ವಿಷಯಕ್ಕೆ ಹೋಗು

ಸೃಷ್ಟಿ ಮತ್ತು ವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೃಷ್ಟಿ ಮತ್ತು ವಿಜ್ಞಾನ ಅಥವಾ ವಿಶ್ವ ವಿಕಾಸ  :

[ಬದಲಾಯಿಸಿ]
  • ವಿಶ್ವದ ಹುಟ್ಟು : ಮಹಾ ಸ್ಪೋಟ ಮತ್ತು ಅದರ ಈಗಿನ ಆಯುಷ್ಯ :
  • ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ 1920 ರಲ್ಲಿ ಈ ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200-2000ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ತರ್ಕಿಸಿದ್ದನು. ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು 13.75ಬಿಲಿಯನ್ ಅಥವಾ 1375 (ಶೇಕಡ 0.11(0.11)ರಷ್ಟು ಮಾತ್ರ ವ್ಯತ್ಯಾಸ ಇರಬಹುದು) ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ. ಆದ್ದರಿಂದ ಮಹಾಸ್ಪೋಟದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು 1375 ಕೋಟಿ ವರ್ಷ.(ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.
  • ಇತ್ತೀಚಿನ ತಿದ್ದುಪಡಿ : 13.798±0.037 ಬಿಲಿಯನ್ ವರ್ಷ (13.798±0.037×109 ವರ್ಷ ಅಥವಾ 4.354±0.012×1017 ಸೆಕೆಂಡ್ ಗಳು)
(ವಿ.ಸೂ.ಕನ್ನಡದ ಅಂಕೆ-ಒಂದು(1) = ೧ ,ಸೊನ್ನೆಯಂತೆ ಕಾಣುತ್ತದೆ ಆದ್ದರಿಂದ ಹಿಂದು ಅರೇಬಿಕ್/ಇಂಗ್ಲಿಷ್ ಅಂಕೆಗೆ ಬದಲಿಸಿದೆ)

ಇತಿಹಾಸ :

[ಬದಲಾಯಿಸಿ]

  • ವಿಜ್ಞಾನವು ವಿಶ್ವವು ಸೃಷ್ಟಿಸಲ್ಪಟ್ಟಿದೆ ಎನ್ನುವ ಪದವನ್ನು ಒಪ್ಪುವುದಿಲ್ಲ ಅಥವಾ ಉಪಯೋಗಿಸುವುದಿಲ್ಲ. ಏಕೆಂದರೆ ಯಾರು ಸೃಷ್ಟಿಸಿದರು ? ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ವಿಜ್ಞಾನ ಉತ್ತರಿಸಲಾರದು. ವಿಜ್ಞಾನವು ಅದರಿಂದ ವಿಶ್ವದ ಹುಟ್ಟು ಅಥವಾ ವಿಕಾಸ ಎಂಬ ಪದವನ್ನು ಬಳಸುತ್ತದೆ. ಈ ನಮ್ಮ ವಿಶ್ವವು ಹಿಂದೆ ಹೇಳಿದಂತೆ ಸುಮಾರು 1375 ಕೋಟಿ ವರ್ಷಗಳ ಹಿಂದೆ ಒಂದು ಚಿಕ್ಕಾತಿ ಚಿಕ್ಕ ಕಣದಿಂದ ಸ್ಪೋಟಗೊಂಡು ಉಬ್ಬುತ್ತಾ ವಿಕಾಸ ಹೊಂದುತ್ತಾ ಅನೇಕ ಬ್ರಹ್ಮಾಂಡಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಬೃಹತ್ ವಿಶ್ವವಾಗಿ ರೂಪುಗೊಂಡಿದೆ ಎಂಬುದು ವಿಜ್ಞಾನಿಗಳ ಮತ.
  • ವಿಶ್ವದ ಧಾರ್ಮಿಕ ನಂಬುಗೆಗಳಲ್ಲಿ ಸೆಮೆಟಿಕ್ ಮತ್ತು ಅದರ ಸಂಬಂಧಿ ಧರ್ಮಗಳು ದೇವನು ಈ ಜಗತ್ತನ್ನು ಕ್ರಿಸ್ತಪೂರ್ವ 4004ರಲ್ಲಿ ಸೃಷ್ಟಿಸಿದನೆಂದು ನಂಬುತ್ತವೆ. ಹಿಂದೂ ಜ್ಯೋತಿಷ ಶಾಸ್ತ್ರಗಳು ಮತ್ತುಪಂಚಾಗಗಳು ಈ ಜಗತ್ತು ಸೃಷ್ಟಿಕರ್ತ ಬ್ರಹ್ಮನಿಂದ ಸುಮಾರು 197 ಕೋಟಿ ವರ್ಷಗಳ ಹಿಂದೆ ಸೃಷ್ಟಿಸಲ್ಪಟ್ಟಿದೆಯೆಂದು ಹೇಳುತ್ತವೆ.ಆದರೆ ವೇದ, ಉಪನಿಷತ್ತು ಮತ್ತು ದರ್ಶನ ಶಾಸ್ತ್ರಗಳು ವಿಶ್ವವು ಅನಾದಿ ಮತ್ತು ಅನಂತ ಎಂದು ಹೇಳುತ್ತವೆ.
  • ವಿಶ್ವದ ಜನನದ ಬಗ್ಗೆ ವಿಜ್ಞಾನವು ನಿಖರವಾಗಿಲ್ಲ. ಈ ವಿಶ್ವದ ವಿಕಾಸವು ಸುಮಾರು 200ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರ ಬಹುದೆಂದು ಭಾವಿಸಲಾಗಿತ್ತು (ಡಾ ಶಿವರಾಮ ಕಾರಂತರ 'ಈ ಜಗತ್ತು' ಮತ್ತು ಪ್ರೊಫೆಸರ್ ಆರ್ ಎಲ್ ನರಸಿಂಹಯ್ಯನವರ 'ಜಗತ್ತುಗಳ ಹುಟ್ಟು ಮತ್ತು ಸಾವು' ನೋಡಿ). ವಿಜ್ಞಾನಿಗಳ ನಿರ್ಣಯಗಳು ಸಂಶೋಧನೆಗಳಾ ದಂತೆ ಬದಲಾವಣೆ ಹೊಂದಬಹುದು. ಈಗಲೂ ಕೂಡ ಜಗತ್ತಿನ ವಿಕಾಸ ಪ್ರಾರಂಭವಾಗಿ 1375ಕೋಟಿ ವರ್ಷವೆಂದರೂ, ಶೇಕಡ 11 ರಷ್ಟು ವ್ಯತ್ಯಾಸ ಸಾಧ್ಯವೆಂದು ವಿಜ್ಞಾನ ಒಪ್ಪುತ್ತದೆ.

ದೇವ ಕಣ :

[ಬದಲಾಯಿಸಿ]

ಪರಮಾಣುವಿನ ರೇಖಾಚಿತ್ರ-ಪ್ರೋಟಾನ್ ಮತ್ತು ನ್ಯೂಟ್ರಾನ್ ಬೀಜ ಮಧ್ಯ ಇದೆ;ಹಳದಿ ಬಣ್ಣದ ಗೆರೆಯಮೇಲೆ ಇಲೆಕ್ಟ್ರಾನ್' ಸುತ್ತುತ್ತಿದೆ (Rutherford model). ಒಂದು ಪ್ರೋಟಾನಿನ ತೂಕ 1.67262×10−27 kg (1.67 ಕೆ.ಜಿ.ಯನ್ನು 1ರ ಮುಂದೆ 27 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಸಂಖ್ಯೆಯೇ ಒಂದು ಪ್ರೋಟಾನಿನ ತೂಕ)
ಫ್ರೋಟಾನ್ ಉಪ-ಅಣುವಿನ ಒಳಗಿರುವ ಉಪಕಣಗಳು -ಅದರಲ್ಲಿ ಒಂದು ವಿಶ್ವ ಸೃಷ್ಟಿಗೆ ಕಾರಣವಾದ ಹಿಗ್ಸ್-ಬೋಸಾನ್ ಕಣ.
  • ವಿಶ್ವ ಸೃಷ್ಟಿಗೆ ಕಾರಣವಾದ ಅತ್ಯಂತ ಚಿಕ್ಕ ಫೋಟಾನ್ ಕಣವನ್ನು (ಹಿಗ್ಸ್ ಬೋಸನ್ ಕಣ) ಕೆಲವು ವಿಜ್ಞಾನಿಗಳು ದೇವಕಣವೆಂದು ಕರೆದಿದ್ದಾರೆ. ಅದರ ಗಾತ್ರ , ತೂಕಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಚಿಕ್ಕದು. ಈ ಜಗತ್ತೆಲ್ಲಾ ಸುಮಾರು ೧೦೯ ಬಗೆಯ ಪರಮಾಣುಗಳಿಂದ ರಚಿತವಾಗಿರುವದೆಂದು ವಿಜ್ಞಾನ ಹೇಳುತ್ತದೆ. ಅದರಲ್ಲಿ ಜಲಜನಕದ ಪರಮಾಣುವೇ ಅತ್ಯಂತ ಚಿಕ್ಕದು. ಆ ಜಲಜನಕದಲ್ಲಿ ಮಧ್ಯದಲ್ಲಿ ಒಂದು ಪ್ರೋಟಾನು, ಅದನ್ನು ಸುತ್ತುತ್ತಿರವ ಒಂದು ಎಲೆಕ್ಟ್ರಾನು ಇದೆ ಆ ಜಲಜನಕದ ಗಾತ್ರ ಸುಮಾರು ಒಂದು ಮಿಲಿ ಮೀಟರನ್ನು ಎಂದರೆ ಒಂದು ಚಿಕ್ಕ ಬಿಂದು ಅಥವಾ ಪೆನ್ಸಿಲ್ಲಿನಿಂದ ಇಟ್ಟರುವ ಚುಕ್ಕಿಯ ಅಗಲದ ೧೦ ಕೋಟಿಯ ೫ ಭಾಗ ದಷ್ಟು. ಈ ಪ್ರೋಟಾನು ಕಣ ಅದಕ್ಕಿಂತ ಕೋಟಿ ಕೋಟಿ ಭಾಗಕ್ಕಿಂತಲೂ ಚಿಕ್ಕದು.ಆ ಪ್ರೋಟಾನಿನಲ್ಲಿ ಕ್ವಾರ್ಕ್ ಗಳೆಂಬ ಮೂರು ಬೀಜಗಳಿದ್ದು ಅವು ಶಕ್ತಿಯ ಅಥವಾ ಬೆಳಕಿನ ಕಿಡಿಗಳಾಗಿವೆ. ಫೋಟಾನ್ ಅವುಗಳಲ್ಲಿ ಒಂದು ಕಣ ಅಥವಾ ಉಪಕಣ (ಸಬ್ ಪಾರ್ಟಿಕಲ್). ಅದಕ್ಕೆ ತೂಕವೇ ಇಲ್ಲವೆಂದು ಹೇಳಲಾಗುತ್ತಿದೆ. ಆದರೂ ಅದರ ತೂಕ ಸ್ಥಿರಾಂಕದಲ್ಲಿ ಸುಮಾರು ೬.೬೭ನ್ನು ಒಂದರ ಮುಂದೆ ೩೪ ಸೊನ್ನೆಗಳಿರುವ ಅಂಕೆ ಯಿಂದ ಭಾಗಿಸಿದರೆ ಬರುವ ಭಾಗಲಬ್ಧದಷ್ಟು ಕಿಲೋ ಗ್ರಾಂ. ಎಂದು ಲೆಕ್ಕ ಹಾqದ್ದಾರೆ ಅದು. ಆ ಕಿರಣ, ಶಕ್ತಿ ರೂಪದಲ್ಲಿ ಒಂದು ಸೆಕೆಂಡನ್ನು ಒಂದರ ಮುಂದೆ ೩೪ಸೊನ್ನೆ ಗಳಿರುವ ಅಂಕೆಯಿಂದ ಭಾಗಿಸಿದರೆ ಬರುವಷ್ಟು ಕಾಲದಲ್ಲಿ ಚಲಿಸುವ ದೂರವೂ ಆಗಿದೆ. ಅದು ಪ್ಲ್ಲಾಂಕನ ಕನಿಷ್ಠ ಸ್ಥಿರ ಸಂಖ್ಯೆ. ಎನ್ನಲಾಗಿದೆ. (ವಿಕಿಪೀಡಿಯಾ -ಕ್ವಾರ್ಕ್ - ಫೋಟಾನ್ -ಇಂಗ್ಲಿಷ್).
ಇದು ಒಂದು ಉಪ-ಅಣುವಿನ-ಪ್ರೋಟಾನ್ -ಒಳಗಿನ ಮೂರು ಉಪ-ಕಣಗಳು; ಕ್ವಾರ್ಕ್ಎಂದುಕರೆಯಲ್ಪಡುತ್ತವೆ. ಒಂದು ಉಪ ಕಣ ಫೋಟಾನ್ ಕಣ; ಅದರ ತೂಕ, ಅಳತೆ ಗುಣಗಳು ಮಾನವನ ಊಹೆಗೂಸಿಲುಕದ -ಕೇವಲ ಗಣಿತದ ಭಾಷೆ-ಲೆಕ್ಕಕೆ ಮಾತ್ರ ಸಿಗುವಂತದು ಇದರಲ್ಲಿರುವ ಪ್ರತಿಯೋದು ಪಾಸಿಟಿವ್ ಫೋರ್ಸಿನ ಧನ ಕಣಕ್ಕೆ ಋಣ ಫೋರ್ಸಿನ ಕಣವಿರುವುದಾಗಿ ಹೇಳಲಾಗಿದೆ, ಅದೇ ರೀತಿ ತೂಕದಲ್ಲೂ ಆರು ಧನ-ಕಣ ವಿರುದ್ಧವಾಗಿ ಆರು ಋಣ-ಕಣ ಇರುವುದು. ಈ ಜಗತ್ತಿನ ಎಲ್ಲಾ ವಸ್ತುಗಳೂ ಈ ಮೂಲ ಆರು ಉಪಕಣಗಳಿಂದ ಆಗಿದೆ ಎಂಬುದು ಕಣ ಭೌತಶಾಸ್ತ್ರದ ಸಿದ್ಧಾಂತ. ನೋಡಿ:- (https://en.wikipedia.org/wiki/Proton)
  • ಈ ಕನಿಷ್ಠ ಸ್ಥಿರಾಂಕದ ಬೀಜ ಕಣ ಸ್ಪೋಟಗೊಂಡು ಈ ವಿಶ್ವ ರಚನೆಯಾಯಿತೆಂಬುದು ವಿಜ್ಞಾನ ಕಂಡುಕೊಂಡ ಸತ್ಯ.. ವಿಜ್ಞಾನಿ ಹಬಲ್‌ನ ಸಿದ್ಧಾಂತ. ನಂತರದ ಬಹಳಷ್ಟು ವಿಜ್ಞಾನಿಗಳ ಸಹಮತ. ಇದರ ಸತ್ಯಾಸತ್ಯತೆಯನ್ನು ಅರಿಯಲು ಜಿನಿವಾದಲ್ಲಿ ನವೆಂಬರ್ ೨೦೧೧ರಲ್ಲಿ ನ್ರ್ಯಟ್ರಿನೋ ಪ್ರಯೋಗ ಮಾಡಿದ್ದಾರೆ. ಇನ್ನೂ ಪ್ರಯೋಗಗಳು ನಡೆಯತ್ತಿವೆ.
  • ಈ ತೂಕವೇ ಇರದ ಕಣದಿಂದ ವಿಶ್ವ ಸೃಷ್ಟಿ ಯಾಯಿತೆಂಬ ವಾದವನ್ನು ತತ್ವಮೀಮಾಂಸಕರು, ತಾರ್ಕಿಕರು, ಧಾರ್ಮಿಕವಾದಿಗಳು ಪ್ರಶ್ನಿಸಿದ್ದಾರೆ ಮತ್ತು ಸಂಶಯ ವ್ಯಕ್ತ ಪಡಿಸುತ್ತಾರೆ.
  • ಅಷ್ಟಕ್ಕೂ ಈ ಬೀಜ ಕಣ ಸ್ಪೋಟ ಗೊಳ್ಳಲು ಕಾರಣವೇನೆಂದು ವಿಜ್ಞಾನಿಗಳನ್ನು ಕೇಳಿದರೆ ಅದಕ್ಕೆ ಕೆಲವರ ಉತ್ತರ 'ದೇವರೇ ಬಲ್ಲ !'
  • ತೈತ್ತಿರೀಯೋಪನಿಷತ್ ನಲ್ಲಿ ಹೇಳಿದ ವಾಕ್ಯ 'ಅಸದ್ವಾ ಇದಮಗ್ರ ಆಸೀತ್ | ತತೋ ವೈ ಸದಜಾಯತ | ತದಾತ್ಮಾನಗ್೦ ಸ್ವಯಂಕುರುತ | ತಸ್ಮಾತ್ ತತ್ ಸುಕೃತಮುಚ್ಯತ ಇತಿ || "ಇದು (ಆತ್ಮ-ಬ್ರಹ್ಮ) ಮೊದಲು ಅಸತ್ತೇ (ಇಲ್ಲದ್ದು) ಆಗಿತ್ತು. ಅದರಿಂದಲೇ ಇರುವುದು ಉತ್ಪನ್ನವಾಯಿತು. ಅದು ತನ್ನನ್ನು ತಾನೇ ಉತ್ಪತ್ತಿ ಮಾಡಿಕೊಂಡಿತು. ಆದುದರಿಂದ ಆದು ಸ್ವಯಂ ಕೃತ , ಹೀಗೆಂದು ಹೇಳುತ್ತಾರೆ".
  • ಆದ್ದರಿಂದ ಕೆಲವು ವಿಜ್ಞಾನಿಗಳು ಅದನ್ನು ದೇವಕಣವೆಂದು ಕರೆದಿದ್ದಾರೆ.
  • ಋಗ್ವೇದದ ೧೦ ನೇ ಮಂಡಲದ ೧೨೯ನೇ ನಾಸದೀಯ ಸೂಕ್ತದಲ್ಲಿ ಖಭೌತ ಶಾಸ್ತ್ರದ (ಕಾಸ್ಮೋಲೊಜಿ) ಗೆ ಸಂಬಂಧಪಟ್ಟ ಕೆಲವು ಶ್ಲೋಕಗಳವೆ. ಅವು ವಿಶ್ವದ ಆರಂಭದ ಮತ್ತು ಜನನದ ಬಗೆಗೆ ಹೇಳುತ್ತವೆ. ಕುತೂಹಲದ ದೃಷ್ಟಿಯಿಂದ ಅವು ಗಮನಿಸಲು ಯೋಗ್ಯವಾಗಿವೆ. ಪಾಶ್ಚ್ಯಾತ್ಯ ವಿಜ್ಞಾನಿಗಳಲ್ಲೂ , ವಿಚಾರವಾದಿಗಳಲ್ಲೂ , ಅವು ಪ್ರಸಿದ್ಧವಾಗಿವೆ. ಈ ವಿಶ್ವ ಹುಟ್ಟುವ ಮೊದಲು :-ನ ಅಸತ್ ಆಸೀತ್ ನ ಉ ಸತ್ ಆಸೀತ್ ತದಾನೀಮ್|,ಎಂಬ ಪರಸ್ಪರ ವಿರುದ್ಧ ಹೇಳಿಕೆಯಿಂದ ಆರಂಭವಾಗುವುದು. ಈ ವಿಶ್ವದ ಜನನಕ್ಕೆ ಮೊದಲು - ಆಗ ಅಸತ್ತು (ಇಲ್ಲದ್ದು - ಶೂನ್ಯ) ಇರಲಿಲ್ಲ ; ಸತ್ (ಇದೆ ಎಂಬುದು) ಇರಲಿಲ್ಲ. " ನ ಮೃತ್ಯು ಆಸೀತ್, ಅಮೃತಮ್ ನ ತರ್ಹಿ| ಆಗ ಮೃತ್ಯು ಇರಲಿಲ್ಲ, ಅಮೃತವೂ ಇರಲಿಲ್ಲ"| , ೨) ಅನೀತ್ ಆವಾತಮ್ ಸ್ವಧಯಾ ತತ್ ಏಕಮ್| ಆದರೆ ಉಸಿರಿಲ್ಲದ ಅದು ತನ್ನ ಪ್ರಕೃತಿಯಿಂದ ಉಸಿರಾಡುತ್ತಿತ್ತು ೩) ತಪಸಃ ತತ್ ಮಹಿನ ಅಜಾಯತ ಏಕಮ್ | ಅತಿಯಾದ ಶಾಖದಿಂದ ಅದು ಹುಟ್ಟಿತು ೪) ಅದು ಬಯಸಿತು ಮತ್ತು ಅದೇ ಬಯಕೆ ಬೀಜವಾಯಿತು-ಈ ಅಸತ್ ನಿಂದ ಸತ್ ಆದದ್ದನ್ನು ಮೊದಲು ಕಂಡವರು ಜ್ಞಾನಿಗಳಾದ ಕವಿಗಳು (ಮಂತ್ರ ದೃಷ್ಟ್ರಾ ರರು),
  • ಇದು ವಿಶ್ವ ವಿಕಾಸಕ್ಕೆ ಕಾರಣವಾದ ಫೋಟಾನಿನ ಲಕ್ಷಣಗಳನ್ನು ಹೇಳುವಂತೆ ತೋರುತ್ತದೆ.
  • ಈ ಫೋಟಾನ್ ಕಣ ೧೩೭೫ ಕೋಟಿ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಶಾಖವನ್ನೂ ತೂಕವನ್ನೂ ಗಳಿಸಿಕೊಂಡು ಸ್ಪೋಟಗೊಂಡಿತು. ಅದು ಅಸಾಧಾರಣ ವೇಗದಲ್ಲಿ ಹಿಗ್ಗುತ್ತಾ ಅತೀವ ಶಾಖದಿಂದ ಕುದಿಯುತ್ತಾ ಒಂದು ಸೆಕೆಂಡಿನ ಕಾಲದಲ್ಲಿ ವಿಶಾಲವಾದ ಉರಿಯುತ್ತಿರುವ ಪ್ಲಾಸ್ಮಾದ ಕೆಂಡದ ಬ್ರಹ್ಮಾಂಡದ ಉಂಡೆಯಾಯಿತು ; ಮುಂದಿನ ಅನೇಕ ಬ್ರಹ್ಮಾಂಡಗಳ (ನೀಹಾರಿಕೆಗಳ) ಸೃಷ್ಟಿಯ ಕಾರ್ಯಕ್ಕೆ ಸಿದ್ದವಾಯಿತು. ಆ ಒಂದು ಸೆಕೆಂಡಿನ ಅವಧಿಯಲ್ಲಿ ಆದ ಬೆಳವಣಿಗೆಯನ್ನೂ ನಂತರದ ವಿಕಾಸವನ್ನೂ ಕೆಳಗೆ ಕೊಟ್ಟಿದೆ.

