ಕಲಿಯುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಿಯುಗ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ


ಕಲ್ಕಿ ಮತ್ತು ಅವನ ಕುದುರೆ, ದೇವದತ್ತ.
ಕಲ್ಕಿ ಮತ್ತು ಅವನ ಕುದುರೆ
ಶ್ರೀಕೂರ್ಮಂ ದೇವಾಲಯ ಕುಡ್ಯದ ಮೇಲಿರುವ ಶಿಲ್ಪ(ಆಂಧ್ರ ಪ್ರದೇಶ್

ಕಲಿಯುಗ : ವೈದಿಕ ವಾಙ್ಮಯದಲ್ಲಿ ಹೇಳಲ್ಪಟ್ಟ ನಾಲ್ಕು ಯುಗಗಳಲ್ಲಿ ಕಡೆಯದು. ಉಳಿದವು ಕೃತ, ತ್ರೇತಾ, ದ್ವಾಪರ. ಇದರ ಅವಧಿ ೪,೩೨,೦೦೦ ವರ್ಷಗಳು. ಈ ಯುಗದಲ್ಲಿ ಧರ್ಮ ಒಂದೇ ಕಾಲಿನಲ್ಲಿ ನಿಂತು ಕುಂಟುತ್ತಲೂ, ಅಧರ್ಮ ನಾಲ್ಕು ಕಾಲುಗಳಿಂದ ನಲಿದಾಡುತ್ತಲೂ ಇರುವುದು. ಎಂದರೆ ಜನರಲ್ಲಿ ಧಾರ್ಮಿಕ ಪ್ರವೃತ್ತಿ, ಭಾವನೆಗಳು ಮಾಯವಾಗಿ ಅಧರ್ಮ ರುಚಿಯೂ ಸ್ವಾರ್ಥ ಭಾವನೆಯೂ ಹೆಚ್ಚುವವು. ಇದರ ಫಲವಾಗಿ ಅವರಿಗೆ ಸುಖ ಸಂತೋಷಗಳು ದೊರೆಯದೆ ವ್ಯಾಧಿ, ದುರ್ಭಿಕ್ಷ, ಹಸಿವು, ಬಾಯಾರಿಕೆ, ಮಿತಿಯಿಲ್ಲದ ಪ್ರಜಾವೃದ್ಧಿ ಮುಂತಾದ ದುಃಖಗಳೇ ಹೆಚ್ಚುತ್ತಾ ಬರುವವು. ಕಲಿ ಮಹಿಮೆ ಹೆಚ್ಚಿದಂತೆಲ್ಲ ಧರ್ಮ, ಸತ್ಯ, ಕ್ಷಮೆ, ದಯೆ, ಶೌಚ, ಸದಾಚಾರ ವ್ಯವಹಾರಗಳು, ಆಯುಃಪ್ರಮಾಣ, ದೈಹಿಕ ಶಕ್ತಿ, ಸ್ಮೃತಿಶಕ್ತಿ ಇವು ನಶಿಸುವವು. ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ ಧನಬಲವೇ ಪ್ರಧಾನವಾಗುವುದು. ಹೀಗಿದ್ದರೂ ಇತರ ಯುಗಗಳಂತೆ ಕಠಿಣವಾದ ತಪಶ್ಶಕ್ತಿಯೇ ಮುಂತಾದುವುಗಳನ್ನು ಸೃಷ್ಠಿಸದೆ, ಭಗವನ್ನಾಮಸ್ಮರಣೆ ಮಾತ್ರದಿಂದಲೇ ಕಲಿಯುಗದ ಜನ ಮೋಕ್ಷಾದಿ ಶ್ರೇಷ್ಠ ಫಲಗಳನ್ನು ಹೊಂದಬಲ್ಲರು. ಖಲಿ ಈ ಯುಗದ ಪ್ರಧಾನ ಧರ್ಮವಾಗುವುದು. ಆದುದರಿಂದಲೇ ಕೃತಾದಿ ಯುಗ ಗಳಲ್ಲಿ ಹುಟ್ಟಿದ ಜ್ಞಾನಿಗಳು ಕಲಿಯುಗದಲ್ಲಿ ಹುಟ್ಟಲು ಆಶಿಸಿ, ಅಂತೆಯೇ ಈಗ ಅನೇಕ ಭಗವದ್ಭಕ್ತರಾಗಿ ಅವತರಿಸುವರು. ಅಲ್ಲದೆ ಸಂಘ ಶಕ್ತಿಗಿರುವ ಪ್ರಾಶಸ್ತ್ಯ ಇಮ್ಮಡಿಸುವುದು. ಈ ಯುಗದ ಕಡೆಯಲ್ಲಿ ಭಗವಂತ ಕಲ್ಕಿಯ ಅವತಾರವನ್ನು ಎತ್ತಿ ಅಧರ್ಮಿಗಳನ್ನು ನಿಶ್ಶೇಷವಾಗಿ ಸಂಹರಿಸಿ, ಉಳಿದ ಸತ್ಪುರುಷರ ಮನಸ್ಸಿನಲ್ಲಿ ಒಳ್ಳೆಯ ಗುಣಗಳುಂಟಾಗುವಂತೆ ಪ್ರೇರೇಪಿಸುವನು. ಆಗ ಮತ್ತೆ ಕೃತಯುಗ ಹುಟ್ಟುವುದು ಕಲಿಯುಗ - ಕಲ್ಕಿಯು ಅವತಾರವೆತ್ತುವ (ತ್ತಿದ) ಯುಗ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ.

