ಸೃಷ್ಟಿ ಮತ್ತು ವೇದ
ಸೃಷ್ಟಿ > ಪುರುಷ ಸೂಕ್ತದಲ್ಲಿ - ಋಗ್ವೇದ ; ಯಜುರ್ವೇದ
[ಬದಲಾಯಿಸಿ]ಪೀಠಿಕೆ :
[ಬದಲಾಯಿಸಿ]- ವಿಶ್ವದ ಸೃಷ್ಟಿ ಕ್ರಮವನ್ನು ವಿವರಿಸುವ ವಿಶಿಷ್ಟವಾದ ಪುರುಷಸೂಕ್ತವು ಋಗ್ವೇದ (ಮಂ ೧೦. ಸೂ.೯೦) ಯಜುರ್ವೇದ(ತೈ.ಅ.೩-೧೨) ಎರಡರಲ್ಲಿಯೂ ಇದೆ. ವೇದ ಮಂತ್ರಗಳಲ್ಲಿ ಗಾಯತ್ರೀ ಮಂತ್ರಕ್ಕೆ ಮೊದಲ ಸ್ಥಾನವಿದ್ದರೆ, ಪುರುಷಸೂಕ್ತವು ಎರಢನೆಯ ಸ್ಥಾನವನ್ನು ಪಡೆದಿದೆ ಎಂದು ಹೇಳಬಹುದು. ವೈದಿಕ ಧರ್ಮದ ಅಥವಾ ಹಿಂದೂ ಧರ್ಮದ ಪೂಜೆಯೇ ಮೊದಲಾದ ಕರ್ಮಗಳಿಗೂ ಯಜ್ಞ ಯಾಗಗಳಲ್ಲಿಯೂ ಪುರುಷ ಸೂಕ್ತಕ್ಕೆ ಮೊದಲ ಪ್ರಾಶಸ್ತ್ಯ. ಪ್ರತಿನಿತ್ಯ ದೇವ ಪೂಜೆಗೂ ಈ ಪುರುಷ ಸೂಕ್ತ ಮಂತ್ರಗಳನ್ನು ಪ್ರತಿಯೊಂದು ವಿಶೇಷ ಪೂಜಾ ಕ್ರಿಯೆಗಳಿಗೂ ಅನ್ವಯಿಸಿ ಹೇಳುತ್ತಾ ಪೂಜೆ ಮಾಡುತ್ತಾರೆ. ಆದರೆ ಆ ಕ್ರಿಯೆಗಳಿಗೂ ಈ ಸೃಷ್ಟಿ ಕ್ರಮವನ್ನು ವಿವರಿಸುವ ಮಂತ್ರಗಳಿಗೂ ಸಂಬಂಧವಿರುವುದು ಕಾಣುವುದಿಲ್ಲ.
ದೇವತೆ :-
[ಬದಲಾಯಿಸಿ]- ಈ ಮಂತ್ರಗಳನ್ನು ನಾರಾಯಣನೆಂಬ ಋಷಿ ಕಂಡುಕೊಂಡಿದ್ದರಿಂದ ಇದಕ್ಕೆ 'ನಾರಾಯಣೀಯ'ವೆಂಬ ಹೆಸರೂ ಇದೆ. ಅದಕ್ಕಾಗಿ ಇದರ ಅಧಿದೇವತೆ ಶ್ರೀಮನ್ನಾರಾಯಣನೆಂದು ಹೇಳುತ್ತಾರೆ. ವೈಷ್ಣವರು ಪುರುಷನೆಂದರೆ ಸರ್ವಾಂತರ್ಯಾಮಿಯಾದ ವಿಷ್ಣು ಎನ್ನುತ್ತಾರೆ. ಶಿವ ಭಕ್ತರು ಶಿವನೇ ಪುರುಷನೆಂದು ತಿಳಿಯುತ್ತಾರೆ. ಅದ್ವೈತ ವೇದಾಂತಿಗಳು ಪರಬ್ರಹ್ಮ ಚೈತನ್ಯವೇ ಪುರುಷನೆಂದೂ, ಅದು ಗಂಡೂ ಅಲ್ಲ ಹೆಣ್ಣೂ ಅಲ್ಲ, ನಪುಂಸಕವೂ ಅಲ್ಲದ ಮೂಲ ಚೈತನ್ಯವೆನ್ನುತ್ತಾರೆ. ಪುರುಷನೆಂದರೆ ಮೂಲ ಚೈತನ್ಯ. ಗಂಡು ಎಂಬುದಲ್ಲ ಅಥವಾ ಗಂಡೂ ಆಗಬಹುದು-ಹೆಣ್ಣೂ ಆಗಬಹುದು. ಎಲ್ಲದಕ್ಕಿಂತ ದೊಡ್ಡದಾದುರಿಂದ ಬ್ರಹ್ಮ ; ಒಡೆಯನೂ ಜಗನ್ನಿಯಾಮಕನೂ ಆಗಿರುವುದರಿಂದ ಪರಮೇಶ್ವರ; ಈ ವಿಶ್ವಕ್ಕೆ ಜನ್ಮ ಕೊಟ್ಟಿರುವುದರಿಂದ ಜಗಜ್ಜನನಿ ಅಂಬಿಕಾ(ತಾಯಿ), ಸರ್ವಾಂತರ್ಯಾಮಿಯಾಗಿರುವುದರಿಂದ ವಿಷ್ಣು, ಹರಿ, ನಾರಾಯಣ, ಇತ್ಯಾದಿ ಹೆಸರುಗಳು. ಅದಕ್ಕೆ ಹೆಸರೇ ಇಲ್ಲದಿರುವುದರಿಂದ ತತ್ (ಅದು) ; ಯಾವಾಗಲೂ ಇರುವುದರಿಂದ ಸತ್ (ಇದೆ); ಅದು ಮೊದಲು ಶಬ್ದ ರೂಪವಾಗಿ (ಸ್ಪಂದನ) ವಿಕಾಸಗೊಂಡಿದ್ದರಿಂದ ಓಂ (ಮೊದಲ ಸ್ಪಂದನ); ಇದು ಎಲ್ಲರ ಪ್ರಾಣ ಸ್ವರೂಪವಾಗಿರುವುದರಿಂದ ಪರಮಾತ್ಮ.
ಕಾಲ:-
[ಬದಲಾಯಿಸಿ]- ಇತಿಹಾಸಕಾರರು ಇದನ್ನು (ಈ ಸೂಕ್ತಿಯನ್ನು) ಕ್ರಿ.ಪೂ. ೨೭೦೦ ರಿಂದ ಕ್ರಿ.ಪೂ. ೧೨೦೦ರ ವರೆಗಿನ ಕಾಲದ್ದಿರಬೇಕೆಂದು ನಿರ್ಣಯಿಸಿದ್ದಾರೆ. ಋಗ್ವೇದದಲ್ಲಿ ಬರುವ ನಕ್ಷತ್ರ ಜ್ಯೋತಿಷ್ಯ ವಿಷಯಗಳ ಆಧಾರದ ಮೇಲೆ ಮತ್ತು ಸಂಪ್ರದಾಯಿಕ ಆಧಾರದಿಂದ ಸುಮಾರು ಕ್ರಿ.ಪೂ. ೪೦೦೦ ವರ್ಷ, ಎಂದರೆ ಈಗಿನಿಂದ ೬೦೦೦ ವರ್ಷ ಹಿಂದಿನದೆಂದು ಕೆಲವರು ಹೇಳುತ್ತಾರೆ. ಅದು ವೈಜ್ಞಾನಿಕವಾಗಿ ಶಿಲಾಯುಗದ ಅಂತ್ಯಕಾಲ ಮತ್ತು ಕಬ್ಬಣದ ಯುಗ.
ರೂಪಕ :-
[ಬದಲಾಯಿಸಿ]- ಇಡೀ ಸೃಷ್ಟಿ ಕ್ರಮವನ್ನು ಒಂದು ಯಜ್ಞದ ರೂಪಕವನ್ನಾಗಿ (ಇಂಗ್ಲಿಷಿನ-ಅಲೆಗೋರಿ)(ಕಥೆಯಾಗಿ) ನಿರೂಪಿಸಿದೆ. ಈ ಸೃಷ್ಟಿಯಲ್ಲಿ ಸಮಷ್ಟಿಗೆ (ವಿಶ್ವಕ್ಕೆ) ಮತ್ತು ವ್ಯಷ್ಟಿಗೆ (ಒಂದು ಜೀವಿಗೆ) ಸಂಬಂಧಪಟ್ಟುದು ಇವೆ.