ಹಿಗ್ಸ್ ಬೋಸನ್ ಕಣ ೪-೭-೨೦೧೨ರ ಪ್ರಯೋಗ

[ಬದಲಾಯಿಸಿ]

ಯೂರೋಪಿನ ಸಂಶೋಧನಾ ಕೇಂದ್ರದಲ್ಲಿ,೪-೭-೨೦೧೨ ಮತ್ತು ಮಾರ್ಚಿ ೨೦೧೩ರ ರಲ್ಲಿ ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, ೧೦೦ ಮೀಟರ್ ಆಳದಲ್ಲಿ, ೨೭ ಕಿಮೀ ಉದ್ದದ ಸುರಂಗದಲ್ಲಿ ಮಾಡಿದ ಪ್ರಯೋಗ
  • (೧೦-೭-೨೦೧೨ ಸುದ್ದಿ ಮಾಧ್ಯಮದಿಂದ- ಸೇರಿಸಿದೆ) ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸಾನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳಾದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು. , ವಿಜ್ಞಾನಿ ಐನಸ್ಟೀನರು ಇವರ ಕಣ ಭೌತ ಸಿದ್ದಾಂತವನ್ನು ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (ಕ್ವಾಂಟಮ್ ಮೆಕ್ಯಾನಿಕ್ಸ್) ಅಳವಡಿಸಿಕೊಂಡಿದ್ದರು. ಅದು ಬೋಸ್-ಐನಸ್ಟೀನ್ ಸಿದ್ದಾಂತ ಎಂದು ಹೆಸರಾಗಿದೆ.
  • ಬೋಸರವರು ಈ ಫೋಟಾನ್ ಕಣದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು ಅದನ್ನು ಮುಂದುವರೆಸಿ ಪೀಟರ್ ಹಿಗ್ಗ್ಸ್ ರವರು ಸಂಶೋಧನೆಯನ್ನು ಮುಂದುವರೆಸಿದರು. ಆದ್ದರಿಂದ ಈ ವಿಶ್ವ ಸೃಷ್ಟಿಗೆ ಕಾರಣವಾದ ಈ ಕಣವನ್ನು ಹಿಗ್ಸ್-ಬೋಸಾನ್ ಕಣವೆಂದುಕರೆಯುತ್ತಾರೆ.
  • ಇದರ ಹೆಚ್ಚಿನ ಅಧ್ಯಯನಕ್ಕೆ , ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದಲ್ಲಿ (ಸಿಇಆರ್‌ಎನ್), ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, ೧೦೦ ಮೀಟರ್ ಆಳದಲ್ಲಿ, ೨೭ ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನಕ್ಕೆ ಅಣಿಮಾಡಿದ್ದರು. ವಿರುದ್ಧದಿಕ್ಕಿನಲ್ಲಿ ಎರಡು ಫ್ರೋಟಾನ್ ಕಣಗಳನ್ನು ವೇಗವಾಗಿ ಚಲಿಸುವಂತೆ ಮಾಡಿ -ಡಿಕ್ಕಿ ಹೊಡೆಸಿ ಪರಿಣಾಮವನ್ನು ನೋಡುವ ಪ್ರಯೋಗ ೨೦೧೦ ಮತ್ತು ೨೦೧೧ ರಲ್ಲಿ ನೆಡೆದಿತ್ತು. ಅದು ಸ್ವಲ್ಪದರಲ್ಲಿ ವಿಫಲವಾಯಿತು.
  • ೪ ಜುಲೈ ೨೦೧೨ರಂದು ಪುನಃ ಪ್ರಯೋಗ ಮಾಡಿದರು. ಅದು, ಹಿಗ್ಸ್-ಬೋಸನ್ ಕಣ (ದೇವ ಕಣ)ದ ಅಸ್ತಿತ್ವ ಶೇ ೯೯ ರಷ್ಟು ಸಫಲವಾಗಿದೆ ಎಂದು ಪೀಟರ್ ಹಿಗ್ಸ್ ರವರು ಹೇಳಿದ್ದಾರೆ. ಈ ಪ್ರಯೋಗದ ಕಣ ಕಣಭೌತಶಾಸ್ತ್ರದ ಹಿಗ್ಸ-ಬೋಸಾನ್ ಕಣವನ್ನೇ ಹೋಲುತ್ತದೆ ಎಂದಿದ್ದಾರೆ. ಅದನ್ನು ಕೆಲವರು ದೇವ ಕಣ ವೆಂದು ಕರೆದಿದ್ದಾರೆ. ಈ ವಿಶ್ವ ೧೨ ವಿಭಿನ್ನ ಕಣಗಳಿಂದ ಹಾಗೂ ನಾಲ್ಕು ಶಕ್ತಿಗಳಿಂದ ಸೃಷ್ಟಿಯಾಗಿದೆ ಎಂಬುದು ಸಿದ್ದಾಂತ.

ವಿಶ್ವ ವಿಕಾಸ : ಪ್ಲ್ಯಾಂಕ್ ಯುಗ

[ಬದಲಾಯಿಸಿ]

  • ವಿಶ್ವ ವಿಕಾಸ : ಪ್ಲ್ಯಾಂಕ್ ಯುಗ :-
  • ಈ ನಮ್ಮ ವಿಶ್ವವು ಸುಮಾರು ೧೩೭೫ ಕೋಟಿ ವರ್ಷಗಳ ಹಿಂದೆ ವಿಕಾಸ ಹೊಂದಲು ಆರಂಭವಾಗಿ ಈಗ ನಾವು ಕಾಣುತ್ತಿರುವ ಅನೇಕ ಬ್ರಹ್ಮಾಂಡಗಳನ್ನು ಒಳಗೊಂಡ ವಿಶಾಲ ವಿಶ್ವವಾಗಿದೆ ವಿಜ್ಞಾನಿಗಳು ೧೦- ೧೨ ಹೆಜ್ಜೆಗಳಲ್ಲಿ ವಿಶ್ವವಿಕಾಸವನ್ನು ಗುರುತಿಸಿದ್ದಾರೆ. ವಾಮನನು ತ್ರಿವಿಕ್ರಮನಾಗಿ ಮೂರು ಹೆಜ್ಜೆ ಗಳಲ್ಲಿ ಈ ವಿಶ್ವವನ್ನು ಅಳೆದರೆ ; ಅದನ್ನು ಹಬಲ್ ಟೆಲಿಸ್ಕೋಪಿನಿಂದ ತೆಳುವಾದ ಹಾಳೆಗಳಂತೆ ಅಳೆದು ಜೋಡಿಸಿದ್ದಾರೆ. ಅದು ಒಂದು ಪಾರದರ್ಶಕ ದೊಡ್ಡ ಬ್ರಹ್ಮಾಂಡದ-ಚಿತ್ರ ವಾಗಿ ರೂಪುಗೊಂಡಿದೆ. ಬ್ರಹ್ಮಾಂಡದ ವಿಕಾಸದ ಕಾಲವನ್ನು ಅಳೆಯುವಾಗ ಮೊದಲ ೧ ಸೆಕೆಂಡ್ ಕಾಲವನ್ನು ೧ ರ ಮುಂದೆ ೪೩ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿ (೧೦-೪೩ 'ಹಬಲ್ ನ ಸ್ಥಿರಾಂಕ') ಆ ಸೆಕೆಂಡಿನ ಛೇದಾಂಶಗಳ ಕಾಲದಲ್ಲಿ ಆಗರಬಹುದಾದ ಘಟನೆ ಗಳನ್ನು ಗುರತಿಸಿದ್ದಾರೆ. ಇದಕ್ಕೆ ಹಬಲ್‌ನ ಸ್ಥಿರಸಂಖ್ಯೆ ಎಂದು ಕರೆದಿದ್ದಾರೆ.
  • ಪ್ಲ್ಯಾಂಕ್ ಯುಗ :- ವಿಶ್ವ ವಿಕಾಸ ಆರಂಭ -ಮೊದಲ ೨-೩ ಸೆಕೆಂಡಿನ ಛೇದಾಂಶ (೧ಸೆಕೆಂಡಿನ (-೪೩ ಘಾತ ೧೦-೪೩) ರಿಂದ (-೪೦ =೧೦-೪೦ )= ಪ್ಲ್ಯಾಂಕ್ ಸ್ಥಿರಾಂಕ ದಿಂದ ಆರಂಭವಾಗುವ ಇದು ವಸ್ತುವಿನ ತೂಕವನ್ನು ನಿಶ್ಛಲ ಸ್ಥಿತಿಯಲ್ಲಿ ಅಳೆದು ಅದಕ್ಕೆ ಪ್ಲ್ಯಾಂಕ್ ಸ್ಥಿರಾಂಕ ವೆಂದು ಕರೆದಿದ್ದಾರೆ. ಫೋಟಾನ್ ಕಣ ಸ್ಪೋಟಗೊಂಡು ಅತೀವ ಶಾಖದಿಂದ (ಸುಮಾರು ಲಕ್ಷ ಕೋಟಿ ಸೆಲ್ಸಿಯಸ್ ಡಿಗ್ರಿ ಗೂ ಹೆಚ್ಚು. ) ಅತಿ ವೇಗವಾಗಿ ಉಬ್ಬತ್ತಾ ಹೋಯಿತು. ವಿಜ್ಞಾನವು ಆರಂಭದ ಕ್ಷಣವನ್ನು ಲೆಕ್ಕ ಹಾಕಿದೆ. ೧ ಸೆಕೆಂಡ್ ಕಾಲವನ್ನು ಇದಕ್ಕಿಂತ (-೪೩ ಘಾತ) ಕಡಿಮೆ ಅಥವಾ ಚಿಕ್ಕದಾಗಿ ವಿಭಾಗಿಸಲಾರದು. ಹಾಗೆ ಶಾಖದಿಂದ ಆ ಕಣಸಿಡಿದ ವೇಗವನ್ನೂ ಲೆಕ್ಕ ಹಾಕಿದ್ದಾರೆ. ಆವೇಗವೂ ಹಬಲ್ ನ ಕಾಲ ಸ್ಥಿರಾಂಕಕ್ಕೆ ಹೊಂದುತ್ತದೆ. ಈ ಸಮಯದಲ್ಲಿ ಇಲೆಕ್ಟ್ರೋ ನ್ಯೂಕ್ಲಿಯರ್ ಫೋರ್ಸ್‌ನಿಂದ ಗುರುತ್ವಾಕರ್ಷಣ ಶಕ್ತಿ ಪ್ರತ್ಯೇಕವಾಯಿತು. ಫೋಟಾನ್ ಕಣದಲ್ಲಿ ಈ ಎರಡೂ ಶಕ್ತಿಗಳಿವೆ. ಆಗ ಅದರಿಂದ ಆಚೆ ಖಾಲಿ ಸ್ಥಳ ಆಥವಾ ಆಕಾಶ ಎಂಬುದು ಇರಲಿಲ್ಲ. ಸಮಯ ಎಂಬುದೂ ಇರಲಿಲ್ಲ. ಆಕಾಶ ಅಥವ ಸ್ಪೇಸ್ ಮತ್ತು ಸಮಯ ಅದರೊಳಗೇ ಇದ್ದು, ಅವೆರಡನ್ನೂ ಅದು ಉಂಟುಮಾಡಿಕೊಳ್ಳುತ್ತಿತ್ತು.

ಮಹಾಸಂಯೋಜನಾ ಯುಗ ಮತ್ತು ಉಬ್ಬರ ಸಮಯ -

[ಬದಲಾಯಿಸಿ]

  • (ಗ್ರ್ಯಾಂಡ್ ಯೂನಿಫಿಕೇಶನ್ ಎಪೋಕ್ ಮತ್ತು ಇನಫ್ಲೇಶನರಿ ಎಪೊಕ್ ) 4-6 ಆರಂಭದ ಸೆಕೆಂಡಿನ ಛೇದಾಂಶ ಎಂದರೆ 1 ಸೆಕೆಂಡ್ ಕಾಲವನ್ನು 1 ರ ಮುಂದೆ 43 ಸೊನ್ನೆ ಗಳಿರುವ ಅಂಕೆಯಿಂದ ಭಾಗಿಸಿ ಅದರ ಮೊದಲ 4-6 ಭಾಗದಷ್ಟು ಅಲ್ಪ ಕಾಲ -(1ಸೆಕೆಂಡಿನ 10-40) ರಿಂದ (10-36 ಮತ್ತು 10-36 ರಿಂದ 10-32 ಕಾಲ).
  • ಅಸಾಧಾರಣ ಶಾಖದಿಂದ ಒಳಗೇ ಕುದಿಯತ್ತಿದ್ದ ಅದು ಈ ಛೇದಾಂಶ ಕ್ಷಣದಲ್ಲಿ ಅಸಾಧಾರಣ ವೇಗದಲ್ಲಿ ಶಾಖವನ್ನು ಕಡಿಮೆ ಮಾಡಿಕೊಳ್ಳುತ್ತಾ, ಈ ಸಮಯದಲ್ಲಿ ಸುಮಾರು ಹೆಚ್ಚು ಕಡಿಮೆ ಕೆಲವು ಬಿಲಿಯನ್ ಡಿಗ್ರಿ ಸೆಲ್ಸಿಯಸ್ ಶಾಖಕ್ಕೆ ಇಳಿದಿತ್ತು. ಸೃಷ್ಠಿಯ ಈ ಸಮಯ ವನ್ನು ಉಬ್ಬರ-ಸಮಯ (ಇನ್‌ಫ್ಲೇಶನ್) ವೆಂದು ಕರೆದಿದ್ದಾರೆ (ಸೂರ್ಯನ ಮೇಲ್ಮೈ ಶಾಖ 6000 ಡಿಗ್ರಿ ಸೆಲ್ಸಿಯಸ್.) ಈ ಉಬ್ಬರ ಸಮಯದಲ್ಲಿ ಅಣು, ಪರಮಾಣು, ಕಣಗಳು ಇರಲಿಲ್ಲ. ಆ ಅತಿ ಶಾಖಕ್ಕೆ ಕರಗಿ -ಶಕ್ತಿಯಾಗಿ -ಪುನಃ ಫೋಟೋನ್ ಆಗಿ, ಎಲ್ಲಾ ಕಡೆ ಒಂದೇ ಬಗೆಯ ಅಯಸ್ಕಾಂತೀಯ ಶಕ್ತಿ ಇತ್ತು. ಈ ಸಿದ್ಧಾಂತ ಈಗಾಗಲೇ ಇರುವ ಶಕ್ತಿ ಸಿದ್ಧಾಂತಕ್ಕೆ ಹೊಂದುವುದೆಂದು ವಿಜ್ಞಾನಿಗಳು ಒಪ್ಪಿದ್ದಾರೆ.
  • ಈ ಉಬ್ಬರಸಮಯದಲ್ಲಿ ಒಂದೇ ಆಗಿದ್ದ ಮೂಲ ಪ್ರಕೃತಿ ಶಕ್ತಿಯು, ಇಂದು ಕಾಣುವ ನಾಲ್ಕು ಮೂಲಭೂತ ಶಕ್ತಿ ಗಳಾಗಿ ವಿಭಜನೆಗೊಂಡಿತು. 1 ;ಆಯಸ್ಕಾಂತ ಶಕ್ತಿಮೂಲ(ಫೋರ್ಸ್) (ಕಾಂತ ತ್ವ) (ಗ್ರಾವಿಟೇಶನ್), 2: ವಿದ್ಯತ್ ಕಾಂತೀಯ ತರಂಗ (ಎಲೆಕ್ಟ್ರೋಮೆಗ್ನೇಟಿಸಮ್), 3,4, : ಕಣಭೌತಶಾಸ್ತ್ರದ ಪ್ರಬಲ ಮತ್ತು ದುರ್ಬಲ (ಫೋರ್ಸ್) ಶಕ್ತಿಮೂಲ. ಇದಲ್ಲದೆ ಸ್ವಾಭಾವಿಕವಾಗಿ, ಅಲ್ಪಾಯು-ವಿಕಾಂತತ್ವ ದ (ಆಂಟಿ ಗ್ರ್ಯಾವಿಟಿ) ಉಗಮ. ಇದಕ್ಕೆ ಮಹಾ ಮೂಲ ಸಂಯೋಜನ ಸಿದ್ಧಾಂತ ಎಂದು ಕರೆದಿದ್ದಾರೆ. (ದಿ ಗ್ರ್ಯಾಂಡ್ ಯೂನಿಫಿಕೇಶನ್ ಥಿಯರಿ;(ಜಿ.ಯು.ಟಿ.-ಗಟ್ ಥಿಯರಿ) ಎಂದು ಕರೆದಿದ್ದಾರೆ.)

ಕ್ವಾರ್ಕ್ ಯುಗ  ;-

[ಬದಲಾಯಿಸಿ]

  • ಇದು ೧ ಸೆಕೆಂಡಿನ -೧೨ ಘಾತ ಕಾಲದ ಘಟನೆ; ಈ ಶಾಖದಲ್ಲಿ ಕ್ವಾ ರ್ಕ್ ಗಳು ಮತ್ತು ಆಂಟಿ ಕ್ವಾ ರ್ಕ್ ಗಳು ಹುಟ್ಟಿದವು. ಶಾಖವು ಅತಿಯಾಗಿ ಇದ್ದುದರಿಂದ ಇನ್ನೂ ಪರಮಾಣುಗಳ ರಚನೆ ಯಾಗದೆ ಪ್ಲಾಸ್ಮಾ ಸ್ಥಿತಿಯಲ್ಲಿತ್ತು. ಪ್ರೋಟಾನಿನ ಲ್ಲಿರುವ ಉಪಕಣಗಳನ್ನು ಕ್ವಾರ್ಕ್ ಗಳೆಂದು ಕರೆಯುತ್ತಾರೆ.

ಹ್ಯಾಡ್ರೋನ್ ಯುಗ :-

[ಬದಲಾಯಿಸಿ]

  • ವಿಶ್ವವು ೧ ಸೆಕೆಂಡಿನ ಛೇದಾಂಶ -೧೦ ರಿಂದ -೦ ಸೆಕೆಂಡ್ ಅಥವಾ ೧ ಸೆಕೆಂಡ್ ಪ್ರಾಯವಿದ್ದಾಗ (೧೦-೧೦ನಿಂದ ೧ಸೆ. ) ಜಲಜನಕದ ಪರಮಾಣುವಿನ ಬೀಜಾಣುಗಳಾದ ಪ್ರೋಟಾನುಗಳು ಹುಟ್ಟಿಕೊಂಡವು. ಶಾಖ ಸ್ವಲ್ಪ ಕಡಿಮೆಯಾಗಿ ಕೆಲವೇ ಬಿಲಿಯನ್‌ಗಳಷ್ಟಿತ್ತು. ಇಲೆಕ್ಟ್ರೊದುರ್ಬಲ ಮೂಲಶಕ್ತಿ ಒಡೆದು ಇಬ್ಬಾಗವಾಗಿ (ಇಲೆಕ್ಟ್ರೊವೀಕ್ ಫೋರ್ಸ್) ರೇಡಿಯೋ ಆಕ್ಟಿವಿಟಿ ಮತ್ತು ಇಲೆಕ್ಟ್ರೋಮ್ಯಗ್ನಾಟಿಸಮ್ ಆಯಿತು; ಅವನ್ನು ಅವೇ ನಿಯಂತ್ರಿಸುತ್ತದೆ. ಇದೇ ವೇಗದ ಛೇದಾಂಶ ಕ್ಷಣದಲ್ಲಿ ೧೦ ;-೨ ಘಾತ (೧೦-೨) ಸಮಯಕ್ಕೆ ಬಂದಾಗ ಜಲಜನಕದ ಬೀಜದ ಉತ್ಪತ್ತಿ ಆಗುತ್ತಿದ್ದು, ಸಾರಜನಕದ ಪರಮಾಣುಗಳು ಪರಸ್ಪರ ಘರ್ಷಣೆ ಹೊಂದಿ ನಾಶವಾಗುತ್ತಿದ್ದವು.

(ವಿಶ್ವವು 1 ಸೆಕೆಂಡಿನ ಛೇದಾಂಶ -10 ರಿಂದ -0 ಸೆಕೆಂಡ್ ಅಥವಾ 1 ಸೆಕೆಂಡ್ ಪ್ರಾಯವಿದ್ದಾಗ (10-10ನಿಂದ 1ಸೆ. ) ಜಲಜನಕದ ಪರಮಾಣುವಿನ ಬೀಜಾಣುಗಳಾದ ಪ್ರೋಟಾನುಗಳು ಹುಟ್ಟಿಕೊಂಡವು. ಶಾಖ ಸ್ವಲ್ಪ ಕಡಿಮೆಯಾಗಿ ಕೆಲವೇ ಬಿಲಿಯನ್‌ಗಳಷ್ಟಿತ್ತು. ಇಲೆಕ್ಟ್ರೊದುರ್ಬಲ ಮೂಲಶಕ್ತಿ ಒಡೆದು ಇಬ್ಬಾಗವಾಗಿ (ಇಲೆಕ್ಟ್ರೊವೀಕ್ ಫೋರ್ಸ್) ರೇಡಿಯೋ ಆಕ್ಟಿವಿಟಿ ಮತ್ತು ಇಲೆಕ್ಟ್ರೋಮ್ಯಗ್ನಾಟಿಸಮ್ ಆಯಿತು; ಅವನ್ನು ಅವೇ ನಿಯಂತ್ರಿಸುತ್ತದೆ. ಇದೇ ವೇಗದ ಛೇದಾಂಶ ಕ್ಷಣದಲ್ಲಿ 10 ;-2 ಘಾತ (10-2) ಸಮಯಕ್ಕೆ ಬಂದಾಗ ಜಲಜನಕದ ಬೀಜದ ಉತ್ಪತ್ತಿ ಆಗುತ್ತಿದ್ದು, ಸಾರಜನಕದ ಪರಮಾಣುಗಳು ಪರಸ್ಪರ ಘರ್ಷಣೆ ಹೊಂದಿ ನಾಶವಾಗುತ್ತಿದ್ದವು.)

ಲೆಪ್ಟೋನ್ ಯುಗ :

[ಬದಲಾಯಿಸಿ]

  • ಸೃಷ್ಠಿಯ ಆರಂಭ : ಆಗ ಶಾಖವು ೧೦೦ ಬಿಲಿಯನ್ ಸೆಲ್ಸಿಯಸ್ ಡಿಗ್ರಿಗೆ ತಲುಪಿತ್ತು. ಈಗಿನ ಸೂರ್ಯನ ಕೇಂದ್ರದ ಶಾಖಕ್ಕಿಂತ ೭೦ಪಟ್ಟು ಹೆಚ್ಚು ಶಾಖ ಹೊಂದಿತ್ತು.
  • ಮಹಾಸ್ಪೋಟದ ಸಮಯದಿಂದ ೧ ಸೆಕೆಂಡಿನ ಸಮಯದ ನಂತರದ ೧೦ಸೆಕೆಂಡಿನ ವರೆಗಿನ : ಕ್ರಿಯೆ ಸಾರಜನಕದ (ನ್ಯೂಟ್ರಾನ್) ಮತ್ತು ಪ್ರೋಟಾನ್ ಪರಮಾಣುಗಳ ರಚನೆ ಆರಂಭ . ಆದರೆ ಈಗ ಶಾಖವು ಮತ್ತೂ ಕಡಿಮೆ ಯಾದರೂ , ಪರಮಾಣುಗಳು ಪರಸ್ಪರ ಘರ್ಷಣೆ ಹೊಂದಿ ನಾಶವಾಗುತ್ತಿದ್ದವು.ಲೆಪ್ಟೋನ್ ಮತ್ತು ಆಂಟಿ ಲೆಪ್ಟೋನ್ ಗಳು ತಯಾರಾಗಿ ಪರಸ್ಪರ ನಾಶವಾಗುತ್ತಿದ್ದವು. ಮಹಾಸ್ಪೋಟದ ನಂತರ ಮೊದಲ ಬಾರಿಗೆ ಅಣು ರಚನೆಯ ಸಮನ್ವಯ ಆರಂಭವಾಯಿತು -೧೨ನೇ ಸೆಕೆಂಡಿನ ನಂತರ. ಈಗ ಲೆಪ್ಟೋನ್ ಗಳ ಸಂಖ್ಯೆ ತೀರಾ ಕಡಿಮೆಯಾಗಿ ಫೋಟಾನ್ ಗಳು ಹೆಚ್ಚಿದವು. ಈ ಶಾಖ ಮತ್ತು ತಿಕ್ಕಾಟದಲ್ಲಿ ನಾಶವಾಗದೆ ಕೆಲವು ನ್ಯೂಟ್ರಾನ್ ಗಳು ಕೇಂದ್ರ ಬೀಜದಲ್ಲಿ ಉಳಿದು ಪರಮಾಣುಗಳಿಗೆ ಸ್ಥಿರತೆಯನ್ನು ಕೊಟ್ಟವು. ಹಾಗಾಗಿ ನಾವು ಈ ವಿಶ್ವವನ್ನು ಹೊಂದಲು ಸಾಧ್ಯವಾಗಿದೆ. ಮಹಾಸ್ಪೋಟದಲ್ಲಿ ಕೇಂದ್ರ ಬೀಜದಲ್ಲಿ ಸ್ಥಿರ ಕೇಂದ್ರಗಳಾಗಿ ಕೆಲವೇ ನ್ಯೂಟ್ರಾನುಗಳು ಉಳಿದಿದ್ದೇ ವಿಶೇಷ ಮತ್ತು ಸ್ಥಿರತೆಗೆ ಕಾರಣವಾಗಿದೆ
  • ಮಹಾಸ್ಪೋಟದ ೩ನೇ ನಿಮಿಷದಿಂದ ೨೦ನೇ ನಿಮಿಷದವರೆಗೆ ಹೀಲಿಯಂ ಪರಮಾಣುಗಳು ರಚನೆಯಾದವು.

