370 ಕೋಟಿ ವರ್ಷಗಳ ಹಿಂದೆಯೇ ಜೀವ ಅಸ್ತಿತ್ವ[೧]:ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆ ಕಾಲದಲ್ಲಿಯೇ ಭೂಮಿಯಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಇವು ಸಾಕ್ಷ್ಯವನ್ನು ನೀಡಿವೆ. ಇಷ್ಟು ಹಳೆಯದಾದ ಪಳೆಯುಳಿಕೆಗಳು ಪತ್ತೆಯಾಗುತ್ತಿರುವುದು ಇದೇ ಮೊದಲು. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು, ಇದುವರೆಗೆ ಭೂಮಿ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳೆಯುಳಿಕೆಯಾಗಿದ್ದವು’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ವೊಲ್ಲೊಂಗಾಂಗ್ ವಿಶ್ವವಿದ್ಯಾಲಯದ ಅಲೆನ್ ನಟ್‌ಮನ್ ಹೇಳಿದ್ದಾರೆ.
'ಭೂಮಿಯ ಆರಂಭ ಕಾಲದ ಜೀವ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು ಈ ಪಳೆಯುಳಿಕೆಗಳು ನೆರವಾಗಲಿವೆ. ಜೊತೆಗೆ, ಮಂಗಳಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಕುರಿತ ನಮ್ಮ ಗ್ರಹಿಕೆಯ ಮೇಲೂ ಇವುಗಳು ಪ್ರಭಾವ ಬೀರಲಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿ ಆರಂಭದ ಕಾಲದಿಂದಲೂ ಇಲ್ಲಿ ಜೀವಿಗಳು ನೆಲೆಸಿವೆ ಎಂಬುದಕ್ಕೆ ಪುರಾವೆಗಳನ್ನು ಈ ಆವಿಷ್ಕಾರ ನೀಡಿದೆ. ಭೂಮಿಯ ಇತಿಹಾಸದ ಬಗ್ಗೆ ಪ್ರಸ್ತಾಪವಾದಾಗಲೆಲ್ಲಾ ಏಕಕೋಶ ಜೀವಿಗಳಿಂದ ಜೀವಿಯ ಉಗಮವಾಗಿರುವ ಬಗ್ಗೆ ಚರ್ಚೆಯಾಗುತ್ತದೆ. ಸ್ಟ್ರೊಮಾಟೊಲೈಟ್ ಪಳೆಯುಳಿಕೆಗಳು ಸೂಕ್ಷ್ಮಾಣುಗಳ ಸಮುದಾಯದಿಂದಾಗಿ ಉಂಟಾಗಿರುವ ಪದರಗಳನ್ನೊಳಗೊಂಡ ಶಿಲಾ ರಚನೆಗಳು. ಇವುಗಳು ಪುರಾತನ ಜೀವಿಗಳ ಅಸ್ತಿತ್ವದ ಬಗ್ಗೆ ಸಾಕ್ಷ್ಯಗಳನ್ನು ನೀಡುವುದರ ಜೊತೆಗೆ, ಆ ಕಾಲದ ಸಂಕೀರ್ಣ ಪರಿಸರ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ನೀಡುತ್ತವೆ’ ಎಂದು ನಟ್‌ಮನ್ ವ್ಯಾಖ್ಯಾನಿಸಿದ್ದಾರೆ. '370 ಕೋಟಿ ವರ್ಷಗಳ ಹಿಂದೆಯೇ ವಿಭಿನ್ನವಾದ ಸೂಕ್ಷ್ಮಾಣು ಜೀವಿಗಳೂ ಭೂಮಿಯಲ್ಲಿದ್ದವು ಎಂಬುದನ್ನು ಇದು ತೋರಿಸುತ್ತದೆ’ ಎಂದು ವಿವರಿಸಿದ್ದಾರೆ.
‘ಭೂಮಿ ಸೃಷ್ಟಿಯಾದ ಕೆಲವು ಕೋಟಿ ವರ್ಷಗಳಲ್ಲೇ ಜೀವಿಗಳ ಉಗಮವಾಗಿದೆ ಎಂಬುದನ್ನು ಈ ವೈವಿಧ್ಯವು ಪ್ರತಿಪಾದಿಸುತ್ತದೆ’ ಎಂದು ವಿಶ್ಲೇಷಿಸಿದ್ದಾರೆ. ಈ ಅಧ್ಯಯನವು ಭೂಮಿಯ ಜೀವ ಇತಿಹಾಸಕ್ಕೆ ಹೊಸ ದೃಷ್ಟಿಕೋನ ನೀಡಿದೆ ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ (ಎಎನ್‌ಯು) ಸಹಾಯಕ ಪ್ರಾಧ್ಯಾಪಕಿ ವಿಕ್ಕಿ ಬೆನೆಟ್ ಹೇಳಿದ್ದಾರೆ. ‘ಭೂಮಿಯ ಆದಿ ಕಾಲದಲ್ಲಿದ್ದ ಜೀವಿಗಳ ಬಗ್ಗೆ ಇದುವರೆಗೂ ವದಂತಿಗಳೇ ಹರಿದಾಡುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ’ ಎಂದಿದ್ದಾರೆ.