ವಿಶ್ವದ ಒಟ್ಟು ರಚನೆ:
[ಬದಲಾಯಿಸಿ]- ಓಂ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ |
- ಸಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಟದ್ದಶಾಂಗುಲಮ್ ||೧||
- ಪುರುಷ ಏವೇದಗ್೦ ಸರ್ವಂ| ಯದ್ಭೂತಂ ಯಚ್ಚ ಭವ್ಯಂ |
- ಉತಾಮೃತತ್ವಸ್ಯೇಶಾನೋ| ಯದನ್ನೇನಾತಿರೋಹತಿ||೨ ||
- ಆ ಪುರುಷನಿಗೆ ಸಾವಿರ (ಸಾವಿರಾರು) ತಲೆಗಳು ಎಂದರೆ ಎಲ್ಲಾ ಜೀವಿಗಳ ತಲೆಗಳೂ ಅವನ ತಲೆಗಳೇ! ಹಾಗಯೇ ಸಾವಿರಾರು ಕಾಲುಗಳು, ಅವನು ಭೂಮಿಯನ್ನು ಸುತ್ತವರಿದು - ಆವರಿಸಿ ಹತ್ತು ಪಟ್ಟು (ಬೊಟ್ಟು) ಆಚೆಗೂ ಇದ್ದಾನೆ. (ವಿಜ್ಞಾನದಲ್ಲಿ ಮಹಾ ಸ್ಪೋಟದ ನಂತರ ಕಾಣದ ಹೆಚ್ಚಿನ ಕಪ್ಪು ದ್ರವ್ಯದ ಇರುವುದನ್ನು ಹೋಲಿಸಬಹುದು)(೧) ಏನೇನು ಇತ್ತೋ, ಇದೆಯೋ. ಮುಂದೆ ಇರುವುದೋ ಅದೆಲ್ಲಾ ಆ ಪುರುಷನೇ. ಮೋಕ್ಷಕ್ಕೂ ಅವನೇ ಒಡೆಯ.
- ಅವನಿಗೆ - (ಅದರಲ್ಲಿ )ನಾಲ್ಕು ಪಾದಗಳು - ನಾಲ್ಕು ಭಾಗಗಳು
ಒಂದನೇ ಹಂತ:ವಿಶ್ವ ಮತ್ತು ಅವ್ಯಕ್ತ ವಿವರಣೆ
[ಬದಲಾಯಿಸಿ]- ಏತಾವಾನಸ್ಯ ಮಹಿಮಾ | ಅತೋಜ್ಯಾಯಾಂಗ್‌ಶ್ಚ ಪೂರುಷಃ |
- ಪಾದೋಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾಮೃತಂ ದಿವಿ ||೩||
- ತ್ರಿಪಾದೂರ್ಧ್ವ ಉದೈತ್ಪುರುಷಃ | ಪಾದೋಸ್ಯೇಹಾಭವಾತ್ಪುನಃ |
- ತತೋ ವಿಶ್ವಙ ವ್ಯಕ್ರಾಮತ್ | ಸಾಶನಾನಶನೇ ಅಭಿ ||೪||
- ಪುರುಷನ ಒಂದು ಪಾದದಿಂದ ಇವೆಲ್ಲವೂ ಸೃಷ್ಠಿಯಾಗಿದೆ. ಇದು ವ್ಯಷ್ಟಿ ಸಮಷ್ಟಿ - ಉಳಿದ ೩ ಭಾಗಗಳು 'ಅವ್ಯಕ್ತ' ಅರಿಯಲಾರದ ಶಕ್ತಿ ಇದೆ,
- ಒಂದನೇ ಹಂತದ ಅವ್ಯಕ್ತ ವಿಶ್ವದ ವಿವರಣೆ - ಕಾಣದ ಭಾಗ - ದೇವಲೋಕ (ಅಂತರಿಕ್ಷ) - ಯಾಜ್ಞಿಕರು.
- ಅವ್ಯಕ್ತ ಭಾಗದಿಮದ ದೇವತೆಗಳು ಮತ್ತು ಇತರ ಮೂಲ ಸರಕುಗಳ ಉತ್ಪತ್ತಿ, - ಕಾಲ, ಯಾಜ್ಞಿಕರು, ಪಂಚ ಭೂತಗಳು, ದೇವತೆಗಳು, ಸಾಧ್ಯರು, ಋಷಿಗಳು.