ಫೋಟಾನ್ ಯುಗ :-

[ಬದಲಾಯಿಸಿ]

  • ಆರಂಭದಿಂದ ೩ ರಿಂದ ೨೦ ಸೆಕೆಂಡಿನ ನಂತರ ತಣ್ಣಗಾಗುತ್ತಾ ಹೀಲಿಯಮ್ ಅಣುಗಳರಚನೆ ಸಾಧ್ಯವಾಯಿತು. ತಲುಪಿತ್ತು. ೧೦ಸೆಕೆಂಡಿನ ನಂತರ- ಈಗ ಸೂರ್ಯನ ಒಳಗಿನ ಕ್ರಿಯೆಯಂತೆ ಪರಮಾಣು ಸಂಯೋಜನ - ವಿದಳನ ಕ್ರಿಯೆ (ಫ್ಯೂಜನ್) ಆರಂಭವಾಗಿ ಪ್ರೋಟಾನು-ನ್ಯೂಟ್ರಾನು ಬೀಜವುಳ್ಳ (ಡಿಯಾಟರಿಯಮ್ -ಭಾರ ಜಲಜನಕ ವಸ್ತು ಗಳ ರಚನೆ ಆರಂಭವಾಯಿತು. ಈಗ ವಿಶ್ವ , ಈಗಿನ ಸೂರ್ಯನ ಕೇಂದ್ರದ ಶಾಖಕ್ಕಿಂತ ೫೦ ಕ್ಕಿಂತ ಹೆಚ್ಚು ಪಟ್ಟು ಹೆಚ್ಚು ಶಾಖ ಹೊಂದಿತ್ತು. ಆದರೆ ಸಾಂದ್ರತೆ ಈಗನ ನೀರಿನ ಸಾಂದ್ರತೆಗಿಂತ ಎರಡು ಮೂರು ಲಕ್ಷದಷ್ಟಿತ್ತು. ವಿಶ್ವವು ಹಿಗ್ಗುತ್ತಾ ದೊಡ್ಡದಾಗತ್ತಾ ಹೋದಂತೆಲ್ಲಾ ಶಾಖವೂ ಕಡಿಮೆಯಾಗಿ ಸ್ಥಿರವಾದ ಹೀಲಿಯಂ ಮತ್ತು ಪ್ರೋಟಾನ್ ನ್ಯೂಟ್ರಾನ್ ಗಳು ಹೆಚ್ಚಿದವು.
  • ಸೃಷ್ಠಿಯಾಗಿ ೪ ನಿಮಿಷಗಳ ನಂತರ ಪರಮಾಣು ಪ್ರಕ್ರಿಯೆ ಆರಂಭವಾಗಿ, ಪ್ರೋಟಾನುಗಳು (ಜಲಜನಕದ ಬೀಜ) ಮತ್ತು ಡಿಯಾಟರಿಯಮ್ ಬೀಜಗಳು ಹೀಲಿಯಮ್ (೨ ಪ್ರೋಟಾನು ಮತ್ತು ೨ ನ್ಯೂಟ್ರಾನ್ ಗಳುಳ್ಳದ್ದು) ಗಳು ಬೆಳಕಿನ ಸೆಲೆಯೊಂದಿಗೆ (ನ್ಯೂಕ್ಲಿಯೊಸಿಂಥೆಸಿಸ್) ರಚನೆಯಾದವು. ಹೀಗೆ ಕೇವಲ ಸ್ವಲ್ಪ ಭಾಗ ಮಾತ್ರ ಹೀಲಿಯಮ್ ಆದವು, ಕಾರಣ ಸ್ಥಿರ ಪರಮಾಣು ರಚನೆಯಾಗಲು ಇನ್ನೂ ಅತಿಯಾದ ಶಾಖವಿತ್ತು. ನಂತರ ಶಾಖವು ಕಡಿಮೆಯಾದಂತೆ ಪರಮಾಣು ಕೇಂದ್ರ ಸಂಯೋಜನೆ (ನ್ಯೂಕ್ಲಿಯೋ ಸಿಂಥೆಸಿಸ್) ಆಗಿದ್ದರಿಂದ ನ್ಯೂಟ್ರಾನ್ ಗಳು ಹೀಲಿಯಂನ ಕೇಂದ್ರ ದಲ್ಲಿ ಸೇರಿ ಮೊದಲಿನಂತೆ ಫೂಶನ್ ಕ್ರಿಯೆ ನೆಡೆಯವುದು ನಿಂತಿತು.

ಜಲಜನಕ ಹೀಲಿಯಮ್ ಅಣುಗಳು ಜೊತೆ ಜೊತೆಯಾಗಿ ಇದ್ದವು. ಇಲೆಕ್ಟ್ರಾನುಗಳು ಋಣ ವಿದ್ಯುತ್ ಹೊಂದಿ ಸ್ವತಂತ್ರವಾಗಿ ಸಂಚರಿಸುತ್ತಿದ್ದವು. ಈಗ ವಸ್ತುವು ಪ್ಲಾಸ್ಮಾ ಸ್ಥಿತಿಯಲ್ಲಿತ್ತು ; ಇದು ಈಗ ಸೂರ್ಯನ ಗರ್ಭದಲ್ಲಿರವ ವಸ್ತುವಿನ ಸ್ಥಿತಿ. ಈ ರಚನೆ ಪುನರ್ ರಚನೆ ಗಳು ೧೦೦೦ ವರ್ಷಗಳವರೆಗೆ ನಡೆದು ವಿಶ್ವವು ಸ್ವಲ್ಪ ಸ್ವಲ್ಪ ತಣ್ಣಗಾದಂತೆ ೭೦,೦೦೦ವರ್ಷಗಳಾದಾಗ ವಸ್ತು ನಿಮಾಣ ಆರಂಭವಾಯಿತು. (ಕಾಲ ಸೂಚಿ- ವಿಕಿಪೀಡಿಯಾ)

ಪುನರ್ ಸಂಯೋಜನೆ (೩೭೯೦೦೦ವರ್ಷ)

[ಬದಲಾಯಿಸಿ]

.♣.♣.ನಮ್ಮವಿಶ್ವದ ಫೋಟೋ♣.♣.: ಈ ಕೆಳಗಿನ ಕೋಳಿ ಮೊಟ್ಟೆ ಆಕಾರದ ವಿಶ್ವದ ಚಿತ್ರ ಕೇವಲ ಕಲ್ಪನೆ ಅಲ್ಲ. ಅದು 10 ಲಕ್ಷ ಮೀಟರಿಗೂ ಹೆಚ್ಚುದೂರ ಭೂಮಿಯಿಂದ ಕಳಿಸಿರುವ ಉಪಗ್ರಹದಿಂದ ಅತ್ಯಂತ ಪ್ರಬಲ ದೂರದರ್ಶಕ (ಟೆಲಿಸ್ಕೋಪ್‘) ದಿಂದ ತೆಗೆದ ಫೋಟೊ. ಆ ಟೆಲಿಸ್ಕೋಪು ಸುತ್ತಲೂ ತಿರುಗುತ್ತಾ ಆಕಾಶದ ಚಿತ್ರವನ್ನು ತೆಳವಾದ ಹಾಳೆ-ಹಾಳೆಯಾಗಿ(slice by slice- ತಾಳೆ ಹೊಡೆದಂತೆ) ತೆಗೆದುದು. ಯೂರೋಪಿನ ವಿಜ್ಞಾನಿಗಳು ಅದನ್ನು ಅದೇ ಕ್ರಮದಲ್ಲಿ --2010 ಜುಲೈ ಮೊದಲ ವಾರದಲ್ಲಿ ಜತನದಿಂದ ಜೋಡಿಸಿದ್ದಾರೆ . ಈ ವಿಶ್ವ ನಮ್ಮ ಮನಸ್ಸಿನ ಕಲ್ಪನೆಯ ಅಳತೆಗೆ ಮೀರಿದ್ದು. ಅದಕ್ಕೆ ಹೊರಗಡೆ-ಎಂಬುದಿಲ್ಲ. ಆಕಾಶವನ್ನೂ (ಸ್ಪೇಸ್‘), ಕಾಲವನ್ನೂ ಅದೇ ಉಂಟು ಮಾಡಿಕೊಳ್ಳವುದು. ಅಲ್ಲದೆ ಅದು ಹಿಗ್ಗುತ್ತಿದೆ.ಇದರಲ್ಲಿ ೧೦/10 ಬಿಲಿಯನ್ ಜ್ಯೋತಿರ್`ವರ್ಷ ದೂರದಲ್ಲಿರವ ಈ ಸೂರ್ಯಮಂಡಲವಿರುವ ನಮ್ಮ ಆಕಾಶಗಂಗೆಗೂ ದೊಡ್ಡ ನೀಹಾರಿಕೆ (ನಕ್ಷತ್ರ ಲೋಕ) ಇದೆ. ನಾವು ಅದರಲ್ಲಿ (ಈ ವಿಶ್ವದಲ್ಲಿ) ಗುರುತಿಲಾಗದಷ್ಟು ಚಿಕ್ಕ -ಸೂಕ್ಷ್ಮಾತಿ ಸೂಕ್ಷ್ಮ ದೂಳಿನ ಕಣ. !! 2010

", 18/07/2010 TOI

ಇದು ನಮ್ಮಪಾರದರ್ಶಕ ಪೂರ್ಣವಿಶ್ವ --ಪುನರ್ ಸಂಯೋಜನೆ (೩೭೯೦೦೦ವರ್ಷ):ವಿಶ್ವವು ವಿಸ್ತಾರವಾಗಿ ವಿಕಾಸವಾದಂತೆ ತಣ್ಣಗಾಗುತ್ತಾ ೬೦೦೦ ಡಿ. ಸೆ. ಈ ಶಾಖದಲ್ಲಿ ಅಣುರಚನೆಯಾಗಿ ಪರಮಾಣು ಬೀಜಗಳು ಇಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ಶಾಖವು ಕಡಿಮೆ ಯಾದಂತೆ ತಟಸ್ತ ಅಣುಗಳ ರಚನೆ ಅಧಿಕವಾಗಿ ಫೋಟಾನುಗಳು ತಡೆಯಿಲ್ಲದೆ ಸಂಚರಿಸಬಹುದಾಯಿತು.ಇದರಿಂದ ಇಡೀ ವಿಶ್ವವು ಮೊಟ್ಟ ಮೊದಲ ಬಾರಿಗೆ ಪಾರದರ್ಶಕವಾಯಿತು. ಇದರಿಂದಲೇ ನಂತರ (ಈಗ) 'ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ಚಿತ್ರ'ವನ್ನು (ಸಿಬಿಎಮ್) -ವಿಶ್ವದ ಚಿತ್ರವನ್ನು ತೆಗೆಯಲು ಸಾದ್ಯವಾಗಿದೆ.ಈ ಚಿತ್ರ ಅದೇ ರೀತಿ ತೆಗೆದದ್ದು.- ದೊಡ್ಡ ಚಿತ್ರಕ್ಕೆ ಅದರ ಮೇಲೆ ಕ್ಲಿಕ್`ಮಾಡಿ
  • ವಿಶ್ವವು ವಿಸ್ತಾರವಾಗಿ ವಿಕಾಸವಾದಂತೆ ಈ ಪ್ರಕ್ರಿಯೆ ಮುಂದಿನ ೩,೦೦,೦೦೦ ವರ್ಷ ನಡೆಯಿತು. ವಿಶ್ವ ಉಬ್ಬುತ್ತಾ ವಿಶಾಲವಾಗುತ್ತಾ ತಣ್ಣಗಾಗುತ್ತಾ ಇಂದಿನ ಸೂರ್ಯನ ಮೇಲಮೈ ಶಾಖಕ್ಕೆ ಎಂದರೆ ೬೦೦೦ ಡಿ. ಸೆ. ಈ ಶಾಖದಲ್ಲಿ ಅಣುರಚನೆ ಸಾಧ್ಯ ವಾಯಿತು. ಪರಮಾಣು ಬೀಜಗಳು ಇಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ವಿಶ್ವದ ಸಾಂದ್ರತೆ ಮತ್ತು ಶಾಖ ಗಣನೀಯವಾಗಿ ಕಡಿಮೆಯಾಯಿತು. ಶಾಕವು ಕಡಿಮೆ ಯಾದಂತೆ ತಟಸ್ತ ಅಣುಗಳ ರಚನೆ ಅಧಿಕವಾಗಿ ಫೋಟಾನುಗಳು (ಫೋಟಾನ್‌ಗಳ ಸರಾಸರಿ ದೂರ ಕ್ರಮಿಸುವಿಕೆ -ಬೆಳಕಿನ ಕಿರಣಗಳು) ತಡೆಯಿಲ್ಲದೆ ಸಂಚರಿಸಬಹುದಾಯಿತು.
  • ಇದರಿಂದ ಇಡೀ ವಿಶ್ವವು ಮೊಟ್ಟ ಮೊದಲ ಬಾರಿಗೆ ಪಾರದರ್ಶಕವಾಯಿತು.
  • ಇದರಿಂದಲೇ ನಂತರ (ಈಗ) 'ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ಚಿತ್ರ'ವನ್ನು (ಸಿಬಿಎಮ್) -ವಿಶ್ವದ ಚಿತ್ರವನ್ನು ತೆಗೆಯಲು ಸಾದ್ಯವಾಗಿದೆ.
  • ನ್ಯೂಟ್ರಾನ್ ಗಳು ಕೇಂದ್ರ ಬೀಜದಲ್ಲಿ ಉಳಿದು ಪರಮಾಣುಗಳಿಗೆ ಸ್ಥಿರತೆಯನ್ನು ಕೊಟ್ಟವು. ಹಾಗಾಗಿ ಈ ವಿಶ್ವವು ಸ್ಥಿರತೆಯನ್ನು ಹೊಂದಿತು.. *ಮಹಾಸ್ಪೋಟದಲ್ಲಿ ಕೇಂದ್ರ ಬೀಜದಲ್ಲಿ ಸ್ಥಿರ ಕೇಂದ್ರಗಳಾಗಿ ಕೆಲವೇ ನ್ಯೂಟ್ರಾನುಗಳು ಉಳಿದಿದ್ದೇ ವಿಶೇಷ ; ಮತ್ತು ಅದು ವಿಶ್ವದ ಇಂದಿನ ಸ್ಥಿರತೆಗೆ ಕಾರಣವಾಗಿದೆ.