ಹಿಮಚ್ಛಾದಿತ ಗ್ರೀನ್‌ಲ್ಯಾಂಡ್‌ನ ಅಂಚಿನಲ್ಲಿರುವ ಇಸುವಾ ಹಸಿರುಶಿಲಾ ಪಟ್ಟಿಯಲ್ಲಿರುವ ಅತ್ಯಂತ ಹಳೆಯ ಸಂಚಿತ ಶಿಲೆಗಳ ನಡುವೆ ಇದ್ದ ಸ್ಟ್ರೊಮಾಟೊಲೈಟ್ ಪಳೆಯುಳಿಕೆಗಳನ್ನು ವೊಲ್ಲೊಂಗಾಂಗ್ ವಿಶ್ವವಿದ್ಯಾಲಯದ (ಯುಒಡಬ್ಲ್ಯು) ಅಧ್ಯಯನಕಾರರ ತಂಡ ಪತ್ತೆ ಹಚ್ಚಿದೆ. ಇವುಗಳು ಹೆಚ್ಚೇನು ಆಳವಿಲ್ಲದ ಸಮುದ್ರದಡಿ ಇದ್ದವು. ಸಮುದ್ರದ ಮೇಲ್ಮೈ ಮಂಜುಗಡ್ಡೆಯ ಭಾರಿ ತುಂಡು ಇತ್ತೀಚೆಗೆ ಕರಗಿದಾಗ ಸ್ಟ್ರೊಮಾಟೊಲೈಟ್ ಪಳೆಯುಳಿಕೆಗಳು ಹೊರಜಗತ್ತಿಗೆ ತೆರೆದುಕೊಂಡಿವೆ. ಸ್ಟ್ರೊಮಾಟೊಲೈಟ್ ಎನ್ನುವುದು ಒಂದು ಸೂಕ್ಷ್ಮಾಣು ಜೀವಿ, ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ (ಸಯನೊಬ್ಯಾಕ್ಟೀರಿಯಾ) ಗುಂಪುಗಳಿಂದ ಸೃಷ್ಟಿಯಾಗಿರುವ, ಪದರಗಳನ್ನು ಹೊಂದಿರುವ ಶಿಲಾರಚನೆ. ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.[೨]
1-ಆದಿ ಜೀವಕೋಶ--1-PROTOPLASM-(ಜೀವ ವಿಕಾಸ ಮಹಾಯುಗ ದಲ್ಲಿ -ಮತ್ತು ನಂತರ)
ಪ್ರಾಣಿ ಜಗತ್ತು - ವಿಂಗಡಣೆ -PROTOZA (PROTIST- OR PROTOZAN FAMILY) MOTOZOA
2A ಸಸ್ಯ ಜಗತ್ತು ವಿಂಗಡಣೆ-GLEOCASPA-PLANT
3 ಬೂಸ್ಟುಗಳು-FUNGUS (no chlorophyll
1-ಆದಿ ಜೀವಕೋಶ--1-PROTOPLASM
1-ಆದಿ ಜೀವಕೋಶ--1-PROTOPLASM
1-ಆದಿ ಜೀವಕೋಶ--1-PROTOPLASM
2-ಏಕಾಣು ಕೋಶ ಜೀವಿಗಳು ಪ್ರಾಥಮಿಕ ಏಕಾಣು ಮೊದಲ ಪ್ರಾಣಿ ಜೀವ ಕೋಶ. ಇದರ ವಿಕಾಸದಿಂದ ಎಲ್ಲಾ ಪ್ರಾಣಿಗಳೂ ಮಾನವರೂ ಉಗಮ ವಾಗಿದ್ದಾರೆ
ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ ಸಸ್ಯ ವರ್ಗದ ಮೊದಲ ಜೀವಕೋಶ
3 ಬೂಸ್ಟುಗಳು -ಅಣುಬೆ -3B-YEAST-
3ಪರಮೇಸಿಯಮ್ ಏಕಾಣು ಜೀವಿ-4A - paramecium
೨. ಸ್ಪೈರೋಜಿರಾ /spirogyra ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ
ಬೂಸ್ಟು -3B-YEAST- (no chlorophyll)
4 ಅಮೀಬಾ - 4B-AMAEBA - ನಂತರ: 5ಪತಾಕಿಗಳು ಅಥವಾ ಬಾಲದ ಏಕಾಣು ಜೀವಿಗಳು