- ವ್ಯಷ್ಟಿಯಲ್ಲಿ ಕಾಣುವ ಭಾಗ : ವ್ಯಕ್ತ ಸೃಷ್ಟಿ ;
- ಪ್ರಾಣ ; ಬುದ್ಧಿ -> ೪ ಅಂತಃಕರಣ; ೨ ಧರ್ಮಾಧರ್ಮ; ೫ ಪ್ರಾಣಗಳು; ೫ ಜ್ಞಾನೇಂದ್ರಿಯ; ೫ ಕರ್ಮೇಂದ್ರಿಯ- ಒಟ್ಟು -೨೧ ತತ್ವಗಳು (ಇವನ್ನು ಯಜ್ಞಕ್ಕೆ ಉಪಯೋಗಿಸಿದ ಸಮಿತ್ತುಗಳೆಂದು ಹೇಳಿದೆ)
ಎರಡನೇ ಹಂತದ ವಿರಾಟ್ ಪುರುಷನ ಉದಯ
[ಬದಲಾಯಿಸಿ]- ತಸ್ಮಾದ್ವಿರಾಡಜಾಯತ | ವಿರಾಜೋ ಅಧಿ ಪೂರುಷಃ |
- ಸ ಜಾತೋ ಅತ್ಯರಿಚ್ಯತ | ಪಶ್ಚಾದ್ಭೂಮಿಮಥೋ ಪುರಃ ||೫||
- ವಿರಾಟ್ ಪುರುಷ (ಅಹಂಕಾರ -ಎಂದರೆ ಸೃಷ್ಟಿ ಕರ್ತನಲ್ಲಿ 'ನಾನು' ಎನ್ನುವ ಭಾವ) ಇವನೇ ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮ ಸೃಷ್ಟಿಯನ್ನು ಮೀರಿ ಅದಕ್ಕೆ ಒಡೆಯನಾದನು.
- ಅವನಿಂದ - ಬ್ರಹ್ಮಾಂಡ (ಪ್ರಕೃತಿ ತತ್ವ ) - ಅವ್ಯಾಕೃತ ( ಶ್ರೀಮತ್ತು ಹ್ರೀ ಪತ್ನಿಯರು-ಧರ್ಮಮತ್ತು ಲಜ್ಜೆ) -> ಪಂಚ ಭೂತ ಗಳು -> ದೇವತೆಗಳು ಮತ್ತು ಸಾಧ್ಯರು, ಋಷಿಗಳು (ಇವರೇ ಮುಂದೆ ಯಜ್ಜ ಮಾಡುವವರು)
- ಕಾಣುತ್ತಿರುವ ಒಂದು ಪಾದವು ಎಲ್ಲಾ ಜೀವ ಜಂತುಗಳು ಮತ್ತು ಕಲ್ಲು ಮಣ್ಣು ಮೊದಲಾದ ಜಡ ವಸ್ತುಗಳನ್ನು ಒಳಗೊಂಡಿದೆ.
- ೧.ಕಾಣುವ ಲೋಕ (ಅಧಿ ಭೌತಿಕ) ; ೨. ದೇವಲೋಕ (ಅಧಿ ದೈವಿಕ ಅಂತರಿಕ್ಷ) ೩. ಪುರುಷ (ಎಲ್ಲರ ಆತ್ಮ -ಅಧ್ಯಾತ್ಮ ?)
ಮೂರನೇ ಹಂತ ಯಜ್ಞ
[ಬದಲಾಯಿಸಿ]- ಯತ್ಪುರುಷೇಣ ಹವಿಷಾ | ದೇವಾ ಯಜ್ಞ ಮಮತನ್ವತ |
- ವಸಂತೋ ಅಸ್ಯಾಸೀದಾಜ್ಯಂ | ಗ್ರೀಷ್ಮ ಇಧ್ಮಃ ಶರದ್ಧವಿಃ ||೬||
- ಸಪ್ತಾಸ್ಯಾಸನ್ ಪರಿಧಯಃ | ತ್ರಿಃ ಸಪ್ತ ಸಮಿಧಃಕೃತಾಃ |
- ದೇವಾ ಯದ್ಯಜ್ಞಂ ತನ್ವನಾಃ | ಅಬದ್ನನ್ ಪುರುಷಂ ಪಶುಃ ||೭||
- ಸೃಷ್ಠಿಯ ಮೂಲ ಸರಕು :- ಕಾಲದ ಉದಯ
- ಕಾಲ; ಹಗಲು-ರಾತ್ರಿಗಳು ; ಧರ್ಮ-ಅಧರ್ಮಗಳು;
- ವಸಂತ; ಗ್ರೀಷ್ಮ ; ಶರದ್ - ಋತುಗಳು
- ಯಾಜ್ಞಿಕರು : ಪಂಚ ಭೂತಗಳು ; ದೇವತೆಗಳು ; ಸಾಧ್ಯರು ; ಋಷಿಗಳು.
