ವೇದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೇದ-ಸಂಕ್ಷಿಪ್ತ ಪರಿಚಯ[ಬದಲಾಯಿಸಿ]

ಪ್ರಪಂಚದ ಅತ್ಯಂತ ಪುರಾತನ ಗ್ರಂಥಗಳಲ್ಲಿ ವೇದಗಳು ಮುಖ್ಯವಾದುವು.

ವೇದಗಳು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಗ್ರಂಥಗಳು. ವೇದಗಳು ನಾಲ್ಕು - ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವೇ ಅತ್ಯಂತ ಹಳೆಯದು, ಋಗ್ವೇದದ ಕಾಲ ಕ್ರಿ.ಪೂ ೧೫೦೦ಕ್ಕಿಂತ ಹಿಂದೆ ಇದ್ದಿರಬಹುದು. ವೇದ ವಾಙ್ಮಯ ಪ್ರಭಾವವು ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಬೆಳವಣಿಗೆಯಲ್ಲಿ ಪ್ರಮುಖವಾದುದು.

ಉಪನಿಷತ್ತುಗಳನ್ನು ವೇದಾಂತ ಎನ್ನುತ್ತಾರೆ.

  • ಉಗಮ ಮತ್ತು ಕಾಲ

ಹಿಂದೂ ಸಂಪ್ರದಾಯದಂತೆ ವೇದಗಳು ಅಪೌರುಷೇಯವಾದವು, ಎಂದೆಂದಿಗೂ ಅಸ್ತಿತ್ವದಲ್ಲಿ ಇದ್ದಿರುವಂಥವು. ಹೀಗೆ ಅವು ಹಿಂದೂ ಶ್ರುತಿ ಪಠ್ಯಗಳ ಗುಂಪಿಗೆ ಸೇರುತ್ತವೆ. ಚಾರಿತ್ರಿಕವಾಗಿ, ವೇದಗಳ ಉಗಮದ ಕಾಲ ಮತ್ತು ಸ್ಥಳ ಭಾರತೀಯ ಹಾಗೂ ಪಾಶ್ಚಾತ್ಯ ಚರಿತ್ರಜ್ಞರಿಂದ ಬಹಳಷ್ಟು ಸಿದ್ಧಾಂತಗಳನ್ನು ಕಂಡಿವೆ. ಫಿಷರ್ ಮೊದಲಾದ ಚರಿತ್ರಜ್ಞರು ವೇದಗಳು ೮೦೦೦ ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದಿವೆ ಎಂದು ಅಭಿಪ್ರಾಯಪಟ್ಟಿದ್ದರೂ, ಬಹುಪಾಲು ಚರಿತ್ರಜ್ಞರ ಅಭಿಪ್ರಾಯದಂತೆ ವೇದಗಳ ಸಂಕಲನ ಸುಮಾರು ಕ್ರಿ.ಪೂ ೧೮೦೦ ಕ್ಕೆ ಪ್ರಾರಂಭವಾಗಿ ಕ್ರಿ.ಪೂ ೮೦೦ ರ ವರೆಗೆ ಎಂದು.

ಸಾಂಪ್ರದಾಯಿಕವಾಗಿ, ಋಗ್ವೇದ ಸಂಹಿತೆಯ ಸಂಕಲನ ವೇದವ್ಯಾಸರ ಸೂಚನೆಯಂತೆ ಪೈಲ ಮಹರ್ಷಿಗಳಿಂದ ನಡೆಯಿತಂತೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲ್ಪಡುವ ಮಂತ್ರಗಳ ಸಂಕಲನ ಯಜುರ್ವೇದ ಸಂಹಿತೆಯಾಗಿ ಬೆಳೆಯಿತು. ಸಂಗೀತಕ್ಕೆ ಹೊಂದುವಂತೆ ಬರೆಯಲಾದ ಅನೇಕ ಮಂತ್ರಗಳ ಸಂಕಲನ ಸಾಮವೇದ - ನಾಲ್ಕು ವೇದಗಳಲ್ಲಿ ಕೊನೆಯದು ಅಥರ್ವವೇದ. ಅಥರ್ವವು ಯಂತ್ರ,ತಂತ್ರಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಪ್ರತಿ ವೇದಕ್ಕೂ ಒಂದು ಉಪವೇದವಿದೆ.

