ಸೃಷ್ಟಿ ಸಾಂಖ್ಯ ಮತ್ತು ಯೋಗ
ಗೋಚರ
ಮಹಾಭಾರತದಲ್ಲಿ ಹೇಳಿದ ಸಾಂಖ್ಯ ಮತ್ತು ಯೋಗದ ದೃಷ್ಠಿಯಲ್ಲಿ ಸೃಷ್ಟಿ.
[ಬದಲಾಯಿಸಿ]ಪೀಠಿಕೆ :
[ಬದಲಾಯಿಸಿ]- ಮಹಾಭಾರತದ ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಯುಧಿಷ್ಠಿರನಿಗೆ ಭೀಷ್ಮನು ಸಾಂಖ್ಯ ಮತ್ತು ಯೋಗದ ಸಂಯೋಜಿತ ದರ್ಶನವನ್ನು ಬೋಧಿಸುತ್ತಾನೆ. ಮೂಲ ಸಾಂಖ್ಯ ದರ್ಶನದಲ್ಲಿ ಪರಮೇಶ್ವರ ತತ್ವಕ್ಕೆ ಅವಕಾಶವಿಲ್ಲ. ಆದರೆ ಮಹಾಭಾರತದಲ್ಲಿ ಸಾಂಖ್ಯವನ್ನೂ ಯೋಗ ದರ್ಶನವನ್ನೂ ಸಂಮಿಲನಗೊಳಿಸಿ ಹೇಳಿದೆ. ಕಪಿಲನ ಮೂಲ ಸಾಂಖ್ಯ ದರ್ಶನ ಮಹಾಭಾರತ ಕಾಲಕ್ಕಿಂತ ಹಿಂದಿನದಾಗಿರಬೇಕೆಂದು ಊಹಿಸಬಹುದು. ಮಹಾಭಾರತದ ಸಾಂಖ್ಯ ಮತ್ತು ಯೋಗ ದರ್ಶನದಲ್ಲಿ ಪರಮೇಶ್ವರನಿಗೂ ಅದರಿಂದ ಉದ್ಭವಿಸಿದ ಮಹತ್ತು ಅಥವಾ ಹಿರಣ್ಯಗರ್ಭ ನಿಗೆ ಮಹತ್ವದ ಸ್ಥಾನವಿದೆ. ಪಂಚ ಮಹಾಭೂತಗಳ ಸೃಷ್ಟಿ ಕ್ರಮದಲ್ಲೂ ಸ್ವಲ್ಪ ಬದಲಾವಣೆ ಕಾಣುವುದು.ಮೋಕ್ಷ ಧರ್ಮ ಪರ್ವದ ಅಧ್ಯಾಯ ೩೦೨, ಶ್ಲೋಕ ೧೮ರಿಂದ ಯುಧಿಷ್ಠಿರನಿಗೆ ಭೀಷ್ಮನ ಉಪದೇಶ.
ವಿದ್ಯಾ ವರ್ಗ-ತತ್ವಗಳು
[ಬದಲಾಯಿಸಿ]- ಪರಮೇಶ್ವರ + ಮೂಲ ಪ್ರಕೃತಿ - ನಿರಾಕಾರ , ಅವ್ಯಕ್ತ, ಸಗುಣ + ನಿರ್ಗುಣ (ತತ್ವ ರೂಪದಲ್ಲಿ ಇರುವುವು) ಅವಿನಾಶಿ. ಮೂಲ ತತ್ವಗಳು.
- ಅದರಿಂದ ಉತ್ಪತ್ತಿ
ಅವಿದ್ಯಾ ವರ್ಗ
[ಬದಲಾಯಿಸಿ]- ಮಹತ್ತು ವಿಶ್ವದ ಸಮಷ್ಠಿ ಬುದ್ಧಿ ಹಿರಣ್ಯ ಗರ್ಭ, ಅಜ, ವಿಶ್ವಾತ್ಮ - ಅವಿದ್ಯಾ ತತ್ವಗಳು, ಕ್ಷರ -ನಾಶವಾಗುವ ತತ್ವಗಳು; ಇವುಗಳಿಂದ ವಿಶ್ವದ ಚರಾಚರ ಸೃಷ್ಟಿ .
(ಮನುಷ್ಯನಲ್ಲಿ (ವ್ಯಷ್ಠಿ ) ಬುದ್ಧಿ)
- ಪ್ರಜಾಪತಿ - ವಿರಾಟ್ ಪುರಷ (ಸಮಷ್ಠಿಯ ಅಹಂಕಾರ ಮತ್ತು ಮನಸ್ಸು ಮಹತ್ ತತ್ವದ ವಿಕಾರದಿಂದ, ಅಹಂಕಾರದ ಅಭಿಮಾನಿ ದೇವತೆ
ದೈವಿಕ ಸರ್ಗ
[ಬದಲಾಯಿಸಿ]- ಪಂಚ ಮಹಾ ಭೂತಗಳು + ಪಂಚ ತನ್ಮಾತ್ರೆ ಗಳು ಇವು ಒಟ್ಟಿಗೆ ಸೃಷ್ಠಿಯಾದವು.