- ಈ ಯಜ್ಞ ಕುಂಡಕ್ಕೆ ಏಳು ಪರಿಧಿಗಳು.(ಸುತ್ತ ಇಟ್ಟಿರುವ ಗಡಿಗಳು) ೧. ಆಕಾಶ ; ೨ ವಾಯು ; ೩ ಅಗ್ನಿ ; ೪ ಜಲ; ೫ ಭೂಮಿ; ೬ ರಾತ್ರಿ; ೭ ಹಗಲು
- ಬ್ರಹ್ಮ (ಪುರುಷ) (ಯಜ್ಞ ಪಶು) :- ದೇವತೆಗಳು ಪುರುಷನನ್ನೇ (ಚೈತನ್ಯ) ಯಜ್ಞಪಶುವಾಗಿ ಮಾಡಿ, ಯಜ್ಞದಲ್ಲಿ ಹಾಕಿ ಯಜ್ಞ ಮಾಡಿದರು ಎಂದರೆ ಜಗನ್ಮೂಲ ಚೈತನ್ಯವನ್ನೇ ಉಪಯೋಗಿಸಿಕೊಂದು ಸೃಷ್ಟಿ ಕಾರ್ಯವನ್ನು ಮುಂದುವರೆಸಿದರು ಎಂದು ಭಾವಿಸಬೇಕು. ಗ್ರೀಷ್ಮವು -ಸೌದೆ ; ವಸಂತವು -ತುಪ್ಪ ; ಶರದೃತು - ಚರು (ಅನ್ನ) ; ೨೧ ಸಮಿತ್ತುಗಳು )(ಅಂತಃಕರಣ ಇತ್ಯಾದಿಗಳು); (೭)
ಅವುಗಳಿಂದ ಯಜ್ಞದಲ್ಲಿ ಸೃಷ್ಟಿಯಾದ ತತ್ವ ಮತ್ತು ವಸ್ತುಗಳು; ವ್ಯಷ್ಟಿ ಮತ್ತು ಸಮಷ್ಟಿಗೆ ಸೇರಿದ ತತ್ವಗಳನ್ನು ಹೇಳಲಾಗುತ್ತದೆ : -
ಯಜ್ಞಕುಂಡದ ನಕ್ಷೆ
[ಬದಲಾಯಿಸಿ]ಯಜ್ಞಕುಂಡದ ಸಾಧಾರಣ ನಕ್ಷೆಗೆ ಚೌಕ ಅಂಕಣ ಉಪಯೋಗಿಸಿದೆ . ಮದ್ಯದ ಅಂಕಣಗಳನ್ನು ಹೋಮದ ಕುಂಡವೆಂದು ಭಾವಿಸ ಬೇಕು. ಸುತ್ತ ಇರುವ ಅಂಕಣಗಳನ್ನು ಯಜ್ಞಪರಿಧಿ ಅಥವಾ ಕಟ್ಟೆ ಎಂದು ಭಾವಿಸಬೇಕು. ಆ ಆದಿಮೂಲ ಬ್ರಹ್ಮನ ಚೈತನ್ಯದ ಅಲ್ಪ ಭಾಗದಿಂದ ಈ ದೃಶ್ಯಜಗತ್ತು ಆಗಿದೆ ಎಂಬುದು ಸಿದ್ಧಾಂತ - ವೇದದ ಹೇಳಿಕೆ. ಯಜ್ಞದಲ್ಲಿ ಪಶುವನ್ನು ಯಜ್ಞಸ್ಥೂಪಕ್ಕೆ ಕಟ್ಟಿ-ಅದರ ಅಂಗಗಳನ್ನು ಹೋಮಕ್ಕೆ ಹಾಕಿದಾಗ ಅದಕ್ಕೆ ಫಲ ಉಂಟಾಗುವುದು. ಹಾಗೆ ಪರಮಪುರುಷನನ್ನೇ ಪಶುವಾಗಿ ಮಾಡಿಕೊಂಡು ಅದರ ಅಂಗ-ಭಾಗಗಳನ್ನು ಈ ಮೊದಲ ಯಜ್ನಕ್ಕೆ ಹಾಕಿದಾಗ ಅದರ ಫಲವಾಗಿ ಈ ದೃಶ್ಯ ಜಗತ್ತು , ಅದೃಶ್ಯ ಜಗತ್ತುಗಳು ಉಂಟಾದವೆಂದು ಒಂದು ಕಲ್ಪನೆ. ಆಗ ಪಶುವಾಗಲು ಬೇರೆ ಯಾವ ಪ್ರಾಣಿಯೂ ಇರಲಿಲ್ಲ. ಜಗತ್ತನ್ನು ಸೃಷ್ಟಿಸಲು ಈ ದೊಡ್ಡ ಚೈತನ್ಯವೇ ತಕ್ಕದಾಗಿತ್ತು.(ಇದು ಒಂದು ಸಾಂಕೇತಿಕ ರೂಪಕ. ಕಾರಣ - ಆ ಬ್ರಹ್ಮ -ಅವನೇ ಯಜ್ಞದ ಅಗ್ನಿ , ಅವನೇ ಪಶು)