ಕತ್ತಲೆಯ ಯುಗ :

[ಬದಲಾಯಿಸಿ]

  • ಕತ್ತಲೆಯ ಯುಗ : ವಿಶ್ವ ವಿಕಾಸ ಆರಂಭವಾಗಿ ೧೦ ಲಕ್ಷ ವರ್ಷ :
  • ವಿಶ್ವವು ಸುಮಾರು ೧೦(10) ಲಕ್ಷ ವರ್ಷದ ವರೆಗೆ ಫೋಟಾನ್ ಎಲೆಕ್ಟ್ರಾನ್ ಗಳ ಪರಸ್ಪರ ಸಂಯೋಜನೆ ಮತ್ತು ಅತಿ ಶಾಖದ ಪರಿಣಾಮವಾಗಿ ಪ್ಲಾಸ್ಮಾ ಸ್ಥಿತಿಯಲ್ಲಿತ್ತು. ಅದು ದಟ್ಟ ಹೊಗೆ ರೂಪದಲ್ಲಿದ್ದು ಅಪಾರದರ್ಶಕವಾಗಿತ್ತು . ಫೋಟಾನ್ ಗಳು ಬಿಡುಗಡೆಹೊಂದಿ ಸ್ತಿರ ಜಲಜನಕ (ಹ್ಶೆಡ್ರೋಜನ್) ಪರಮಾಣುಗಳು ಸ್ಥಿರತೆಗೆ ಬಂದಮೇಲೆ ಫೋಟಾನ್ ಗಳು ಸ್ವತಂತ್ರವಾಗಿ ಚಲಿಸಿ ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ರೇಡಿಯೇಶನ್ ಆದ ನಂತರ ವಿಸ್ವವು ಪಾರದರ್ಶಕವಾಯಿತೆಂದು ಊಹಿಸಿದ್ದಾರೆ. ಇದರಿಂದ ನಾವು ದೂರದ ನಕ್ಷತ್ರಗಳನ್ನೂ ನೀಹಾರಿಕೆಗಳನ್ನೂ (ಗ್ಯಾಲಾಕ್ಷಿಗಳನ್ನೂ) ನೋಡುವಂತಾಯಿತು. ಇತ್ತೀಚಿಗೆ ೨೦೧೧ ರಲ್ಲಿ ೧೩ ( 13) ಬಿಲಿಯನ್ ಬೆಳಕಿನ ವರ್ಷದ ದೂರದಲ್ಲಿರುವ ಅಥವಾ ೧೩ ಬಿಲಿಯನ್ (೧೩೦೦ಕೋಟಿ) ವರ್ಷದ ಹಿಂದಿನ ನೀಹಾರಿಕೆ ಯನ್ನು ಗುರುತಿಸಲಾಗಿದೆ.

ನೀಹಾರಿಕೆಗಳ ಆರಂಭ ಮತ್ತು ರಚನೆ :

[ಬದಲಾಯಿಸಿ]

  • ನೀಹಾರಿಕೆಗಳ (ನಕ್ಷತ್ರಗಳ ಲೋಕ , ಬ್ರಹ್ಮಾಂಡ - ಗ್ಯಾಲಾಕ್ಷಿ) ಆರಂಭದ ಹಂತದಲ್ಲಿ ಅದರ ಕೇಂದ್ರವು ಅತ್ಯಂತ ಪ್ರಕಾಶಮಾನವಾಗಿದ್ದು ಅವಗಳನ್ನು ಕ್ವಾಸಾರ್ ಗಳೆಂದು ಕರೆದಿದ್ದಾರೆ. ಅವು ದೂರದಿಂದ ನಕ್ಷತ್ರದಂತೆಯೇ ಕಾಣುತ್ತವೆ. ಆರಂಭದ ಲ್ಲಿ ಅಯೋನ್ ಗಳ ಪುನರ್ ಸಂಯೋಜನೆಯ ನಂತರ ಕ್ವಾಸಾರ್ ಗಳು ಮತ್ತು ಅದರಿಂದ ನಕ್ಷತ್ರಗಳು ಆಗಿರಬೇಕೆಂದು ಊಹಿಸಿದ್ದಾರೆ. ಇದು ವಿಕಾಸ ಆರಂಭದಿಂದ ಸುಮಾರು 150 ಮಿಲಿಯನ್ ವರ್ಷದಿಂದ ಒಂದು ಬಿಲಿಯನ್ ವರ್ಷದ ಅವಧಿಯಲ್ಲಿ ಮೂರನೆ ದರ್ಜೆಯ ತಾರೆಗಳು ಉಂಟಾಗಿರಬೇಕೆಂದು ನಿರ್ಧರಿಸಲಾಗಿದೆ (ಟೈಮ್ ಲೈನ್ ಆಫ್ ದ ಬಿಗ ಬ್ಯಾಂಗ್ - ವಿಕಿ ನೋಡಿ) . ದೊಡ್ಡ ಪ್ರಮಾಣದಲ್ಲಿ ವಸ್ತು ಸಂಕುಚಿತಗೊಂಡು ಎರಡನೇ ದರ್ಜೆಯ ತಾರೆಗಳು ನಂತರ ಮೊದಲ ದರ್ಜೆ ತಾರೆಗಳು ಹ್ಮಟ್ಟಿದವು. ಜೊಹನ್ನೆಸನ್ ಶೆಡ್ಲರನ ಇತ್ತೀಚಿನ ಪ್ರಾಜೆಕ್ಟ್ ನಲ್ಲಿ 12.7 ಬಿಲಿಯನ್ ಬೆಳಕಿನ ವರ್ಷದ ದೂರದಲ್ಲಿ ಒಂದು ಮರಿ-ನೀಹಾರಿಕೆಯನ್ನು ಗುರುತಿಸಲಾಗಿದೆ. ಅದು ರಚನೆ ಆದಾಗ ವಿಶ್ವಕ್ಕೆ ಇನ್ನೂ 7% ವಯಸ್ಸಾಗಿತ್ತು. ಆರಂಭದಲ್ಲಿ ಜಲಜನಕ ಅಣುಗಳು ಹೀಲಿಯಮ್ ಮತ್ತು ಕೃಷ್ಣ ದ್ರವ್ಯ ಗಳಾದ ಮೂಲವಸ್ತುಗಳು ತಣ್ಣಗಾದಂತೆಲ್ಲಾ ಸಾಂದ್ರತೆಯವನ್ನು ಹೊಂದಿ ಒಟ್ಟು ಸೇರುತ್ತಾ ಆರಂಭಿಕ ಹಂತದ ನೀಹಾರಿಕೆಗಳಾದವು ಅಥವಾ ನೀಹಾರಿಕೆಗಳ ಬೀಜಗಳಾದವು (ಕ್ವಾಸಾರ್).
  • 2007ರಲ್ಲಿ ಕ್ಯಾಲಿಫೋರ್ನಿಯಾ ಯೂನಿವೆರ್ಸಿಟಿಯ ಒಂದು ವಿಜ್ಞಾನಿಗಳ ತಂಡ ಕೆಕ್ ದೂರದರ್ಶಕವನ್ನು ಬಳಸಿ ಅತ್ಯಂತ ದೂರದಲ್ಲಿರುವ ಒಂದು ನೀಹಾರಿಕೆ (ಆಕಾಶಗಂಗೆ) ಯನ್ನು ಗುರುತಿಸಿತು. ಅದು ನಮ್ಮ ವಿಶ್ವವು ಇನ್ನೂ 480 ಅಥವಾ 500 ಮಿಲಿಯನ್ (50ಕೋಟಿ) ವರ್ಷ ವಯಸ್ಸಾದಾಗ ರಚನೆಯಾದ ನೀಹಾರಿಕೆ. ಅದು ನಮ್ಮಿಂದ 13 ಬಿಲಿಯನ್ (1300ಕೋಟಿ) ಬೆಳಕಿನ ವರ್ಷಗಳ ದೂರದಲ್ಲಿದೆ. ಅಂದರೆ ಅಂದು (1300 ಕೋಟಿ ವರ್ಷಗಳ ಹಿಂದೆ) ಅಲ್ಲಿಂದ ಹೊರಟ ಬೆಳಕು ಈಗ ನಮಗೆ ತಲುಪಿದೆ.ಈ 1300 ಕೋಟಿವರ್ಷಗಳಲ್ಲಿ ಅದು ಹಿಗ್ಗಿ ಇನ್ನೂ ಬಹಳ ದೊಡ್ಡದಾಗಿರಬೇಕು.
  • ಈ ನೀಹಾರಿಕೆಗಳು (ಗ್ಯಾಲಾಕ್ಷಿ) ಈ ವಿಶ್ವದಲ್ಲಿ ಪರಸ್ಪರ ಒಂದುವ್ಯವಸ್ಥಿತ ರೀತಿಯಲ್ಲಿ ಜೇಡರಬಲೆಯಲ್ಲಿ ಹೆಣೆದುಕೊಂಡಂತೆ ಹರಡಿಕೊಂಡಿವೆ. ಅವು ನಾನಾ ಆಕಾರಗಳಲ್ಲಿ ರಚನೆಯಾಗಿವೆ. ಚಪ್ಪಟೆ ಬನ್ನಿನ ಆಕಾರ, ಸುರುಳಿಯಾಕೃತಿ, ದಂಡಾಕೃತಿ ಇತ್ಯಾದಿ. ಇವು ಹೆಚ್ಚಾಗಿ ಕೃಷ್ಣ ದ್ರವ್ಯ ದಿಂದ ವಸ್ತುವನ್ನು ಪಡೆದು ಹುಟ್ಟಿರಬೇಕೆಂದು ಊಹಿಸಿದ್ದಾರೆ.
  • ಈ ವಿಶ್ವದಲ್ಲಿ ಸುಮಾರು 200 ಬಿಲಿಯನ್ (20,000 ಕೋಟಿ ನೀಹಾರಿಕೆ) ಬ್ರಹ್ಮಾಂಡಗ ಳಿವೆ ಎಂದು ಹಬಲ್ ನ ಹೇಳಿಕೆ.. ಒಂದು ನೀಹಾರಿಕೆ ಅಥವಾ ನಕ್ಷತ್ರ ಲೋಕದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ಅವುಗಳ ವಿವಿಧ ಗಾತ್ರಕ್ಕೆ ಅನುಗುಣವಾಗಿ, ಒಂದು ಕೋಟಿ ನಕ್ಷತ್ರ (ತಾರೆ) ಗಳಿಂದ 100 ಕೋಟಿ ತಾರೆಗಳವರೆಗೂ ಇವೆ ಎಂದು ಊಹಿಸಿದ್ದಾರೆ. ನಮ್ಮ ಭೂಮಿಗೆ ಅತ್ಯಂತ ಹತ್ತಿರದ ನೀಹಾರಿಕೆ ಆಂಡ್ರೋಮೀಡಾ ನಮ್ಮಿಂದ 2.6 ಮಿಲಿಯನ್ ಬೆಳಕಿನ ವರ್ಷದ ದೂರದಲ್ಲಿದೆ, (ಬೆಳಕು 1 ಸೆಕೆಂಡಿಗೆ ಸು. 300000 ಕಿ.ಮೀ.ದೂರ ಹೋದರೆ ಒಂದು ವರ್ಷದಲ್ಲಿ ಬೆಳಕು ಕ್ರಮಿಸುವ ದೂರವು :1 ಬೆಳಕಿನವರ್ಷ ಅಥವಾ ಜ್ಯೋತಿರ್ ವರ್ಷ ; ಖಗೋಲ ದೂರ ಅಳತೆಯ ಮಾನ) ನಮ್ಮ ಆಕಾಶಗಂಗೆ ಎಂದು ಕರೆಯಲ್ಪಡುವ ನೀಹಾರಿಕೆ ಅಥವಾ ಬ್ರಹಾಂಡ ಮತ್ತು ಈ ಆಂಡ್ರೋಮೀಡಾ ವೇಗವಾಗಿ ಹತ್ತಿರ ಹತ್ತಿರ ಬರುತ್ತಿವೆ ; ಅವು ಸೇರಿ ಘರ್ಷಣೆ ಹೊಂದಿ ಬೇರೆಯಗಿ ಮತ್ತೆ ಘರ್ಷಣೆ ಹೊಂದಿ ಒಂದಾಗುವ ಲಕ್ಷಣಗಳಿವೆ ಎಂದು ತರ್ಕಿಸಿದ್ದಾರೆ. ಆದರೆ ಆ ಕಾಲ ಬಹಳ ದೂರವಿದೆ. ಈ ಆಂಡ್ರೋಮೀಡಾ ಗ್ಯಲಾಕ್ಷಿಯಲ್ಲಿ 1 ಟ್ರಿಲಿಯನ್ (1 ಲಕ್ಷ ಕೋಟಿ)ತಾರೆಗಳಿವೆ ಎಂದು ಊಹೆ (ಅಂದಾಜು) ಮಾಡಿದ್ದಾರೆ. ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯಲ್ಲಿ 200 ಬಿಲಿಯನ್ ನಿಂದ 400 ಬಿಲಿಯನ್ ತಾರೆಗಳಿರಬೇಕೆಂದು ಊಹಿಸಿದ್ದಾರೆ.

ನಮ್ಮ ಆಕಾಶಗಂಗೆ :

[ಬದಲಾಯಿಸಿ]

  • ವಿಜ್ಙಾನಿ ಎಡ್ವಿನ್ ಹಬಲ್ ನು ಈ ವಿಶ್ವದಲ್ಲಿರುವ ಸುಮಾರು 200 ಬಿಲಿಯನ್ (20,000 ಕೋಟಿ ನೀಹಾರಿಕೆ) ಬ್ರಹ್ಮಾಂಡಗಳಲ್ಲಿ ನಮ್ಮ ಆಕಾಶಗಂಗೆ ಯೂ ಒಂದು ಎಂದು ತೋರಿಸಿಕೊಟ್ಟನು. ಈ ನಮ್ಮ ಆಕಾಶಗಂಗೆಗೆ ಸುಮಾರು 13.2 ಬಿಲಿಯನ್ ವರ್ಷ ವಯಸ್ಸಾಗಿದೆ; ವಿಶ್ವದ ವಯಸ್ಸಿನ ಹತ್ತಿರದ ವಯಸ್ಸು. ಅದು ಹತ್ತಿರದ ನೀಹಾರಿಕೆ ಆಂಡ್ರೋಮೀಡಾದ ಒಂದು ಉಪ-ಬ್ರಹ್ಮಾಂಡ. ಇದು ಉದ್ದನೆಯ ಸುರಳಿ ನೀಹಾರಿಕೆ. ಇದರ ವ್ಯಾಸ 1,00,000 -1,20,000 ಬೆಳಕಿನ ವರ್ಷ. ಇದರಲ್ಲಿ 200 ರಿಂದ 400 ಬಿಲಿಯನ್ ತಾರೆಗಳಿವೆ. 15 ರಿಂದ 50 ಮಿಲಿಯನ್ ವರ್ಷಗಳಲ್ಲಿ ತಿರುಗುತ್ತಿದೆ ( ತನ್ನನ್ನೇ ತಾನು ಸುತ್ತುತ್ತಿದೆ). ಇಡೀ ಬ್ರಹ್ಮಾಂಡ 1 ಸೆಕೆಂಡಿಗೆ 552 ರಿಂದ 630 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ ಬೇರೆ ಕೇಂದ್ರವನ್ನು ಸುತ್ತುತ್ತಿದೆ. ಇದರ ವಸ್ತುರಾಶಿ ಹೆಚ್ಚಾಗಿ ಕ್ರಷ್ಣದ್ರವ್ಯ ದ ಭಾಗವಾಗಿದೆ. ಈ ಕೃಷ್ಣದ್ರವ್ಯವು ಇದರ ಕೇಂದ್ರದಿಂದ ಸಾಪೇಕ್ಷವಾಗಿ ಸಮಾನ ರೀತಿಯಲ್ಲಿ ಹರಡಿಕೊಂಡು ಇದರ ಹೊರಗೂ 100 ಕಿಲೋ ಪರ್ ಸೆಕೆಂಡ್ಸ್ ವರೆಗೂ ಇದೆ. ಇದರ (ನಮ್ಮ ಆಕಾಶ ಗಂಗೆಯ) ದಪ್ಪ (ಆಳ ) ಸುಮಾರು 70,000 ದಿಂದ 1,00,000 ಬೆಳಕಿನ ವರ್ಷದಷ್ಟಿದೆ.