6. ಬಹುಕೋಶ ಜೀವಿಗಳ ವಂಶಗಳು ಸುಮಾರು ೯ ಲಕ್ಷದಷ್ಟಿದೆ. ಈ ಎಲ್ಲಾ ಜೀವಿಗಳನ್ನು ೧೫ ಅಥವಾ ೧೬ ವಿಭಾಗ ಮಾಡಿದ್ದಾರೆ (ಮುಂದಿನ ಟೇಬಲ್ ನೋಡಿ)
2C(ಆಲ್ಗೀ) ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ (2C-ALGAE )-ನಂತರ -(೨) ಎರಡು ಜೀವಕೋಶದ ಸಸ್ಯ / (೩ ).(ಸಸ್ಯದ ಆರು ವಿಭಾಗಗಳು) ೧- ವಿಭಜಿಸುವ ಸಸ್ಯಗಳು / (೪) ೨-ಥಾಲಸ್ ಸಸ್ಯಗಳು (ಕೋಶ ಬೀಜ ಇಲ್ಲದವು) / (೫) ೩-ಪಾಮಾಚಿಗಳು (೬) ೪- ಜರಿ ಗಿಡಗಳು / ೫ (೭) ೫-ನಿತ್ಯ ಹಸಿರುಗಿಡಗಳು ನಗ್ನ ಬೀಜದವು /(೮) ೬-ಹೊದ್ದಿಕೆಯುಳ್ಳ ಬೀಜದ ಸಸ್ಯಗಳು/
೩-ಪಾಚಿಜಾತಿಯ ಬಿಳೀ ಕಲ್ಲು ಹೂ ಪರಾವಲಂಬಿ -ಹರಿತ್ ಇಲ್ಲದವು/3C-LICHON(no chlorophyll)
ಜೀವ ವಿಕಾಸದ ಸಂಕ್ಷಿಪ್ತ ವಿವರಣೆ- ವೃಕ್ಷ ಅಂಕಣದಲ್ಲಿ—ಕೆಳಗಿರುವ ಮೊದಲಿನ ಅಂಕಣ;
ಅದರಿಂದ ಮೂರು ಕವಲು1-PROTOPLASM-ಆದಿ ಜೀವಕೋಶ;ಅದರಿಂದ ಮೇಲಿನ ಮೂರು ಕವಲು(ಆಧಾರ: ವಿಜ್ಞಾನ ಪ್ರಪಂಚ -೨; :ಜೀವ -ಜೀವನ ಡಾ|| ಶಿವರಾಮ ಕಾರಂತ; ಸಂಗ್ರಹ -ನಕ್ಷೆ-ಸಂಯೋಜನೆ ಬಿ.ಎಸ್ ಚಂದ್ರಶೇಖರಸಾಗರ)-ದೊಡ್ಡ ಚಿತ್ರಕ್ಕಾಗಿ ಅಂಕಣದಮೇಲೆ ಕ್ಲಿಕ್.ಮಾಡಿ; ನಂತರ +ಗುರುತಿನಿಂದ ಪುನಃಕ್ಲಿಕ್.ಮಾಡಿ
೨ ಅತಿಉಷ್ಣ - ೪೦೦,೦೦,೦೦,೦೦೦ ಮಧ್ಯ ಉಷ್ಣ ಯುಗ
ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ; ತಿತಾನೆಸ್-ಹೆಲೋಯಿಸ್,ಸೆಲೀನೆ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)
ಸುಮಾರು ೩೫೦ (೪೫೦-೩೫೦)ಕೋಟಿ ವರ್ಷಗಳಷ್ಟು ಹಿಂದೆಯೇ ಆದಿ ಜೀವಾಂಕುರ ವಾಗಿರ ಬೇಕೆಂದು ಊಹೆ. ಪ್ರೋಟೋ ಕೋಶಗಳು (ಸೆಲ್) ಉಂಟಾಗಲು ಅನುಕೂಲ ಭೌತಿಕ ಜೈವಿಕ ವಾತಾವರಣ ಸೃಷ್ಟಿ ಯಾಯಿತು
೩೯೦ ಕೋಟಿ ವರ್ಷಗಳ ಆಸು-ಪಾಸಿನಲ್ಲಿ ಭೂಮಿಯ ಮೇಲೆ ಉಲ್ಕೆ ಗಳ ಧಾಳಿಗಳಿಂದ ಸತತ ವಾತಾವರಣದ ಏರು ಪೇರಾಗಿ ಜೀವಕೋಶಗಳ ನಿರ್ಮಾಣ ವ್ಯವಸ್ಥೆ ನಾಶವಾದರೂ ಭೂಮಿಯ ಒಳಪದರದ ಜಲಾವರಣದಲ್ಲಿ ಕೆಲವು ಮೈಕ್ರೋಬ್ - ಸೂಕ್ಷ್ಮ ಜೀವ ಧಾತುಗಳು ಉಳಿದಿರಬೇಕು ಎಂದು ಊಹಿಸಲಾಗಿದೆ
೩.ಅತಿಉಷ್ಣ - ೩೫೦,೦೦,೦೦,೦೦೦ ಅಂತ್ಯ ಉಷ್ಣ ಯುಗ.
