ಜ್ಯೋತಿರ್ವರ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ಯೋತಿರ್ವರ್ಷ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವರ್ಷವೆ೦ದು ಹೆಸರು. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾ೦ತ ಕ್ಷೇತ್ರಗಳಿ೦ದ ದೂರವಿರುವಾಗ ಒಂದು ವರ್ಷದಲ್ಲಿ ಸಾಗುವ ದೂರ. ಇ೦ತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು ೨.೯೯ ಲಕ್ಷ ಕಿಮೀ. ಹಾಗಾಗಿ ಒಂದು ಜ್ಯೋತಿವರ್ಷ ಸುಮಾರು ೯.೪ ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ.

ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆ೦ದರೆ "ಜ್ಯೋತಿರ್ನಿಮಿಷ" ಮತ್ತು "ಜ್ಯೋತಿರ್ಕ್ಷಣ"

ಗಣಿತಶಾಸ್ತ್ರದ ಪ್ರಕಾರ[ಬದಲಾಯಿಸಿ]

  • ೩,೦೦,೦೦೦ ಕಿ.ಮೀ.(ಬೆಳಕಿನ ವೇಗ ಪ್ರತಿ ಸೆಕೆಂಡಿಗೆ)x ೩೬೫ (ಒಂದು ವರುಷ)x ೨೪ (ದಿನ)x ೬೦(ನಿಮಿಷ)x ೬೦ (ಸೆಕೆಂಡು)= ೯೪,೬೦,೮೦,೦೦,೦೦,೦೦೦ ಕಿ.ಮೀ.
  • ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ.
  • ಬೆಳಕಿನ ವೇಗ ೧ ಕ್ಷಣಕ್ಕೆ ೩,೦೦,೦೦೦ ಕಿ.ಮೀ.
೧ ನಿಮಿಷ = ೬೦ ಕ್ಷಣ = ೬೦ x ೩೦೦೦೦೦ = ೧,೮೦,೦೦,೦೦೦ ಕಿ.ಮೀ.
೧ ಘಂಟೆ = ೬೦ ನಿಮಿಷ = ೬೦ x ೧೮೦೦೦೦೦೦ = ೧೦೮,೦೦,೦೦,೦೦೦ ಕಿ.ಮೀ.
೧ ದಿನ = ೨೪ ಘಂಟೆ = ೨೪ x ೧೦೮೦೦೦೦೦೦೦ = ೨,೫೯೨,೦೦,೦೦,೦೦೦ ಕಿ.ಮೀ.
೧ ವರ್ಷ = ೩೬೫ ದಿನ = ೩೬೫ x ೨೫೯೨೦೦೦೦೦೦೦ = ೯,೪೬,೦೮೦,೦೦,೦೦,೦೦೦ ಕಿ.ಮೀ.
ಹಾಗಾಗಿ ೧ ಜ್ಯೋತಿರ್ವರ್ಷವೆಂದರೆ ೯ ಲಕ್ಷದ ೪೬ ಸಾವಿರದ ೮೦ ಕೋಟಿ ಕಿ.ಮೀ.ಗಳು (ಸುಮಾರು).

ನಿಖರವಾಗಿ[ಬದಲಾಯಿಸಿ]

ಜ್ಯೋತಿರ್ವರ್ಷ ಪದದಲ್ಲಿ ತುದಿಗೆ 'ವರ್ಷ'ವೆಂದಿದ್ದರೂ ಅದು 'ಕಾಲ' ಸೂಚಕ ಪದವಲ್ಲ; ದೂರದ ಅಳತೆ
  • ಬೆಳಕಿನ ವೇಗ (299792458 ಮೀಟರ್ /ಸೆಕೆಂಡಿಗೆ) // (365.25 ದಿನಗಳಲ್ಲಿ ಕ್ರಮಿಸುವ ದೂರ.
  • 1 ಜ್ಯೋತಿರ್ವರ್ಷ = 946073047,25,80,800 ಮೀಟರ್ /9,46,073,04,72,580.8 ಕಿ. ಮೀಟರ್ (ನಿಖರವಾಗಿ)
  • 1 ಜ್ಯೋತಿರ್ವರ್ಷ= 9 ಕೋಟಿ 46 ಲಕ್ಷ 073 ಕೋಟಿ, 04 ಲಕ್ಷದ,72 ಸಾವಿರದ 580.8 ಕಿ. ಮೀಟರ್.(ನಿಖರವಾಗಿ)...

ನೋಡಿ[ಬದಲಾಯಿಸಿ]