ಸೃಷ್ಟಿ ಮತ್ತು ಯೋಗ ದರ್ಶನ
ಗೋಚರ
ಯೋಗ ದರ್ಶನದಲ್ಲಿ ಸೃಷ್ಠಿ ಮತ್ತು ವಿಶ್ವದ ರಚನೆ
[ಬದಲಾಯಿಸಿ]- ಪೀಠಿಕೆ : ೧. ಯೋಗ ವು ಅತ್ಯಂತ ಪ್ರಾಚೀನ ವಾದ ಸಾಧನಾ ಪದ್ದತಿ. ಪತಂಜಲಿಯನ್ನು ಯೋಗ ದರ್ಶನದ ಪ್ರವರ್ತಕನೆಂದು ಹೇಳುತ್ತಾರೆ. ಯೋಗದರ್ಶನವನ್ನು ಸೃಷ್ಟಿಕರ್ತನಾದ ಹಿರಣ್ಯಗರ್ಭನಿಂದ ಪಡೆದು ಯೋಗ ಸೂತ್ರಗಳನ್ನು ರಚಿಸಿದ ನೆಂದು ಹೇಳುತ್ತಾರೆ. ಅದು ತರ್ಕಕ್ಕೆ ಮಹತ್ವ ಕೊಡುವುದಿಲ್ಲ. ಅದು ಅನುಶಾಸನ. ಸಾಂಖ್ಯದ ತತ್ವಗಳನ್ನು ಯೋಗ ಒಪ್ಪುತ್ತದೆ. ಅನೇಕ ವಿಚಾರದಲ್ಲಿ ಸಾಂಖ್ಯ ಯೋಗಕ್ಕೂ ಯೋಗಕ್ಕೂ ಸಾಮ್ಯವಿದೆ.ಸಾಂಖ್ಯ ಯೋಗ ಪರಮೇಶ್ವರನನ್ನು ಒಪ್ಪುವುದಿಲ್ಲ. ಸಾಂಖ್ಯದ ೨೪ ತತ್ವಗಳು ಪುರುಷ ಸೇರಿ ೨೫ ಪರಮೇಶ್ವರ ಸೇರಿ ೨೬ ತತ್ವಗಳಾಗುತ್ತವೆ. ಆದ್ದರಿಂದ ಇದು ಸೇಶ್ವರ (ಸ + ಈಶ್ವರ) ಸಾಂಖ್ಯ ಎಂದುಕರೆಯಲ್ಪಡುತ್ತದೆ.
- ೨.ಈ ಯೋಗವು ರಾಜ ಯೋಗ ವೆಂಬ ಹೆಸರು ಪಡೆದಿದೆ. ಅಷ್ಟಾಂಗ ಯೋಗವು ಇದರ ಜನಪ್ರಿಯ ಸಾಧನಾ ಮಾರ್ಗ. ಅವು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಇದರ ಸಾಧನೆ ಯಿಂದ ಅನೇಕ ಸಿದ್ಧಿ ಗಳು ಸಾಧಕನಿಗೆ ಉಂಟಾಗುತ್ತವೆ (ಲಭಿಸುತ್ತವೆ). ಅವನ್ನು ಉಪಯೋಗಿಸದೆ ಮುಂದುವರೆದರೆ ಕೈವಲ್ಯ ಅಥವಾ ಮೋಕ್ಷ ವಾಗುವುದೆಂದು ಹೇಳಿದೆ. ಈ ರಾಜಯೋಗ- ಯೋಗ ಪದ್ಧತಿಯು ಈಗ ಜಗತ್ತಿನಲ್ಲಿ ಎಲ್ಲೆಡೆ ಪ್ರಸಿದ್ಧವಾಗಿದೆ. ರಾಜಯೋಗದ ಪ್ರವರ್ತಕ ಪತಂಜಲಿಯು ಕ್ರಿ.ಪೂ. ೨ನೆಯ ಶತಮಾನದಲ್ಲಿ ಇದ್ದಿರಬಹುದೆಂದು ಊಹಿಸಿದ್ದಾರೆ.
