ಗುರುತ್ವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
"ಗುರುತ್ವ ಬಲ"ದಿಂದ ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸುತ್ತವೆ.

ಗುರುತ್ವ - ಎಲ್ಲಾ ವಸ್ತುಗಳೂ ಒಂದನ್ನೊಂದು ಆಕರ್ಷಿಸಲು ಕಾರಣವಾದ ಬಲ. ಆಧುನಿಕ ಭೌತಶಾಸ್ತ್ರವು ಸಾಮಾನ್ಯ ಸಾಪೇಕ್ಷತಾ ವಾದದಿಂದ ಗುರುತ್ವವನ್ನು ವಿವರಿಸುತ್ತಾದರೂ, ಹೆಚ್ಚು ಸರಳವಾದ ನ್ಯೂಟನ್ನನ ಗುರುತ್ವ ನಿಯಮವು ಹಲವು ಸನ್ನಿವೇಶಗಳಲ್ಲಿ ಅತ್ಯುತ್ತಮ ಅಂದಾಜು ಪ್ರಮಾಣಗಳನ್ನು ಸೂಚಿಸುತ್ತದೆ. ಭೂಮಿ, ಸೂರ್ಯ ಮತ್ತಿತರ ಆಕಾಶಕಾಯಗಳ ಅಸ್ತಿತ್ವಕ್ಕೆ ಗುರುತ್ವವೇ ಕಾರಣ. ಗುರುತ್ವವಿಲ್ಲದೆ ಪದಾರ್ಥವು ಈ ಕಾಯಗಳಾಗಿ ಒಂದುಗೂಡುತ್ತಿರಲಿಲ್ಲ ಮತ್ತು ನಮಗೆ ಈಗ ತಿಳಿದಿರುವಂತಹ ಜೀವವು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸುವುದಕ್ಕೆ, ಚಂದ್ರನು ಭೂಮಿಯ ಸುತ್ತ ಪರಿಭ್ರಮಿಸುವುದಕ್ಕೆ, ಮತ್ತು ನಮಗೆ ಕಾಣುವ ಇನ್ನಿತರ ವಿವಿಧ ನೈಸರ್ಗಿಕ ಪ್ರಕ್ರಿಯಗಳಿಗೂ ಗುರುತ್ವವು ಕಾರಣ.

ಇತಿಹಾಸ[ಬದಲಾಯಿಸಿ]

ಗುರುತ್ವಾಕರ್ಷಣ ಸಿದ್ಧಾಂತದ ಬೆಳವಣಿಗೆ ಗೆಲಿಲಿಯೊ ಗೆಲಿಲಿಯ ಪ್ರಯೋಗಗಳಿಂದ ಬಲ ಪಡೆದುಕೊಂಡಿತು. ಗೆಲಿಲಿಯೊ ಇಟಲಿಯ ಪೀಸಾ ಗೋಪುರದಲ್ಲಿ ನಡೆಸಿದ ಪ್ರಯೋಗದಲ್ಲಿ ಗುರತ್ವ ಬಲವು ಬೇರೆ ಬೇರೆ ಬಾರವಿರುವ ವಸ್ತುಗಳಲ್ಲಿ ಒಂದೇ ಸಮನಾದ ವೇಗೋತ್ಕರ್ಷವನ್ನು ಉಂಟುಮಾಡುತ್ತದೆ ಎಂಬುದು ತಿಳಿಯಿತು. ಉದಹರಣೆಗೆ ಒಂದು ಇರುವೆ ಹಾಗೂ ಒಂದು ಆನೆಯನ್ನು ಒಂದೇ ಕ್ಷಣದಲ್ಲಿ ಹಾಗೂ ಒಂದೇ ಎತ್ತರದಿಂದ ಬಿಟ್ಟದ್ದೆ ಆದರೆ ಎರಡು ವಸ್ತುಗಳು ಕೂಡಾ(ಇರುವೆ ಮತ್ತು ಆನೆ) ಒಟ್ಟಿಗೆ ನೆಲ ಸ್ಪರ್ಷಿಸುತ್ತವೆ. ಆದರೆ ಈ ಹೇಳಿಕೆ ನಿಜವಾಗವುದು ನಿರ್ವಾತ ಪ್ರದೇಶದಲ್ಲಿ ಮಾತ್ರ. ಭೂ ವಾತಾವರಣದಲ್ಲಿ ಇರುವ ಗಾಳಿಯ ಒತ್ತಡ ಒಂದು ಇರುವೆ ಹಾಗೂ ಒಂದು ಆನೆ ಒಂದೇ ಸಮಯದಲ್ಲಿ ನೆಲ ಸ್ಪರ್ಷಿಸುವುದನ್ನು ತಡೆಯುತ್ತದೆ ಎಂದು ಗೆಲಿಲಿಯೊನ ಪ್ರಯೋಗಳಿಂದ ತಿಳಿದು ಬಂತು."https://kn.wikipedia.org/w/index.php?title=ಗುರುತ್ವ&oldid=400998" ಇಂದ ಪಡೆಯಲ್ಪಟ್ಟಿದೆ