ಕೃಷ್ಣ ದ್ರವ್ಯ :

[ಬದಲಾಯಿಸಿ]

  • ಕತ್ತಲೆ ವಸ್ತು : ಅಗೋಚರ ಶಕ್ತಿ, (ತಮೋಲೋಕ/ ತಮಸ್ಸು?)
  • ಪುರುಷ ಸೂಕ್ತದ ಕೆಳಗಿನ ಸಾಲುಗಳನ್ನು ನೋಡಿ.
  • ಓಂ ಸಹಸ್ರಶೀರ್ಷಾ ಪುರುಷಃ| ಸಹಸ್ರಾಕ್ಷಃ ಸಹಸ್ರಪಾತ್| ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಟದ್ದಶಾಂಗುಲಮ್ || ೧ ||
  • ಏತಾವಾನಸ್ಯ ಮಹಿಮಾ | ಅತೋಜ್ಯಾಯಾಂಗ್‌ಶ್ಚ ಪೂರುಷಃ |ಪಾದೋಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾಮೃತಂ ದಿವಿ ||೩||
  • ಅದು (ಪುರುಷ ಎನ್ನುವ ವಸ್ತು) ವಿಶ್ವವನ್ನು ಆವರಿಸಿ ಅದಕ್ಕಿಂತ ಹೆಚ್ಚಾಗಿ ಇದೆ (೧೦ ಅಂಗುಲದಷ್ಟು ಎನ್ನುವುದು ಕೇವಲ ಉಪಚಾರಕ್ಕಾಗಿ) . ಒಂದು ಪಾದದಷ್ಟು ಎಂದರೆ ಸ್ವಲ್ಪ ಭಾಗ ಕಣ್ಣಿಗೆ ಕಾಣುವ ಈ ವಿಶ್ವ ವಾಗಿದೆ - ಅದರ ಮುಪ್ಪಟ್ಟು ಎಂದರೆ ಬಹಳ ಹೆಚ್ಚು ಭಾಗ ಕಣ್ಣಿಗೆ ಕಾಣದ ವಿಶ್ವದ ಭಾಗ (ಅಮೃತಂ ದಿವಿ) ವಿಶ್ವ ರಚನೆಯಲ್ಲಿ ಈ ಕೃಷ್ಣ ದ್ರವ್ಯ ವಿಜ್ಞಾನದ ಕಣ್ಣಿಗೆ ಕಾಣದ ಅಗೋಚರ ಭಾಗ.
  • ಪರಮಾಣುಗಳು ಮತ್ತು ರೇಡಿಯೇಶನ್ ಅಲ್ಲದೆ ಈ ವಿಶ್ವದಲ್ಲಿ ನಕ್ಷತ್ರ ನೀಹಾರಿಕೆಗಳ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಮತ್ತೊಂದು ನಿಗೂಢ ವಸ್ತು ಮಹಾಸ್ಪೋಟ ಸಮಯದಲ್ಲಿ ಇದ್ದಿರಬೇಕೆಂದು ತರ್ಕಿಸಿದ್ದಾರೆ. ಕಾರಣ, ವಿಶ್ವದಲ್ಲಿರುವ ಅನೇಕ ನೀಹಾರಿಕೆ ನಕ್ಷತ್ರ ಪುಂಜಗಳ ರಚನೆಯಲ್ಲಿ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಶಕ್ತಿ-ವಸ್ತು -ದ್ರವ್ಯ ಅಡಗಿದೆ ಎಂದು ಖಗೋಳವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
  • ಗ್ಯಾಲಾಕ್ಸಿ ಅಥವಾ ನೀಹಾರಿಕೆ, ನಕ್ಷತ್ರ ಪುಂಜ, ದೂರದ ಹಳೆಯ ನಕ್ಷತ್ರ ಗಳನ್ನು ಅವುಗಳ ಹೆಚ್ಚಿನ ದ್ರವ್ಯ-ರಾಶಿಯನ್ನು ಯಾವುದೋ ಅಯಸ್ಕಾಂತೀಯ ಶಕ್ತಿ ವಿಶ್ವ ಹಿಗ್ಗತ್ತಿರವುದನ್ನು ಜಗ್ಗಿ ಜಗ್ಗಿ ಹಿಡಿಯುತ್ತಿರುವುದನ್ನು ಗಮನಿಸಿದ್ದಾರೆ. ಗೊತ್ತಿಲ್ಲದ ಕಡೆಯಿಂದ ಅಯಸ್ಕಾಂತೀಯ ಕಿರಣಗಳು ಬರುತ್ತಿರುವುದನ್ನು ಗಮನಿಸಿದ್ದಾರೆ.
  • ಈ ದ್ರವ್ಯ ಹೊರಗೆ ನಮಗೆ ಕಾಣ ಸಿಗುತ್ತಿರುವ ವಸ್ತು -ರಾಶಿ, ಶಕ್ತಿಸಂಚಯಕ್ಕಿಂತ ಎಷ್ಟೋ ಪಾಲು ಹೆಚ್ಚಿನದೆಂದು ಅಂದಾಜು ಮಾಡಿದ್ದಾರೆ, ಅದು, ನಮಗೆ ಕಾಣುವ, ಲೆಕ್ಕಕ್ಕೆ ಸಿಗುವ ವಿಶ್ವದ ಒಟ್ಟು ದ್ರವ್ಯ-ರಾಶಿಗಿಂತ ಹೆಚ್ಚಿನ ದ್ರವ್ಯ-ರಾಶಿ ಹೊಂದಿದೆ (೫೦೦ ಪಟ್ಟು ಹೆಚ್ಚು ಎಂದು ಲೆಕ್ಕ ಹಾಕಿದ್ದಾನೆ- ಪ್ರಿಟ್ಜ್ ಜ್ವಿಕ್ಕಿ, ಸ್ವಿಟ್ಜರ್‌ಲೆಚಿಡಿನ ಖಭೌತ ವಿಜ್ಞಾನಿ , ಬ್ರಹ್ಮಾಂಡಗಳ ತಜ್ಞ.) ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇತ್ತೀಚಿನ ಸಂಶೋಧನೆಯಂತೆ , ವಿಶ್ವದ ವಿಕಾಸದ ಪ್ರಾರಂಭದಲ್ಲಿ ೬೩% ಇದ್ದಿರಬೇಕೆಂದು ತೀರ್ಮಾನಿಸಿದ್ದಾರೆ. ಅದೇ ಕೃಷ್ಣ ದ್ರವ್ಯ ಈಗ ೯೫% ಇರಬೇಕೆಂದೂ ಅದರಲ್ಲಿ ೭೨% ಶಕ್ತಿ ರೂಪ ಮತ್ತು ೨೩% ವಸ್ತು ರೂಪ ವೆಂದು ತರ್ಕಿಸಿದ್ದಾರೆ. (ವಿಕಿಪೀಡಿಯಾ ಇಂಗ್ಲಿಷ್, ಡಾರ್ಕಮ್ಯಾಟರ್ ನೋಡಿ) ಅದೇ ಡಾರ್ಕ್ ಮ್ಯಾಟರ್ ಅಥವಾ ಎಕ್ಷೋಟಿಕ್ ಮ್ಯಾಟರ್ ; ಕತ್ತಲೆಯ ದ್ರವ್ಯ. ಈ ಕತ್ತಲೆಯ ದ್ರವ್ಯ ನಮಗೆ ಕಾಣತ್ತಿರುವ ವಸ್ತು ರೂಪದಲ್ಲಿಲ್ಲ ; ಆದರೆ ಅದರ ಕಾಂತೀಯ (ಗ್ರಾವಿಟೇಶನಲ್ ಫೋರ್ಸ್) ಮಾತ್ರ ಇರುವುದು ಕಾಣುತ್ತದೆ..ಯಾವುದೇ ವಿಕಿರಣ ಸೂಸುತ್ತಿಲ್ಲ.) ಅದನ್ನು ವಿಐಎಮ್‌ಪಿ (ವೀಕ್ಲೀ ಇನ್ಟರ್ ಅಕ್ಟಿಂಗ್ ಮ್ಯಾಸ್ಸಿವ್ ಪಾರ್ಟಿಕಲ್ಸ್) ಗಳೆಂದು ಕರೆಯುತ್ತಾರೆ..
  • ಈ ಕೃಷ್ಣ ದ್ರವ್ಯವನ್ನು
  • ೧) ಶೀತ ಕೃಷ್ಣ ದ್ರವ್ಯ ,
  • ೨) ಅಲ್ಪೋಷ್ಣ ಕೃಷ್ಣ ದ್ರವ್ಯ;
  • ೩) ಉಷ್ಣ ಕೃಷ್ಣ ದ್ರವ್ಯ ಎಂದು ವಿಂಗಡಿಸಿದ್ದಾರೆ.
  • ವಿಜ್ಞಾನಿಗಳಿಗೆ ಅದೊಂದು ನಿಗೂಢ ವಸ್ತು ಅಥವಾ ದ್ರವ್ಯ. ಹಿಗ್ಗುತ್ತಿರುವ ವಿಶ್ವದಲ್ಲಿ ಕಾಂತೀಯ ವ್ಯತ್ಯಾಸ, ನೀಹಾರಿಕೆಗಳು ಆಕಾಶದಲ್ಲಿ ಹರಡಿರುವ ಕ್ರಮ, ಆಕಾಶದಲ್ಲಿ ಹರಡಿರುವ ಹೊಗೆಯಂತಹ ವಸ್ತು, ಕಪ್ಪು ಗುಳ್ಳೆಗಳನ್ನು ಆವರಿಸಿರವ, ಅಥವಾ ಮುಚ್ಚಿರುವ ತೆಳುವಾದ ಕಪ್ಪು ವಿಶಾಲ ಹಾಳೆಗಳು, ಇವು ಕಪ್ಪು ದ್ರವ್ಯದ ಇರುವನ್ನು ಸಾರುತ್ತವೆ. ಈಗೀಗ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪು ಸಹಾಯದಿಂದ ಈ ಕೃಷ್ಣ ದ್ರವ್ಯದ ಬಗೆಗೆ ಪರಿಲನೆ ಪ್ರಯೋಗಗಳನ್ನು ನೆಡೆಸಿದ್ದಾರೆ.

ಸೂರ್ಯ:

[ಬದಲಾಯಿಸಿ]

ಈ ನಮ್ಮ ಬ್ರಹ್ಹಾಂಡದಲ್ಲಿ ಸೂರ್ಯ

[ಬದಲಾಯಿಸಿ]
  • ಆಕಾಶ ಗಂಗೆಯ ಸ್ವಲ್ಪ ಒಳಸುತ್ತಿನ ಪದರಿನಲ್ಲಿ ಒರಿನ್ ನಕ್ಷತ್ರ ಪುಂಜದ ಹತ್ತಿರ ನಮ್ಮ ಸೂರ್ಯಮಂಡಲವಿದೆ. ಅದು ನಮ್ಮ ಆಕಾಶ ಗಂಗೆಯ ಕೇಂದ್ರದಿಂದ ಸುಮಾರು 27,200 ಜ್ಯೋತಿರ್ ವರ್ಷದ (8.33+/- 0.35 ಕಿಲೋಪರ‍್ಸೆಕೆಂಡ್ಸ್) ದೂರದಲ್ಲಿದೆ. ಈ ನೀಹಾರಕದ (ಆಕಾಶಗಂಗೆ) ಕೇಂದ್ರ ಮೇಲ್ಮೈ ಸಮತಲದಿಂದ ಸುಮಾರು 16 ಜ್ಯೋತಿರ್ವರ್ಷ ದ ದೂರದಲ್ಲಿದೆ. ಸೂರ್ಯ ಮಂಡಲವು ವಾಸಯೋಗ್ಯವಾದ ಅನುಕೂಲ ಪ್ರದೇಶದಲ್ಲಿದೆ. ಆಕಾಶಗಂಗೆಯ ಕೇಂದ್ರವನ್ನು ಒಂದು ಸುತ್ತು ಸುತ್ತಿ ಬರಲು ಸೂರ್ಯನಿಗೆ 225ರಿಂದ 250 ದಶ ಲಕ್ಷ ವರ್ಷಬೇಕು. (ಇದು ಒಂದು ನೀಹಾರಿಕಾ ವರ್ಷ) ಸೂರ್ಯನು ತನ್ನ ಜನನದ ನಂತರ ಸುಮಾರು 18-20 ಸುತ್ತು ಸುತ್ತಿರಬೇಕು. ಮಾನವರು ಈ ಭೂಮಿಯ ಮೇಲೆ ಕಾಣಿಸಿಕೊಂಡ ನಂತರ ಒಟ್ಟು ಸುತ್ತಿ ಬರುವ ದೂರದಲ್ಲಿ ಇನ್ನೂ ಕೇವಲ 1250ರಲ್ಲಿ ಒಂದು ಬಾಗದಷ್ಟು ದೂರ ಮಾತ್ರಾ ಕ್ರಮಿಸಿದ್ದಾನೆ. ಸೂರ್ಯಮಂಡಲವು ಆಕಾಶಗಂಗೆಯ ಕೇಂದ್ರವನ್ನು ಸುತ್ತುವ ವೇಗ 1 ಸೆಕೆಂಡಿಗೆ 220ಕಿ.ಮೀ. ಈ ವೇಗದಲ್ಲಿ ಒಂದು ಜ್ಯೋತಿರ್ ವರ್ಷ ದೂರ ಕ್ರಮಿಸಲು ಸೂರ್ಯ ಮಂಡಲಕ್ಕೆ 1400ವರ್ಷಗಳು ಬೇಕು. 8.19 ನಿ/ 8.ನಿ. 31 ಸೆಕೆಂಡ್ ಗಳಲ್ಲಿ -(ಇಂಗ್ಲಿಷ್ -ಸನ್) ಸೂರ್ಯನು ಚಲಿಸುವ ದೂರವನ್ನು ಖಗೋಲ ಮಾನದ ಒಂದು ಮೂಲ ಮಾನ ಎಂದು ಪರಿಗಣಿಸಲಾಗಿದೆ .
  • (ಭೂಮಿಯಿಂದ ಸರಾಸರಿ ದೂರ 149.6x106 ಕಿ.ಮೀ. (92.95್ಠ106 ಮೈಲಿ)149,597,870.7 ಕಿ..ಮೀ./149.6 ಮಿಲಿಯನ್ ಕಿ.ಮೀ./ 14 ಕೋಟಿ 96ಲಕ್ಷ ಕಿ.ಮೀ). ಇದು ಭೂಮಿಗೂ ಸೂರ್ಯನಿಗೂ ಇರವ ಸರಾಸರಿ ದೂರ.
  • ( (ಭೂಮಿಯಿಂದ ಸರಾಸರಿ ದೂರ ೧೪೯.೬×೧೦ ಕಿ.ಮೀ. (೯೨.೯೫×೧೦ ಮೈಲಿ)೧೪೯,೫೯೭,೮೭೦.೭ ಕಿ..ಮೀ./149.6 ಮಿಲಿಯನ್ ಕಿ.ಮೀ./ ೧೪ ಕೋಟಿ ೯೬ಲಕ್ಷ ಕಿ.ಮೀ). ಇದು ಭೂಮಿಗೂ ಸೂರ್ಯನಿಗೂ ಇರವ ಸರಾಸರಿ ದೂರ.

