ಗ್ರಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೌರವ್ಯೂಹದೊಳಗೆ ಇರುವ ಗ್ರಹಗಳು ಮತ್ತು ಕುಬ್ಜಗ್ರಹಗಳು(ಗಾತ್ರಗಳು ತುಲನಾತ್ಮಕ ದೂರವಲ್ಲ)
ಒಳ ಸುತ್ತಿನ ಗ್ರಹಗಳು.ಎಡದಿಂದ ಬಲಕ್ಕೆ: ಬುಧಗ್ರಹ, ಶುಕ್ರ, ಭೂಮಿಮತ್ತು ಮಂಗಳ ವಾಸ್ತವಿಕೆ ಬಣ್ಣದಲ್ಲಿ. (ಗಾತ್ರಗಳು ತುಲನಾತ್ಮಕವಾಗಿವೆ,ದೂರಗಳಲ್ಲ)
ಸೂರ್ಯನ ಹಿನ್ನಲೆಯಲ್ಲಿ ನಾಲ್ಕು ಅನಿಲ ದೈತ್ಯರು:ಗುರು ಶನಿ,ಯುರೇನಸ್ ಮತ್ತು ನೆಪ್ಚೂನ್ (ಗಾತ್ರಗಳು ತುಲನಾತ್ಮಕ, ದೂರವಲ್ಲ)


ಗ್ರಹ ಯಾವುದೇನಕ್ಷತ್ರಗುರುತ್ವಕ್ಶೇತ್ರದೊಳಗೆ ಆ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಒಂದು ಘನಕಾಯ. ಪ್ರತಿಯೊಂದು ಗ್ರಹವೂ ಮಾತೃ ನಕ್ಷತ್ರದಿಂದ ತನ್ನ ಮೇಲೆ ಬೀಳುವ ವಿಕಿರಣವನ್ನು ಪ್ರತಿಫಲಿಸಿ ತನ್ನ ಇರುವನ್ನು ಪ್ರಕಟಿಸುತ್ತದೆ. ಸೂರ್ಯನಿಗೆ ಎಂಟು ಗ್ರಹಗಳಿವೆ. ಸೂರ್ಯನಿಂದ ಅವುಗಳು ಇರುವ ದೂರಾನುಸಾರ ಇವು: ಬುಧ,ಶುಕ್ರ,ಭೂಮಿ,ಮಂಗಳ,ಗುರು,ಶನಿ,ಯುರೇನಸ್ ಮತ್ತು ನೆಪ್ಚೂನ್. ಪ್ಲುಟೋ ಸೇರಿದರೆ ಒಂಭತ್ತು ಗ್ರಹಗಳಾಗುವುವು.

ಸೌರಮಂಡಲದ ಹೊರಗಿನ ಗ್ರಹ[ಬದಲಾಯಿಸಿ]

  • ಹೊಸ ಸಂಶೋಧನೆ :09/07/2016:
  • ವಾಷಿಂಗ್ಟನ್‌ನಿಂದ ಬಂದ ವರದಿಯಂತೆ, ಮೂರು ಸೂರ್ಯರ (ನಕ್ಷತ್ರಗಳ) ಸುತ್ತ ತಿರುಗುತ್ತಿರುವ ಬೃಹತ್‌ ಗ್ರಹವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ವಿಶೇಷ ಎಂದರೆ ಈ ಗ್ರಹದಲ್ಲಿ ಪ್ರತಿ ದಿನ ತಲಾ ಮೂರು ಸಲ ಸೂರ್ಯೋದಯ ಮತ್ತು ಸೂರ್ಯಾಸ್ತ ಸಂಭವಿಸುತ್ತವೆ! ಭೂಮಿಯಿಂದ 340 ಜ್ಯೋತಿರ್‌ವರ್ಷಗಳಷ್ಟು ದೂರ ಇರುವ ಈ ಗ್ರಹವು ಗಾತ್ರದಲ್ಲಿ ಗುರುಗ್ರಹಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ ಮತ್ತು ನಾಲ್ಕು ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿದೆ. ಸೆಂಟೌರಸ್‌ ತಾರಾ ಪುಂಜದಲ್ಲಿರುವ ಈ ಗ್ರಹಕ್ಕೆ ‘ಎಚ್‌ಡಿ 131399ಎಬಿ’ ಎಂದು ಹೆಸರಿಡಲಾಗಿದೆ.
  • ಇದು 1.6 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಇದು ಸೌರ ಮಂಡಲದ ಹೊರಗೆ ಪತ್ತೆಯಾದ ಯುವ ಗ್ರಹಗಳಲ್ಲಿ ಒಂದು. ಅಲ್ಲದೇ ಭೂಮಿಯಿಂದ ನೇರವಾಗಿ ಚಿತ್ರ ಸೆರೆಹಿಡಿಯಲು ಸಾಧ್ಯವಾದ ಕೆಲವೇ ಕೆಲವು ಗ್ರಹಗಳಲ್ಲೂ ಒಂದಾಗಿದೆ. ಇದರ ವಾತಾವರಣದ ಉಷ್ಣತೆ 580 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್‌ ಅಪೈ ಅವರ ಅಧ್ಯಯನ ತಂಡದಲ್ಲಿರುವ ಪಿಎಚ್‌.ಡಿ ವಿದ್ಯಾರ್ಥಿ ಕೆವಿನ್‌ ವಾಗ್ನರ್‌ ಈ ಗ್ರಹವನ್ನು ಪತ್ತೆ ಹಚ್ಚಿದ್ದಾರೆ.
  • ‘ಗ್ರಹವು ಮೂರು ನಕ್ಷತ್ರಗಳ ಸುತ್ತ ಸುತ್ತುತ್ತಿದೆ. ಅವುಗಳಲ್ಲಿ ಎರಡು ನಕ್ಷತ್ರಗಳು ತುಂಬಾ ಸನಿಹದಲ್ಲಿದ್ದು, ಪರಸ್ಪರ ಗಿರಕಿ ಹೊಡೆಯುತ್ತ ಪ್ರಧಾನ ಮತ್ತು ದೊಡ್ಡ ನಕ್ಷತ್ರದ ಸುತ್ತ ತಿರುಗುತ್ತಿವೆ. ಪ್ರತಿ ದಿನ ಅಲ್ಲಿ ಮೂರು ಬಾರಿ ಸೂರ್ಯಾಸ್ತ, ಸೂರ್ಯೋದಯ ಆಗುತ್ತವೆ’ ಎಂದು ವಾಗ್ನರ್‌ ಹೇಳಿದ್ದಾರೆ.