ಕಲಿಯುಗ-ಮಾರ್ಕಾಂಡೇಯ ಮುನಿಗಳ ಲೆಕ್ಕ[ಬದಲಾಯಿಸಿ]

ಮಹಾಭಾರತದಲ್ಲಿ ಅರಣ್ಯಪರ್ವ 188ನೇ ಅಧ್ಯಾಯ ಮಾರ್ಕಾಂಡೇಯ ಸಮಸ್ಯಾಪರ್ವ (ಭಾರತ ಪ್ರಕಾಶನ ಪುಟ 3168) ಮಾರ್ಕಾಂಡೇಯ ಮುನಿಗಳು ಧರ್ಮರಾಯನಿಗೆ ಹೇಳಿದ್ದು. ದಿವ್ಯ ವರ್ಷಗಳು(ಮನುಷ್ಯ ರ ಒಂದು ವರ್ಷಕ್ಕೆ ದೇವತೆ ಗಳಿಗೆ ಒಂದು ದಿನ, ಅಂತೆಯೇ 360 ವರ್ಷಗಳಿಗೆ ಒಂದು ದಿವ್ಯ ವರ್ಷ) : 1. ಕೃತಯುಗ 4000 ವರ್ಷಗಳು. 400 ವರ್ಷಗಳು ಆದಿ ಸಂಧಿ ಕಾಲ 400 ವರ್ಷಗಳು ಅಂತ್ಯ ಸಂಧಿ ಕಾಲ ಒಟ್ಟು 4800 ವರ್ಷಗಳು 2. ತ್ರೇತಾ ಯುಗ 3000 ವರ್ಷಗಳು 300 ವರ್ಷಗಳು ಆದಿ ಸಂಧಿ ಕಾಲ 300 ವರ್ಷಗಳು ಅಂತ್ಯ ಸಂಧಿ ಕಾಲ. 3. ದ್ವಾಪರ ಯುಗ 2000 ವರ್ಷಗಳು 200 ವರ್ಷಗಳು ಆದಿ ಸಂಧಿ ಕಾಲ 200 ವರ್ಷಗಳು ಆದಿ ಸಂಧಿ ಕಾಲ ಒಟ್ಟು 2400 ವರ್ಷಗಳು 4.ಕಲಿಯುಗ 1000 ವರ್ಷಗಳು 100 ವರ್ಷಗಳು ಆದಿ ಸಂಧಿ ಕಾಲ 100 ವರ್ಷಗಳು ಆದಿ ಸಂಧಿ ಕಾಲ ಒಟ್ಟು 1200 ವರ್ಷಗಳು ಒಟ್ಟು ನಾಲ್ಕು ಯುಗಗಳಿಂದ 12000 ವರ್ಷಗಳು. 1000 ಯುಗಚಕ್ರ ಗಳಿಗೆ ಬ್ರಹ್ಮನ 1 ಹಗಲು =1,20,00,000ವರ್ಷ ಆಗ ಅಖಂಡ ಬ್ರಹ್ಮಾಂಡವು ಬ್ರಹ್ಮನಲ್ಲಿ ಐಕ್ಯವಾಗುವುದು. ಸಂವರ್ತಕ ವೆಂಬ ಅಗ್ನಿಯು ಎಲ್ಲವನ್ನೂ ಭಸ್ಮ ಮಾಡುವುದು. ಪುನಃ ಬ್ರಹ್ಮನ ಹಗಲು ಪ್ರಾರಂಭವಾದಾಗ ಮೊದಲಿನಂತೆ ಎಲ್ಲಾ ಸೃಷ್ಟಿಯಾಗುವುದು.

ಮೈಸೂರು ಪಂಚಾಂಗ ರೀತಿ[ಬದಲಾಯಿಸಿ]


೨೦೦೯ ಮಾರ್ಚಿ ಗೆ, ಕಲ್ಪಾದಿಗತ ೧೯೭,೨೯,೪೯,೧೧೦ ವರ್ಷಗಳು. ಜಗತ್ ಸೃಷ್ಟ್ಯಾದಿ ಗತ ೧೯೫,೫೮,೮೫,೨೧೦ ,, ಸ್ವಾಯಂಭು ಮನು ಗತಾಬ್ದ ೧೬೬,೪೫,೦೧,೧೧೦ ,, ವೈವಸ್ವತ ಮನು ಗತಾಬ್ದ ೧೮೬,೧೮,೮೫೦ ,, ಕಲಿಯುಗ ಗತ ೫೧೧೦ ,, ಶಾಲಿವಾಹನ ಗತ ೧೯೩.