ಸೂರ್ಯ ಒಂದು ನಕ್ಷತ್ರ:

[ಬದಲಾಯಿಸಿ]

  • ಸೂರ್ಯ ಒಂದು ಮದ್ಯಮ ಗಾತ್ರದ ತಾರೆ. ಅದು ಸೂರ್ಯ ಮಂಡಲದ ಕೇಂದ್ರದಲ್ಲಿದೆ. ಅದು ಪ್ಲಾಸ್ಮಾ ಸ್ಥಿತಿಯಲ್ಲಿದ್ದು ಕಾಂತಶಕ್ತಿಯ ಬಲೆಯಲ್ಲಿ ಗಟ್ಟಿಯಾಗಿ ಹೆಣೆದುಕೊಂಡಿದೆ. ಅದು ದುಂಡಾಗಿದ್ದು ಅದರ ವ್ಯಾಸ 13,92,000 ಕಿ.ಮೀ. ಅದು ಭೂಮಿಯ 109 ರಷ್ಟು ದೊಡ್ಡದು. ಅದರ ದ್ರವ್ಯರಾಶಿ (ತೂಕ) ಭೂಮಿಗಿಂತ 330,000 ದಷ್ಟು ( ಅದರ ತೂಕ 2ರ ಮುಂದೆ 30 ಸೊನ್ನೆಗಳನ್ನು ಹಾಕಿದರೆ ಆಗುವಷ್ಟು ಕಿಲೋ ಗ್ರಾಮ್). ಇದರಲ್ಲಿ ಇಡೀ ಸೂರ್ಯ ಮಂಡಲದ ಎಲ್ಲಾ ಗ್ರಹಗಳೂ ಸೇರಿ ಆಗುವ ತೂಕದ 99.86% ನಷ್ಟು ದ್ರವ್ಯ ರಾಶಿ ಇದೆ ! (ವಿಕಿಪೀಡಿಯಾ-ಸನ್). ಆದರೆ ಅದರಲ್ಲಿರುವ ವಸ್ತು ಮುಕ್ಕಾಲು ಭಾಗ ಜಲಜನಕ, ಕಾಲು ಭಾಗದ ಹತ್ತಿರದಷ್ಟು ಹೀಲಿಯಮ್; ಅಲ್ಲದೆ ಶೇಕಡ 1.69 ರಷ್ಟು ಇತರೆ ಧಾತುಗಳು. ಆ ಇತರೇ ಧಾತುಗಳು ಭೂಮಿಯ 6528 ರಷ್ಟು ತೂಕದ್ದು.
  • ಸೂರ್ಯನ ಮೇಲ್ಮೈ ಶಾಖ ಅಂದಾಜು 5505 ಡಿಗ್ರಿ ಸೆಂಟಿಗ್ರೇಟ್ (5778 ಕೆಲ್ವಿನ್). ಎಲ್ಲಾ ತಾರೆಗಳಂತೆ ಸೂರ್ಯನಲ್ಲಿ ಪರಮಾಣು ಪ್ರಕ್ರಿಯೆಯಿಂದ ಶಕ್ತಿ (ಬೆಳಕು , ಶಾಖ) ಉತ್ಪಾದನೆ ಆಗುತ್ತದೆ. ಈ ಪರಮಾಣು ಪ್ರಕ್ರಿಯೆಗೆ ಪ್ರತಿ ಸೆಕೆಂಡಿಗೆ 620 ಮಿಲಿಯನ್ (62ಕೋಟಿ) ಮೆಟ್ರಿಕ್ ಟನ್ ಜಲಜನಕ ಉಪಯೋಗಿಸಲ್ಪಡುತ್ತದೆ.
  • ಸೂರ್ಯನು ಭೂಮಿಯಿಂದ ಸರಾಸರಿ 149.6 ಮಿಲಿಯನ್(14.96 ಕೋಟಿ) ಕಿಲೋಮೀಟರ್ ದೂರದಲ್ಲಿದೆ. ಈ ದೂರವನ್ನು ಖಗೋಲಮಾನದ ದೂರದ ಅಳತೆಗೆ 1 (ಎಯು) ಖಗೋಲ ಮಾನವೆಂದು ಹೇಳುತ್ತಾರೆ. ಸೂರ್ಯನು ತನ್ನ ಅಕ್ಷದ ಮೇಲೆ ಸರಿ ಸುಮಾರು 28 ದಿನಗಳಲ್ಲಿ ತಿರುಗತ್ತಿದ್ದಾನೆ. ಸೂರ್ಯನ ಕೇಂದ್ರ ಅತಿಯಾದ ಸಾಂದ್ರತೆಹೊಂದಿದೆ-ನೀರಿನ ಸಾಂದ್ರತೆಯ 150ರಷ್ಟು ಎಂದರೆ ಅಲ್ಲಿಯ ನೀರಿನ (1ಗ್ರಾಂ) ಒಂದು ತೊಟ್ಟಿನಷ್ಟು ದ್ರವ್ಯ 150 ಗ್ರಾಮ್ ತೂಗುವುದು. ಅದರ ಕೇಂದ್ರದ ಶಾಖ ಸುಮಾರು 15.7 ಮಿಲಿಯನ್ (1ಕೋಟಿ 57ಲಕ್ಷ ) ಕೆಲ್ವಿನ್. ಹಿಂದೆ ಹೇಳಿದಂತೆ ಅದರ ಮೇಲ್ಮೈ ಶಾಖ ಸುಮಾರು 5800 ಕೆಲ್ವಿನ್.

(Massತೂಕ: (1.98855±0.00025)×1030 kg[1];333000 × Earth[1])[[೧]]

ಸೂರ್ಯನ ಪರಿವಾರ:

[ಬದಲಾಯಿಸಿ]

caption(ಚಿತ್ರ ಪ್ರಮಾಣ) = ಸೂರ್ಯ ಮತ್ತು ಗ್ರಹಗಳ ಗಾತ್ರ , ದೂರ ಸುಮಾರು ಪ್ರಮಾಣಕ್ಕೆ ತಕ್ಕಂತೆ ಇವೆ. ಆದರೆ ಅದರ ಕಾಂತಿಯಲ್ಲ. (ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ದೊಡ್ಡ ಚಿತ್ರ ಬರುವುದು), age (ಆಯು)= 4.568 billion years(೪೫೬.೮ ಕೋಟಿ ವರ್ಷ)
  • ಸೂರ್ಯನನ್ನು ಸುತ್ತುತ್ತಿರುವ ಆಕಾಶ ಕಾಯಗಳು ಅದರ (ಸೂರ್ಯನ) ಕಾಂತ ಶಕ್ತಿಯ ಬಲದಿಂದ ಸೂರ್ಯನನ್ನು ಸುತ್ತುತ್ತಿವೆ. ಅವು ಸಂಯುಕ್ತ ಪರಮಾಣುಗಳ ಮೇಘ ರಾಶಿಯಿಂದ ಸಂಕುಚಿತಗೊಂಡು ೪೬೦ ಕೋಟಿ ವರ್ಷಗಳಹಿಂದೆ ನಿರ್ಮಾಣವಾಗಿರಬೇಕೆಂದು ಊಹಿಸಿದ್ದಾರೆ. ಸೂರ್ಯನನ್ನು ಸುತ್ತುತ್ತಿರುವ ಆಕಾಶಕಾಯಗಳು ಅಥವಾ ಗ್ರಹಗಳು ತಕ್ಕಮಟ್ಟಿಗೆ ಸಮತಲದಲ್ಲಿ ಸ್ವಲ್ಪ ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತಿವೆ. ಒಳ ಸುತ್ತಿನ ನಾಲ್ಕು ಗ್ರಹಗಳಾದ ಬುಧ, ಶುಕ್ರ, ಭೂಮಿ, ಮಂಗಳ ಗ್ರಹಗಳು ಘನ ವಸ್ತುಗಳನ್ನು ಒಳಗೊಂಡಿದೆ. ಉಳದ ಹೊರ ಮೈ ಗ್ರಹಗಳಾದ ಗುರು (ಗ್ರಹ), ಶನಿ ಗ್ರಹಗಳು ಜಲಜನಕ ಮೊದಲಾದ ಅನಿಲಗಳಿಂದ ಆದ ಅನಿಲ ದೈತ್ಯ ಗ್ರಹಗಳು. ದೂರದ ಗ್ರಹಗಳಾದ ಯುರಾನಸ್, ನೆಪ್ಚೂನ್ ಗ್ರಹಗಳು ಹೆಚ್ಚಾಗಿ ಹಿಮ, ನೀರು ಇವಗಳಿಂದ ಆದವು; ಅವು ಹಿಮದೈತ್ಯ ಗ್ರಹಗಳೆನ್ನಬಹುದು. ಇವಲ್ಲದೆ ಚಿಕ್ಕ ಗ್ರಹಗಳಾದ ಪ್ಲುಟೋ, ಹವುಮಿಯಾ, ಮಕೆಮ್ಕೆ, ಈರಿಸ್ (ಐರಿಸ್) , ಸೈರಿಸ್ ಮತ್ತು ಕೆಲವು ಚಿಕ್ಕ ಆಕಾಶಕಾಯಗಳೂ, ಉಲ್ಕೆಗಳ ಸಮೂಹವೂ ಸೂರ್ಯನನ್ನು ಸುತ್ತುತ್ತಿವೆ. ಕೆಲವು ಗ್ರಹಗಳು ಮಾತ್ರಾ ಉಪಗ್ರಹಗಳನ್ನು ಹೊಂದಿವೆ. ಅವುಗಳಲ್ಲಿ ಭೂಮಿಯಲ್ಲಿ ಮಾತ್ರಾ ಜೀವಿಗಳಿವೆ. ಭೂಮಿ ಜೀವ ಸಂಕುಲ ವಿಕಾಸಹೊಂದಲು ಅನುಕೂಲ ವಾತವರಣ ಹೊಂದಿದೆ. ಭೂಮಿಯಲ್ಲಿ ಜೀವ ವಿಕಾಸವು ಸುಮಾರು ೩೫೦-೪೦೦ ಕೋಟಿವರ್ಷಗಳ ಹಿಂದೆ ಆಲ್ಗೀಯಿಂದ ಆರಂಭವಾಗಿರಬೇಕೆಂದು ಊಹಿಸಿದ್ದಾರೆ.

ಸೂರ್ಯನ ಅಂತ್ಯ :

[ಬದಲಾಯಿಸಿ]

  • ಸೂರ್ಯನಲ್ಲಿ ಸೂಪರ್‌ನೋವಾ ಆಗಿ ಸಿಡಿದು ನಾಶವಾಗುವಷ್ಟು ದ್ರವ್ಯರಾಶಿ ಇಲ್ಲ. ಬದಲಾಗಿ ಅದು ೫ ಬಿಲಿಯನ್ (೫೦೦ ಕೋಟಿ) ವರ್ಷಗಳನಂತರ ಕೆಂಪು-ಕುಬ್ಜ ದೈತ್ಯ ನಕ್ಷತ್ರವಾಗುವ ಹಂತವನ್ನು ತಲುಪಬಹುದು. ಒಳಭಾಗದ ಜಲಜನಕವು ಉರಿದುಹೋದಂತೆ ಹೊರಭಾಗವು ಹಿಗ್ಗಿ ಕೇಂದ್ರವು ಸಂಕುಚಿಸಿ ಅದರ ಸಾಂದ್ರತೆ ಹೆಚ್ಚಾದಂತೆಲ್ಲಾ ಶಾಖವು ಹೆಚ್ಚಾಗಿ ಜಲಜನಕವು ಹೀಲಿಯಂಜೊತೆ ಫ್ಯೂಜನ್ ಹೊಂದಿ ಹೆಚ್ಚು ಹೆಚ್ಚು ಹೀಲಿಯಂ ಉತ್ಪಾದನೆಯಾUದೊತೆ ಇನ್ನೂ ಹಿಗ್ಗಬಹುದು. ಸೂರ್ಯನ ಕೇಂದ್ರವು ೧೦೦ಮಿಲಿಯನ್ (೧೦ ಕೋಟಿ) ಕೆಲ್ವಿನ್ ಶಾಖ ಪಡೆದಾಗ ಇಂಗಾಲವು ಉತ್ಪತ್ತಿಯಾಗಬಹುದು ಮತ್ತು (ಕೆಂಪು) ದೈತ್ಯ ತಾರೆಯ ಹಂತ ತಲುಪಬಹುದು. ಹೊರ ಕವಚದ ದ್ರವ್ಯ ರಾಶಿಯು ಸಿಡಿದುಗ್ರಹ ಸಮೂಹ ಹೊಂದಿದ ನ್ಯಬೂಲಾ ಆಗಬಹುದು. ಅತಿ ಶಾಖದ ಕೇಂದ್ರ ಬೀಜ ಮಾತ್ರಾ ಉಳಿದು ಅದು ತಣ್ಣಗಾದಂತೆ ಅನೇಕ ಕೋಟಿ ವರ್ಷಗಳನಂತರ ಶ್ವೇತ ಕುಬ್ಜ ವಾಗಬಹುದೆಂದು ಊಹಿಸಿದ್ದಾರೆ. ಸಾಮಾನ್ಯವಾಗಿ ಮಧ್ಯಮವರ್ಗದ ತಾರೆಗಳು ಹೀಗೆ ಅಂತ್ಯದಲ್ಲಿ ಶ್ವೇತಕುಬ್ಜ ತಾರೆಗಳಾಗಿರುವುದು ಕಂಡುಬಂದಿದೆ.

ಮಾನವನು ಏಕಾಂಗಿಯೇ?

[ಬದಲಾಯಿಸಿ]

  • ಮಾನವನು ಈ ವಿಶಾಲ ವಿಶ್ವದಲ್ಲಿ ಏಕಾಂಗಿಯೇ? ಈ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿದೆ.
  • [[೨]]
  • ಏಕಾಂಗಿಯಲ್ಲ!!?
  • ಬ್ರಿಟಿಷ್ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್ ವಿಶೇಷವಾಗಿ ಮಾನವರಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಆ, ಯಾವುದೇ ಪರಕೀಯ ನಾಗರಿಕತೆಗೆ- ನಮ್ಮ ಉಪಸ್ಥಿತಿಯನ್ನು ಅವರಿಗೆ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.(ಅದರಿಂದ ನಮಗೆ ಅಪಾಯವಾಗುವ ಸಂಭವ ಇದೆ! ಎಂದಿದ್ದಾರೆ.)
  • ಮುಂದುವರಿದ ನಾಗರಿಕತೆಯಿಂದ ನಮ್ಮ ಮೊದಲ ಸಂಪರ್ಕವು- ಸ್ಥಳೀಯ ಅಮೆರಿಕನ್ನರು ಮೊದಲ ಕ್ರಿಸ್ಟೋಫರ್ ಕೊಲಂಬಸ್ ಮತ್ತು ಅದರ ಪರಿಣಾಮಗಳನ್ನು ಎದುರಿಸಿದಕ್ಕೆ ಸಮನಾಗಿರುತ್ತದೆ ಅಥವಾ ಆಗಿರಬಹುದು; "ಅದು ಮೂಲ ನಿವಾಸಿಗಳಿಗೆ ಒಳ್ಳೆದಾಗಲಿಲ್ಲ!", ಹಾಕಿಂಗ್ ಹೊಸ ಆನ್ಲೈನ್ ಚಿತ್ರದಲ್ಲಿ ಹೇಳಿದರು.[]