  • ಭಾಗಗಳು
ಪ್ರತಿ ವೇದವನ್ನೂ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು:
  • ಸಂಹಿತೆ - ಮಂತ್ರಗಳನ್ನು ಒಳಗೊಂಡ ಭಾಗ ;ಬ್ರಾಹ್ಮಣ - ಧಾರ್ಮಿಕ ಆಚರಣೆಗಳನ್ನು ಕುರಿತ ಭಾಗ ಆರಣ್ಯಕ - ಧ್ಯಾನಕ್ಕೆ ಸಂಬಂಧಪಟ್ಟದ್ದು  ;ಉಪನಿಷತ್ - ತಾತ್ವಿಕ ಮತ್ತು ಅಧ್ಯಾತ್ಮಿಕ ಭಾಗ. ಉಪನಿಷತ್ತುಗಳು ವೈದಿಕ ತತ್ವಶಾಸ್ತ್ರದ ಮುಖ್ಯ ಪಠ್ಯಗಳು.

ವೇದ-ಹೆಚ್ಚಿನ ವಿವರ[ಬದಲಾಯಿಸಿ]

ಪ್ರಸ್ಥಾವನೆ

ಮೇಲೆ ತಿಳಿಸಿದಂತೆ ವೇದಗಳು ನಾಲ್ಕು . ಋಕ್, ಯಜುಸ್ , ಸಾಮ , ಅಥರ್ವ . ವೇದವೆಂದರೆ ಜ್ಞಾನ -ತಿಳುವಳಿಕೆ ಎಂದು ಅರ್ಥ. ಋಗ್ವೇದವು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ವಾಥ್ಮಿಯ (ಗ್ರಂಥ)ಎನಿಸಿದೆ. ಋಕ್ , ಯಜುಸ್, ಸಾಮವೇದ ಇವು ಮೂರು ವೇದಗಳಿಗೆ ತ್ರಯೀ ಎಂದು ಹೆಸರು. ಅವಕ್ಕೆ ಹೆಚ್ಚು ಮಹತ್ವ .

ಋಗ್ವೇದದಲ್ಲಿ ದೇವತೆಗಳ ಸ್ತುತಿಗೆ ಎಂದರೆ , ಋಕ್ ಗಳಿಗೆ ಪ್ರಾಧಾನ್ಯ. ಪ್ರಾಮುಖ್ಯತೆ ; ಯಜುರ್ವೇದದಲ್ಲಿ ಯಜ್ಞಕ್ಕೆ ಸಂಬಂಧಪಟ್ಟ, ಮಂತ್ರಗಳಿವೆ. ಅದರಲ್ಲಿ ಬಹಳಷ್ಟು ಋಗ್ವೇದ ಮಂತ್ರಗಳೇ ಇವೆ . ಸಾಮವೇದ ಮಂತ್ರಗಳು ಗಾನಕ್ಕೆ -ಯಜ್ಞದಲ್ಲಿ ಅಥವಾ ದೇವತೆಗಳ ಪ್ರೀತಿಗಾಗಿ ಹಾಡುವುವು. ಅಥರ್ವದಲ್ಲಿ ಯಜ್ಞ, ಮದ್ದು , ಮಾಟ , ಇವುಗಳಿಗೆ ಸಂಬಂಧಪಟ್ಟ ಮಂತ್ರಗಳಿವೆ.

ವೇದ ಸಂಹಿತೆಯನ್ನು ಅಷ್ಟಕ, ಅದ್ಯಾಯ, ವರ್ಗ ಎಂದು ವಿಭಾಗಿಸಿದ್ದಾರೆ. ಇನ್ನೊಂದು ಬಗೆ ಯ ವಿಭಾಗ , ಮಂಡಲ , ಅನುವಾಕ , ಸೂಕ್ತ, ಮಂತ್ರ, -ಈರಿರಡನೆಯ ಬಗೆಯ ವಿಭಾಗ ಹೆಚ್ಚು ಪ್ರಚಲಿತವಾಗಿದೆ.ಅನವಾಕಗಳ ೮೫, ಅನುವಾಮದಲ್ಲಿ ಸೂಕ್ತಗಳು ೧೦೨೮, ಅದರಲ್ಲಿ ಮಂತ್ರಗಳು ೧೦೫೫೦.ಯಜ್ಞದಲ್ಲಿ ಋಗ್ವೇದವು ಹೋತೃವಿಗೆ ಸಂಬಂಧಿಸಿದೆ , ಯಜುರ್ವ್ಭೆದವು -ಅಧ್ವರ್ಯುವಿಗೆ , ಸಾಮವೇದವು ಉದ್ಗಾತೃವಿಗೆ ಸಂಬಂಧಿಸಿವೆ. ಯಜ್ಞದಲ್ಲಿ ಬ್ರಹ್ಮ ಸ್ಥಾನದಲ್ಲಿರುವವನಿಗೆ ಅಥರ್ವವೇದ ; ಅವನು ಎಲ್ಲರ ಮೇಲ್ವಿಚಾರಕ. .

