ವಿಷಯಕ್ಕೆ ಹೋಗು

ಸೂಪರ್‌ನೋವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನಕ್ಷತ್ರಗಳಲ್ಲಿರುವ ಜಲಜನಕವು ವ್ಯಯವಾಗುತ್ತಾ ಹೋದಂತೆ,ಅವುಗಳ ಸ್ಥಾನದಲ್ಲಿ ೧:೪ ರ ಅನುಪಾತದಲ್ಲಿ ಹೀಲಿಯಮ್ ರೂಪುಗೊಂಡು,ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ. ಹೀಗಾಗಿ ದ್ರವ್ಯರಾಶಿ ಸ್ಥಿರವಾಗಿ, ಸಾಂದ್ರತೆ ಹೆಚ್ಚಿ, ನಕ್ಷತ್ರದೊಳಗೆ ಒತ್ತಡವು ಅಧಿಕವಾಗುತ್ತದೆ. ಇದರ ಫಲವಾಗಿ ಪರಮಾಣು ವ್ಯವಸ್ಥೆ ಬಲಹೀನವಾಗಿ, ಎಲೆಕ್ಟ್ರಾನ್ ಹಾಗೂ ನ್ಯೂಕ್ಲಿಯಸ್ ಪ್ರತ್ಯೇಕಗೊಳ್ಳುತ್ತವೆ. ಈ ಪ್ರಕ್ರಿಯಯು ಮುಂದುವರೆದಂತೆ ಶ್ವೇತಕುಬ್ಜಗಳು ರೂಪುಗೊಳ್ಳುತ್ತವೆ. ನಕ್ಷತ್ರಗಳ ಭಾರ ಹೆಚ್ಚಿದರೂ, ಅವುಗಳೊಳಗಿನ ದ್ರವ್ಯರಾಶಿ ಒಂದು ಪರಿಮಿತಿಯಲ್ಲಿರುತ್ತವೆ. ಅಂಥ ನಕ್ಷತ್ರ ಸೂರ್ಯನ ೧.೪೪ ರಷ್ಟಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲವೆಂದು ಚಂದ್ರಶೇಖರ್ ಪ್ರತಿಪಾದಿಸಿದರು. ಈ ಮಿತಿಗಿಂತ ಹೆಚ್ಚು ಹಿಗ್ಗುವ ನಕ್ಷತ್ರ ಸಾವಿರಾರು ಅಣುಬಾಂಬ್‌ಗಳು ಏಕಕಾಲದಲ್ಲಿ ಸ್ಫೋಟಿಸುವಂತೆ ಸಿಡಿದು, ಸೂಪರ್‌ನೋವಾ, ಉಂಟಾಗುತ್ತದೆ.

ಸೂರ್ಯನ ಗಾತ್ರಕ್ಕಿಂತ 1.44 ಅಧಿಕ ಗಾತ್ರವುಳ್ಳ ಮಹಾ ನಕ್ಷೆತ್ರಗಳು, ತಮ್ಮ ಸ್ವಯಂ ಪ್ರಕಾಶ ಬೀರುವ ಸಾಮರ್ಥ್ಯ ಕಳೆದುಕೊಂಡ ನಂತರ, ಸಂಕುಚಿತಗೊಂಡು, ಅವು ಶ್ವೇತ ಕುಬ್ಜೆಗಳಾಗಿ ಮಾರ್ಪಾಡು ಹೊಂದುತ್ತವೆ. ಕಾಲ ಕ್ರಮೇಣ ಕಿರಿದಾಗುವಾಗ, ಅವುಗಳ ಕೇಂದ್ರದಲ್ಲಿ ಅಧಿಕ ಒತ್ತಡ ಉಂಟಾದಾಗ, ನಕ್ಷೆತ್ರದ ಕೇಂದ್ರ ಪ್ರದೇಶದಲ್ಲಿ ಪರಮಾಣುಗಳು ತಮ್ಮ ಅಸ್ತಿತ್ವವನ್ನು ಇರಿಸಿಕೊಳ್ಳಲು ಅಸಮರ್ಥವಾಗಿ ಜಜ್ಜಿ ಹೋಗುತ್ತವೆ. ಅಂದರೆ ಅಧಿಕ ಭಾರವಾದ ಹೊಸ ಪರಮಾಣುಗಳು ಸ್ರಷ್ಠಿಯಾಗುತ್ತವೆ. ಸ್ಪೋಟವಾಗುವ ಘಳಿಗೆಯಲ್ಲಿ ಪರಮಾಣು ಸಂಖ್ಯ 26 ಕಿಂತ ಭಾರವಾದ ಧಾತುಗಳು ಉಂಟಾಗುತ್ತವೆ ಎಂಬ ವಾದ ಮಂಡಿಸಲಾಗಿದೆ. ಇದರಿಂದ ಮಹಾ ಸ್ಪೋಟ ಸಂಭವಿಸುತ್ತದೆ. ಈ ಕ್ರೀಯೆಯಲ್ಲಿ ನಕ್ಷೆತ್ರದ ವಸ್ತುವು, ಶಕ್ತಿಯಾಗಿ ರೂಪಾಂತರಗೊಂಡು ಆಕಾಶದಲ್ಲಿಅಗಾಧ ಪ್ರಮಾಣದ ಬೆಂಕಿಯಂತೆ ಹರಡುತ್ತದೇ. ಈ ರೂಪಾಂತರವಾಗುವ ವಿದ್ಯಮಾನವನ್ನು ಸೂಪರ್ನೋವಾ ಎಂದು ಹೇಳುತ್ತಾರೆ. ಇದು ಬಲು ಅಪರೂಪದ ಸಂಗತಿ. ಇದು ರಾಸಾಯನಿಕ ಕ್ರೀಯೆ ಅಲ್ಲ, ಬದಲಿಗೆ ಹೊಸ ಧಾತುಗಳು ಸ್ರಷ್ಟಿಯಾಗುವ ವಿದ್ಯಮಾನ. ಖಗೋಳ ವಿಜ್ಞಾನಿ ಚಂದ್ರಶೇಖರ್ ಸುಬ್ರಮಣ್ಯನ್ ಈ ವಿಷಯವಾಗಿ ನೋಬೆಲ್ ಪ್ರಶಸ್ತಿ ಪಡೆದಿರುತ್ತಾರೆ.