- ಯಜ್ಞಕುಂಡದ ನಕ್ಷೆ:
ಸುತ್ತ ಪರಿಧಿ | ಆದಿಮೂಲ ಬ್ರಹ್ಮನೇ-ಪಶು;
|
(ಸುತ್ತ)(7)
|
---|---|---|
1 ಆಕಾಶ. | ಮನಸ್ಸು | 2 ವಾಯು |
” | ಪ್ರಾಣ | ” |
” | ತಲೆ | " |
” | ಮುಖ | ” |
7 ಹಗಲು | ಕಣ್ಣುಗಳು | 3 ಅಗ್ನಿ |
” | ಕಿವಿಗಳು | ” |
” | ಮೂಗು | ” |
6 ರಾತ್ರಿ | ಬಾಯಿ | 4 ಜಲ |
” | ತೋಳುಗಳು | 4 ಜಲ |
" | ಹೊಕ್ಕಳು | ” |
6 ರಾತ್ರಿ | ತೊಡೆ | 4 ಜಲ |
” | ಕಾಲು | ” |
” | ಪಾದಗಳು | ” |
5 ಭೂಮಿ | 5 ಭೂಮಿ | 5 ಭೂಮಿ |
- (ಸುತ್ತ ಇರುವ ಅಂಕಣಗಳು- 'ಯಜ್ಞದ ಕಟ್ಟೆ' ಎಂದು ಭಾವಿಸ ಬೇಕು.ಬಣ್ಣ ಹಾಕಿದ್ದರೆ ಚೆನ್ನಿತ್ತು . ಬರುವುದಿಲ್ಲ.))
ನಾಲ್ಕನೆಯ ಹಂತ -ವ್ಯಷ್ಟಿ ಮತ್ತು ಸಮಷ್ಟಿ ಸೃಷ್ಟಿ
[ಬದಲಾಯಿಸಿ]- ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ | ಪುರುಷಂ ಜಾತಮಗ್ರತಃ |
- ತೇನ ದೇವಾ ಅಯಜಂತ| ಸಾಧ್ಯಾ ಋಷಯಶ್ಚ ಯೇ ||೮||
- ತಸ್ಮಾದ್ಯಜ್ಞಾತ್ಸರ್ವಹುತಃ | ಸಂಭೃತಂ ಪೃಷದಾಜ್ಯಂ |
- ಪಶೂಗ್೦ ಸ್ತಾಗ್೦ ಶ್ಚ ಕ್ರೇ ವಾಯವ್ಯಾನ್ | ಅರಣ್ಯಾನ್ ಗ್ರಾಮಾಶ್ಚಯೇ||೯||
- ತಸ್ಮಾದ್ಯಜ್ಞಾತ್ಸರ್ವಹುತಃ | ಋಚಸ್ಸಾಮನಿ ಜಜ್ನಿರೇ|
- ಛಂದಾಗ್ಂಸಿ ಜಜ್ನಿರೇ ತಸ್ಮಾತ್ | ಯಜುಸ್ತಸ್ಮಾದಜಾಯತ ||೧೦||
- ತಸ್ಮಾದಶ್ವಾ ಅಜಾಯನ್ತ | ಕೇ ಚೋಭಯಾದತಃ |
- ಗಾವೋ ಹ ಜಜ್ಞಿರೇ ತಸ್ಮಾತ್ | ತಮಾಜ್ಜಾತಾ ಅಜಾವಯಃ ||೧೧||
- ಯತ್ಪುರುಷಂ ವ್ಯಧದುಃ | ಕತಿಧಾ ವ್ಯಕಲ್ಪಯನ್ |
- ಮುಖಸ್ಯ ಕಿಮಸ್ಯ ಕೌ ಬಾಹೂ | ಕಾವೂರೂ ಪಾದಾವುಚ್ಯತೇ ||೧೨||
- ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |
- ಊರೂ ತದಸ್ಯ ಯದ್ವೈ ಶಃ | ಪದ್ಭಾಗ್ಂ ಶೂದ್ರೋಅಜಾಯತ ||೧೩||