The Blue Marble photograph in its original orientation-ಅಪೋಲೋ ಉಪಗ್ರಹದಿಂದ ತೆಗೆದ ಫೋಟೋ - ಭೂಮಿ
ಭೂಮಿಯ ಮೇಲ್ಪದರ ತಣ್ಣಗಾಗಿ ಗಟ್ಟಿಯಾಯಿತು. ವಾಯು ಮಂಡಲ, ಸಮುದ್ರಗಳು ಉಂಟಾದವು. ಸಮುದ್ರ ತಳದಲ್ಲಿ ಕಬ್ಬಿಣದ ಸಲ್ಫೈಡ್ ಪದರಗಳಾದವು. ಇದರಿಂದ ಆರ್ ಎನ್ ಎ ಗೆ ಬೇಕಾದ ಸಂಯುಕ್ತಗಳಾಗಿರಬಹುದು
-ಆದಿ ಜೀವ ಪ್ರೊಕೋರೈಟ್ -
-ಆದಿ ಜೀವ ಪ್ರೊಕೋರೈಟ್
Cell structure of a bacterium, (a member of one of the two domains of prokaryotic life)ಆದಿ ಜೀವ ಪ್ರೊಕೋರೈಟ್
೩೯೦-೨೫೦ ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು. ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ.
ಬಹುತೇಕ ೩೫೦ ಕೋಟಿವರ್ಷಗಳ ಹಿಂದೆಯೇ ಅರ್ಚಿಯಾನ್ ಯುಗದಲ್ಲಿ ಕ್ಲೋರೊಫಿಲ್ ಉಳ್ಳ ಸ್ಯನೊ ಬ್ಯಾಕ್ಟೀರಿಯಾಗಳು ಆದಿಜೀವ ಕಣಗಳಿಂದ ಬೇರೆಯಾಗಿ ರೂಪುಗೊಂಡು ಫೋಟೋಸಿಂತೆಸಿಸ್ ( ದ್ಯುತಿಸಂಸ್ಲೇಷಣೆ) ಮೂಲಕ ಆಹಾರ ಉತ್ಪತ್ತಿ ಮಾಡಿರಬೇಕು ಹೀಗೆ ಜೀವಧಾರಣೆಗೆ ಇಂದಿಗೂ ಬೇಕಾದ ಆಮ್ಲಜನಕದ ಉತ್ಪತ್ತಿ ಆಗಿನಿಂದಲೇ ನೆಡೆದಿರಬೇಕು.
(The earliest fossils possessing features typical of fungi date to the Proterozoic eon, some 1,430 million years ago; For much of the Paleozoic Era (542–251 Ma), the fungi appear to have been aquatic and consisted of organisms similar to the extant chytrids in having flagellum-bearing spores)
ಅಮಾನಿತ ಕೊಡೆ ಅಣುಬೆ ವಿಷಕಾರಿ ಅಣುಬೆ ಜಗತ್ತಿನಾದ್ಯಂತ ಕಂಡುಬರುವುದು.
ಶಿಲೀಂಧ್ರ ವು (pronounced /ˈfʌŋɡəs/) ಬಹುವಚನ (ಶಿಲೀಂಧ್ರಗಳು) ಯುಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್‌ಗಳು (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಮಶ್ರೂಮ್‌ಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್‌ಡಮ್, ಶಿಲೀಂಧ್ರಗಳು (pronounced /ˈfʌndʒaɪ/ ಅಥವಾ /ˈfʌŋɡaɪ/) ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ ಭಿನ್ನತೆಗಳು ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಫಂಗಿಯು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (ಒಂದು ಮೊನೊಪೊಲಿಟಿಕ್ ಗುಂಪು ) ಯುಮೈಕೋಟಾ (ನಿಜವಾದ ಫಂಗಿ ) ಅಥವಾ ಯುಮೈಸೆಟ್ಸ್ ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಒಂದು ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ.