ನಕ್ಷತ್ರಗಳ ಲಕ್ಷಣ[ಬದಲಾಯಿಸಿ]

  • ಪತ್ತೆ ಹಚ್ಚಲಾಗಿರುವ ಹೊಸ ಗ್ರಹೀಯ ವ್ಯವಸ್ಥೆಯಲ್ಲಿರುವ ಮೂರು ನಕ್ಷತ್ರಗಳನ್ನು ಎಚ್‌ಡಿ 131399ಎ, ಎಚ್‌ಡಿ 131399ಬಿ ಮತ್ತು ಎಚ್‌ಡಿ 131399ಎ ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಎಚ್‌ಡಿ 131399ಎ ಪ್ರಧಾನ ನಕ್ಷತ್ರ. ಇದು ನಮ್ಮ ಸೂರ್ಯನಿಗಿಂತ ಶೇ 80 ರಷ್ಟು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. 131399ಬಿ ಮತ್ತು 131399ಸಿ ನಕ್ಷತ್ರಗಳ ನಡುವೆ, ಸರಿ ಸುಮಾರು ನಮ್ಮ ಸೂರ್ಯ ಮತ್ತು ಶನಿ ಗ್ರಹದ ನಡುವೆ ಇರುವಷ್ಟು ಅಂತರವಿದೆ. ಈ ಎರಡೂ ನಕ್ಷತ್ರಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ಪರಸ್ಪರ ಗಿರಕಿ ಹೊಡೆಯುತ್ತಾ ಪ್ರಧಾನ ನಕ್ಷತ್ರವನ್ನು ಸುತ್ತು ಹಾಕುತ್ತಿವೆ. ಹೊಸ ಗ್ರಹವು 131399ಎ ಸುತ್ತ ಸುತ್ತುತ್ತಿದೆ. ನಮ್ಮ ಸೌರವ್ಯೂಹಕ್ಕೆ ಹೋಲಿಸಿದರೆ, ಇದರ ಕಕ್ಷೆಯು ಪ್ಲೂಟೊ ಹೊಂದಿರುವ ಕಕ್ಷೆಯ ಎರಡು ಪಟ್ಟು ಇದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಪತ್ತೆ ವಿಧಾನ
  • ಸೌರವ್ಯೂಹದಾಚೆಗಿನ ಗ್ರಹಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ರೂಪಿಸಲಾಗಿರುವ ಅತ್ಯಾಧುನಿಕ ಸಾಧನ ‘ಸ್ಪಿಯರ್‌’ನಲ್ಲಿ (ಸ್ಪೆಕ್ಟ್ರೊ ಪೊಲಾರಿಮೆಟ್ರಿಕ್‌ ಹೈ ಕಾಂಟ್ರಾಸ್ಟ್‌ ರಿಸರ್ಚ್‌ ಇನ್‌ಸ್ಟ್ರ್ಯುಮೆಂಟ್‌) ಇದು ಗೋಚರವಾಗಿದೆ. ಈ ಸಾಧನವು ಯೂರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ (ಇಎಸ್‌ಒ) ನಿರ್ವಹಿಸುತ್ತಿರುವ, ಚಿಲಿಯಲ್ಲಿರುವ ದೊಡ್ಡ ದೂರದರ್ಶಕದ ಭಾಗವಾಗಿದೆ.[೧]

ಇವನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಇಲ್ಲಿ ದಿನಕ್ಕೆ 3 ಹಗಲು, 3 ರಾತ್ರಿ![[೧]]
"https://kn.wikipedia.org/w/index.php?title=ಗ್ರಹ&oldid=753775" ಇಂದ ಪಡೆಯಲ್ಪಟ್ಟಿದೆ