- ಚಂದ್ರಮೋ ಮನಸೋಜಾತಃ | ಚಕ್ಷೋಸ್ಸೂರ್ಯೋ ಅಜಾಯತ |
- ಮುಖಾದಿಂದ್ರಾಶ್ಚಾಗ್ನಿಶ್ಚ | ಪ್ರಾಣಾದ್ವಾಯುರಜಾಯತ ||೧೪||
- ನಾಭ್ಯಾ ಅಸೀದಂತರಿಕ್ಷಂ | ಶೀರ್ಷ್ಣೋ ದ್ಯೌ ಸಮವರ್ತತ |
- ಪದ್ಭ್ಯಾಂ ಭೂಮಿರ್ದಿಶಃ | ಶ್ರೋತ್ರಾತ್ | ತಥಾ ಲೋಕಾಗ್೦ ಅಕಲ್ಪಯನ್ ||೧೫||
- ಯಜ್ಞಕ್ಕೆ ಪಶುವಿನ ಅಂಗಾಂಗಳನ್ನು ಹಾಕಿ ಯಜ್ಞ ಕ್ರಿಯೆ ಮಾಡುವರು. ಹಾಗೆಯೇ ಆ ಪುರುಷ ಅಂಗಾಂಗಳನ್ನು (ಭಾವಿಸಿಕೊಂಡು -ರೂಪಕ ಕಲ್ಪನೆ)
ಯಜ್ಞಕ್ಕೆ ಹಾಕಿದಾಗ ಹುಟ್ಟಿದ ವ್ಯಷ್ಟಿ ಮತ್ತು ಸಮಷ್ಟಿ ಸೃಷ್ಟಿ : ಬ್ರಹ್ಮನೇ-ಪಶು ಅದರ ಅಂಗಾಂಗಳ ಭಾಗಗಳು: ಮನಸ್ಸು ; ಪ್ರಾಣ ತಲೆ ;ಮುಖ ; ಕಣ್ಣುಗಳು ; ಕಿವಿಗಳು.
- ವ್ಯಷ್ಟಿ - ಯಜ್ಞದಿಂದ ಹುಟ್ಟಿದ ವಸ್ತುಗಳು -೫ ಜ್ಞಾನೇಂದ್ರಿಯ ಗಳು
ಪಾದಗಳು * ಮನ, ಬುದ್ಧಿ, ಅಹಂಕಾರ, ಚಿತ್ತ , ಜೀವಿಗಳು : ಮೊಸರು, ತುಪ್ಪ . (೯, ೧೦)
- ಅಡವಿಯ ಮೃಗಗಳು : ಉದಾ :ಕುದುರೆ, ಆಕಳು, ಇತ್ಯಾದಿ. (೧೧)
- ಮತ್ತೆ - ಯಾವ ಯಾವ ಅಂಗಗಳಿಂದ ಏನೇನು ಹುಟ್ಟಿದವು ? -(೧೨) ಅದಕ್ಕೆ
- ಎರಡು ಸಾಲು ಹಲ್ಲಿರುವ ಪ್ರಾಣಿಗಳು.
- ಬಾಯಿ/ಮುಖದಿಂದ -ಬ್ರಾಹ್ಮಣರು ತಲೆ
- ತೋಳುಗಳಿಂದ - ಕ್ಷತ್ರಿಯರು ಮುಖ
- ತೊಡೆಗಳಿಂದ - ವೈಶ್ಯರು
- ಪಾದಗಳಿಂದ - ಶೂದ್ರರು. (೧೩)
- ಸಮಷ್ಟಿ :-ಯಜ್ಞದಿಂದ ಜ್ಞಾನ, ವಿದ್ಯೆ, ಕಲೆಯ ಮೂಲವಾದ - ವೇದಗಳು, ಛಂದಸ್ಸುಗಳು ಹುಟ್ಟಿದವು . (೧೦)
- ಮುಖ + ಪ್ರಾಣದಿಂದ -ಇಂದ್ರ, ಅಗ್ನಿ, ವಾಯು
- ಕಣ್ಣುಗಳಿಂದ - ಸೂರ್ಯ
- ಕಿವಿಗಳಿಂದ - ದಿಕ್ಕುಗಳು
- ಮೂಗಿನಿಂದ - ಪ್ರಾಣ ವಾಯು (೧೪)
- * ಹೊಕ್ಕಳಿನಿಂದ - ಅಂತರಿಕ್ಷ
- ತಲೆಯಿಂದ - ಸ್ವರ್ಗಲೋಕ
- ಕಾಲಿನಿಂದ- ಭೂಮಿ
- ಕಿವಿಗಳಿಂದ - ದಿಕ್ಕು -ಹೀಗೆ ನಾನಾ ಲೋಕಗಳು ಉದಯಿಸಿದವು.(೧೫)
- ಈ ಸೃಷ್ಟಿ ಕ್ರಮವನ್ನು ತಿಳಿಯುವುದರ ಫಲ ಹೇಳಲಾಗುವುದು