ಸೃಷ್ಟಿಯ ಆರಂಭ[ಬದಲಾಯಿಸಿ]


  • (ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ)

ಸೃಷ್ಟಿಯ ಆರಂಭ :ಬ್ರಹ್ಮ ನ ಸೃಷ್ಟಿ ಮೊದಲ ಕ್ಷಣ, ಆದಿತ್ಯವಾರ ಚೈತ್ರ ಶುದ್ಧ ಪ್ರತಿಪದೆ ಲಂಕಾನಗರದ ಸೂರ್ಯೋದಯದಿಂದ, ಆರಂಭವಾಗಿ ದಿನ, ಮಾಸ, ವರುಷ, ಯುಗ, ಕಲ್ಪ, ಮನ್ವಂತರಗಳಲ್ಲಿ ಕಾಲವನ್ನು ಅಳೆದಿದೆ. ಸೃಷ್ಟಿ ಆರಂಭವನ್ನು ಕಂಡು ಹಿಡಿಯಲು ಭಾರತದ ಪ್ರಾಚೀನ ಜ್ಯೋತಿಷ್ಯ ಶಾಸ್ತ್ರಜ್ಞರು ಒಂದು ಸುಲಭ ಮಾರ್ಗವನ್ನು ಅನುಸರಿಸಿದ್ದಾರೆ. ಅದು ಹೇಗೆಂದರೆ ಮೊದಲಿನ ನಕ್ಷತ್ರ ಆಶ್ವಿನಿಯ ಆದಿ ಬಿಂದು ಆಥವಾ ಕೊನೆಯ ನಕ್ಷತ್ರ ರೇವತಿಯ ಅಂತ್ಯ ಬಿಂದುವಿನಲ್ಲಿ ಚಂದ್ರನೂಸೇರಿ ಏಳೂ ಗ್ರಹಗಳು ಒಂದೇ ರೇಖೆಯಲ್ಲಿ ಬರುವ ದಿನವನ್ನು ಕಂಡುಹಿಡಿದು ,ಅದನ್ನೇ ಸೃಷ್ಟಿಯ ಆದಿ ದಿನವೆಂದು ನಿರ್ಧರಿಸಿದ್ದಾರೆ. (ಅದು ಈಗಿನ ವಿಜ್ಞಾನಿಗಳು ಹೇಳುವ 150 ರಿಂದ 200ಕೋಟಿ ವರ್ಷಕ್ಕೂ ಹಿಂದೆ ಸೃಷ್ಟಿ ಪ್ರಾರಂಭ ಎನ್ನುವ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಯಾಗುತ್ತದೆ. ಈ ಜಗತ್ತು ; ಡಾ. ಶಿವರಾಮ ಕಾರಂತ) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 432ಕೋಟಿ ವರ್ಷಗಳ ನಂತರ ಪುನಃ ಅದೇ ಸನ್ನಿವೇಶ ಬರುವುದು .ಆದ್ದರಿಂದ ಅದು ಬ್ರಹ್ಮನ 100ವರ್ಷ, ಅಥವಾ ಆಯುಸ್ಸು ಯುಗಗಳು :

ಕಲಿxx‍‌್ಠ4=1. ಕೃತ ಯುಗ ---17,28,000 ವರ್ಷ ಕಲಿx‍‌್ಠ3=2. ತ್ರೇತಾಯುಗ --12,96,000 ವರ್ಷ. ಕಲಿx‍‌್2=3. ದ್ವಾಪರ ಯುಗ- 8,64,000 ವರ್ಷ 4. ಕಲಿಯುಗ ---4.32,000 ವರ್ಷ. ಒಟ್ಟು 43,23,000 ವರ್ಷ.

  • ಒಂದು ಕಲ್ಪ[ಬದಲಾಯಿಸಿ]

(ಸೃಷ್ಟಿ ಮತ್ತು ಯುಗಗಳ, ಹೆಚ್ಚಿನ ವಿವರಕ್ಕೆ ಸೃಷ್ಟಿ ಮತ್ತು ಮಹಾಭಾರತ ನೋಡಿ.)

ಈ ಲೇಖನಗಳನ್ನೂ ನೋಡಿ[ಬದಲಾಯಿಸಿ]

ಸೃಷ್ಟಿ ಮತ್ತು ಪುರಾಣ



ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಕಲಿಯುಗ&oldid=1023144" ಇಂದ ಪಡೆಯಲ್ಪಟ್ಟಿದೆ