- ಆಕಾಶದಿಂದ ಶಬ್ದ, ಶಬ್ದದಿಂದ ಆಕಾಶ, ಹೀಗೆ : ಆಕಾಶ <-> ಶಬ್ದ ; ವಾಯು<->ಸ್ಪರ್ಶ; ತೇಜಸ್ಸು <->ರೂಪ; ಅಪ್ <->ರಸ : ಪ್ರಥವೀ<->ಗಂಧ ; ಒಟ್ಟಿಗೆ ಸೃಷ್ಠಿ (ತೇಜಸ್ಸು=ಅಗ್ನಿ ; ಅಪ್=ನೀರು,; ಪೃಥ್ವೀ=ಭೂಮಿ)
ಮುಂದಿನ ಸೃಷ್ಟಿಯ ಹಂತ ->
ವೈಕೃತ ಸರ್ಗಗಳು
[ಬದಲಾಯಿಸಿ]- ಸಮಷ್ಟಿ ಅಹಂಕಾರ ದಿಂದ ಹುಟ್ಟಿದ ಗುಣಗಳು :
- ಶ್ರೋತೃ (ಕಿವಿ)
- ತ್ವ ಕ್ (ಚರ್ಮ)
- ಚಕ್ಷು (ಕಣ್ಣು)
- ಜಿಹ್ವಾ (ನಾಲಿಗೆ)
- ಘ್ರಾಣ (ಮೂಗು)
- ಪಂಚೇಂದ್ರಿಯಗಳು
ಇದರೊಂದಿಗೆ ಸಮಾನಾಂತರವಾಗಿ ಹುಟ್ಟಿದ ಗುಣಗಳು ಸತ್ವ ; ರಜ ; ತಮ
ಭೌತಿಕ ವರ್ಗ
[ಬದಲಾಯಿಸಿ]- ಮುಂದುವರೆದ ವ್ಯಷ್ಠಿಯ ಸೃಷ್ಟಿ
- ವಾಕ್ (ಬಾಯಿ)
- ಪಾಣಿ (ಕೈ)
- ಪಾದ (ಕಾಲು)
- ಪಾಯು (ಗುದ)
- ಉಪಸ್ಥ (ಜನನೇಂದ್ರಿಯ)
- ೫. ಕರ್ಮೇಂದ್ರಿಯಗಳು
- ಸಾಂಖ್ಯ ಮತ್ತುಯೋಗ ದರ್ಶನಗಳಲ್ಲಿ ಸೃಷ್ಟಿ ಅನಾದಿ ಮತ್ತು ಅನಂತ; ಎಂದರೆ ಆದಿ ಇಲ್ಲದ್ದು, ಅಂತ್ಯವಿಲ್ಲದ್ದು
ಸಾಂಖ್ಯದ ವಿವರ
[ಬದಲಾಯಿಸಿ]- ಪಂಚ ಮಹಾಭೂತಗಳು ೫;
- ತನ್ಮಾತ್ರೆಗಳು ೫;
- ಜ್ಞಾನೇಂದ್ರಿಯಗಳು ೫;
- ಕರ್ಮೇಂದ್ರಿಯಗಳು ೫;
- ಮಹತ್ತು + ಅಹಂಕಾರ + ಬುದ್ಧಿ+ ಮನಸ್ಸು -೪;
- ಒಟ್ಟು ತತ್ವಗಳು ೨೪;
- ಅವ್ಯಕ್ತ-ಅಕ್ಷರ-ಪರಮೇಶ್ವರ (ಮಹಾವಿಷ್ಣು) ೧ ತತ್ವ ಸೇರಿದರೆ ಕೆಲವರ ಪ್ರಕಾರ ( ೨೫ ತತ್ವಗಳು)
- ಮೂಲಪ್ರಕೃತಿ +ಮಹತ್ತು = ಪ್ರಕೃತಿ; ಮಹತ್ತು ಮತ್ತು ನಂತರದ ಇತರ ತತ್ವಗಳು ಕ್ಷರ (ನಾಶವಗುವ ತತ್ವಗಳು) ಪರಮೇಶ್ವರ ತತ್ವ - ಅಕ್ಷರ -ನಾಶವಗದ್ದು. (ಇದರಲ್ಲಿ , ಪಂಚ ಪ್ರಾಣಗಳು ಬಿಟ್ಟು ಹೋಗಿದೆ, ಏಕೆ ? )
- ಈ ಕ್ರಮದಲ್ಲಿ ಬಿಟ್ಟುಹೋದ ಪಂಚ ಪ್ರಾಣಗಳು :- ವ್ಯಾನ; ಪ್ರಾಣ; ಸಮಾನ; ಉದಾನ; ಅಪಾನ;
- ಭೌತಿಕವರ್ಗದ ಕರ್ಮೇಂದ್ರಿಯಗಳನ್ನು ೨೫ ತತ್ವಗಳಲ್ಲಿ ಇತರರು ಸೇರಿಸುವುದಿಲ್ಲ.
ನೋಡಿ
[ಬದಲಾಯಿಸಿ]ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ
ಉಲ್ಲೇಖ
[ಬದಲಾಯಿಸಿ]