ಕಲ್ಪ (ಕಾಲಾವಧಿ)

ವಿಕಿಪೀಡಿಯ ಇಂದ
(ಕಲ್ಪ ಇಂದ ಪುನರ್ನಿರ್ದೇಶಿತ)
Jump to navigation Jump to search

ಕಲ್ಪ : ಭೂ ವಿಜ್ಞಾನದಲ್ಲಿ ಕಾಲವನ್ನು ಅಳೆಯುವ ಒಂದು ಮಾನಕ (ಇಪಕ್). ಭೂಮಿಯ ಗತಕಾಲವನ್ನು ಭೂ ವೈಜ್ಞಾನಿಕ ಕಾಲಮಾನದಲ್ಲಿ ಆಯಾ ಕಾಲದ ಭಿನ್ನ ಲಕ್ಷಣಗಳನ್ನು ಆಧರಿಸಿ ಐದು ಪ್ರಧಾನ ಕಲ್ಪಗಳಾಗಿ ವಿಂಗಡಿಸಿದ್ದಾರೆ. ಪ್ರೊಟಿರೋಜೋಯಿಕ್, ಪೇಲಿಯೋಜೋಯಿಕ್, ಮೀಸೋಜೋಯಿಕ್, ಟರ್ಷಿಯರಿ, ಕ್ವಾಟರ್ನರಿ. ಈ ಒಂದೊಂದು ಕಲ್ಪವನ್ನೂ ಹಲವಾರು ಕಲ್ಪಗಳಾಗಿ ವಿಭಾಗಿಸಿದ್ದಾರೆ. ಉದಾಹರಣೆಗೆ ಪೇಲಿಯೋಜೋಯಿಕ್ ಕಲ್ಪದ ವ್ಯಾಪ್ತಿ ೬೦೦ ದಶಲಕ್ಷ ವರ್ಷ ಪ್ರಾಚೀನದಿಂದ ೨೨೫ ದಶಲಕ್ಷ ವರ್ಷ ಪ್ರಾಚೀನದವರೆಗೆ ಇದೆ. ಇದರಲ್ಲಿನ ಯುಗಗಳ ವಿಂಗಡಣೆ ಹೀಗಿದೆ:[೧]

  • ೬೦೦-೫೦೦ ದಶಲಕ್ಷ ವರ್ಷ ಪ್ರಾಚೀನ ಕೇಂಬ್ರಿಯನ್
  • ೫೦೦-೪೪೦ “ “ “ ಆರ್ಡೊವಿಶಿಯನ್
  • ೪೪೦-೪೦೦ “ “ “ ಸೈಲೂರಿಯನ್
  • ೪೦೦-೩೫೦ “ “ “ ಡಿವೋನಿಯನ್
  • ೩೫೦-೨೮೦ “ “ “ ಕಾರ್ಬಾನಿಫೆರಸ್
  • ೨೮೦-೨೨೫ “ “ “ ಪರ್ಮಿಯನ್

ಭೂಮಿಯ ಸಮಸ್ತ ಲಕ್ಷಣಗಳ (ಜೀವಿಗಳ ವಿಕಾಸ, ಅಜೀವ ವಸ್ತುಗಳಲ್ಲಿ ಉಂಟಾಗಿರುವ ಬದಲಾವಣೆಗಳು ಮತ್ತು ಪರಿವರ್ತನೆಗಳು ಮುಂತಾದುವು) ಅಭ್ಯಾಸದಿಂದ ಮೇಲೆ ಹೇಳಿರುವ ನಿರ್ದಿಷ್ಟ ವರ್ಗೀಕರಣ ಮಾಡಿದ್ದಾರೆ.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