ಸಸ್ಯಗಳ ಗುಂಪಿಗೆ ಸೇರದವವು -ಬೂಸ್ಟು -ಯೀಸ್ಟು; ೧೪೩ ಕೋಟಿ ವರ್ಷದಿಂ ಸುಮಾರು ೫೦ ಕೋಟಿವರ್ಷಗಳ ಹಿಂದೆ ವಿಕಸಿತವಾದವು [thumb]ಈ ಎರಡನೇ ಚಿತ್ರವು- ಅಮಾನಿತ ಕೊಡೆ ಅಣುಬೆ (ಇಂಗ್ಲಿಷ್ ನಲ್ಲಿ ಲಿಂಗ-ಅಣುಬೆ ಎನ್ನುತ್ತಾರೆ)- ವಿಷಕಾರಿ ಅಣುಬೆ ಜಗತ್ತಿನಾದ್ಯಂತ ಕಂಡುಬರುವುದು.
ಮಧ್ಯ ಆಸ್ಟ್ರೇಲಿಯಾದಲ್ಲಿ ಸಿಕ್ಕಿದ ಹಿಮಯುಗ ನಂತರದ ಕಲ್ಲುಗಳನ್ನು ಪುಡಿ ಮಾಡಿ ಅಧ್ಯಯನ ನಡೆಸಲಾಗಿದ್ದು ೨೦೧೭ ರ ಆಗಸ್ಟಿನಲ್ಲಿ ವಿಜ್ಞಾನಿಗಳು ಫಲಿತಾಂಶ ಪ್ರಕಟಿಸಿದ್ದಾರೆ. ಅದರ ಪ್ರಕಾರ, 65 ಕೋಟಿ ವರ್ಷಗಳ ಹಿಂದೆ ಪಾಚಿ ಉತ್ಪತ್ತಿ ಆದ ಅವಧಿಯಲ್ಲೇ ಜೀವಿಗಳ ವಿಕಸನ ಪ್ರಕ್ರಿಯೆಯೂ ಆರಂಭವಾಗಿದೆ. ‘ಭೂಮಿಯ ಇತಿಹಾಸದಲ್ಲಿ, ಮನುಷ್ಯ ಅಥವಾ ಪ್ರಾಣಿಗಳ ಅಸ್ತಿತ್ವವೇ ಇಲ್ಲದಿದ್ದಾಗ ಪಾಚಿಯ ಬೆಳವಣಿಗೆ ಆಗಿದೆ. ಇದು ಪರಿಸರ ವ್ಯವಸ್ಥೆಯಲ್ಲಿ ಉಂಟಾದ ಕ್ರಾಂತಿ ಎಂದು ಈ ಪ್ರಾಚೀನ ಕಲ್ಲುಗಳು ನಮಗೆ ತಿಳಿಸಿವೆ’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಜೋಷೆನ್ ಬ್ರೊಕ್ಸ್ ಹೇಳಿದ್ದಾರೆ. ‘ಪಾಚಿ ಉತ್ಪತ್ತಿಗೂ ಹಿಂದಿನ ಐದು ಕೋಟಿ ವರ್ಷಗಳಲ್ಲಿ, ಅಂದರೆ ಹಿಮಯುಗದಲ್ಲಿ ನಾಟಕೀಯ ಬೆಳವಣಿಗೆಯೇ ಆಗಿದೆ. ಅತಿಯಾದ ಉಷ್ಣಾಂಶದ ಕಾರಣ ಹಿಮವು ಕರಗಿ ನದಿಗಳಾಗಿ ಹರಿಯಿತು. ಈ ನದಿಗಳು ಪೋಷಕಾಂಶಗಳನ್ನು ಸಾಗರಕ್ಕೆ ಹೊತ್ತು ತಂದವು. ಸಾಗರದ ನೀರಿನಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚಿ, ತಾಪಮಾನವೂ ಕಡಿಮೆ ಆದಾಗ ಪಾಚಿಯ ಉತ್ಪತ್ತಿಗೆ ಸೂಕ್ತ ಕಾಲಾವಕಾಶ ಕೂಡಿ ಬಂತು. ಆಗ, ಬ್ಯಾಕ್ಟೀರಿಯಾಗಳೇ ಹೆಚ್ಚಾಗಿರುವ, ಸಾಗರದಲ್ಲಿರುವ ಕಣಗಳು ಭೂಮಿಗೆ ಸ್ಥಳಾಂತರಗೊಂಡವು. ಇದರಿಂದಾಗಿ ಜೀವ ವಿಕಾಸಕ್ಕೆ ಅಗತ್ಯವಿರುವ ಶಕ್ತಿಯು ಆಹಾರ ಜಾಲದಲ್ಲಿ ಹರಡಿಕೊಂಡಿತು. ಪರಿಣಾಮವಾಗಿ ಭೂಮಿಯ ಮೇಲೆ ಮಾನವನನ್ನೂ ಒಳಗೊಂಡು ಬೃಹತ್ ಮತ್ತು ಸಂಕೀರ್ಣ ಜೀವಿಗಳು ಸೃಷ್ಟಿಯಾದವು’ ಎಂಬುದು ಅದರ ಸಿದ್ದಾಂತ.[೩][೪]