ಶಾಖೆಗಳು[ಬದಲಾಯಿಸಿ]

ವೇದಗಳಲ್ಲಿ ಹಿಂದೆ ಅನಂತ ಶಾಖೆಗಳಿದ್ದು ಈಗ ೧೦-೧೨ ಶಾಖೆಗಳಿವೆ ಪ್ರತಿಯೊಂದು ವೇದಕ್ಕೂ ನಾಲ್ಕು ಸ್ಕಂದಗಳಿವೆ (ಭಾಗ). ಸಂಹಿತೆ , ಬ್ರಾಹ್ಮಣ , ಅರಣ್ಯಕ , ಉಪನಿಷತ್ತು . ಸಂಹಿತೆಗಳು ಮಂತ್ರ ಭಾಗ , ಬ್ರಾಹ್ಮಣಗಳು ಯಜ್ಞ ಕ್ರಮ ಹೇಳುವುವು , ಅರಣ್ಯಕಗಳಲ್ಲಿ ಯಾಗ ವಿಧಾನ , ಅಧ್ಯಾತ್ಮಿಕ ವಿಚಾರ , ಉಪನಿಷತ್ (ಬ್ರಹ್ಮ -ಮೂಲ ಚೈತನ್ಯ ವಿಚಾರ) ಚರ್ಚೆಗೆ ಮುಖ್ಯವಾದುದು. ,ಮಂತ್ರಗಳು ಪ್ರಾಚೀನವಾದವು ; ಉಪನಿಷತ್ ಅತ್ಯಂತ ನಂತರದ್ದು . ವೇದದ ಮೊದಲ ಮೂರುಭಾಗಗಳಿಗೆ ಕರ್ಮಕಾಂಡವೆಂತಲೂ , ಉಪನಿಷತ್ತಿಗೆ ಜ್ಞಾನ ಕಾಂಡವೆಂತಲೂ ಹೆಸರಿದೆ. ವೇದಗಳನ್ನು ಅಪೌರುಷೇಯವೆಂದು ಹೇಳುತ್ತಾರೆ . ಎಂದರೆ ಮನುಷ್ಯರಿಂದ ರಚಿಲ್ಪಟ್ಟುದಲ್ಲ -ದೇವರಿಂದಲೇ ಬಂದಿದ್ದು -ಋಷಿಗಳ ಮನಸ್ಸಿಗೆ ತಾನಾಗಿ ಗೋಚರಿಸಿದ್ದು. ಅವು ಬಾಯಿಯಿಂದ ಬಾಯಿಗೆ ಬಂದ್ದರಿಂದ ಶ್ರುತಿ (ಕೇಳಿದ್ದು) ಎಂಬ ಹೆಸರಿದೆ .
ವೈದಿಕ ದೇವತೆಗಳಲ್ಲಿ ಪ್ರಮುಖರು : ಇಂದ್ರ , ಅಗ್ನಿ , ವರುಣ , ವ್ಮರುತ , ಯಮ , ವಿಷ್ಣು , ಮಿತ್ರ , ರುದ್ರ , ಬ್ರಹಸ್ಪತಿ , ಸರಸ್ವತೀ , ಪೃಥ್ವೀ , ರಾತ್ರೀ , ವಾಕ್ , ಇಳಾ, ಸಂಧ್ಯಾ ಇತ್ಯಾದಿ ದೇವತೆಗಳಿದ್ದಾರೆ. ಆದಿತ್ಯರು ೧೨ , ರುದ್ರರು ೧೧ , ಮರುತ್ತುಗಳು ಏಳು , ಹೀಗೆ ದೇವತೆಗಳ ಗುಂಪುಗಳು ಇವೆ. ವಿಶ್ವೇದೇವತೆಗಳೆಂದರೆ ಎಲ್ಲಾದೇವತೆಗಳು ಸೇರಿದ ಗುಂಪು.

