 0-791-45008-2) ಟ್ರೇಸಿ ಪಿಂಚ್ಮನ್ ಅವರಿಂದ ಸಂಪಾದಿತ
  • ದಿ ರೈಸ್ ಆಫ್ ಗಾಡೆಸ್ ಇನ್ ಹಿಂದೂ ಟ್ರೆಡಿಶನ್ (ISBN 0-7914-2112-0) ಟ್ರೇಸಿ ಪಿಂಚ್ಮನ್ ಅವರಿಂದ

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • ಕಾಳಿ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
"https://kn.wikipedia.org/w/index.php?title=ಕಾಳಿ&oldid=1177814" ಇಂದ ಪಡೆಯಲ್ಪಟ್ಟಿದೆ