ಈ ಸೃಷ್ಟಿ ಕ್ರಮವನ್ನು ತಿಳಿಯುವುದರ ಫಲ
[ಬದಲಾಯಿಸಿ]- ವೇದಾಹಮೇತಂ ಪುರುಷಂ ಮಹಾಂತಂ | ಆದಿತ್ಯ ವರ್ಣಂ ತಮಸಸ್ತು ಪಾರೇ |
- ಸರ್ವಾಣಿ ರೂಪಾಣಿ ವಿಚಿತ್ಯ ಧೀರಃ | ನಾಮಾನಿ ಕೃತ್ವಾ ಭಿವದನ್ಯದಾಸ್ತೇ ||೧೬||
- ಧಾತಾ ಪುರಸ್ವಾ ದ್ಯಮಂದಾಜಹಾರ | ಶಕ್ರಃ ಪ್ರವಿದ್ವಾನ್ ಪ್ರದಿಶಶ್ಚತರಃ |
- ತಮೇವಂ ವಿದ್ವಾನ್ ಅಮೃತ ಇಹ ಭವತಿ | ನಾನ್ಯಃ ಪಂಥಾ ಅಯನಾಯ ವಿದ್ಯತೇ ||೧೭||
- ಯಜ್ಞೇನ ಯಜ್ಞಮಜಯಂತ ದೇವಾಃ | ತಾನಿಧರ್ಮಾಣಿ ಪ್ರಥಮಾನ್ಯಾಸನ್ |
- ತೇ ಹ ನಾಕಂ ಮಹಿಮಾನಸ್ಸಚಂತೇ | ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ||೧೮||
- ವೇದ ಋಷಿಯು ತಾನು - ಆ ಮಹಾಮಹಿಮ ಆದಿಪುರುಷನನ್ನು ತಿಳಿದೆನೆಂದು ಹೇಳಿ, ಅವನೇ ಪ್ರಾಣಿ -ವಸ್ತುಗಳಿಗೆ ಹೆಸರು ಕೊಟ್ಟು ಎಲ್ಲಾ ವ್ಯವಹಾರ ನೆಡೆಸುವನೆಂದು ಅರಿಯುತ್ತಾನೆ.
- ಈ ಸೃಷ್ಟಿಕರ್ತನಾದ ಮಹಾಪುರುಷನನ್ನು ಈ ಮೇಲ್ಕಂಡ ರೀತಿ ಅರಿಯುತ್ತಾನೋ ಅವನು ಅಮೃತ ಪಡೆದವನಾಗುತ್ತಾನೆ (೧೭)ದೇವತೆಗಳು ಯಜ್ಞ ಮಾಡಿ ವಿರಾಟ್ ಪುರುಷನನ್ನು ಪೂಜಿಸಿದರು.
- ಆ ವಿರಾಟ್ ಪುರುಷನನ್ನು ಉಪಾಸನೆ ಮಾಡುವವರು ಸ್ವರ್ಗ ಪದವಿಗೆ ಹೋಗುತ್ತಾರೆ. (೧೮)
ಇಲ್ಲಿ ಅದ್ಭ್ಯ ಸಂಭೂತಹ್ ಮಂತ್ರದ ಅರ್ಥ ಇಲ್ಲ ಹಾಗಾಗಿ ಇದು ಅಪೂರ್ಣ ಅದೇ ಮಂತ್ರಗಳಲ್ಲೇ ವಿಶ್ವಕರ್ಮನೆ ಈ ಸೂಕ್ತದ ಮೂಲ ಪುರುಷ ಎಂದು ಹೇಳುವ ವಿಷಯ ಇದೆ
ಉಪಸಂಹಾರ
[ಬದಲಾಯಿಸಿ]- ವಿಶ್ವ ಸೃಷ್ಟಿ ಯ ಬಗೆಗೆ ವೇದದ ಇನ್ನೂ ಹೆಚ್ಚಿನ ವಿವರಣೆ ನಾಸದೀಯ ಸೂಕ್ತ ವನ್ನೂ ನೋಡಬೇಕು , ಉಪನಿಷತ್ ಗಳಲ್ಲಿ ಬರುವ ವಿವರಣೆಗಳಿಗೆ ಸೃಷ್ಟಿ ಮತ್ತು ಪುರಾಣ ನೋಡಿ.
ನೋಡಿ
[ಬದಲಾಯಿಸಿ]ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ*ಹಿಂದೂ ಧರ್ಮ