ದೇವತೆಗಳಲ್ಲಿ ವಿಭಾಗಗಳು[ಬದಲಾಯಿಸಿ]

ದೇವತಗಳಲ್ಲಿ ಮೂರು ಭಾಗಗಳು :

೧. ಪೃಥ್ವಿಸ್ಥಾನದವರು -ಅಗ್ನಿ , ಪೃಥ್ವೀ , ಸೋಮ , ನದಿ , ಬ್ರಹಸ್ಪತಿ , ಇತ್ಯಾದಿ .
೨. ಅಂತರಿಕ್ಷ ಸ್ಥಾನದವರು : ವಾಯು , ಇಂದ್ರ , ರುದ್ರ , ಮರುತ್ , ಆಪ , ಇತ್ಯಾದಿ .
೩. ದ್ಯುಸ್ಥಾನದವರು : ವರುಣ , ಮಿತ್ರ , ಸೂರ್ಯ , ಸವಿತಾ , ರಾತ್ರಿ , ಅದಿತ , ವಿಷ್ಣು , - ಇತ್ಯಾದಿ ;
ಒಟ್ಟು - ಮೂವತ್ಮೂರು (೧೧×೩=೩೩) ದೇವತೆಗಳು .ಇವರೇ ಮೂವತ್ಮೂರು ಕೋಟಿ ಎನಿಸಲ್ಪಟ್ಟದ್ದಾರೆ .
ಅನೇಕ ದೇವತೆಗಳಿದ್ದರೂ ಕೆಲವೆಡೆ ದೇವರೊಬ್ಬನೇ ಎಂಬ ವಿಚಾರವೂ ಇದೆ. ಏಕಂ ವಿಪ್ರಾಃ ಬಹುದಾ ವದಂತಿ ;
ಋಗ್ವೇದದಲ್ಲಿ - ಸತ್ತವರು ಪಿತೃಲೋಕಕ್ಕೆ ಹೋಗಿ ಅಲ್ಲಿರುವ -ಅಲ್ಲಿ ವಾಸಿಸುವ ಕಲ್ಪನೆ ಇದ್ದಂತೆ ಕಾಣುತ್ತದೆ . ಪುನರ್ಜನ್ಮ ನಂತರದ ಕಲ್ಪನೆ ಎಂಬ ಅಭಿಪ್ರಾಯವಿದೆ. ಹಾಗಾಗಿ ದೇವತೆಗಳಲ್ಲದೆ ಪಿತೃಗಳದ್ದೂ ಒಂದು ಗುಂಪು ಇದೆ.
ಮೊಟ್ಟಮೊದಲಿಗೆ ಪುರುಷಸೂಕ್ತವು ಪ್ರಪಂಚದ ವಿಕಾಸಕ್ಕೆ ಪುರುಷನೇ (ಬ್ರಹ್ಮ-ಮೂಲ ಚೈತನ್ಯ) ಕಾರಣವೆನ್ನುತ್ತದೆ .
ವೇದಗಳು ಅತ್ಯಂತ ಪ್ರಾಚೀನವಾಗಿದ್ದು (೫೦೦೦ವರ್ಷಕ್ಕಿಂತ ಹಿಂದಿನದು ), ಅದರ ಶುದ್ಧರೂಪವನ್ನು ಸ್ವಲ್ಪವೂ ಕೆಡದಂತೆ ಉಳಿಸಿಕೊಂಡು ಬಂದಿದ್ದು ಮಾನವನ ಇತಿಹಾಸಕ್ಕೆ ಒಂದು ಅಪೂರ್ವ ದಾಖಲೆಯಗಿದೆ . ಅದನ್ನು ಯಥಾ ರೂಪದಲ್ಲಿ ಕಾಪಾಡಿ ಕೊಂಡುಬರಲು ಜಟೆ, ಘನ, ಕ್ರಮ ಹೀಗೆ ಹೇಳುವ ಒಂದು ವಿಶಿಷ್ಟ ಪದ್ದತಿ ಕಾರಣವಾಗಿದೆ.

(ಮುಂದುವರೆಯುವುದು)

ನೋಡಿ[ಬದಲಾಯಿಸಿ]

ಹೊರಗಿನ ಕೊಂಡಿಗಳು (ಸಂಪರ್ಕ)[ಬದಲಾಯಿಸಿ]

"https://kn.wikipedia.org/w/index.php?title=ವೇದ&oldid=594141" ಇಂದ ಪಡೆಯಲ್ಪಟ್ಟಿದೆ