- ೩) ಸಾಂಖ್ಯ ಮತ್ತು ಯೋಗ ದರ್ಶನಗಳಲ್ಲಿ ಸೃಷ್ಟಿ ಅನಾದಿ ಮತ್ತು ಅನಂತ; ಎಂದರೆ ಆದಿ ಇಲ್ಲದ್ದು, ಅಂತ್ಯವಿಲ್ಲದ್ದು; ಅಥವಾ ಆದಿ ಅಂತ್ಯಗಳು ಮಾನವ ಬುದ್ಧಿ ಶಕ್ತಿಗೆ ನಿಲುಕದ್ದು. ಆದ್ದರಿಂದ ಅದು ಸೃಷ್ಟಿ ಹೇಗೆ ಆಯಿತೆಂಬ ವಿಚಾರಕ್ಕಿಂತ ಸೃಷ್ಟಿಯ ರಚನಾ ಕ್ರಮಕ್ಕೆ ಪ್ರಾಧಾನ್ಯತೆ ಕೊಟ್ಟಿದೆ. ಇದು ರಾಜಯೋಗ ವೆಂದು ಕರೆಯಲ್ಪಟ್ಟು ನಂತರ ಅದರಲ್ಲಿ ಹಠಯೋಗದ ಅನೇಕ ವಿಷಯಗಳನ್ನು ಅಳವಡಿಸಿಕೊಂಡಿದೆ ಅಥವಾ ಅವು ಎರಡಕ್ಕೂ ಅವು ಅನ್ವಯಿಸುತ್ತವೆ. ಪ್ರಕೃತಿಯ ಕುಂಡಲಿನಿ ಶಕ್ತಿ; ಅದರಲ್ಲಿರುವ ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳು, ಮೂಲಾಧಾರದಿಂದ ಸಹಸ್ರಾರದ ವರೆಗಿನ ಏಳು ಚಕ್ರಗಳು. ಇವೆಲ್ಲವೂ ಬ್ರಹ್ಮಾಂಡಕ್ಕೂ ಮತ್ತು ಪಿಂಡಾಂಡ (ಒಂದು ಜೀವ) ಕ್ಕೂ ಸಮಾನವಾಗಿ ಅನ್ವಯಿಸುತ್ತವೆ.
ಪರಮೇಶ್ವರ ತತ್ವ
[ಬದಲಾಯಿಸಿ]- ಪರಮೇಶ್ವರ : ಪರಮೇಶ್ವರನು ಅಥವಾ ಈಶ್ವರನು ಕ್ಲೇಶ, ಕರ್ಮ, ಕರ್ಮಫಲಗಳಿಲ್ಲದವನು. ಮುಕ್ತರಿಗಿಂತ ಬೇರೆ. ದೇಶಕಾಲಗಳನ್ನು ಮೀರಿದವನು. ಸರ್ವಜ್ಞ, ಸರ್ವಶಕ್ತ , ಸರ್ವವ್ಯಾಪಿ, ಪರಿಪೂರ್ಣ, ಜ್ಞಾನ ಸ್ವರೂಪಿ ಗುರು. ವೇದಗಳನ್ನು ಉಪದೇಶಿಸಿದವನು. ಓಂ ಅವನ ಸಂಕೇತ. ಈಶ್ವರನು ವಿಶೇಷ ಪುರುಷ. ಸೃಷ್ಠಿ ಸ್ಥಿತಿ ಲಯ ಗಳಿಗೆ ಕಾರಣನಲ್ಲ. ಆದರೆ ಸಾಧಕನಿಗೆ ಗುರುವಾಗಿ ಮಾರ್ಗದರ್ಶನ ಮಾಡಬಲ್ಲ. ಈ ಪರಮೇಶ್ವರನಿಂದ ಮೂಲ ಪ್ರಕೃತಿ ಎಂದರೆ ವಿಶ್ವದ ಚಿತ್ತ.
ಅದರಿಂದ ಮೂಲ ಪ್ರಕೃತಿ ಉತ್ಪತ್ತಿ.
ಮೂಲ ಪ್ರಕೃತಿ
[ಬದಲಾಯಿಸಿ]- ಮೂಲ ಪಕೃತಿ (ಚಿತ್ತ - ತತ್ವ) ಪ್ರಕೃತಿಯ ವಿಶ್ವವನ್ನು ಆವರಿಸಿರುವ ಕುಂಡಲಿನೀ ಶಕ್ತಿ; ಓಂ ಕಾರ ತತ್ವ , ಜ್ಞಾನ - ಇಚ್ಛಾ -ಕ್ರಿಯಾ ಶಕ್ತಿ ಗಳು ಅದರಲ್ಲಿರುವ ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳು, ಮೂಲಾಧಾರದಿಂದ ಸಹಸ್ರಾರದ ವರೆಗಿನ ಏಳು ಚಕ್ರಗಳು. ಇವೆಲ್ಲವೂ ಬ್ರಹ್ಮಾಂಡಕ್ಕೂ ಮತ್ತು ಪಿಂಡಾಂಡ (ಒಂದು ಜೀವ) ಕ್ಕೂ ಸಮಾನವಾಗಿ ಅನ್ವಯಿಸುತ್ತವೆ.