Reconstruction of Megalosaurus from 1854, in Crystal Palace, London-ಮೆಗಲೋಸಾರಸ್ (ಡೈನೋಸಾರ್ ಗಳು)The 1897 painting of "Laelaps" (now Dryptosaurus) by Charles R. Knightಡ್ರೈಪ್ತೊಸಾರ್ ಗಳು
ಡೈನೊಸಾರ್ ಸಂತತಿ ಸಾಮೂಹಿಕ ಅಳಿವಿಗೆ ಭಾರತದ ಜ್ವಾಲಾಮುಖಿ ಕಾರಣ!
ವಾಷಿಂಗ್ಟನ್ ವರದಿಯಂತೆ ಭೂಮಿಯಲ್ಲಿ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳ ಸಂತತಿ ಸಾಮೂಹಿಕವಾಗಿ ಅಳಿಯಲು ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ ಮತ್ತು ಮೆಕ್ಸಿಕೊಗೆ ಅಪ್ಪಳಿದ ಕ್ಷುದ್ರಗ್ರಹ ಕಾರಣ ಎಂಬುದನ್ನು ಹೊಸ ಅಧ್ಯಯನವೊಂದು ಖಚಿತ ಪಡಿಸಿದೆ. ಇತ್ತೀಚೆಗಷ್ಟೇ ಅಭಿವೃದ್ಧಿ ಪಡಿಸಲಾಗಿರುವ ‘ಕಾರ್ಬೊನೇಟ್ ಕ್ಲಂಪ್ಡ್ ಐಸೊಟೋಪ್ ಪ್ಯಾಲಿಯೊ ಥರ್ಮೋಮೀಟರ್’ ಎಂಬ ಹೊಸ ವಿಧಾನದ ಮೂಲಕ ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಆ್ಯಂಡ್ರಿಯಾ ಡಟ್ಟನ್ ಅವರು ಮಿಚಿಗನ್ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ನೆರವಿನಿಂದ ಈ ಅಧ್ಯಯನ ನಡೆಸಿದ್ದರು. ಈ ವಿಧಾನವನ್ನು ಬಳಸಿಕೊಂಡು ಪ್ರಾಚೀನ ಕಾಲದಲ್ಲಿದ್ದ ಅಂಟಾರ್ಕ್ಟಿಕಾ ಸಾಗರದ ಉಷ್ಣಾಂಶವನ್ನು ಪುನರ್ ಸೃಷ್ಟಿಸಲು ಅಧ್ಯಯನಕಾರರು ಯಶಸ್ವಿಯಾಗಿದ್ದಾರೆ.
ಅಧ್ಯಯನದ ಭಾಗವಾಗಿ ಅಂಟಾರ್ಕ್ಟಿಕಾ ಸಾಗರದಲ್ಲಿರುವ ಸೆಮೋರ್ ದ್ವೀಪದಲ್ಲಿ ಪತ್ತೆಯಾಗಿದ್ದ ಮೃದ್ವಂಗಿಗಳ ಪಳೆಯುಳಿಕೆಗಳ 29 ಕೋಶಗಳಲ್ಲಿದ್ದ ರಾಸಾಯನಿಕ ಸಂಯೋಜನೆಗಳನ್ನು ವಿಶ್ಲೇಷಿಸಿದ್ದಾರೆ. ‘ಪ್ರಾಚೀನ ಸಾಗರದ ಉಷ್ಣಾಂಶ 14 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು (ಕಛಟ
ಟ–10 ಡಿಗ್ರಿ ಸೆಲ್ಸಿಯಸ್) ಹೆಚ್ಚಾಗಿದ್ದು ಅಧ್ಯಯನದಿಂದ ತಿಳಿದು ಬಂದಿದೆ. ಇದು ಕ್ರಿಟೇಷಿಯ ಅವಧಿ (ಮಧ್ಯಜೀವಿ ಕಲ್ಪದ ಉತ್ತರಾರ್ಧ) ಅಂತ್ಯದ ವೇಳೆಗೆ ಸಂಭವಿಸಿದ, ಭೂಮಿಯ ಉಷ್ಣಾಂಶವನ್ನು ಹೆಚ್ಚಿಸಿದ ಎರಡು ಘಟನೆಗಳಿಗೆ ಸಂಬಂಧ ಕಲ್ಪಿಸುತ್ತದೆ’ ಎಂದು ಅಧ್ಯಯನಕಾರರು ಹೇಳಿದ್ದಾರೆ.