ನಮ್ಮನ್ನು ಕ್ರಿಮಿಗಳಂತೆ ನೋಡಬಹುದು

[ಬದಲಾಯಿಸಿ]
  • ಅನ್ಯಲೋಕದ ನಾಗರಿಕತೆಗಳು ನಮಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದಿರಬಹುದು' ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. 'ನಾವು ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚಿನ ಬೆಲೆಬಾಳುವವರಲ್ಲವೆಂದು ಅವರು ನೋಡಬಹುದು',ಎಂದು ಅವರು ಹೇಳಿದರು. ಅವರು ಯಾವುದೇ ಪರಕೀಯ ನಾಗರಿಕತೆಯವರಿಗೆ ನಮ್ಮ ಉಪಸ್ಥಿತಿ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
  • ಒಂದು ದಿನ ನಾವು ಗ್ಲೀಸಿ (Gliese) ಬ್ಯಾಟಲ್ 832c ಗ್ರಹದ ಒಂದು ಸಿಗ್ನಲ್ ಸ್ವೀಕರಿಸಬಹುದು, ಆದರೆ ನಾವು ಮತ್ತೆ ಉತ್ತರಿಸುವ ಬಗೆಗೆ ಜಾಗರೂಕರಾಗಿರಬೇಕು," ಅವರು ಹೇಳಿದರು.
  • "ಅವರು ಅಪಾರವಾಗಿ ಹೆಚ್ಚು ಶಕ್ತಿಶಾಲಿಗಳು ಆಗಿರಬಹುದು ಎಂದು ಮತ್ತು ನಾವು ಬ್ಯಾಕ್ಟೀರಿಯಾ ಕ್ಕಿಂತ ಹೆಚ್ಚು ಬೆಲೆಬಾಳುವವರಲ್ಲ ಎಂದು ನಮ್ಮನ್ನು ನೋಡಬಹುದು 'ಎಂದು ಹಾಕಿಂಗ್ ಎಚ್ಚರಿಕೆ ನೀಡಿದ್ದಾರೆ.
  • "ನಾನು ವಯಸ್ಸಾದಂತೆ ನನಗೆ ಹೆಚ್ಚು ಮನವರಿಕೆಯಾಗಿದೆ, ಈ ವಿಶ್ವದಲ್ಲಿ ನಾವು ಮಾತ್ರ ಇರುವವರಲ್ಲ ಎಂದು; ಆಶ್ಚರ್ಯಪಡುತ್ತಾ, ನಾನು ಹೊಸ ಜಾಗತಿಕ ಸಾದ್ಯತೆಯನ್ನು ಕಂಡುಹಿಡಿಯಲು ಈ ಜೀವಮಾನದಲ್ಲಿ ಒಂದು ಸಹಾಯವನ್ನು ಮಾಡಲು ಇಷ್ಟಪಡುತ್ತೇನೆ." ಎಂದು ಅವರು ಹೇಳಿದರೆಂದು, ಗಾರ್ಡಿಯನ್ ವರದಿ ಮಾಡಿದೆ. ಹಾಕಿಂಗ್ ಪ್ರತಿಕೂಲ ವಿದೇಶೀ ಲೋಕದವರ ಬಗ್ಗೆ ಅಪಾಯ ನಿರೀಕ್ಷೆಯೊಂದಿಗೆ ಎಚ್ಚರಿಕೆ ನೀಡಿರುವುದು ಇದೇ ಮೊದಲ ಬಾರಿ ಅಲ್ಲ.[]

ಭೂಮಿಯಲ್ಲಿ ಜೀವಜಾಲ ಸೃಷ್ಟಿ

[ಬದಲಾಯಿಸಿ]
  • ಸೂರ್ಯನಿಗೆ 465,00,00,000 ಶೇ.±1(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ -
  • ಭೂಮಿಯ ಪ್ರಾಯ 454 ಕೋಟಿ ವರ್ಷ (10/10% ವ್ಯತ್ಯಾಸಕ್ಕೆ ಅವಕಾಶ ವಿದೆ)
  • ಅತಿಉಷ್ಣ - 400,00,00,000 ವರ್ಷ:
  • ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)
  • ೩೯೦-೨೫೦ ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು . ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ.[][][][][][][]
  • ಭೂಮಿಯಲ್ಲಿ ಜೀವ ಕೋಟಿಗಳು- ಪ್ರಾಣಿಗಳು,ಪಕ್ಷಿಗಳು ಮಾನವರು ಸೃಷ್ಟಿಯಾದ ಬಗೆಗೆ ವೈಜ್ಞಾನಿಕ ಸಿದ್ಧಾಂತಕ್ಕೆ ನೋಡಿ-:

ಜೀವ ವಿಕಾಸವಾದ ಆರ್ಡಿಪಿಥೆಕಸ್ | ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ

ಹೆಚ್ಚಿನ ಓದಿಗೆ

[ಬದಲಾಯಿಸಿ]

ಸೃಷ್ಟಿ ಮತ್ತು ಪುರಾಣ;ಸಾಂಖ್ಯ : ಸೃಷ್ಟಿ ಸೆಮೆಟಿಕ್ ಪುರಾಣ;ಸೃಷ್ಟಿ ಮತ್ತು ಗ್ರೀಕ್ ಪುರಾಣ;ಸೃಷ್ಟಿ ಮತ್ತು ಮಹಾಭಾರತ;ಸೃಷ್ಟಿ ಮತ್ತು ಬೈಬಲ್;ಸೃಷ್ಟಿ ಮತ್ತು ಕುರಾನ್;ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ;ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ;ಸೃಷ್ಟಿ ಮತ್ತು ಯೋಗ ದರ್ಶನ;ಸೃಷ್ಟಿ ಮತ್ತು ಸಾಂಖ್ಯ ದರ್ಶನ;ಸೃಷ್ಟಿ ಮತ್ತು ವೇದಾಂತ ಅದ್ವೈತಸೃಷ್ಟಿ ಮತ್ತು ಉಪನಿಷತ್;ಸೃಷ್ಟಿ ಮತ್ತು ವಿಜ್ಞಾನ;ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ

ಮೇಲೆ ಹೇಳಿದ ನಾಸದೀಯ ಸೂಕ್ತದ ಇಂಗ್ಲಷ್ ಅನುವಾದ

[ಬದಲಾಯಿಸಿ]
ಸೃಷ್ಠಿಯ ಆದಿ
  • ನಾಸದೀಯ ಸೂಕ್ತಮ್ naasadeeya suktam नासदीय सूक्त ऋग्वेद
ಮೂಲ:नासदीय सूक्त ऋग्वेद

   
नासदीय सूक्त (ऋग्वेद )
नास॑दासी॒न्नो सदा॑सीत्त॒दानीं॒ नासी॒द्रजो॒ नो व्यो॑मा प॒रो यत् ।
किमाव॑रीवः॒ कुह॒ कस्य॒ शर्म॒न्नम्भः॒ किमा॑सी॒द्गह॑नं गभी॒रम् ॥ १॥

न मृ॒त्युरा॑सीद॒मृतं॒ न तर्हि॒ न रात्र्या॒ अह्न॑ आसीत्प्रके॒तः ।
आनी॑दवा॒तं स्व॒धया॒ तदेकं॒ तस्मा॑द्धा॒न्यन्न प॒रः किं च॒नास॑ ॥ २॥

तम॑ आसी॒त्तम॑सा गू॒ळ्हमग्रे॑ऽप्रके॒तं स॑लि॒लं सर्व॑मा इ॒दम् ।
तु॒च्छ्येना॒भ्वपि॑हितं॒ यदासी॒त्तप॑स॒स्तन्म॑हि॒नाजा॑य॒तैक॑म् ॥ ३॥

काम॒स्तदग्रे॒ सम॑वर्त॒ताधि॒ मन॑सो॒ रेतः॑ प्रथ॒मं यदासी॑त् ।
स॒तो बन्धु॒मस॑ति॒ निर॑विन्दन्हृ॒दि प्र॒तीष्या॑ क॒वयो॑ मनी॒षा ॥ ४॥

ति॒र॒श्चीनो॒ वित॑तो र॒श्मिरे॑षाम॒धः स्वि॑दा॒सी३दु॒परि॑ स्विदासी३त् ।
रे॒तो॒धा आ॑सन्महि॒मान॑ आसन्स्व॒धा अ॒वस्ता॒त्प्रय॑तिः प॒रस्ता॑त् ॥ ५॥

को अ॒द्धा वे॑द॒ क इ॒ह प्र वो॑च॒त्कुत॒ आजा॑ता॒ कुत॑ इ॒यं विसृ॑ष्टिः ।
अ॒र्वाग्दे॒वा अ॒स्य वि॒सर्ज॑ने॒नाथा॒ को वे॑द॒ यत॑ आब॒भूव॑ ॥ ६॥

इ॒यं विसृ॑ष्टि॒र्यत॑ आब॒भूव॒ यदि॑ वा द॒धे यदि॑ वा॒ न ।
यो अ॒स्याध्य॑क्षः पर॒मे व्यो॑म॒न्सो अ॒ङ्ग वे॑द॒ यदि॑ वा॒ न वेद॑ ॥ ७॥


Meaning:English translation
Then even nothingness was not, nor existence,
 There was no air then, nor the heavens beyond it.
 What covered it? Where was it? In whose keeping
 Was there then cosmic water, in depths unfathomed? ||೧||

  Then there was neither death nor immortality
  nor was there then the torch of night and day.
  The One breathed windlessly and self-sustaining.
  There was that One then, and there was no other. ||೨||

  At first there was only darkness wrapped in darkness.
  All this was only unillumined water.
  That One which came to be, enclosed in nothing,
  arose at last, born of the power of heat. ||೩||

  In the beginning desire descended on it -
 that was the primal seed, born of the mind.
  The sages who have searched their hearts with wisdom
  know that which is is kin to that which is not. || ೪||

  And they have stretched their cord across the void,
  and know what was above, and what below.
  Seminal powers made fertile mighty forces.
  Below was strength, and over it was impulse. ||೫||

  But, after all, who knows, and who can say
  Whence it all came, and how creation happened?
  the gods themselves are later than creation,
  so who knows truly whence it has arisen? ||೬||

  Whence all creation had its origin,
  he, whether he fashioned it or whether he did not,
  he, who surveys it all from highest heaven,
  he knows - or maybe even he does not know. ||೭||
END
This is the famous नासदीय सूक्त the 129-th sUkta of
the 10-th mandala of the Rigveda . It has been translated and
discussed by many scholars and there have been volumes dedicated
to just this one sUkta . The current translation is by A . L.
Basham, from his book entitled ``The Wonder that was India.

[೧೦]

ನಾಲ್ಕು ಶ್ಲೋಕಗಳು ಮತ್ತು ಅನುವಾದ

[ಬದಲಾಯಿಸಿ]

ವೇದದಲ್ಲಿರುವ ವಿಚಾರದ ಪ್ರಖರತೆಗೆ ಋಗ್ವೇದದಲ್ಲಿ ಬರುವ ‘ನಾಸದೀಯ ಸೂಕ್ತ’ವನ್ನು ನೋಡಬಹುದು. ಈ ಸೃಷ್ಟಿಯ ಮೂಲವೇನು? ಅದು ಹೇಗೆ ಹುಟ್ಟಿತು? – ಎಂಬ ಗಂಭೀರವಾದ ಚಿಂತನೆಯ ಬೆಳಕು ಅಲ್ಲಿ ಸೊಗಸಾಗಿ ಮೂಡಿದೆ:

 

ನಾಸದಾಸೀನ್ನೋ ಸದಾಸೀತ್ತದಾನೀಂ |
ನಾಸೀದ್ರಜೋ ನೋ ವ್ಯೋಮಾ ಪರೋ ಯತ್‌ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂ |
ಭಃ ಕಿಮಾಸೀದ್ಗಹನಂ ಗಭೀರಮ್‌ ||
  • ‘ಆಗ (ಮೊದಲಲ್ಲಿ) ಅಸತ್ತೂ ಇರಲಿಲ್ಲ, ಸತ್ತೂ ಇರಲಿಲ್ಲ, ಲೋಕವೂ ಇರಲಿಲ್ಲ. ಅದರ ಆಚೆಯ ಆಕಾಶವೂ ಇರಲಿಲ್ಲ. ಅದೇನನ್ನು ಆವರಿಸಿತ್ತು? ಎಲ್ಲಿ? ಯಾರ ಆಶ್ರಯದಲ್ಲಿ? ಅಲ್ಲಿ ಗಹನವೂ ಗಭೀರವೂ ಆದ ನೀರೇನಾದರೂ ಇತ್ತೆ?’
ನ ಮೃತ್ಯುರಾಸೀದಮೃತಂ ನ ತರ್ಹಿ |
ನ ರಾತ್ರ್ಯಾ ಅಹ್ನ ಅಸೀತ್ಪ್ರಕೇತಃ |
ಆನೀದವಾತಂ ಸ್ವಧಯಾ ತದೇಕಂ |
ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||
  • ‘ಆಗ ಮೃತ್ಯವಿರಲಿಲ್ಲ, ಅಮೃತತ್ವವೂ ಇರಲಿಲ್ಲ, ರಾತ್ರಿ–ಹಗಲುಗಳಿಗೆ ಭೇದವಿರಲಿಲ್ಲ; ಅದೊಂದು (ಗಾಳಿ ಇಲ್ಲದೆ) ತನ್ನ ಬಲದಿಂದಲೇ ಉಸಿರಾಡುತ್ತಿತ್ತು. ಅದನ್ನು ಬಿಟ್ಟು ಹೊರಗೆ ಬೇರೆ ಏನೂ ಇರಲಿಲ್ಲ.’
ಕೋ ಅದ್ಧಾ ವೇದ ಕ ಇಹ ಪ್ರವೋಚತ್‌ |
ಕುತ ಆಜಾತಾ ಕುತ ಇಯಂ ವಿಸೃಷ್ಟಿಃ |
ಅರ್ವಾಗ್ದೇವಾ ಅಸ್ಯ ವಿಸರ್ಜನೇನಾ |
ಥಾ ಕೋ ವೇದ ಯತ ಆಬಭೂವ ||
  • ‘ಇದನ್ನೆಲ್ಲ ನಿಜವಾಗಿ ತಿಳಿದವರು ಯಾರು? ಯಾವುದರಿಂದ ಇದೆಲ್ಲ ಆಯಿತು? ಈ ಸೃಷ್ಟಿ ಆದುದು ಹೇಗೆ; ಇದನ್ನು ಹೇಳುವವರು ಯಾರು? ಈ ಸೃಷ್ಟಿಯೆಲ್ಲ ಆದನಂತರ ಬಂದವರು ದೇವತೆಗಳು. ಆದ್ದರಿಂದ ಇದು ಹೇಗಾಯಿತು ಎಂದು ತಿಳಿದವರು ಯಾರು?’
ಇಯಂ ವಿಸೃಷ್ಟಿರ್ಯತ ಆಬಭೂವ |
ಯದಿ ವಾ ದಧೇ ಯದಿ ವಾ ನ |
ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್‌ |
ಸೋ ಅಂಗ ವೇದ ಯದಿ ವಾ ನ ವೇದ ||
  • ‘ಈ ಸೃಷ್ಟಿ ಎಲ್ಲಿಂದ ಉದ್ಭವವಾಯಿತು; ಅವನು ಅದನ್ನು ಸ್ಥಾಪಿಸಿದನೋ ಅಥವಾ ಇಲ್ಲವೋ? ಮೇಲಿನಿಂದ ಎಲ್ಲವನ್ನೂ ನೋಡುವ ಅವನಿಗೇ ಅದು ಗೊತ್ತು; ಇಲ್ಲ ಅವನಿಗೂ ತಿಳಿಯದೋ?’

(ಇಲ್ಲಿಯ ವೇದಮಂತ್ರಗಳ ಅನುವಾದ: ಜಿ. ಹನುಮಂತರಾವ್‌)

[೧೧]

ಉಲ್ಲೇಖ

[ಬದಲಾಯಿಸಿ]
  1. Stephen Hawking warns against seeking out aliens
  2. Stephen Hawking warns against contacting aliens
  3. ಈ ಜಗತ್ತು :ಡಾ ಶಿವರಾಮ ಕಾರಂತ
  4. ಜಗತ್ತುಗಳ ಹುಟ್ಟು ಮತ್ತು ಸಾವು -ಆರ್.ಎಲ್. ನರಸಿಂಹಯ್ಯ ಸೆಂಟ್ರಲ್ ಕಾಲೇಜು ಮೈಸೂರು ಭೌತ ಶಾಸ್ತ್ರ ವಿಭಾಗ (೧೯೫೨)
  5. http://math.ucr.edu/home/baez/physics/Relativity/SpeedOfLight/measure_c.htm[ಶಾಶ್ವತವಾಗಿ ಮಡಿದ ಕೊಂಡಿ]
  6. ಎನ್ಕಾರ್ಟಾ
  7. ಎನ್‍ಸೈಕ್ಲೊಪಿಡಿಯಾ ಬ್ರಿಟಾನಿಕಾ
  8. ಪುರುಷಸೂಕ್ತ ಋಗ್ವೇದ
  9. ನಾಸದೀಯ ಸೂಕ್ತ ಋಗ್ವೇದ
  10. ನಾಸದೀಯ ಸೂಕ್ತಮ್
  11. ವೇದ: ಕಾವ್ಯವೂ ಹೌದು, ವಿಚಾರವೂ ಹೌದುವೇದ: ಕಾವ್ಯವೂ ಹೌದು, ವಿಚಾರವೂ ಹೌದು;ಪ್ರಜಾವಾಣಿ ;d: 04 ನವೆಂಬರ್ 2017