ಅದರಿಂದ ಮಹತ್ತು :
ಮಹತ್ತು (ಅಹಂಕಾರ ತತ್ವ )
[ಬದಲಾಯಿಸಿ]- ಮಹತ್ತು (ಅಹಂಕಾರ ತತ್ವ ) ಇದೂ ಓಂ ಕಾರ ತತ್ವ; ವ್ಯಷ್ಠಿಯಲ್ಲಿ (ಮನುಷ್ಯನಲ್ಲಿ) ಪರುಷನಲ್ಲಿ ನಾನು ಎಂಬ ಅಜ್ಞಾನ ಬಾವನೆ ಅಥವಾ ಆತ್ಮಗಳು. (ಮಹತ್ ( ಸಮಷ್ಠಿ ತತ್ವ ) ವಿಶ್ವದ ಬುದ್ಧಿ-ಚಿತ್ತ: ಜಗತ್ತಿನ ಉತ್ಪತ್ತಿಗೆ ಬೀಜ. ವ್ಯಷ್ಠಿಯಲ್ಲಿ -ಮನುಷ್ಯನ ಬುದ್ಧಿ )
ಹಿರಣ್ಯಗರ್ಭ -ವಿರಾಟ್ ಪುರುಷ
[ಬದಲಾಯಿಸಿ]- ಹಿರಣ್ಯಗರ್ಭ' -ವಿರಾಟ್ ಪುರುಷ (ಬುದ್ಧಿ ತತ್ವ) ಕಾರ್ಯ ಬ್ರಹ್ಮ - ಇದೂ ಓಂ ಕಾರ ತತ್ವ - ಇದರಿಂದ ಬ್ರಹ್ಮಾಂಡದಲ್ಲಿ
- ಅಹಂಕಾರ ತತ್ವ ಕರ್ತೃತ್ವ, ಭೋಕ್ತೃತ್ವ, ಜಗದ ಸ್ವಾಮಿತ್ವ.; ಪಂಚ ತನ್ಮಾತ್ರೆ ಗಳು, ಪಂಚ ಭೂತಗಳು, ಪಂಚ ಪ್ರಾಣಗಳು, ಪಂಚೇಂದ್ರಿಯಗಳು ವ್ಯಷ್ಠಿ:- ಮನುಷ್ಯನಲ್ಲಿ ನಾನುಎಂಬ ಅಜ್ಞಾನ ಭಾವನೆ, ಅನೇಕತ್ವ ಭಾವ) ಪಂಚ ತನ್ಮಾತ್ರೆ ಗಳು, ಪಂಚ ಭೂತಗಳು, ಪಂಚ ಪ್ರಾಣಗಳು, ಪಂಚೇಂದ್ರಿಯಗಳು
- ಸಮಾನಾಂತರವಾಗಿ ತ್ರಿಗುಣಗಳು: ಸತ್ವ -ರಜ - ತಮ, ಇವುಗಳ ಉತ್ಪತ್ತಿ.
- ಮನಸ್ಸು (ತತ್ವ) ದ ಉತ್ಪತ್ತಿ ಅದರೊಂದಿಗೆ ಹುಟ್ಟಿದವು :-
- ಪಂಚ ತನ್ಮಾತ್ರೆ ಗಳು - ಶಬ್ದ ,ಸ್ಪರ್ಶ,ರೂಪ, ರಸ, ಗಂಧ.
- ಪಂಚ ಭೂತ ಗಳು- ಆಕಾಶ , ವಾಯು,ಅಗ್ನಿ , ಅಪ್, ಪೃಥವೀ.
- ಪಂಚ ಪ್ರಾಣ ಗಳು - ವ್ಯಾನ , ಪ್ರಾಣ ,ಸಮಾನ, ಉದಾನ,ಅಪಾನ.
- ಪಂಚ ಇಂದ್ರಿಯಗಳು- ಶ್ರೋತೃ ತ್ವಕ್ ಚಕ್ಷು ಜಿಹ್ವಾ ನಾಸಿಕ
- ಒಬ್ಬ ವ್ಯಕ್ತಿ ಅಥವ ಮನುಷ್ಯನ ವಿಚಾರ- ವ್ಯಷ್ಠಿ ; (ವ್ಯಷ್ಠಿ ದೃಷ್ಠಿ ಕೋನ.) (ವಿಶ್ವದ ವಿಚಾರ - ಸಮಷ್ಠಿ :) ,೨೦
- ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ೪
- (ಮನಷ್ಯನಲ್ಲಿ ಪರುಷ ಚೈತನ್ಯ ) ೧
- ಒಟ್ಟು ತತ್ವಗಳು ೨೫
- ಪರಮೇಶ್ವರ, ೧
- ಒಟ್ಟು ೨೬ ತತ್ವಗಳು
ನೋಡಿ
[ಬದಲಾಯಿಸಿ]ಸೃಷ್ಟಿ ಮತ್ತು ಪುರಾಣ; ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ
ಉಲ್ಲೇಖ
[ಬದಲಾಯಿಸಿ]