‘ಒಂದು, ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ; ಮತ್ತೊಂದು ಮೆಕ್ಸಿಕೊದ ಯುಕಟನ್ ದ್ವೀಪಕಲ್ಪಕ್ಕೆ ಕ್ಷುದ್ರಗ್ರಹ ಅಥವಾ ಧೂಮಕೇತು ಅಪ್ಪಳಿಸಿದ ಘಟನೆ’ ಎಂದು ಅವರು ವಿವರಿಸಿದ್ದಾರೆ. ಕ್ರಿಟೇಷಿಯ ಅವಧಿ ಅಂತ್ಯ ಮತ್ತು ಪ್ರಾಚೀನ ಶಿಲಾಯುಗದ ಆರಂಭ ಅವಧಿ ಅಂದರೆ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳು ಸಾಮೂಹಿಕವಾಗಿ ನಾಶ ಹೊಂದಿವೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಭೂಮಿಯಲ್ಲಿ ಇರಿಡಿಯಂ (ಪ್ಲಾಟಿನಂ ಬಳಗದ ರಾಸಾಯನಿಕ ಮೂಲವಸ್ತು) ಅಂಶ ಇತ್ತು ಎಂಬುದನ್ನು ವಿಜ್ಞಾನಿಗಳು ತೋರಿಸಿದ್ದಾರೆ. ಇದೇ ಇರಿಡಿಯಂ ಆಕಾಶಕಾಯಗಳಾದ ಕ್ಷುದ್ರಗ್ರಹ, ಉಲ್ಕೆಗಳು ಮತ್ತು ಧೂಮಕೇತುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಕ್ರಿಟೇಷಿಯ ಅವಧಿಯಲ್ಲಿದ್ದ ಜೀವಿಗಳೆಲ್ಲ ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ನಾಶ ಹೊಂದಿದ್ದವು ಎಂಬ ವಾದಕ್ಕೆ ಇದು ಮತ್ತಷ್ಟು ಪುಷ್ಟಿ ನೀಡುತ್ತದೆ.
4 ವರ್ಷದ ಹುಡುಗಿ ಯುಕೆ ಯ ಕಡಲತೀರದಲ್ಲಿ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ ಹೆಜ್ಜೆಗುರುತನ್ನು ಕಂಡುಹಿಡಿದಳು;(ಜನವರಿ 31, 2021) ದಕ್ಷಿಣ ವೇಲ್ಸ್ನ ಬ್ಯಾರಿ ಬಳಿಯ ಕಡಲತೀರದಲ್ಲಿ 220 ದಶಲಕ್ಷ ವರ್ಷಗಳಷ್ಟು ಹಳೆಯದಾದ ಹೆಜ್ಜೆಗುರುತು ಕಂಡುಬಂದಿದೆ.
Monkey child treating its parent ಕಪಿ ಮರಿ- ತಾಯಿಯ ಸೇವೆಯಲ್ಲಿA series of images showing a gorilla utilizing a small tree trunk as a tool to maintain balance as she fished for aquatic herbs- ಕೊಂಬೆಯನ್ನು ಹಿಡಿದಿರುವ ಗೊರಿಲ್ಲಾThe shoulder joints of hominoids, like the orangutan, are adapted to brachiation, or movement by swinging in tree branches. ಭುಜದ ಜೋಡಣೆಯ ಬಲ ಝೋತಾಡುವ ವಾನರ
ಜೀವ ವಿಕಾಸ ೫೩,೦೦,೦೦೦ ವರ್ಷಗಳು - ವಾನರರು (ಕಪಿರೂಪಿ ನರರು) ಮಾನವನ ವಿಕಾಸ ಕಾಲ ಸೂಚಿ
ನಾಲ್ಕು ಹಿಮ ಯುಗಗಳಲ್ಲಿ ೧.೬ ಕೋಟಿ ವರ್ಷಗಳ ಹಿಂದೆ ಮೋರನೇ ಹಿಮ ಯುಗ (೩ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ
ಮಾನವನ ಮೂಲ ಪುರುಷ ರಾದ ಹೋಮಿನಿಡ್ ಗಳು ಯಾರು? ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಮಂಗನಲ್ಲ, ಚಿಂಪಾಜಿ ತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ, ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ. ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಭೇದ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,
ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಭೇದ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ ( ಸೇಪಿಯನ್ಸ್ -ಅಥವಾ ಇವೆರಡು ಕುಲದ ಸಂಪರ್ಕದ ಕುಲ) ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಭೇದ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ ಜಾತಿಯ ನೇರ ಸೊಂಟದ ವಾನರನೇ ಜಗತ್ತಿನ ಎಲ್ಲಾ ಮನುಕುಲದ/ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು,ನಿರ್ಧರಿಸಿದ್ದಾರೆ- ತೀರ್ಮಾಕ್ಕೆಬಂದಿದ್ದಾರೆ.
ಜೀವ ವಿಕಾಸ ೧೮,೦೦,೦೦೦ ವರ್ಷಗಳು - ಮಾನವರು (ಅನಾಗರಿಕರು) ಪ್ರಾಚೀನ ಶಿಲಾಯುಗ ಮಾನವನ ವಿಕಾಸ
ನಾಲ್ಕು ಹಿಮ ಯುಗಗಳಲ್ಲಿ ೧೦ ಸಾವಿರ ವರ್ಷಗಳ ಹಿಂದೆ ನಾಲ್ಕನೇ ನೇ ಹಿಮ ಯುಗ (೪ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ; ಅದು ಇನ್ನೂ ಮುಂದುವರೆದಿದೆ ಎಂದು ಭಾವಿಸಲಾಗಿದೆ. ಉತ್ತರ- ದಕ್ಷಿಣ ದೃವಗಳ ಹಿಮ ರಾಶಿ ಅದರ ಪರಿಣಾಮವೆಂದೂ, ದೈತ್ಯ ಜೀವಿಗಳ ಅಂತ್ಯಕ್ಕೆ ಅದೇ ಕಾರಣ ವಿರಬೇಕೆಂದೂ ಊಹಿಸಿದ್ದಾರೆ.
ಜೀವ ವಿಕಾಸ ೧೦,೦೦೦ ವರ್ಷಗಳು - ನಾಗರಿಕ ಮಾನವರು -(ಆಧುನಿಕ ಮಾನವರು).
ಸುಮಾರು 108,000 ಮತ್ತು 117,000 ವರ್ಷಗಳ ಹಿಂದೆ,ಮೊದಲ ಬಗ್ಗಿದ ಸೊಂಟದ ಮಾನವರು ನೆಟ್ಟಗೆ ನಡೆಯುವ ನಿಲುವನ್ನು ತಮ್ಮ ಕೊನೆಯ ಪ್ರಯತ್ನದಲ್ಲಿ ಆರಂಭಿಸಿದರು. ಇಂಡೋನೇಷ್ಯಾದ ಸೆಂಟ್ರಲ್ ಜಾವಾದಲ್ಲಿ ಹೋಮೋ ಎರೆಕ್ಟಸ್‌ನ ಕಿರಿಯ ಪಳೆಯುಳಿಕೆಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ಆಧುನಿಕ ಮಾನವರು ವಿಕಾಸಗೊಳ್ಳುವ ಮೊದಲು ಅಳಿದುಹೋದ ಪ್ರಾಚೀನ ಮಾನವ ಪ್ರಭೇದವಾಗಿದೆ. ಮಾನವ ತಳಿಗಳು ಯಾವಾಗ ಅಳಿದುಹೋದರೆಂಬುದನ್ನು ಅವರ ಸಂಶೋಧನೆಗಳು ಖಚಿತಪಡಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.[೫]
೪/೫ ಸಾವಿರ ವರ್ಷಗಳ ಹಿಂದೆ ಹವಾಮಾನ ವೈಪರೀತ್ಯದಿಂದ ಪ್ರಳಯವಾಗಿ ಸಿಂಧೂ ನದಿಯ ಸಂಸ್ಕೃತಿಯನ್ನು ನಾಶಮಾಡಿರಬೇಕೆಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.(How climate change ended world’s first great civilizations :David Keys,:The Independent | Mar 3, 2014, 01.54 PM IST:- The world's first great civilisations appear to have collapsed because of an ancient episode ofclimate change - according to new research carried out by scientists and archaeologists.
Their investigation demonstrates that theBronze Age 'megacities' of the Indus Valley region of Pakistan and north-west India declined during the 21st and 20th centuries BC and never recovered - because of a dramatic increase in drought conditions.)